ಹಾವೇರಿಯಲ್ಲಿ ಬಸವ ಸಂಸ್ಕ್ರತಿ ಅಭಿಯಾನಕ್ಕೆ ಹರಿದು ಬಂದ ಜನಸಾಗರ “ಬಸವಣ್ಣನವರು ಸ್ಥಾಪಿಸಿದ್ದು ರಾಜ ಸಿಂಹಾಸನವಲ್ಲ, ಶೂನ್ಯ ಸಿಂಹಾಸನ”-ಡಾ.ಬಸವಲಿಂಗ ಪಟ್ಟದ್ದೇವರು

Date:

ಹಾವೇರಿಯಲ್ಲಿ ಬಸವ ಸಂಸ್ಕ್ರತಿ ಅಭಿಯಾನಕ್ಕೆ ಹರಿದು ಬಂದ ಜನಸಾಗರ
“ಬಸವಣ್ಣನವರು ಸ್ಥಾಪಿಸಿದ್ದು ರಾಜ ಸಿಂಹಾಸನವಲ್ಲ, ಶೂನ್ಯ ಸಿಂಹಾಸನ”-ಡಾ.ಬಸವಲಿಂಗ ಪಟ್ಟದ್ದೇವರು
ಹಾವೇರಿ: ಬಸವ ಸಂಸ್ಕ್ರತಿ ಅಭಿಯಾನದ ಅಂಗವಾಗಿ ಇಲ್ಲಿನ ರಜನಿ ಕಲ್ಯಾಣಮಂಟಪದಲ್ಲಿ ಭಾನುವಾರು ಆಯೋಜಿಸಿದ್ದ ವಿದ್ಯಾರ್ಥಿಗಳೊಂದಗಿನ ವಿವಿಧ ಪಠಾಧೀಶರು ನಡೆಸಿಕೊಟ್ಟು ಸಂವಾದವು ಅರ್ಥಪೂರ್ಣವಾಗಿತ್ತು. ಅನೇಕ ವಿದ್ಯಾರ್ಥಿಗಳು ಬಸವಾದಿ ಶರಣರ ಬಗ್ಗೆ ಅನೇಕ ಪ್ರಶ್ನೆಗಳು ಕೇಳುವ ಮೂಲಕ ತಮ್ಮ ಅನುಮಾನಗಳನ್ನು ಬಗೆ ಹರಿಸಿಕೊಂಡರು. ಬಸವ ಸಂಸ್ಕ್ರತಿ ಅಭಿಯಾನಕ್ಕೆ ಜನಸಾಗರ ಹರಿದುಬಂದಿತ್ತು.

ವಿದ್ಯಾರ್ಥಿನಿಯೋರ್ವಳು ಮಠಾಧೀಶರಾಗಲು ಇರುವ ಮಾನದಂಡಗಳೇನು? ಎನ್ನುವ ಪ್ರಶ್ನೆಗೆ ಉತ್ತರಿಸಿದ ಭಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟದ್ದೇವರು “ಯಾರುಬೇಕದರೂ ಸ್ವಾಮಿಗಳಾಗಬಹುದು, ಆದರೆ ಸ್ವಾಮಿಗಳಾದವರು ಜ್ಞಾನಿಯಾಗಬೇಕು, ಸ್ವಾರ್ಥ ದಿಂದ ದೂರ ಇರಬೇಕು, ಸಮಸಮಾಜದ ಮನೋಭಾವ ಹೊಂದುವ ಮೂಲಕ ಕಾಯಕ, ದಾಸೋಹದ ಪರಿಕಲ್ಪನೆ ಹೊಂದಿರಬೇಕು, ಸಮಾಜಕ್ಕೆ ದಿಕ್ಕು ತೋರಿಸುವಂತಿರಬೇಕು, ಸಮಾಜವನ್ನು ದಾರಿ ತಪ್ಪಿಸಬಾರದು. ಅಂತವರು ಸಮಾಜಮುಖಿ ಸಾಮಿಗಳಾಗಲು ಸಾಧ್ಯ ಎಂದರು.
ಹಿರಿಯರೋರ್ವರು ಜಾತಿ ಗಣತಿಯಲ್ಲಿ ಏನೇಂದು ಬರೆಸಬೇಕು? ಎನ್ನುವ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು ಲಿಂಗಾಯತರಲ್ಲಿ ೯೯ ಉಪ ಪಂಗಡಗಳಿವೆ. “ಧರ್ಮದ ಕಾಲಂನಲ್ಲಿ ಲಿಂಗಾಯತ” ಎಂದು ಬರೆಸಿದಿದ್ದರೆ ಶರಣರಿಗೆ ಅಪಮಾನ ಮಾಡಿದಂತೆ ಆಗುತ್ತದೆ. ಹಾಗಾಗಿ ಧರ್ಮದ ಕಾಲಂನಲ್ಲಿ “ಲಿಂಗಾಯತ ಧರ್ಮ” ಎಂದು ಬರೆಸುವ ಮೂಲಕ ನಿಜ ಬಸವಣ್ಣನವರ ವಾರಸುದಾರರಾಗೋಣ ಎಂದರು.
ವಿಭೂತಿ ಏಕೆ ಧರಿಸಬೇಕು?,ಬಸವಣ್ಣನವರು ಶೂನ್ಯಪೀಠದ ಅಧ್ಯಕ್ಷರು ಏಕಾಗಲಿಲ್ಲ?,ಬಸವಧರ್ಮವು ವೈಜ್ಞಾನಿಕ ಧರ್ಮ ಹೇಗೆ?, ಸ್ತ್ರೀ ಸಮಾನತೆ ಏಕೆ ಸಾಧ್ಯವಾಗಿಲ್ಲ? ಹೀಗೆ ನಾನಾ ಪ್ರಶ್ನೆಗಳು ಕೇಳಿಬಂದವು. ಈ ಬಗ್ಗೆ ಉತ್ತರಿಸಿದ ಸಾಣೆಹಳ್ಳಿ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು, ಬಸವಪ್ರಭು ಸ್ವಾಮಿಜಿ ಮಾತನಾಡಿ “ದೇಹವೇ ದೇಗಲ ಎಂದ ಬಸವಣ್ಣನವರು ಶಾಶ್ವತವಾಗಿದ್ದಾರೆ”. ಯಾವ ದೇವಾಲಯಕ್ಕೆ ಪ್ರವೇಶ ಇಲ್ಲವೋ ಅಂತ ದೇವಾಲಯಕ್ಕೆ ಬಸವಣ್ಣನವರು ಬಹಿಷ್ಕಾರ ಹಾಕಿ ದೇಹವೇ ದೇಗುಲ ಎಂದು ದೇಹವನ್ನೇ ದೇವಾಲಯ ಮಾಡಿದರು. ಕರೋನ ಬಂದಾಗ ಎಲ್ಲ ದೇವಾಲಯ ಬಂದ ಆಗಿದ್ದವು, ಆದರೆ ಇಷ್ಟ ಲಿಂಗ ಪೂಜೆ ನಿಲ್ಲಲಿಲ್ಲ. ಇಂದು ಆಡಂಬರಕ್ಕೆ ಮಹತ್ವ ನೀಡಲಾಗುತ್ತಿದೆ. ಸಹಜತೆ, ಸರಳತೆಗೆ ಮಹತ್ವ ಇರುವುದಿಲ್ಲ. ಬಸವಣ್ಣನವರು ವೈಜ್ಞಾನಿಕವಾಗಿ ಸಹಜ, ಸರಳ ಧರ್ಮಕೊಟ್ಟಿದ್ದಾರೆ. ಇಷ್ಟಲಿಂಗ ಪೂಜೆ ಇಂದ ನಕಾರಾತ್ಮಕ ಧೋರಣೆ ಹೋಗುತ್ತದೆ, ಸಕಾರಾತ್ಮಕ ಧೋರಣೆ ಬಂದು ದೇಶ ಬಲಿಷ್ಟ ವಾಗುತ್ತದೆ ಎಂದರು.
ವಿಭೂತಿ ಧರಿಸುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು, ಭಸ್ಮದಿಂದ ದರ್ಗುಣ ಭಸ್ಮವಾಗಲಿ ಎಂದು ಭಸ್ಮವನ್ನು ಧರಿಸಬೇಕು, ವಿಭೂತಿ, ರುದ್ರಾಕ್ಷಿ ಅರಿವಿನ ಸಂಕೇತ, ಶರಣರೆಂದರೆ ಅರಿವು, ಆಚಾರ ಇರುವರು, ಅರಿವು ಆಚರಣೆ, ಕಾಯಕ ತತ್ವ ಅಳವಡಿಸಿಕೊಳ್ಳಬೇಕು ಎಂದ ಅವರು, “ಬಸವಣ್ಣನವರು ಶೂನ್ಯ ಪೀಠದ ನಿರ್ಮಾಪಕರು, ಕಿಂಗ್ ಅಲ್ಲ ಅವರು ಕಿಂಗ್ ಮೇಕರ್” ಆಗಿದ್ದರು. ಶೂನ್ಯ ಪೀಠಕ್ಕೆ ಅಲ್ಲಪ್ರಭು, ಚನ್ನಬಸವಣ್ಣ, ಸಿದ್ದರಾಮೇಶ್ವರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ “ರಾಜ್ ಸಿಂಹಾಸನಕ್ಕೆ ಪ್ರತಿಯಾಗಿ ಶೂನ್ಯ ಸಿಂಹಾಸ ಸ್ಥಾಪಿಸಿದರು”. ೩೬ ವರ್ಷ ಅನುಭವ ಮಂಟಪ ನಡೆಯಿತು. ಅಲ್ಲಮಪ್ರಭು ಕಾಯಕ. ದಾಸೋಹದಿಂದ ಅಧ್ಯಕ್ಷರಾಗಿದ್ದರು. ಅನುಭವ ಮಂಟಪ ಸ್ಥಾವರವಾಗಿರಲಿಲ್ಲ, ಜಂಗಮ ಸ್ವರೋಪವಾಗಿತ್ತು. ಇಷ್ಟಲಿಂಗ ಬ್ರಹ್ಮಾಂಡದ ಸ್ವರೋಪ, ಸ್ವಾವರ ಲಿಂಗವಲ್ಲ, ಜಂಗಮರಿಗೆ ದೊಡ್ಡ ಸ್ಥಾನವಿದೆ. ಮತ್ತೊಬ್ಬರ ರೋಟ್ಟಿಯನ್ನು ಕಿತ್ತುಕೊಳ್ಳುವುದು ಸರಿಯಲ್ಲ ಎಂದರು.
ಕಲ್ಯಾಣ ಕ್ರಾಂತಿಯ ನಂತರ ಶರಣರು ವಚನಗಳ ಸಂರಕ್ಷಣೆ ಮಾಡಿದರು. ೧೨ ಶತಮಾನದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ಕಲ್ಪಿಸುವ ಮೂಲಕ ಸಮಾನ ಸ್ವಾತಂತ್ರ್ಯ ಕೊಟ್ಟಿದ್ದು ಇತಿಹಾಸ, ಮಹಿಳೆಯರು ಹಿಂಜರಿಕೆ ಕಿತ್ತುಹಾಕಬೇಕಿದೆ, ಅವಕಾಶಗಳನ್ನು ಪಡೆಯಬೇಕು. ಬಸವ ಸಂಸ್ಕ್ರತಿ ಅಭಿಯಾನ ವಾದ ವಿವಾದವಲ್ಲ ಸಂವಾದ, ಯುವಜನರಲ್ಲಿ ಬಸವ ಸಂಸ್ಕೃತಿಯ ಅರಿವು ಬಿತ್ತುವ ಕಾರ್ಯಕ್ರಮ, ಇಂದಿನ ಯುವಕರಲ್ಲಿ ಬಸವ ಸಂಸ್ಕಾರ ನೀಡುವುದು ಮಹತ್ವದ ಸಂಗತಿ, ವಚನಗಳು ಜೀವನಕ್ಕೆ ಸಂಜೀವಿನಿ ಇದ್ದ ಹಾಗೆ, ವಚನ ಓದಿ ಅಳವಡಿಸಿಕೊಂಡತೆ ಮನೋಬಲ ಹೆಚ್ಚುತ್ತದೆ. ಒಳ್ಳೆಯ ಕಾರ್ಯಮಾಡಿದರೆ ಪುಣ್ಯ, ಕೆಟ್ಟ ಕಾರ್ಯ ಮಾಡಿದರೆ ಪಾಪ ಎಂದರು.
ವೇದಿಕೆಯಲ್ಲಿ ಹೊಸಮಠದ ಬಸವ ಶಾಂತಲಿಂಗಶ್ರಿ, ಸಿರ್ಸಿಮಲ್ಲಿಕಾರ್ಜುನಶ್ರೀ,ಬಸವಕಲ್ಯಾಣದ ಬಸವ ಪ್ರಭುಶ್ರೀ, ಬೆಳಗಾವಿಯ ಅಲ್ಲಂಪ್ರಭುಶ್ರೀ,ಹಂದಿಗುಂದದ ಶಿವಾನಂದ್‌ಶ್ರೀ, ಶೇಗುಣಸಿ ಮಹಾಂತಶ್ರೀ, ಬನವಾಸಿಯ ಬಸವ ನಾಗಭೂಷಣಶ್ರೀ, ಮಾಜಿ ಶಾಸಕ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಕೆ.ಆರ್.ಬಸೇಗೆಣ್ಣಿ, ಪರಮೇಶ್ವರಪ್ಪ ಮೇಗಳಮನಿ ಸೇರಿದಂತೆ ಅನೇಕ ಪೂಜ್ಯರು ಹಾಜರಿದ್ದರು.
ಬಸವಬಳಗದ ಉಳಿವೆಪ್ಪ ಪಂಪಣ್ಣನವರ, ಶಿವಯೋಗಿ ಬೆನ್ನೂರು, ಶಿವಬಸಪ್ಪ ಮುದ್ದಿ, ಶಿವಯೋಗಿ ಮಾಮ್ಲೆಪಟ್ಟಣಶೆಟ್ಟರ, ಮುರುಗೆಪ್ಪ ಕಡೆಕೊಪ್ಪ, ಸಹಸ್ರಾರು ಬಸವಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಗೆ 2 “ಮಕ್ಕಳ ಚಂದಿರ ಪ್ರಶಸ್ತಿ”

ಕಾಡುಮೇಡು ಹಾಗೂ ಬೆರಗು ಕೃತಿಗಳಿಗೆ 2023ನೇ ಸಾಲಿನ ಪ್ರಶಸ್ತಿ ಪ್ರಕಟ ಹಾವೇರಿಗೆ 2...

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಸದೃಢವಾದ ದೇಹಕ್ಕೆ ಸದೃಢವಾದ...