
–ಸಕ್ಕರೆ ಕಾರ್ಖಾನೆಯ ಮಾಲಿಕರು/ಕಬ್ಬು ಬೆಳಗಾರ ಸಬೆ-ಟನ್ ಕಬ್ಬಿಗೆ ರೂ೩೫೫೦ ದರ ನಿಗದಿಗೆ ರೈತರ ಒತ್ತಾಯ
ಹಾವೇರಿ; ೨೦೨೫ ೨೬ ನೇ ಸಾಲಿನ ಕಬ್ಬು ನುರಿಸುವ ಯುವ ಹಂಗಾಮಿನ ಕುರಿತು ಕಬ್ಬು ಬೆಳೆಗಾರರ ರೈತ ಮುಖಂಡರ ಹಾಗೂ ಕಾರ್ಖಾನೆ ಯವರೊಂದಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಜರುಗಿದ ಸಭೆಯಲ್ಲಿ ಕಬ್ಬು ಬೆಲಗಾರರು ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವ ಪ್ರತಿ ಟನ್ ಕಬ್ಬಿಗೆ ರೂ೩೫೫೦ ದರ ನಿಗದಿ ಪಡಿಸುವಂತೆ ರೈತರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರಿಗೆ ಒತ್ತಾಯಿಸಿದರು.
ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ರೈತ ಮುಖಂಡರು, ಪ್ರತಿವರ್ಷ ಕಾರ್ಖಾನೆಯವರು ಹಣ ಕೊಡುವುದರಲ್ಲಿ ರೈತರಿಗೆ ಮೋಸ ಮಾಡುತ್ತಲೇ ಬಂದಿದ್ದಾರೆ, ಕಬ್ಬು ಸಾಗಾಣಿಕೆ ಮಾಡಿ ೧೦ ತಿಂಗಳಾದರೂ ಜಿಎಂ ಶುಗರ್ ಇನ್ನೂ ರೈತರಿಗೆ ಪೂರ್ತಿ ಹಣ ಸಂದಾಯ ಮಾಡಿರುವುದಿಲ್ಲ. ೨೦೨೩/೨೪ನೇ ಸಾಲಿನ ಬಡ್ಡಿ ಹಣವನ್ನು ಕೊಡಲು ಕಬ್ಬು ಆಯುಕ್ತರು ಸಕ್ಕರೆ ನಿರ್ದೇಶನಾಲಯ ಬೆಂಗಳೂರು ಇವರು ಕಾರ್ಖಾನೆ ಅವರಿಗೆ ಆದೇಶ ಮಾಡಿದ್ದರು ಸಹ ರೈತರಿಗೆ ಹಣ ಕೊಟ್ಟಿರುವುದಿಲ್ಲ. ಹಳೆಯ ಎಲ್ಲಾ ಬಿಲ್ಲುಗಳನ್ನು ಕೊಡುವವರೆಗೂ ಜಿಎಂ ವನ್ ಹಾಗೂ ಜಿ ಎಮ್ ೨ ಕಾರ್ಖಾನೆಯನ್ನು ಪ್ರಾರಂಭ ಮಾಡಬಾರದು ಎಂದು ಕಬ್ಬು ಬೆಳಗಾರರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಈಗಾಗಲೇ ಜಿಎಂ ಶುಗರ್ಸ ನವರು ಯುನಿಟ್ ಟು ರಟ್ಟಿಹಳ್ಳಿ ತಾಲೂಕ ಭೈರನ ಪಾದದಲ್ಲಿರುವ ತಮ್ಮ ಕಾರ್ಖಾನೆಯನ್ನು ಅಕ್ಟೋಬರ್ ೮ ನೇ ತಾರೀಕಿಗೆ ಶುರು ಮಾಡಿದ್ದಾರೆ, ಅದು ತಪ್ಪು, ಸರ್ಕಾರದ ಆದೇಶವಿದೆ, ರಾಜ್ಯ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ, ನವಂಬರ್ ಒಂದರಿಂದ ಉತ್ತರ ಕರ್ನಾಟಕದ ಎಲ್ಲ ಕಾರ್ಖಾನೆಗಳು ಪ್ರಾರಂಭವಾಗಬೇಕೆಂದು ಆದೇಶ ವಿದ್ದರೂ ಸಹಿತ ಆದೇಶಕ್ಕೆ ಧಿಕ್ಕರಿಸಿ ಭೈರನಪಾದದಲ್ಲಿರುವ ಜಿಎಂ ಶುಗರ್ ಕಾರ್ಖಾನೆ ಶುರು ಮಾಡಿದ್ದಾರೆ. ಆದರೆ ಸಂಗೂರ ಕಾರ್ಖಾನೆ ಆರಂಭಿಸಿರುವುದಿಲ್ಲ, ಈ ಭಾಗದ ರೈತರಿಗೆ ಮೋಸ ಮಾಡುತ್ತಿದ್ದಾರೆ. ಸಂಗೂರ ಸಹಕಾರಿ ಸಕ್ಕರೆ ಕಾರ್ಖಾನೆ ಶೇರುದಾರರ ಸಕ್ಕರೆ ಕಾರ್ಖಾನೆಯಾಗಿದೆ, ಇದನ್ನು ಜಿಎಂ ಶುಗರ್ಸ ನವರಿಗೆ ೨೦೧೩ನೇ ಇಸವಿಯಿಂದ ಲೀಸ್ ಹಾಕಲಾಗಿದೆ. ಈ ಕಾರ್ಖಾನೆ ವ್ಯಾಪ್ತಿಯಲ್ಲಿ ೬ ಲಕ್ಷಕ್ಕಿಂತ ಹೆಚ್ಚು ಟನ್ನ ಕಬ್ಬಿದೆ, ಈ ಕಾರ್ಖಾನೆಗೆ ವ್ಯಾಪ್ತಿಗೆ ಬರುವ ಕಬ್ಬನ್ನು ಸಂಗೂರ ಸಕ್ಕರೆ ಕಾರ್ಖಾನೆಯಲ್ಲಿಯೇ ಅರಿಯಬೇಕೆಂದು ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ಜಿಎಂ ಶುಗರ್ಸನವರು ರೈತರಿಗೆ ಮೇಲಿಂದ ಮೇಲೆ ರೈತರಿಗೆ ಮೋಸ ಮಾಡುತ್ತಿದ್ದಾರೆ. ಸಂಗೂರ ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರಿಗೆ ಇನ್ನೂ ಹಣ ಸರಿಯಾಗಿ ನೀಡುತ್ತಿಲ್ಲ. ಸರ್ಕಾರದ ಆದೇಶ ಕಬ್ಬು ಸಾಗಿಸಿದ ಹದಿನಾಲ್ಕು ದಿನದ ಒಳಗಾಗಿ ಹಣ ಪಾವತಿಸಬೇಕೆಂದಿದೆ, ಇದಕ್ಕೆಲ್ಲ ಅವರು ತಲೆ ಕೆಡಿಸಿಕೊಳ್ಳುತ್ತಿಲ್ಲ, ಈ ಸಂಗೂರ ಕಾರ್ಖಾನೆಯ ಒಂದು ಕಿ.ಮೀ ಸುತ್ತಮುತ್ತಲಿನ ಕಬ್ಬನ್ನು ೮೦ ಕಿಲೋಮೀಟರ್ ದೂರದ ಬೈರನ ಪಾದ ಕಾರ್ಖಾನೆಗೆ ಸಾಗಿಸುತ್ತಿದ್ದಾರೆ, ಇದನ್ನು ಇಲ್ಲಿಗೆ ನಿಲ್ಲಿಸಬೇಕು, ಸಂಗೂರ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬನ್ನುಅರಿಯಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ರೈತ ಮುಖಂಡರು ವಿನಂತಿಸಿಕೊಂಡರು.
ನಮ್ಮ ಹಿಂದಿನ ಹಿರಿಯರು ಬಹಳಷ್ಟು ಶ್ರಮವಹಿಸಿ ತಾವರೆ ಫಕೀರಪ್ಪನವರ ಶ್ರಮದಿಂದ ೨೪,೦೦೦ ಸಾವಿರ ಶೇರುದಾರರನ್ನು ಹೊಂದಿ ಸಂಗೂರ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿತವಾಗಿದೆ, ಇದನ್ನು ಈ ಭಾಗದ ರೈತರು ಹಾಳು ಮಾಡಿಕೊಳ್ಳಲು ತಯಾರಿರುವುದಿಲ್ಲ. ಗುತ್ತಿಗೆದಾರರು ಕಾರ್ಖಾನೆ ಮೇಲೆ ೯೨ ಕೋಟಿ ಸಾಲ ಮಾಡಿದ್ದಾರೆ, ಆ ಸಾಲವನ್ನು ತುಂಬಿ ಬಿಟ್ಟು ಹೋಗಬಹುದು ಎಂದು ಕಬ್ಬು ಬೆಳೆಗಾರರು ಆಕ್ರೋಶ ವ್ಯಕ್ತ ಪಡಿಸಿದರು.
ಈ ವರ್ಷದ ಕಬ್ಬಿಗೆ ರೂ ೩೫೫೦ ದರವನ್ನು ಕೇಂದ್ರ ಸರ್ಕಾರ ಎಫ್ ಆರ್. ಪಿ ಎಂದು ನಿಗದಿ ಮಾಡಿದೆ, ಎಲ್ಲಾ ಕಾರ್ಖಾನೆಯವರು ರಿಕವರಿ ಕಡಿಮೆ ತೋರಿಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿನ ಎಲ್ಲ ಕಾರ್ಖಾನೆಯವರು ಒಂದು ಟನ್ ಕಬ್ಬಿಗೆ ೩೫೫೦ ರೂಪಾಯಿ ದರ ಕೊಡಬೇಕು. ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆ ಯವರೇ ಬರಿಸಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಮಾಡಿದರು.
ಸಭೆಯಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ವ್ಹಿ ಆಯ್ ಎನ್ ಪಿ ಶುಗರ್ಸ, ಜಿ ಎಮ್ ಶುಗರ್ಸ್ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು, ಪ್ರಮುಖರಾದ ರಾಜಶೇಖರ್ ಬೆಟಗೇರಿ, ಚಂದ್ರಪ್ಪ ವರ್ದಿ, ಮಂಜುನಾಥ ಅಸುಂಡಿ, ದಾನೇಶಪ್ಪ ಕೆಂಗೊಡ, ರಾಜಶೇಖರ ಹಲಸುರ, ಸೋಮಣ್ಣ ದೊಡ್ಮನಿ, ಮುತ್ತಣ್ಣ ಗುಡಿಗೇರಿ, ಆನಂದ್ ಕೆಳಗಲಮನಿ, ಶಂಕರ್ ಗೌಡ ಪಾಟೀಲ್, ರಾಜು ಹೊನ್ನತ್ತಿ, ಶ್ರೀನಿವಾಸ್ ಶಿವಪೂಜಿ, ಗಿರೀಶ ಕರೆಗೌಡ್ರ, ಪಂಚಯ್ಯ ಹಿರೇಮಠ, ರವಿಕುಮಾರ್ ಸವಣೂರು, ಮಡ್ಲಿ ಪಾಟೀಲ್, ಸಿದ್ದಲಿಂಗಪ್ಪ ಕಲಕೋಟಿ, ವಿರೂಪಾಕ್ಷಪ್ಪ ಕಲಕೋಟಿ, ಪ್ರಭು ಗೌರಿಮನಿ, ಮಂಜಣ್ಣ ಗಾಣಿಗೇರ್, ಮುರಗೆಪ್ಪ ಅಂಗಡಿ, ಗುರು ಅಂಗಡಿ, ಸುರೇಶ್ ಕಲ್ಲೇದೇವರ ಮುಂತಾದವರು ಹಾಜರಿದ್ದರು.

