ಹಾನಗಲ್, ಮಹಿಳೆಯ ಮೇಲೆ ಸಾಮೂಹಿಕ ದೌರ್ಜನ್ಯ, ಮತ್ತಿಬ್ಬರ ಬಂಧನ, ೮ಕ್ಕೇರಿದ ಬಂಧಿತರ ಸಂಖ್ಯೆ
ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಜ. ೮ರಂದು ಮಹಿಳೆ ಮೇಲೆ ನಡೆದ ಸಾಮೂಹಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿ ಗಳನ್ನು ಬಂಧಿಸಲಾಗಿದೆ ಎಂದು ಜ.೧೫ರಂದು ಸೋಮವಾರ
ಜಿಲ್ಲಾ ಪೊಲೀಸ್ ವರಿಷ್ಠ ಅಂಶುಕುಮಾರ ತಿಳಿಸಿದ್ದಾರೆ.
ಬಂಧಿತ ಆರೋಪಗಳನ್ನು :ಸಾದಿಕ್ ಬಾಬುಸಾಬ್ ಅಗಸಿಮನಿ, (ವಯಾ : 29 ವರ್ಷ, ಉದ್ಯೋಗ : ಸಂತೆ ವ್ಯಾಪಾರ )
ಶೋಯೆಬ್ ನಿಯಾಜ್ ಅಹ್ಮದ್ ಮುಲ್ಲಾ, (ವಯಾ : 19 ವರ್ಷ ಹೊಟೇಲ್ ಕೆಲಸ) ಎಂದು ತಿಳಿಸಿದ್ದಾರೆ.
ಇಬ್ಬರ ಬಂಧನದಿಂದ ಬಂಧಿತರ ಸಂಖ್ಯೆ ,೮
ಕ್ಕೇರಿದೆ.
.ದೂರು ದಾಖಲಾದ ದಿನವೇ ಮೂವರು ಆರೋಪಿಗಳಾದ ಹಾನಗಲ್ ತಾಲೂಕು ಅಕ್ಕಿ ಆಲೂರಿನ ಗ್ಯಾರೇಜ್ ಉದ್ಯೋಗಿ ಅಪ್ತಾಬ್ ತಂದೆ ಮಣ್ಣೂಲ್ ಅಹ್ಮದ್ (೨೪) ವ್ಯಾಪಾರಿ ಮದರಸಾಬ್ ತಂದೆ ಮಹಮ್ಮದ್ ಇಸಾಕ್ (೨೩) ಮತ್ತು ಹಾನಗಲ್ ತಾಲೂಕು ಹೀರೂರು ಗ್ರಾಮದ ಆಟೋ ಚಾಲಕ ಅಬ್ದುಲ್ ಖಾದರ್ ತಂದೆ ಜಾಫರ್‌ಸಾಬ್ ಹಂಚಿನಮನಿ (೨೮) ಅವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಅಕ್ಕಿಆಲೂರಿನ ಮಹ್ಮದ್ ಸೈಫ್ ತಂದೆ ಅಬ್ದುಲ್ ಸತ್ತಾರ್ ಸಾವಿಕೇರಿ ಜ. ೯ರಂದು ಸ್ವಯಂ ಅಪಘಾತದಲ್ಲಿ ಗಾಯಗೊಂಡಿದ್ದು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಚಿಕಿತ್ಸೆ ಮುಗಿದ ನಂತರ ಬಂಧಿಸಲಾಗುವುದು.
ಜ. ೧೪ರಂದು ಭಾನುವಾರ ರಹೀನ್ ತಂದೆ ಮಹಮದ್ ಹುಸೇನ್ ವಾಲಿ ಕಾರ್ (೧೯), ಇಮ್ರಾನ್ ತಂದೆ ಬಷೀರ್ ಜಕ್ಕಿನಕಟ್ಟಿ (೨೩) ಎಂಬ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಮಹಿಳೆ ಮೇಲೆ ನಡೆದ ಸಾಮೂಹಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿ ಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಂಶುಕುಮಾರ ತಿಳಿಸಿದ್ದಾರೆ.