ಶಿಗ್ಗಾಂವಕ್ಷೇತ್ರದ ಉಪ ಚುನಾವಣೆ ಮುಕ್ತ, ನ್ಯಾಯ ಸಮ್ಮತಕ್ಕೆ ಜಿಲ್ಲಾಡಳಿತ ಸಿದ್ಧತೆ
ಅ.೧೮ ರಿಂದ ನಾಮಪತ್ರ ಸಲ್ಲಿಕೆ ಆರಂಭ-ನ.೨೫ ರವರೆಗೆ ನೀತಿ ಸಂಹಿತೆ ಜಾರಿಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ
ಹಾವೇರಿ : ಶಿಗ್ಗಾಂವ ವಿಧಾನಸಭಾ ಕ್ಷೇತ್ರಕ್ಕೆ ಭಾರತ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಮುಕ್ತ, ನ್ಯಾಯ ಸಮ್ಮತ ಹಾಗೂ ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ. ಅಕ್ಟೋಬರ್ ೧೮ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ, ೮೩-ಶಿಗ್ಗಾಂವ ಮತ ಕ್ಷೇತ್ರದ ಉಪಚುನಾವಣೆ ಹಿನ್ನಲೆ ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶಿಗ್ಗಾಂವ ವಿಧಾನ ಸಭಾ ಕ್ಷೇತ್ರ ಒಳಗೊಂಡಂತೆ ಜಿಲ್ಲೆಯಾದ್ಯಂತ ನ.೨೫ರವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.
ಶಿಗ್ಗಾಂವ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿ ಸವಣೂರ ಉಪ ವಿಭಾಗಾಧಿಕಾರಿ ಮಹ್ಮದ್ ಖೈಝರ್ ಹಾಗೂ ಸಹಾಯಕ ಚುನಾವಣಾ ಅಧಿಕಾರಿಯಾಗಿ ಶಿಗ್ಗಾಂವ ತಹಶೀಲ್ದಾರ್ ಸಂತೋಷ ಹಿರೇಮಠ ಕಾರ್ಯ ನಿರ್ವಹಿಸಲಿದ್ದಾರೆ. ಶಿಗ್ಗಾಂವ ತಹಶೀಲ್ದಾರ್ ಕಚೇರಿಯಲ್ಲಿ ನಾಮ ಪತ್ರ ಸ್ವೀಕಾರ ಮಾಡಲಾಗುವುದು. ಅಕ್ಟೋಬರ್ ೧೮ ರಂದು ಅಧಿಸೂಚನೆ ಪ್ರಕಟಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಅ.೨೫ ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಅ.೨೮ ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅ.೩೦ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ನ.೧೩ ರಂದು ಮತದಾನ ನಡೆಯಲಿದೆ. ನ.೨೩ ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ನ.೨೫ ರಂದು ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಮತದಾರರ ವಿವರ: ಶಿಗ್ಗಾಂವ ವಿಧಾನಸಭಾ ಕ್ಷೇತ್ರದಲ್ಲಿ ೨೦೨೪ಕ್ಕೆ ಅನ್ವಯವಾಗುವಂತೆ ೧,೨೧,೦೬೭ ಪುರುಷರು, ೧,೧೫,೭೧೭ ಮಹಿಳೆಯರು, ೬ ಜನ ಇತರರು ಸೇರಿದಂತೆ ೨,೩೬,೭೯೦ ಮತದಾರರು ಒಳಗೊಂಡಿರುತ್ತಾರೆ ಎಂದು ಮಾಹಿತಿ ನೀಡಿದರು.
ವಿಶೇಷ ಚೇತನರಿಗೆ ವಿಶೇಷ ವ್ಯವಸ್ಥೆ: ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಭಾರತ ಚುನಾವಣಾ ಆಯೋಗ ವಿಶೇಷ ಅವಕಾಶ ಕಲ್ಪಿಸಿದೆ. ೮೫ ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಶಿಗ್ಗಾಂವ ಕ್ಷೇತ್ರದಲ್ಲಿ ೮೫ ವರ್ಷ ಮೇಲ್ಪಟ್ಟ ೨,೮೦೨ ಹಿರಿಯ ಮತದಾರರು, ೫,೨೫೧ ವಿಶೇಷ ಚೇತನರು, ೧೪೪ ಸೇವಾ ಮತದಾರರು ಹಾಗೂ ೧೮ ರಿಂದ ೧೯ ವರ್ಷದೊಳಗಿನ ೯,೬೮೩ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು
ಮತಗಟ್ಟೆಗಳ ವಿವರ: ಶಿಗ್ಗಾಂವ ವಿಧಾನಸಭಾ ಕ್ಷೇತ್ರದಲ್ಲಿ ೨೪೧ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಗೆ ಸಿಬ್ಬಂದಿಗಳನ್ನು ನಿಯೋಜಿಸಿ ಸೂಕ್ತ ತರಬೇತಿ ನೀಡಲಾಗುವುದು ಎಂದರು.
ಮತಗಟ್ಟೆ ಸಿಬ್ಬಂದಿ: ಸುಗಮ ಚುನಾವಣೆ ಜರುಗಿಸಲು ೨೬೫ ಮತಗಟ್ಟೆ ಅಧಿಕಾರಿಗಳು, ೨೬೫ ಸಹಾಯಕ ಮತಗಟ್ಟೆ ಅಧಿಕಾರಿ ಹಾಗೂ ಹಾಗೂ ೫೩೦ ಪಿಒ ಗಳು ಸೇರಿದಂತೆ ೧೦೬೦ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಹಾವೇರಿ, ಬ್ಯಾಡಗಿ ಹಾಗೂ ಹಾನಗಲ್ ಕ್ಷೇತ್ರದ ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗುವುದು. ಮೊದಲ ಹಂತದ ತರಬೇತಿ ಆಯಾ ತಾಲೂಕು ಕೇಂದ್ರ ಸ್ಥಾನದಲ್ಲಿ ಜರುಗಲಿದೆ, ೨ನೇ ಹಂತದ ತರಗತಿ ಶಿಗ್ಗಾಂವಿಯಲ್ಲಿ ಜರುಗಲಿದೆ ಎಂದರು.
ತಲಾ ೪೯೨ ಬ್ಯಾಲೆಟ್ ಯುನಿಟ್, ವಿವಿ ಪ್ಯಾಟ್, ಕಂಟ್ರೋಲ್ ಯುನಿಟ್ಗಳನ್ನು ಸಿದ್ಧಮಾಡಿದ್ದು, ರಾಜಕೀಯ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ರ್ಯಾಂಡಮೈಸ್ ಮಾಡಿ ಶಿಗ್ಗಾಂವ ಕ್ಷೇತ್ರಕ್ಕೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ತಂಡಗಳ ರಚನೆ: ಸುಗಮ ಚುನಾವಣೆ ಹಾಗೂ ಮಾದರಿ ನೀತಿ ಸಂಹಿತೆ ಪಾಲನೆಗೆ ೨೩ ಸೆಕ್ಟರ್ ಅಧಿಕಾರಿಗಳ ತಂಡ ರಚಿಸಲಾಗಿದೆ. ೦೨ ವಿಡಿಯೋ ಸರ್ವಲೆನ್ಸ್ ತಂಡಗಳು, ಒಂದು ವಿಡಿಯೋ ಪರಿಶೀಲನೆ ತಂಡ, ಎಂಟು ಪ್ಲೈಯಿಂಗ್ ಸ್ಕ್ವಾಡ್, ಒಂದು ವೆಚ್ಚ ಪರಿಶೀಲನಾ ತಂಡ, ೧೮ ಎಸ್.ಎಸ್.ಟಿ. ತಂಡ ರಚಿಸಲಾಗಿದೆ ಎಂದು ತಿಳಿಸಿದರು.
ಚೆಕ್ ಪೋಸ್ಟ್: ಬ್ಯಾಡಗಿ ಹೊರತುಪಡಿಸಿ ಜಿಲ್ಲೆಯಾದ್ಯಂತ ೧೮ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗುವುದು. ೮೨-ಹಾನಗಲ್ ಕ್ಷೇತ್ರದ ಕೊಪ್ಪರಸಿಕೊಪ್ಪ, ಗೊಂದಿ, ಹಳ್ಳಿಬೈಲ್, ಸಮ್ಮಸಗಿ, ೮೩- ಶಿಗ್ಗಾಂವ ಕ್ಷೇತ್ರದ ತಡಸ ವಡ್ಡಗಟ್ಟಿ, ರಾಮನಕೊಪ್ಪ(ತಡಸ), ಕೋಣನಕೇರಿ, ಪಾಣಿಗಟ್ಟಿ, ೮೪- ಹಾವೇರಿ ಕ್ಷೇತ್ರದ ಯಲವಿಗಿ, ತೇರದಹಳ್ಳಿ, ಕಂಚಾರಗಟ್ಟಿ, ೮೬-ಹಿರೇಕೆರುರು ಕ್ಷೇತ್ರದ ಕೋಟಮಗ್ಗಿ, ಹಳ್ಳೂರ, ಹುಲಬಿಕೊಂಡ, ಜ್ಯಾವಳ್ಳಿ, ರಾಣೇಬೆನ್ನೂರ ಕ್ಷೇತ್ರದ ಮಾಕನೂರ ಕ್ರಾಸ್, ತುಮ್ಮಿನಕಟ್ಟಿ, ಹರನಗಿರಿ ಬ್ರಿಜ್ಡ್ನಲ್ಲಿ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗುತ್ತಿದೆ. ದಿನದ ೨೪ ತಾಸು ಕಾರ್ಯನಿರ್ವಹಿಸುವಂತೆ ಮೂರು ತಂಡಗಳು ಕಾರ್ಯನಿರ್ವಹಿಸಲಿವೆ. ಪೊಲೀಸ್, ಕಂದಾಯ, ಅಬಕಾರಿ ಸಿಬ್ಬಂದಿಗಳನ್ನು ಚೆಕ್ಪೋಸ್ಟ್ಗೆ ನಿಯೋಜಿಸಲಾಗುವುದು ಹಾಗೂ ಸಿಸಿ ಟಿವಿ ಕ್ಯಾಮರಾ ಸಹ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಂಟ್ರೋಲ್ ರೂಂ.ಸ್ಥಾಪನೆ: ಶಿಗ್ಗಾಂವ ವಿಧಾನಸಭಾ ಉಪ ಚುನಾವಣೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೆ ಸ್ವೀಕರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ೦೮೩೭೫-೨೦೦೩೮೩ ಹಾಗೂ ಶಿಗ್ಗಾಂವನಲ್ಲಿ ೦೮೩೭೮-೨೨೨೪೬೮ ಸಹಾಯವಾಣಿಯನ್ನು ಕಂಟ್ರೋಲ್ ರೂಂನಲ್ಲಿ ಸ್ಥಾಪಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ೧೯೫೦ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಮಾಹಿತಿ ನಿಡಬಹುದಾಗಿದೆ ಎಂದರು.
ಅಭ್ಯರ್ಥಿಯ ವೆಚ್ಚದ ಮಿತಿ: ಅಭ್ಯರ್ಥಿಯ ಚುನಾವಣಾ ವೆಚ್ಚ ರೂ.೪೦ ಲಕ್ಷಕ್ಕೆ ಮಿತಿ ನಿಗಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪೊಲೀಸ್ ಬಂದೋಬಸ್ತ್: ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ.ಶಿರಕೋಳ ಅವರು ಮಾತನಾಡಿ, ಪ್ರತಿ ಮತಗಟ್ಟೆಗೆ ಒಬ್ಬ ಮುಖ್ಯ ಪೇದೆ ಹಾಗೂ ಒಬ್ಬ ಹೋಂ ಗಾರ್ಡ್, ಸೂಕ್ಷ್ಮ ಮತಗಟ್ಟೆಗೆ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಹೋಂ ಗಾರ್ಡ್ ಸೇರಿದಂತೆ ಅಗತ್ಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದರು.
ಚುನಾವಣಾ ನಿಗಾಕ್ಕೆ ಡಿ.ವೈ.ಎಸ್.ಪಿ.ಗಳು, ಸಿಪಿಐಗಳು, ಮೂರು ಕೆಎಸ್ಆರ್ಪಿ ತುಕಡಿ, ಪ್ಯಾರಾ ಮಿಲ್ಟ್ರಿ ಪಡೆ ಹಾಗೂ ಚೆಕ್ ಪೋಸ್ಟ್ ಸೇರಿದಂತೆ ಸೆಕ್ಟರ್ ತಂಡ, ವಿಡಿಯೋ ತಂಡಗಳಿಗೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಯಾವುದೇ ಸಿಬ್ಬಂದಿ ಕೊರತೆ ಇರುವುದಿಲ್ಲ ಎಂದು ಮಾಹಿತಿ ನೀಡಿದರು.
ಸ್ವೀಪ್ ಚಟುವಟಿಕೆ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಅವರು ಮಾತನಾಡಿ, ಸ್ವೀಪ್ ಚುಟುವಟಿಕೆ ಮೂಲಕ ಮತದಾನ ಪ್ರಮಾಣ ಹೆಚ್ಚಿಸಲು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಗ್ಗಾಂವ ಕ್ಷೇತ್ರ ವ್ಯಾಪ್ತಿಯ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ೧೩೩ ಮತದಾರರ ಸಾಕ್ಷರತಾ ಸಂಘಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಕೇಂದ್ರಕ್ಕೆ ಒಂದರಂತೆ ೨೪೧ ಚುನಾವಣಾ ಜಾಗೃತಿ ಸಂಘಗಳನ್ನು ರಚಿಸಲಾಗಿದೆ. ವಿವಿಧ ಕಾಲೇಜುಗಳಲ್ಲಿ ೨೪ ಕ್ಯಾಂಪಸ್ ಅಂಬಾಸಿಡರ್ಗಳನ್ನು ನೇಮಿಸಲಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಶೇ.೭೯.೯೪ ರಷ್ಟು ಮತದಾನವಾಗಿದ್ದು, ಶೇ.೮೧ ರಷ್ಟು ಪುರುಷ ಹಾಗೂ ಶೇ.೭೭.೮೨ ರಷ್ಟು ಮಹಿಳಾ ಮತದಾನವಾಗಿದೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಮತದಾನ ಪ್ರಮಾಣ ಕಡಿಮೆಯಾದ ೨೦ ಮತಕ್ಷೇತ್ರಗಳನ್ನು ಗುರುತಿಸಿ, ಪ್ರತಿ ಮತ ಕೇಂದ್ರಗಳಿಗೆ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಿ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
ವಿಶೇಷ ಮತಗಟ್ಟೆ: ಶಿಗ್ಗಾಂವಿ ಕ್ಷೇತ್ರದಲ್ಲಿ ಐದು ಸಖಿ, ತಲಾ ಒಂದರಂತೆ ವಿಕಲಚೇತನ ಸ್ನೇಹಿ, ಯುವ ಮತದಾರರ ಹಾಗೂ ಥೀಮ್ಬೇಸ್ಡ್ ಮತಗಟ್ಟೆ ಸ್ಥಾಪಿಸಲಾಗುವುದು ಎಂದರು. ಮಾಧ್ಯಮಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜ ಉಪಸ್ಥಿತರಿದ್ದರು.
ಶಿಗ್ಗಾಂವಕ್ಷೇತ್ರದ ಉಪ ಚುನಾವಣೆ ಮುಕ್ತ, ನ್ಯಾಯ ಸಮ್ಮತಕ್ಕೆ ಜಿಲ್ಲಾಡಳಿತ ಸಿದ್ಧತೆ ಅ.೧೮ ರಿಂದ ನಾಮಪತ್ರ ಸಲ್ಲಿಕೆ ಆರಂಭ-ನ.೨೫ ರವರೆಗೆ ನೀತಿ ಸಂಹಿತೆ ಜಾರಿಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ
Date: