ಹಾವೇರಿಜಿಲ್ಲೆಯಲ್ಲಿ ೨೮೬ ಗ್ರಾಮೀಣ, ೨೩೮ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ -ಡಾ.ವಿಜಯಮಹಾಂತೇಶ ದಾನಮ್ಮನವರ

Date:

ಹಾವೇರಿ : ಬೇಸಿಗೆ ಕಾಲದಲ್ಲಿ ಜಿಲ್ಲೆಯಲ್ಲಿ ಉದ್ಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ೨೪ ಗ್ರಾಮಗಳಿಗೆ ೩೧ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೇಸಿಗೆ ಸಮಯದಲ್ಲಿ ಜಲ ಮೂಲಗಳು ಬತ್ತುವುದು ಸಾಮಾನ್ಯವಾಗಿದೆ. ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಮಾರ್ಚ್ ೧೫ ರಿಂದ ಜೂನ್ ೧೫ರವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ೨೮೬ ಹಾಗೂ ನಗರ ಪ್ರದೇಶದ ೨೩೮ ವಾರ್ಡ್‌ಗಳನ್ನು ಗುರುತಿಸಲಾಗಿದೆ. ಆದಷ್ಟು ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆಗೆ ಕ್ರಮವಹಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಬೋರವೆಲ್‌ಗಳ ದುರಸ್ಥಿಗೆ ಸೂಚನೆ: ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋರವೆಲ್‌ಗಳು ಹಾಗೂ ಆರ್‌ಒ ಘಟಕಗಳನ್ನು ಕಡ್ಡಾಯವಾಗಿ ಪರಿಶೀಲಿಸಿ, ಒಂದುವೇಳೆ ದುರಸ್ಥಿಯಲ್ಲಿದ್ದರೆ ತುರ್ತಾಗಿ ಕ್ರಮಕೈಗೊಳ್ಳಲು ತಹಶೀಲ್ದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮೂಲಕ ನೀರು ಪೂರೈಕೆ ಬಗ್ಗೆ ಖುದ್ದಾಗಿ ಪರಿಶೀಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಲಾಗಾರ ಸ್ವಚ್ಛತೆ: ನದಿಪಾತ್ರಗಳಲ್ಲಿ ನೀರನ ಹರಿವು ಕಡಿಮೆ ಇರುವುದರಿಂದ ನೀರು ಮಲೀನವಾಗುವ ಸಾಧ್ಯತೆ ಇರುವುದರಿಂದ ಮೇಲ್ಮಟ್ಟ ಜಲಾಗಾರಗಳನ್ನು ಸ್ವಚ್ಛತೆ ಮಾಡುವುದರ ಜೊತೆಗೆ ಅhಟoಡಿiಟಿಚಿಣioಟಿ ಮಾಡಲು ಮತ್ತು ಅವಶ್ಯಕತೆ ಇದ್ದಲ್ಲಿ ಸಾರ್ವಜನಿಕರಿಗೆ ನೀರನ್ನು ಕಾಯಿಸಿ ಕುಡಿಯಲು ಸೂಚನೆ ನೀಡುವಂತೆ ತಿಳಿಸಲಾಗಿದೆ.
ಮುಂಜಾಗ್ರತಾ ಕ್ರಮಗಳು: ಭದ್ರಾ ಜಲಾಶಯದಿಂದ ನೀರು ಬಿಡುವ ಕುರಿತು ಭದ್ರಾ ಜಲಾಶಯ ಶಿವಮೊಗ್ಗ ಪ್ರಾಧಿಕಾರಕ್ಕೆ ಜಿಲ್ಲೆಗೆ ೦.೩೭೫೪ ಟಿ.ಎಂ.ಸಿ. ಕುಡಿಯುವ ನೀರು ಬಿಡುವ ಬಗ್ಗೆ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಜಲಾಶಯದಿಂದ ನೀರು ಬಿಡುವ ಸಮಯದಲ್ಲಿ ನದಿಯಿಂದ ಅನಧಿಕೃತವಾಗಿ ವಿದ್ಯುತ್ ಪಂಪ್/ಡಿಜೇಲ್ ಪಂಪ್ಸೆಟ್ ಮತ್ತು ಟ್ಯಾಂಕರ್ ಮೂಲಕ ನೀರು ಕೊಂಡೊಯ್ಯುವದನ್ನು ನಿ?ದಿಸಲು ತಹಶೀಲ್ದಾರರಿಗೆ ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ನೀರಿನ ಮೂಲಗಳು: ಗ್ರಾಮಿಣ ಪ್ರದೇಶದಲ್ಲಿ ೫೭೬ ಖಾಸಗಿ ಕೊಳವೆ ಬಾವಿಗಳು ಹಾಗೂ ೩,೫೯೧ ಸಾರ್ವಜನಿಕ ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ. ನಗರ ಪ್ರದೇಶದಲ್ಲಿ ೧,೪೪೪ ಸಾರ್ವಜನಿಕ ಕೊಳವೆ ಬಾವಿಗಳು, ವರದಾ, ತುಂಗಭದ್ರ, ಧರ್ಮ ನದಿಗಳಿಂದ ಹಾಗೂ ಹೆಗ್ಗೆರಿ, ಆನೆಕೇರಿ, ನಾಗನೂರು ಕೆರೆಗಳಿಂದ ಕುಡಿಯುವ ನೀರಿನ ಮೂಲಗಳನ್ನು ಗುರುತಿಸಲಾಗಿದೆ.ವಿದ್ಯುತ್ ಸರಬರಾಜು ಮೆಲೆ ಉಂಟಾಗಬಹುದಾದ ಅಂಶಗಳನ್ನು ಗಮನದಲ್ಲಿರಿಸಿ ವಿದ್ಯುತ್ ಮೂಲ ಸೌಕರ್ಯಗಳನ್ನು ಬಲಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
೧೩ ಹೆಕ್ಟೇರ್ ಬೆಳೆಹಾನಿ: ಜಿಲ್ಲೆಯಲ್ಲಿ ಅಕಾಲಿಕ ಮಳೆ-ಗಾಳಿಗೆ ಕೃಷಿ ಹಾಗೂ ತೋಟಗಾರಿಕೆ ಸೇರಿ ೧೩ ಹೆಕ್ಟೇರ್ ಬೆಳೆಹಾನಿಯಾದ ಪ್ರಾಥಮಿಕ ವರದಿಯಾಗಿದೆ. ಹಾನಗಲ್ ತಾಲೂಕಿನಲ್ಲಿ ೧ ಹೆಕ್ಟೇರ್ ಮೆಕ್ಕಜೋಳ, ೧.೬ ಹೆಕ್ಟೇರ್ ಬಾಳೆ ಬೆಳೆ, ಬ್ಯಾಡಗಿ ತಾಲೈಕಿನಲ್ಲಿ ೦.೪ ಹೆ.ಕಲ್ಲಂಗಡಿ, ರಾಣೇಬೆನ್ನೂರ ತಾಲೂಕಿನಲ್ಲಿ ೮.೯೦ ಹೆಕ್ಟೇರ್ ಕಲ್ಲಂಗಡಿ, ೦.೪೦ ಹೇ.ಪಪ್ಪಾಯ, ೦.೮೧ ಹೆ.ಟೋಮೆಟೋ, ೦.೨೦ ಹೆ,ಎಲೆ ಬಳ್ಳಿ ಸೇರಿ ೧೨ ಹೆಕ್ಟೇರ್ ತೋಟಗಾರಿಕೆ ಹಾಗೂ ೧ ಹೆಕ್ಟೇರ್ ಕೃಷಿ ಬೆಳೆ ಹಾಳಾಗಿದೆ. ಒಂದು ಕಟ್ಟಡ, ೧೬೯ ವಿದ್ಯತ್ ಕಂಬಗಳು, ಎರಡು ವಿದ್ಯುತ್ ಟ್ರಾನ್ಸ್‌ಫರ್ಮರ ಸೇರಿ ಒಟ್ಟು ರೂ. ೨೬.೯ ಲಕ್ಷ ಮೊತ್ತದ ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿದೆ. ಬ್ಯಾಡಗಿ ತಾಲೂಕಿನ ೪, ಹಾನಗಲ್ -೩ ಹಾಗೂ ಸವಣೂರ ತಾಲೂಕಿನಲ್ಲಿ ಒಂದು ಸೇರಿ ಒಟ್ಟು ಮನೆಗಳಿಗೆ ಹಾನಿಯಾದ ವರದಿಯಾಗಿದ್ದು, ಪರಿಶೀಲನೆ ಪ್ರಗತಿಯಲ್ಲಿದೆ ಎಂದು ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ದಾವಣಗೆರೆ ದಕ್ಷಿಣ, ಭಾಗಲಕೋಟೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು-ವೀರಣ್ಣ ಪಾಟೀಲ ವಿಶ್ವಾಸ

ದಾವಣಗೆರೆ ದಕ್ಷಿಣ, ಭಾಗಲಕೋಟೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು-ವೀರಣ್ಣ ಪಾಟೀಲ ವಿಶ್ವಾಸ ಹಾವೇರಿ:...

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ...

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...