ಶಿರಬಡಗಿ ಗ್ರಾಮದಲ್ಲಿ ಗ್ರಾ.ಪಂ.ಸದಸ್ಯ ಸೇರಿ ಅನೇಕರು ಜೆಡಿಎಸ್‌ಗೆ ಸೇರ್ಪಡೆ: ಕ್ಷೇತ್ರದಲ್ಲಿ ಜೆಡಿಎಸ್‌ಪರ ಅಲೆ: ಮಾಳಗಿ

Date:

ಹಾವೇರಿ: ಜೆಡಿಎಸ್ ವರಿಷ್ಠರಾದ ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ವೇಳೆ ೨.೫೦ ಲಕ್ಷ ರೈತರ ಸಾಲ ಮನ್ನಾ ಮಾಡಿದ್ದರು, ಈ ಹಿಂದೆ ಅಧಿಕಾರದಲ್ಲಿದ್ದಾಗ ಕೈಗೊಂಡ ಸಾಲ ಮನ್ನಾ, ನೀರಾವರಿ ಯೋಜನೆ, ವಸತಿ ಯೋಜನೆಯ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಜನಸಮಾನ್ಯರ ಹಾಗೂ ರೈತರ ಬದುಕನ್ನು ಹಸನಮಾಡುವ ಯಜನೆ ರೂಪಿಸಿದ್ದರು. ಕುಮಾರಸ್ವಾಮಿ ಅವರ ಜನಪರ ಕಾರ್ಯಗಳನ್ನು ಜನತೆ ಮೆಚ್ಚಿಕೊಂಡಿದ್ದಾರೆ. ಹಾವೇರಿ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್‌ಪಕ್ಷದ ಅಲೆ ಇದೆ ಎಂದು ಹಾವೇರಿ ಮೀಸಲು ಕ್ಷೇತ್ರದ ಜೆಡಿಎಸ್ ಘೋಷಿತ ಅಭ್ಯರ್ಥಿ ತುಕಾರಾಮ ಮಾಳಗಿ ಹೇಳಿದರು.
ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಸವಣೂರು ತಾಲೂಕಿನ ಶಿರಬಡಗಿ ಗ್ರಾಮದಲ್ಲಿ ಬೇರೆ ಪಕ್ಷಗಳನ್ನು ತೊರೆದು ಅನೇಕ ಕಾರ್ಯಕರ್ತರನ್ನು ಹಾಘೂ ಇತ್ತೀಚೆಗೆ ನಡೆದಿದ್ದ ಹತ್ತಿಮತ್ತೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನೂತನ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿರುವ ರಮೇಶ ಒಂಟಿಗೌಡರ ಅವರನ್ನು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಬದುಕನ್ನು ಉಜ್ವಲಗೊಳಿಸುವ ಭರವಸೆಯನ್ನು ಕುಮಾರಣ್ಣನವರು ನೀಡಿದ್ದಾರೆ. ”ವಯಸ್ಸಾದ ರೈತರಿಗೆ ಮಾಸಿಕ ೫ ಸಾವಿರ ರೂ. ಗೌರವ ಧನ ಹಾಗೂ ಅವಿವಾಹಿತ ಮತ್ತು ವಿಧವೆಯರಿಗೆ ಈಗಿರುವ ಮಾಸಿಕ ೮೦೦ ರೂ. ಗೌರವ ಧನವನ್ನು ೨೫೦೦ ಕ್ಕೆ ಹೆಚ್ಚಿಸುವುದು. ಸಣ್ಣ ಹಾಗೂ ದೊಡ್ಡ ಹಿಡುವಳಿದಾರ ಯಾವೊಬ್ಬ ರೈತರು ಸಾಲ ಮಾಡದಂತೆ ಯೋಜನೆ. ಬೀಜ, ಗೊಬ್ಬರ ಇತ್ಯಾದಿ ಕೃಷಿ ಸಂಬಂಧಿ ಖರ್ಚುಗಳಿಗೆ ಎಕರೆಗೆ ೧೦ ಸಾವಿರ ರೂ. ಕೊಡಲಾಗುವುದು”. ‘ರೈತರು ಸಾಲಗಾರರಾಗಬಾರದು ಎಂಬುದು ಕುಮಾರಣ್ಣನವರ ಆಶಯವಾಗಿದೆ.
‘ಗ್ರಾಮಗಳಲ್ಲಿ ಎಲ್‌ಕೆಜಿಯಿಂದ ಉನ್ನತ ಶಿಕ್ಷಣವರೆಗೆ ಉಚಿತ, ಗುಣಮಟ್ಟದ ಶಿಕ್ಷಣ ಒದಗಿಸುವುದು . ರೈತರು ನಾನಾ ಕಾಯಿಲೆಗೆ ಲಕ್ಷಾಂತರ ರೂ. ವೆಚ್ಚ ಭರಿಸಲು ಸಾಲ ಮಾಡಬೇಕಾಗುತ್ತದೆ. ೧೦ ಲಕ್ಷ ರೂ.ವರೆಗೆ ರೈತ ಕುಟುಂಬದವರಿಗೆ ವಿಮೆ ಯೋಜನೆ . ಎಲ್ಲರಿಗೂ ಆರೋಗ್ಯ , ಪ್ರತಿ ಗ್ರಾಮಗಳಲ್ಲಿ ಮೂವರು ವೈದ್ಯರೊಂದಿಗೆ ಸುಸಜ್ಜಿತ ಆರೋಗ್ಯ ಕೇಂದ್ರ. ಯುವಕರನ್ನು ಸ್ವಾವಲಂಬಿಯನ್ನಾಗಿಸಲು ನಿರಂತರ ತರಬೇತಿ ನೀಡಿ ಅವರಿಗೆ ಸಹಾಯಧನ ನೀಡುವುದು. ಮಹಿಳೆಯರ ಸಬಲೀಕರಣಕ್ಕೂ ವಿಶೇಷ ಆದ್ಯತೆ ನೀಡುವ ಯೋಜನೆ ರೂಪಿಸುವ ಗುರಿಯನ್ನು ಕುಮಾರಣ್ಣನವರು ಹೊಂದಿದ್ದಾರೆ. ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲಾವರು ಯೋಜನೆಗಳನ್ನು ರೂಪಿಸಿದ್ದು, ನೀರಾವರಿ, ವಿದ್ಯಾವಂತ ಯುವಕರಿಗೆ ಕೆಲಸ ನೀಡುವ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಹಲವು ಹತ್ತು ಯೋಜನೆಗಳನ್ನು ರೂಪಿಸಲಾಗಿದ್ದು, ಕುಮಾರಣ್ಣನವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿನ ಅನೇಕರು ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದು, ಕ್ಷೇತ್ರದಲ್ಲಿ ಜೆಡಿಎಸ್ ಅಲೆ ಇದ್ದು, ಮತದಾರರು ತಮ್ಮನ್ನು ಆಶೀರ್ವದಿಸುವಂತೆ ತುಕಾರಾಮ ಮಾಳಗಿ ಮನವಿ ಮಾಡಿದರು.
ಈ ಸಂದರ್ಭಲ್ಲಿ ಹತ್ತಿಮತ್ತೂರ ಗ್ರಾಮಪಂಚಾಯತಿ ಸದಸ್ಯ ರಮೇಶ ಒಂಟಿಗೌಡರ,ದ್ಯಾಮಣ್ಣ ಲಮಾಣಿ, ಗಂಗಾಧರ ಲಮಾಣಿ, ಮಂಜು ಉಳ್ಳಾಗಡ್ಡಿ, ನಾಗನಗೌಡ, ರಮೇಶ ಲಮಾಣಿ, ಶಾಂತಪ್ಪ ಕೊರಡೂರು, ಮಂಜಪ್ಪ ಅಕ್ಕಿಗೊಂದಿ ಸೇರಿದಂತೆ ಅನೇಕರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೫೨ ಕೋಟಿ ರೂ. ವೆಚ್ಚದಲ್ಲಿ ಮದಗ-ಮಾಸೂರು ಕೆರೆ ನಾಲೆಗಳ ದುರಸ್ತಿ: ಸಚಿವ ಸಂಪುಟ ಅಸ್ತು

೫೨ ಕೋಟಿ ರೂ. ವೆಚ್ಚದಲ್ಲಿ ಮದಗ-ಮಾಸೂರು ಕೆರೆ ನಾಲೆಗಳ ದುರಸ್ತಿ:...

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್  

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್     ಹಾವೇರಿ : ರಾಗಿಕಾಳಿಗೆ ಭೂಮಿಯನ್ನೇ...

ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ

  ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ ಹಾವೇರಿ _...

“ಎಕ್ಕ ಪೈಸಾ ವಸೂಲಿ ಪಕ್ಕಾ”

"ಎಕ್ಕ ಪೈಸಾ ವಸೂಲಿ ಪಕ್ಕಾ" ಬಹುದಿನಗಳ ನಂತರ ಪಕ್ಕಾ ಪೈಸಾ ವಸೂಲಿ ಎನ್ನಬಹುದಾದ...