ಶೋಷಿತ ಸಮುದಾಯಗಳ ಜಾಗೃತಿಗಾಗಿ ಚಿತ್ರರ್ದುಗದಲ್ಲಿ ಜ.೨೮ರಂದು ಜಾಗೃತಿ ಸಮಾವೇಶ” ಶೋಷಿತರು ಮೈಮರೆತರೆ ತೊಂದರೆ : ರಾಮಚಂದ್ರಪ್ಪ
ಹಾವೇರಿ: ಅಪಾಯದ ಅಂಚಿನಲ್ಲಿರುವ ಸಂವಿಧಾನವನ್ನುಉಳಿಸಿಕೊಳ್ಳಬೇಕಾಗಿರುವುದರಿಂದ ದಲಿತರು, ಹಿಂದುಳಿದವರು, ಶೋಷಿತರು, ಅಲ್ಪಸಂಖ್ಯಾತರು, ಆದಿವಾಸಿ, ಅಲೆಮಾರಿಗಳು ಒಗ್ಗಟ್ಟಿನಿಂದ ಇರಬೇಕಾಗುತ್ತದೆ. “ಶೋಷಿತ ಸಮುದಾಯಗಳ ಜಾಗೃತಿಗಾಗಿ ಚಿತ್ರರ್ದುಗದಲ್ಲಿ ಜ.೨೮ರಂದು ಶೋಷಿತರ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶವನ್ನು ಶೋಷಿತರು ಗಂಭೀರವಾಗಿ ತೆಗೆದುಕೊಳ್ಳಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಹಾವೇರಿಜಿಲ್ಲೆಯಿಂದ ಶೋಷಿತ ಸಮುದಾಯಗಳ ಜನರು ಭಾಗವಹಿಸಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಮನವಿ ಮಾಡಿದರು.
ಜ.೨೩ರಂದು ಇಲ್ಲಿನ ಜಿಲ್ಲಾ ಸರಕಾರಿ ನೌಕರರ ಭವವನದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಶೋಷಿತರ ಜಾಗೃತಿ ಸಮಾವೇಶದ ಹಾವೇರಿ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಪಕ್ಕದ ಮೈದಾನದಲ್ಲಿ ನಡೆಯುವ ಶೋಷಿತರ ಜಾಗೃತಿ ಸಮಾವೇಶ ಯಾರ ವಿರುದ್ಧವಾಗಿ ಅಲ್ಲ, ನಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕಾಗಿದೆ. ಕೆಲವರು ಕಾಂತರಾಜ್ ವರದಿಯನ್ನು ವಿರೋಧಿಸುವುದಾಗಿ ನಿರ್ಣಯ ತೆಗೆದುಕೊಳ್ಳುವ ಮೂಲಕ ನಮ್ಮ ಮೇಲೆ ಸವಾರಿ ಮಾಡುವುದಾಗಿ ಸಂದೇಶ ನೀಡಿದ್ದಾರೆ.

ಸರ್ಕಾರ ಇನ್ನು ವರದಿಯನ್ನೇ ಬಿಡುಗಡೆಗೊಳಿಸಿಲ್ಲ, ವೈಜ್ಞಾನಿಕ- ಅವೈಜ್ಞಾನಿಕ ಎಂದು ಹೇಗೆ ಹೇಳಲು ಸಾಧ್ಯ ೧೯೩೧ ರಲ್ಲಿ ಜಾತಿವಾರು ಸಮೀಕ್ಷೆಯಾಗಿತ್ತು ೯೨ ವರ್ಷಗಳ ನಂತರ ಈಗ ಮತ್ತೆ ಜಾತಿವಾರು ಜನಗಣತಿಯಾಗಿದೆ. ಲಿಂಗಾಯತರು, ವಕ್ಕಲಿಗರು ಹಿಂದುಳಿದವರಲ್ಲ ಎಂದು ನಾಗನಗೌಡ ಆಯೋಗದ ವರದಿಯಲ್ಲಿ ತೋರಿಸಿಲ್ಲದ ಕಾರಣ ಇದನ್ನು ವಿರೋಧಿಸಿದರು. ಹಾವನೂರ್ ಆಯೋಗದ ವರದಿಯನ್ನು ತಿರಸ್ಕರಿಸಿದ್ದರು. ಆದರೆ ಹಿಂದುಳಿದ ವರ್ಗಗಳ ಹರಿಕಾರ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ್ ಅರಸ್ ದಿಟ್ಟತನದಿಂದ ವರದಿಯನ್ನು ಜಾರಿಗೊಳಿಸಿದರು. ಶೋಷಿತ ಸಮುದಾಯಗಳು ಮೈಮರೆತು ಕೂತರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ರಾಮಚಂದ್ರಪ್ಪ ಎಚ್ಚರಿಸಿದರು.
ಸಭೆಯಲ್ಲಿ ಅಖಿಲ ಕರ್ನಾಟಕ ಮಡಿವಾಳ ಸಮಾಜದ ರಾಜ್ಯಾಧ್ಯಕ್ಷ ನಂಜಪ್ಪ, ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಮಣ್ಯ, ರಾಜ್ಯ ಮುಖಂಡರುಗಳಾದ ರಾಮಕೃಷ್ಣ, ಕೃಷ್ಣಮೂರ್ತಿ ಕೆ.ಎಮ್, ಕೃಷ್ಣಮೂರ್ತಿ ಜಿ, ಸ್ಥಳೀಯ ಮುಖಂಡರುಗಳಾದ ರಮೇಶ ಆನವಟ್ಟಿ, ಬಸವರಾಜ ಹೆಡಿಗೊಂಡ, ಉಡಚಪ್ಪ ಮಾಳಗಿ, ರತ್ನಾಕರ ಕುಂದಾಪುರ, ಸಿದ್ದಣ್ಣ ಅಂಬಲಿ, ಸಂಜಯಗಾಂಧಿ ಸಂಜೀವಣ್ಣನವರ, ರವಿ ಹಾದಿಮನಿ, ಅಶೋಕ ಹರನಗಿರಿ, ಬಸವರಾಜ ಹಾದಿಮನಿ, ಚಂದ್ರಣ್ಣ ಬೇಡರ, ಶ್ರೀಧರ ದೊಡ್ಡಮನಿ, ಹೊನಪ್ಪ ಮರಿಯಮ್ಮನವರ, ಹೊನ್ನಪ್ಪ ತಗಡಿಮನಿ, ಅಶೋಕ ಮರೆಣ್ಣನವರ ಮತ್ತಿತರರು ಮಾತನಾಡಿ ಚಿತ್ರದುರ್ಗದಲ್ಲಿ ನಡೆಯುವ ಸಮಾವೇಶ ಸಾಂಸ್ಕಂತಿಕ ಚಳುವಳಿಯಾಗಿ ರೂಪುಗೊಂಡಾಗ ಮಾತ್ರ ಹಿಂದುಳಿದ ವರ್ಗ ಶೋಷಿತರ ಸಮುದಾಯಗಳ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇಲ್ಲದಿದ್ದರೆ ಮನುವಾದ ಸಿದ್ಧಾಂತವುಳ್ಳವರು ನಮ್ಮನ್ನು ಆಳುತ್ತಿರುತ್ತಾರೆ. ಅನೇಕ ರೀತಿಯ ವ್ಯತಿರಿಕ್ತ ಸಮಸ್ಯೆಗಳು ನಮ್ಮ ಮುಂದಿವ. ಸಾಮಾಜಿಕ, ಧಾರ್ಮಿಕ ನೆಲೆಗಳಲ್ಲಿ ವಿಭಜನೆಯಾಗುತ್ತಿದೆ. ನಮ್ಮ ಮೇಲಿನ ದಬ್ಬಾಳಿಕೆಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಹಾವೇರಿಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಶೋಷಿತರು ಭಾಗವಹಿಸುವರು ಎಂದರು.
ಸಭೆಯಲ್ಲಿ ಈರಪ್ಪ ಲಮಾಣಿ, ಜಮೀರಹ್ಮದ ಜಿಗರಿ, ಮನೋಹರ ಹಾದಿಮನಿ, ಫಕ್ಕೀರಪ್ಪ ಕುಂದೂರ, ಮಂಜುನಾಥ ಕಂಕನವಾಡ, ನಿಂಗರಾಜ ಗಾಳೆಮ್ಮನವರ, ಸುರೇಶ ಮಡಿವಾಳರ, ಶೆಟ್ಟಿ ವಿಭೂತಿ, ನಾಗರಾಜ ಮೇದಾರ ಸೇರಿದಂತೆ ವಿವಿಧ ಶೋಷಿತ ಸಮುದಾಯಗಳ ನೂರಾರು ಮುಖಂಡರು ಭಾಗವಹಿಸಿದ್ದರು.
ಮಾಲತೇಶ ಅಂಹೂರ ಸ್ವಾಗತಿಸಿದರು, ಪ್ರಕಾಶ ಬಣಕಾರ ನಿರೂಪಿಸಿದರು, ನಾಗರಾಜ ಬಡಮ್ಮನವರ ವಂದಿಸಿದರು.