ಹಾವೇರಿಯಲ್ಲಿ ೨ ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು-ನೀರಿಗಾಗಿ ಜನತೆ ಇನ್ನೇಷ್ಟು ವರ್ಷ ಕಾಯಬೇಕು?  

Date:

ಹಾವೇರಿ: ಜಿಲ್ಲಾ ಕೇಂದ್ರ ಸ್ಥಳವಾದ ಹಾವೇರಿನಗರದಲ್ಲಿ ಕಳೆದ  ಎರಡುವರೆ ವರ್ಷಗಳ ಹಿಂದೆ ತಲಾ ೧೧ಲಕ್ಷರೂಗಳ ವೆಚ್ಚದಲ್ಲಿ ಸ್ಥಾಪಿಸಲಾಗಿರುವ ೨ ಶುದ್ಧ ನೀರಿನ ಘಟಕಗಳು ನೀರಿನ ಅಲಭ್ಯತೆಯಿಂದಾಗಿ ಆರಂಭವಾಗದೇ ತುಕ್ಕುಹಿಡಿಯುತ್ತಿದ್ದು, ಈ ಬಗ್ಗೆ ಜನತೆ ಸ್ಥಳೀಯ ನಗರಸಭೆಗೆ ಹಲವಾರು ಬಾರಿ ಮನವಿ ಸಲ್ಲಿಸಿ ಶುದ್ಧ ನೀರಿನ ಘಟಕಗಳನ್ನು ಆರಂಭಿಸುವಂತೆ ಮನವಿ ಮಾಡಿಕೊಂಡರು ಸಹ ನಗರಸಭೆಯ ಅಧಿಕಾರಿಗಳು ಜನರ ಮನವಿಯನ್ನು ಕಸದ ಬುಟ್ಟಿಗೆ ಹಾಕಿ ಕುಂಬಕರ್ಣ ನಿದ್ದೆಗೆ ಜಾರಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ನೆಹರು ಓಲೇಕಾರ ಅವರು ಸರ್ಕಾರದಿಂದ ಹಾವೇರಿ ಕ್ಷೇತ್ರಕ್ಕೆ ಒಟ್ಟು ೧೧ ಶುದ್ಧ ನೀರಿನ ಘಟಕಗಳನ್ನು ಮಂಜೂರಿ ಮಾಡಿಸಿದ್ದರು. ೧೧ರಲ್ಲಿ ೭ ಶುದ್ಧ ನೀರಿನ ಘಟಕಗಳು ಗ್ರಾಮೀಣ ಪ್ರದೇಶಕ್ಕೆ ಹಾಗೂ ೪ ಘಟಕಗಳನ್ನು ಹಾವೇರಿಶಹರಕ್ಕೆ ನೀಡಿದ್ದರು.  ಹಾವೇರಿನಗರದಲ್ಲಿ ೪ ನಾಲ್ಕು ಘಟಕಗಳಲ್ಲಿ ಎರಡು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೇರಡು ಘಟಕಗಳು  ಮಾತ್ರ ನೀರಿಲ್ಲದೇ ತುಕ್ಕುಹಿಡಿಯುತ್ತಿವೆ.
ಹಾವೇರಿಯ ಶಿವಲಿಂಗನಗದಲ್ಲಿ ಹಾಗೂ ಹಾನಗಲ್ಲರಸ್ತೆಯ ಸಾಯಿಬಾಬಾ ದೇವಸ್ಥಾನದ ಬಳಿ ತಲಾ ೧೧ ಲಕ್ಷರೂ ವೆಚ್ಚದಲ್ಲಿ ಶುದ್ಧ ನೀರಿನ ಘಟಕಗಳನ್ನು ಹಾವೇರಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ನಿರ್ಮಿಸಲಾಗಿತ್ತು. ಇಲಾಖೆ ನಿರ್ಮಿಸಿದ ಶುದ್ಧ ನೀರಿನ ಘಟಕಗಳಿಗೆ ಸ್ಥಳೀಯ ನಗರಸಭೆ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಬೇಕಿತ್ತು. ಆದರೆ ನಗರಸಭೆ ಕೊಳವೆಬಾವಿಗಳಿಂದ ಶುದ್ಧ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡದ ಹಿನ್ನಲೆಯಲ್ಲಿ ಶುದ್ಧ ನೀರಿನ ಯಂತ್ರಗಳು ಸಹ ನಿದ್ದೆಗೆ ಜಾರಿವೆ.
ಅಧಿಕಾರಿಗಳು ಎಷ್ಟೊಂದು ಬೇಜವ್ದಾರಿಯಿಂದ ನಡೆದುಕೊಳ್ಳುತ್ತಾರೆ ಎನ್ನುವುದಕ್ಕೆ ಹಾವೇರಿಯ ಈ ಎರಡು ಶುದ್ಧ ನೀರಿನ ಘಕಗಳು ಸಾಕ್ಷಿಯಾಗಿವೆ. ಸರ್ಕಾರ ಜನರಿಗೆ ಸಾಕಷ್ಟು ಪ್ರಮಾಣದಲ್ಲಿ ಸುರಕ್ಷಿತ ಕುಡಿಯವ ನೀರನ್ನು ಒದಗಿಸುವ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸಲು  ಮಹತ್ವವನ್ನು ನೀಡಿದೆ. ಪ್ರತಿ ದಿನ ಪ್ರತಿ ವ್ಯಕ್ತಿಗೆ ತಲಾ  ೮೫ ಲೀಟರ್ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ಆಯವ್ಯಯ ಭಾಷಣದಲ್ಲಿ  ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಆದರೆ ಹಾವೇರಿಯಲ್ಲಿ ಮಾತ್ರ ಎರಡು ಶುದ್ಧ ನೀರಿನ ಘಟಕಗಳಿಗೆ ನೀರಿನ ಅಲಭ್ಯತೆಯಿಂದಾಗಿ ಶಿವಲಿಂಗನಗರ ಹಾಗೂ ಸಾಯಿಬಾಬಾ ದೇವಸ್ಥಾನದ ಬಳಿಯ ನಿವಾಸಿಗಳು ಶುದ್ಧ ನೀರನ್ನು ಹೊರಗಡೆಯಿಂದ ತಂದು ಕುಡಿಯುತ್ತಿದ್ದಾರೆ.   .
ಶುದ್ಧ ಕುಡಿಯವ ನೀರು ನೀಡಲು ಎರಡು ಘಟಕಗಳನ್ನು ಪ್ರತಿ ಘಟಕ ನಿರ್ಮಾಣಕ್ಕೆ ೧೧ಲಕ್ಷರೂಗಳಂತೆ   ಕುಡಿಯುವ ನೀರು ನೈರ್ಮಲ್ಯ ವಿಭಾಗದಿಂದ  ನಿರ್ಮಾಣ ಮಾಡಲಾಗಿದ್ದು,   ಘಟಕಗಳು ಪೂರ್ಣಗೊಂಡಿದ್ದರೂ ನಗರಸಭೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದಾಗಿ  ಕಾರ್ಯಾರಂಭ ಮಾಡಿಲ್ಲ.  ಎರಡುವರೆ ವರ್ಷಗಳಿಂದ ಆ ಭಾಗದ ಜನರಿಗೆ ಶುದ್ಧ ನೀರು ಮರೀಚಿಕೆಯಾಗಿದೆ. ಈಗಾಗಲೇ ಎರಡುವರೆ ವರ್ಷಗಳಿಂದ ಶುದ್ಧ ನೀರಿನ ಘಟಕಗಳ ಕಾರ್ಯಾರಂಭಕ್ಕೆ ಕಾಯ್ದಿರುವ ಜನತೆ ಇವು ಆರಂಭವಾಗಲು ಎನ್ನೇಷ್ಟು ವರ್ಷ ಕಾಯಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...