—ಶಿಥಿಲಾವಸ್ಥೆಯಲ್ಲಿದೆ ಹಾವೇರಿ-ವಿಜಯನಗರ ಸಂಪರ್ಕಿಸುವ ಗುತ್ತಲಬಳಿಯ ತುಂಗಭದ್ರಾ ಸೇತುವೆ
ಹಾವೇರಿ; ಹಾವೇರಿಜಿಲ್ಲೆಯ ಕೊನೆಯ ಸರಹದ್ದಿನಲ್ಲಿರುವ ವಿಜನಗರಜಿಲ್ಲೆಯನ್ನು ಸಂಪರ್ಕಿಸುವ ತುಂಗಭದ್ರಾ ನದಿಗೆ ಅಡ್ಡವಾಗಿ ಕಂಚಾರಗಟ್ಟಿಯ ಬಳಿ ನಿರ್ಮಿಸಿರುವ ತುಂಗಭದ್ರಾ ಸೇತುವೆ ಶಿಥಿಲಾವಸ್ಥೆಯಲ್ಲಿದೆ. ಮಳೆಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವ ಕಾರಣ ಗಾಜನೂರುಬಳಿಯ ತುಂಗಭದ್ರಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿರುವುದರಿಂದ ನದಿಯ ಭೋರ್ಗರೆತ ಹೆಚ್ಚಾಗಿದ್ದು, ಇತ್ತ ಹಾವೇರಿಯ ಬಳಿ ಈ ತುಂಗಾ ಸೇತುವೆ ಶಿಥಿಲಗೊಂಡು ಗಡಗಡ ಎನ್ನುತ್ತಿದೆ. ಇದರಿಂದ ಸೇತುವೆಯ ಮೇಲೆ ಸಂಚರಿಸುವ ವಾಹನ ಸವಾರರ ಎದೆ ಬಡಿತ ಜೋರಾಗುತ್ತಿದೆ.
೫೪ ವರ್ಷಗಳ ಹಳೆಯ ಸೇತುವೆ: ಹಾವೇರಿ ತಾಲೂಕಿನ ಕಂಚಾರಗಟ್ಟಿಗ್ರಾಮದಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿರುವ ೫೪ರ್ವಗಳ ಹಿಂದೆ ಈ ಸೇತುವೆಯನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸಿತ್ತು. ಈ ಸೇತುವೆ ಸುಮಾರ ೫೪ ವರ್ಷಗಳಷ್ಟು ಹಳೆಯದ್ದಾಗಿದೆ. ಈ ಸೇತುವೆಯನ್ನು ೧೯೭೧ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಅವರು ಉದ್ಘಾಟಿಸಿದ್ದರು. ಅಂದು ದಿ. ಎಫ್.ಎಸ್.ತಾವರೆ ಅವರು ಹಾವೇರಿ ತಾಲೂಕಿನ ಶಾಸಕರಾಗಿದ್ದರು.
ಸತತ ೫೪ ವರ್ಷಗಳಿಂದ ಹಾವೇರಿ ಹಾಗೂ ಬಳ್ಳಾರಿ, ವಿಜಯನಗರ ಹಾಗೂ ಆಂಧ್ರಪ್ರದೇಶ ರಾಜ್ಯವನ್ನು ಸಂಪರ್ಕಿಸುವ ಪ್ರಮುಖಕೊಂಡಿಯಾಗಿ ಈ ಸೇತುವೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಈಗಲೂ ತನ್ನ ಕೆಲಸವನ್ನು ಮುಂದುವರೆಸಿದೆ. ಆದರೆ ಸಮಸ್ಯೆ ಏನೇಂದರೇ, ಈ ಸೇತುವೆ ಬಹಳ ಹಳೆಯದಾಗಿದ್ದು, ಸೇತುವೆಯ ಮೇಲ್ಭಾದಲ್ಲಿನ ರಕ್ಷಣಾಗೋಡೆಗಳು ಅಲ್ಲಲ್ಲಿ ಮುರಿದು ಬಿದ್ದಿವೆ, ಫಿಲ್ಲರಿನ ಕಾಂಕ್ರೀಟ್ ಕಿತ್ತು ತುಕ್ಕು ಹಿಡಿದಿರುವ ಕಬ್ಬಿಣದ ರಾಡುಗಳು ಕಿತ್ತು ಹೋದ ಕಾಂಕ್ರೀಟ್‌ನೊಂದಿಗೆ ನೇತು ಬಿದ್ದಿವೆ. ಸದ್ಯದ ಸೇತುವೆ ಸ್ಥಿತಿ ಗಮಿಸಿದರೇ ಈ ಸೇತುವೆಯ ಮೇಲೆ ಸಂಚಾರ ಅಪಾಯಕಾರಿ ಎಂದು ಗೋಚರವಾಗುತ್ತದೆ.
ಕಿತ್ತುಹೋಗಿರುವ ರಕ್ಷಣಾಗೋಡೆಗಳು: ತುಂಗಭದ್ರಾ ಸೇತುವೆಯ ಮೇಲ್ಬಾಗದಲ್ಲಿನ ನದಿಯ ಈ ದಡದಿಂದ ಆ ದಡದವರೆಗೆ ರಕ್ಷಣಾ ಗೋಡೆ ಸುರಕ್ಷಿತವಾಗಿಲ್ಲ. ಅಲ್ಲಲೇ ಗೋಡೆ ಕಿತ್ತು ಹೋಗಿದ್ದರೆ, ಹಾವೇರಿ ಮಾರ್ಗದಿಂದ ಮೈಲಾರಕ್ಕೆ ಹೋಗುವ ಎಡಭಾಗದ ಸೇತುವೆ ರಕ್ಷಣಾ ಗೋಡೆ ಸುಮಾರ ೧೦ ಅಡಿಗಿಂತಲೂ ಹೆಚ್ಚು ಒಡೆದು ಹೋಗಿದ್ದು, ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಅದರಲ್ಲೂ ಮೈಲಾರ ಮತ್ತು ಹೊಳಲುಗ್ರಾಮದಲ್ಲಿರುವ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಿಗೆ ಗುತ್ತಲ, ನೆಗಳೂರು, ಕಂಚಾರಟ್ಟಿ, ಹಾವನೂರು ಸೇರಿದಂತೆ ಈಭಾಗದ ವಿದ್ಯಾರ್ಥಿಗಳು ಬಸ್‌ನಲ್ಲಿ ಈಸೇತುವೆಯಮೇಲೆ ಸಂಚರಿಸುತ್ತಾರೆ.ಯಾವ ಕ್ಷಣದಲ್ಲಿ ಏನಾಗುತ್ತದೆಯೋ ಎನ್ನುವ ಆತಂಕದಲ್ಲಿ ಪಾಲಕರಿದ್ದಾರೆ.
ತಕ್ಷಣ ಸೇತುವೆ ದುರಸ್ತಿಯಾಗಲಿ:ಪ್ರತಿ ಹುಣ್ಣಿಗೆ ಹಾಗೂ ಅಮವಾಸೆ ವೇಳೆ, ಹಾಗೂ ಮೈಲಾರಲಿಂಗೇಶ್ವರ ಜಾತ್ರೆ, ಕುರವತ್ತಿ ಬಸವೇಶ್ವರ ಜಾತ್ರೆಗೆಯ ವೇಳೆ ಲಕ್ಷಾಂತರ ಜನರು ಈ ಸೇತುವೆಯಮೇಲೆ ಸಂಚರಿಸುತ್ತಾರೆ. ಸುಪ್ರಸಿದ್ದ ಮೈಲಾರ ಕಾರ್ಣಿಕದ ವೇಳೆ ಹತ್ತಾರು ಲಕ್ಷಜನರು ಇಲ್ಲಿ ಸೇರುತ್ತಾರೆ. ನಿತ್ಯ ಸಾವಿರಾರು ವಿದ್ಯಾರ್ಥಿಗಳನ್ನು ಹೊತ್ತ ಬಸ್‌ಗಳು ಈಸೇತುವೆಯ ಮೇಲೆ ಸಾಗುತ್ತವೆ. ಭಾರಿ ಪ್ರಮಾಣದ ಜನದಟ್ಟಣೆ ಇರುವ ಈಸೇತುವೆ ದುರಸ್ತಿಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನ ಹರಿಸದಿರುವುದು ಇಲಾಖೆಯ ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ.
ಮಳೆ ಬgದಾಗ ಸೇತುವೆಯ ಮೇಲ್ಭಾಗದಲ್ಲಿ ಮಳಕಾಲುದ್ದ ನೀರು ನಿಲ್ಲುತ್ತದೆ. ಕಾರಣ ಸೇತುವೆಯ ಎರಡುಬದಿ ರಕ್ಷಣಾಗೋಡೆಗೆ ಹೊಂದಿ ಕೊಂಡಂತೆ ಇದ್ದು ಮಳೆ ನೀರು ಹರಿದು ಹೋಗಲು ಇದ್ದ ಚಿಕ್ಕಕೊಳವೆಗಳಲ್ಲಿ ಮಣ್ಣು ಸಿಲುಕಿ ಗಿಡಗಂಟೆಗಳು ಬೆಳೆದಿವೆ. ಈಗಾಗಿ ಮಳೆಯ ನೀರು ಹರಿದುಹೋಗಲು ಅವಕಾಶ ಇಲ್ಲದೇ ಸೇತುವೆಯ ಮೇಲೆ ನೀರು ನಿಲ್ಲುವುದರಿಂದ ವಾಹನ ಸವಾರರು ಕೈಯಲ್ಲಿ ತಮ್ಮ ಜೀವ, ಜೊತೆಗೆ ಪ್ರಯಾಣಿಕರ, ವಿದ್ಯಾರ್ಥಿಗಳ ಜೀವ ಹಿಡಿದುಕೊಂಡು ವಾಹನಗಳನ್ನು ಸುರಕ್ಷಿತವಾಗಿ ಸೇತುವೆ ದಾಟಿಸುತ್ತಿದ್ದಾರೆ. ಆಕಸ್ಮಿಕವಾಗಿ ವಾಹನಗಳು ಟಾಯರ್‌ಗಳು ನೀರಿನಲ್ಲಿಯ ಕೆಸರಿಗೆ ಸಿಲುಕಿ ಅವಘಡಗಳು ಸಂಭವಿಸಿದರೇ ಹೋಣೆ ಯಾರು? ವಾಹನಗಳ ಸಂಚಾರ ಅಪಾಯಕಾರಿ ಎನ್ನುವುದಂತು ಸತ್ಯ.

ಹೊಸ ಸೇತುವೆ ನಿರ್ಮಾಣವಾಗಲಿ

೫೪ ವರ್ಷಗಳ ಹಿಂದೆ ನಿರ್ಮಿಸಲಾದ ತುಂಗಭದ್ರಾ ಸೇತುವೆ ಉದ್ಘಾಟನೆಗೆ ಅಂದು ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಹಾಗೂ ಅಂದಿನ ಶಾಸಕ ದಿ. ತಾವರೆ ಅವರು ಆಗಮಿಸಿದ್ದರು. ೫೪ ವರ್ಷಗಳ ಹಳೆಯ ಸೇತುವೆ ಶಿಥಿಲಗೊಂಡಿದೆ. ಇಲ್ಲಿ ವಾಹನಗಳ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ಮಳೆ ಹೆಚ್ಚಾಗಿರುವ ಕಾರಣಕ್ಕೆ ಸೇತುವೆ ಇನ್ನಷ್ಟು ಶಿಥಿಲಗೊಳ್ಳುವುದರ ಜೊತೆಗೆ ಅಪಘಾತಕ್ಕೂ ಎಡೆ ಮಾಡಿಕೊಟ್ಟಿದೆ. ಶಿರಸಿ-ಹಾವೇರಿ-ಮೊಳಕಲ್ಮೂರ ರಾಜ್ಯ ಹೆದ್ದಾರಿಯಲ್ಲಿ ನಿತ್ಯವೂ ಅಪಾರ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ದೂರದ ಆಂದ್ರಪ್ರದೇಶ, ಬಳ್ಳಾರಿ, ರಾಯಚೂರು, ಹೊಸಪೇಟೆ , ಹೂವಿನಹಡಗಲಿ, ಹರಪನಹಳ್ಳಿ, ಹಾವೇರಿ, ಹುಬ್ಬಳ್ಳಿ ಸೇರಿದಂತೆ ಅನೇಕ ಸ್ಥಳಗಳಿಗೆ ಈ ಮರ್ಗದಿಂದಲೇ ವಾಹನಗಳು ಹೋಗುತ್ತವೆ, ಬರುತ್ತವೆ. ಸರ್ಕಾರ ಈಸೇತುವೆಯನ್ನು ದುರಸ್ತಿಗೊಳಿಸುವುದರ ಜೊಗೆ ತುಂಗಭದ್ರಾನದಿಗೆ ಅಡ್ಡಲಾಗಿ ಹೊಸದಾಗಿ ಸೇತುವೆ ನಿರ್ಮಿಸಬೇಕೆನ್ನುತ್ತಾರೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿ.ಬಿ.ಕುರವತ್ತಿಗೌಡ್ರ.
ಬ
ಸೇತುವೆಯ ಸುರಕ್ಷತೆಗೆ ತಕ್ಷಣ ಅಧಿಕಾರಿಗಳು ಮುಂದಾಗಲಿ

ಹಾವೇರಿ-ವಿಜಯನಗರ ಜಿಲ್ಲೆಯ ಸಂಪರ್ಕಕೊಂಡಿಯಾಗಿರುವ ಈಸೇತುವೆಯ ಮೇಲ್ಬಾಗದ ರಕ್ಷಣಾಗೋಡೆಗಳು ಶಿಥಿಲಗೊಂಡಿವೆ. ಅಲ್ಲಲ್ಲಿ ಸೇತುವೆಯ ರಕ್ಷಣೆಗೆ ಅಳವಡಿಸಿದ್ದ ಫಿಲ್ಲರಗಳು ಕಿತ್ತಿವೆ. ನಿತ್ಯವು ಸಾವಿರಾರು ವಿದಾರ್ಥಿಗಳು, ಸಾರ್ವಜನಿಕರು ಈಸೇತುವೆಯ ಮೇಲೆ ಸಂಚರಿಸುತ್ತಾರೆ. ಏನಾದರೂ ಅವಘಡಗಳಾದರೇ ಹೋಣೆಯಾರು? ಅವಘಡಗಳು ನಡೆಯುವ ಮುಂಚೆಯೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡುಸೇತುವೆಯ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಬೇಕು, ಸೇತುವೆಯ ದುರಸ್ತಿಗೆ ಕ್ರಮ ವಹಿಸಬೇಕು ಎನ್ನುತ್ತಾರೆ ಈ ಭಾಗದ ಮುಖಂಡ ಈರಪ್ಪ ಲಮಾಣಿ.