ಹಾವೇರಿಯ ಪರಿಸರದಲ್ಲಿ ಸಿಹಿ ನೀರ “ನೀರು ನಾಯಿಗಳು ಪತ್ತೆ ”
ಸಮುದ್ರದ ವರೆಗಿನ ಹಿನ್ನೀರು ಹಾಗೂ ನದಿಗಳಲ್ಲಿ ಕಂಡು ಬರುವ “ನೀರುನಾಯಿ”ಗಳ ಹಿಂಡು ಹಾವೇರಿ ಐತಿಹಾಸಿಕ ಹೆಗ್ಗೇರೆಕೆರೆಯಲ್ಲಿ ಫೆ.೨೪-೨೦೨೪ರಂದು ಕಂಡು ಬಂದಿವೆ. ಎಂದಿನಂತೆ ನಾನು ಹೆಗ್ಗೇರಿಕರೆಗೆ ಫೆ.೨೪ರಂದು ಬೆಳಿಗ್ಗೆ ೭-೩೦ರಸಮಾರಿಗೆ ಭೇಟಿ ನೀಡಿದ ಸಮಯದಲ್ಲಿ ಆಕಡೆಯ ದಂಡೆಯಲ್ಲಿ ಮಾನವಾಕೃತಿಗಳ ಓಡಾಟ ಕಂಡಂತಾಯಿತು. ಕ್ಯಾಮರಾ ಜೂಮ್ ಮಾಡಿದಾಗ ನೀರುನಾಯಿಗಳ ಓಡಾಟ ಕಂಡಿತು.
ಕೆರೆಯ ಪರಸರಕ್ಕೆ ಬಂದಿದ್ದು ಹೇಗೆ?: ಕಾವೇರಿ, ಕಾಳಿ, ತುಂಗಭದ್ರಾ ನದಿಗಳ ಪರಿಸರದಲ್ಲಿ ದೊಡ್ಡ ತೊರೆಗಲ್ಲಿ ಕಂಡು ಬರುವ “ಪ್ರೇಶ್ ವಾಟರ್ ಓಟರ್”(“ಸಿಹಿನೀರು ನಾಯಿ” ) ಹಂಪಿಯ ಪರಿಸರದಲ್ಲಿನ ತುಂಗಭದ್ರಾನದಿಯಲ್ಲಿ ಕಂಡು ಬರುವುದು ಸಾಮನ್ಯ. ಕೆರೆಗೆ ತುಂಗಭದ್ರಾ ನೀರನ್ನು ಯುಟಿಪಿ ಕಾಲುವೆಗಳ ಮೂಲಕ ಹರಿಸಿದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಒಳಗಾಗಿಯೋ, ಆಗಾಗ ವಲಸೆ ಹೋಗುವ ಇವುಗಳ ಗುಣದಿಂದಲೋ ಏನೋ? ನೀರು ನಾಯಿಗಳು ಇಲ್ಲಿಗೆ ಬಂದಿರುವ ಸಾಧ್ಯತೆಗಳಿವೆ.
ರಾಜ್ಯದ ಕೊಪ್ಪಳದ ಬಳಿಯ ಮುದ್ಲಾಪುರ ಗ್ರಾಮದಿಂದ ತುಂಗಭದ್ರಾದ ನದಿಯ ಹರಿವಿನ ೩೪ ಕಿ.ಮೀ.ಪ್ರದೇಶವನ್ನು ನೀರು ನಾಯಿ ಸಂರಕ್ಷಿತ ಪ್ರದೇಶವೆಂದು ರಾಜ್ಯ ಸರ್ಕಾರ ೧೯೭೨ರಲ್ಲಿ ಘೋಷಿಸುವ ಮೂಲಕ “ಪ್ರೇಶ್ ವಾಟರ್ ಓಟರ್” ಸಂರಕ್ಷಣೆಯನ್ನು ಆರಂಭಿಸಿತು. ಮುದ್ಲಾಪುರ ಹಳ್ಳಿಯಿಂದ ತುಂಗಭದ್ರ ನದಿಯ ಉದ್ದಕ್ಕೂ ೩೪ ಕಿಮೀ ಉದ್ದದ ಪ್ರದೇಶವನ್ನು ಬಳ್ಳಾರಿ ಜಿಲ್ಲೆಯ ಕಾಂಪ್ಲಿಯವರೆಗೆ ವಿಸ್ತರಿಸಲಾಗಿದೆ. ಈ ವಿಸ್ತಾರವು ವಿಶ್ವ ಪರಂಪರೆಯ ತಾಣವಾದ ಹಂಪಿ ಮತ್ತು ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡಿದೆ.
ನೀರು ನಾಯಿಗಳ ಪ್ರಮುಖ ಆಹಾರ ಮೀನು, ಇವುಗಳು ಪ್ರತ್ಯೇಕವಾಗಿ ಬೇಟೆಯಾಡುತ್ತವೆ. ಆದರೆ ಒಟ್ಟಿಗೆ ಮಲವಿಸರ್ಜನೆ ಮಾಡುವ ಮೂಲಕ ತಮ್ಮ ಗಡಿ ಗುರುತಿಸುವ ಕಾರ್ಯವನ್ನು ಇವು ಒಟ್ಟಗೆ ಮಾಡುತ್ತವೆ. ವೈರಿಗಳು ತಮ್ಮ ಪ್ರದೇಶಕ್ಕೆ ನುಗ್ಗದಂತೆ ಇವು ಎಚ್ಚರಿಕೆ ನೀಡುತ್ತವೆ. ವನ್ಯಜೀವಿಗೆ ಯಾವುದೇ ಗಡಿ ತಿಳಿದಿಲ್ಲ ತನ್ನ ಸಂರಕ್ಷಣೆಗಾಗಿ ಹೋರಾಟ ಈ ಸಂರಕ್ಷಿತ ಪ್ರದೇಶದ ಹೊರಗೆ ನಡೆಯುತ್ತದಂತೆ.
ನೀರುನಾಯಿಗಳು ಅರೆ-ಜಲ ಪ್ರಾಣಿಗಳಾಗಿವೆ. ಮೀನು ಮತ್ತು ಕಠಿಣ ಚರ್ಮಿಗಳ ಮೇಲಿರುವ ಆಹಾರವನ್ನು ಹೊಂದಿರುವ ವಿಶ್ವದ ೧೩ ಒಟರ್ಗಗಳಲ್ಲಿ ಮೂರು ದೇಶಗಳಿಗೆ ಭಾರತ ನೆಲೆಯಾಗಿದೆ. ದೇಶದಲ್ಲಿ ಮೂರು ಜಾತಿಗಳ ಪೈಕಿ ಅತಿದೊಡ್ಡ-ಹೊದಿಕೆಯ “ನೀರುನಾಯಿ”ಗಳು, ಸಾಂಪ್ರದಾಯಿಕವಾಗಿ ಒಂದು ಸಿಹಿನೀರಿನ ಪ್ರಭೇದವಾಗಿದೆ. ಅಲ್ಲದೇ ಅತಿ ಚಿಕ್ಕ ಪ್ರಭೇದ ಹಾವೇರಿಯ ಪರಿಸರದಲ್ಲಿ ಕಂಡಿರುವ ನೀರುನಾಯಿ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಒಟರ್ಸ್ ಉತ್ಸಾಹದ ಚುರುಕುಬುದ್ಧಿಯದಾಗಿದ್ದು ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಭೂಮಿ ಮತ್ತು ನೀರಿನ ಮೇಲೆ ವೇಗವಾಗಿ ಚಲಿಸುತ್ತವೆ. ಇವುಗಳು ಆಹಾರ ಮೀನು, ಹಾವುಗಳು, ಉಭಯಚರಗಳು, ಇಲಿ, ಹೆಗ್ಗಣ, ಸಣ್ಣ ಸಸ್ತನಿಗಳು ಮತ್ತು ಚಿಕ್ಕ ಹಕ್ಕಿಗಳನ್ನು ಇವು ಬೇಟೆಯಾಡುತ್ತವೆ. ಇವುಗಳ ವಿಶಿಷ್ಟ ಜೀವಿತಾವಧಿ ೪ ರಿಂದ ೧೦ ವರ್ಷಗಳು, ಆದರೆ ಯಾವುದೇ ನಿರ್ಣಾಯಕ ಅಧ್ಯಯನಗಳನ್ನು ಮಾಡಲಾಗಿಲ್ಲ. ಹಾವೇರಿಯ ಪರಿಸರದಲ್ಲಿ ಪತ್ತೆಯಾಗಿರುವ”ನೀರು ನಾಯಿ” ಯಾವ ಪ್ರಬೇದವಾಗಿದೆ ಎನ್ನುವುದನ್ನು ಸಂಶೋಧಿಸಬೇಕಿದೆ. ನನ್ನ ಗಮನಕ್ಕೆ ಬಂದಂತೆ ಕೆರೆಯಲ್ಲಿ ೭ ನೀರುನಾಯಿಗಳು ಕಂಡುವೆ. ಇವುಗಳಲ್ಲಿ ನಾಲ್ಕ ಮರಿಗಳು, ಮೂರು ದೊಡ್ಡ ಅಂದಾಜು ಸುಮಾರು ೧ ಮೀಯಿಂದ ೨ ಮೀಟರ್ ಉದ್ದ ಇವೆ.
ಅಭಿವೃದ್ಧಿಯ ನೆಪದಲ್ಲಿ ಮೂಲಸೌಕರ್ಯದ ಬೆಳವಣಿಗೆಗಳು ಹೊಂದುತ್ತಿರುವುದರಿಂದ “ನೀರು ನಾಯಿ”ಗಳು ಹರಿವು ನೀರಿನ ಮೂಲಕ ಇಲ್ಲಿಗೆ ಬಂದಿರುವ ಸಾಧ್ಯೆಗಳು ಹೆಚ್ಚು. ಇವುಗಳ ಆವಾಸಸ್ಥಾನದ ವಿನಾಶವು ಸಹ ಇದಕ್ಕೆ ಕಾರಣವಾಗಿದ್ದು, ಓಟರ್ ಸಂಖ್ಯೆಯನ್ನು ಅತ್ಯಂತ ದುರ್ಬಲಗೊಳಿಸತ್ತ್ತಿದೆ. ಕಬ್ಬು, ಭತ್ತ ಸೇರಿದಂತೆ ವಿವಿಧ ಬೆಳೆಗಳಿಗೆ ಸಿಂಪಡಿಸುವ ರಾಸಾಯನಿಕ ವಿಷಗಳು ನೀರಿನಲ್ಲಿ ಬೆರೆತು ನೀರುನಾಯಿಗಳು ಬೇಟೆಯಾಡುವ ಮೀನು ಮತ್ತಿತರ ಪ್ರಾಣಿ-ಪಕ್ಷಿಗಳ ದೇಹ ಸೇರಿ ಆವುಗಳನ್ನು ತಿನ್ನುವ ನೀರುನಾಯಿಗಳ ದೇಹ ಸೇರಿ ನೀರುನಾಯಿಗಳು ಅಪಾಯಕ್ಕೆ ಸಿಲುಕಿವೆ ಎನ್ನುವ ಆಕ್ಷೇಪಣೆಗಳಿವೆ.
“ನೀರು ನಾಯಿ”ಗಳು ಇರುವ ತುಂಗಭದ್ರಾದ ನದಿಯ ಹರಿವಿನ ೩೪ ಕಿ.ಮೀ.ಪ್ರದೇಶವನ್ನು ದಾಟಿ ನೀರು ನಾಯಿಗಳು ಬಯಲು ಅರೆಮಲೆನಾಡು ಪ್ರದೇಶವಾಗಿರುವ ಹಾವೇರಿಯ ಪರಿಸರದಲ್ಲಿ ಕಾಣಿಸಿಕೊಂಡಿದ್ದೇಕೆ? ಎನ್ನುವ ಬಗ್ಗೆ ನೀರುನಾಯಿಗಳ ಬಗ್ಗೆ ಕಾಳಜಿ ಹೊಂದಿರುವ ಸೊಸೈಟಿಯವರು ಸಂಶೋಧನೆ ನಡೆಸಬೇಕು. ಕೆರೆಯ ಪರಿಸರವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಬೇಕು, ನೀರುನಾಯಿಗಳ ರಕ್ಷಣೆಗೆ ಜಿಲ್ಲಾಡಳಿತ, ಅರಣ್ಯ ಇಲಾಖೆ, ಸರ್ಕಾರ ಈಗಲೇ ಮುನ್ನಚ್ಚಿರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರಿಸರ ಸಮತೋಲನ ಕಾಯ್ದುಕೊಳ್ಳುವ ಮೂಲಕ ಹಾವೇರಿಯ ಅತಿಥಿಯಾಗಿರುವ ಅಳುವಿನಂಚಿನಲ್ಲಿರುವ ನೀರುನಾಯಿಗಳನ್ನು (“ಪ್ರೇಶ್ ವಾಟರ್ ಓಟರ್”) ಸಂರಕ್ಷಿಸುವ ಹೊಣೆ ನಮ್ಮದಾಗಬೇಕಿದೆ
ಚಿತ್ರ/ ಮಾಹಿತಿ: ಮಾಲತೇಶ ಅಂಗೂರ, ಹಾವೇರಿ.

–