ಹಾವೇರಿಯ ಬಳಿ ಶಿರಶಿಯ ಅಡಿಕೆ ವ್ಯಾಪಾರಿಯ ೩೦ಲಕ್ಷರೂ ದರೋಡೆ

Date:

ಹಾವೇರಿಯ ಬಳಿ ಶಿರಶಿಯ ಅಡಿಕೆ ವ್ಯಾಪಾರಿಯ ೩೦ಲಕ್ಷರೂ ದರೋಡೆ
ಹಾವೇರಿ: ಅಡಕಿ ಖರೀದಿಸಿದ ಹಣವನ್ನು ಪಾವತಿಸಲು ಕಾರಿನಲ್ಲಿ ಹಣ ತರುತಿದ್ದ ಶಿರಶಿಯ ಅಡಕೆ ವ್ಯಾಪಾರಿಯ ಮೇಲೆ ದಾಳಮಾಡಿದ ದುಷ್ಕರ್ಮಿಗಳು
ಅಡಕೆವ್ಯಾಪಾರಿಯ ಬಳಯಿದ್ದ ೩೦ಲಕ್ಷರೂಗಳನ್ನು ದರೋಡೆ ಮಾಡಿರುವ ಘಟನೆ ಹಾವೇರಿಯ ಬಳಿಯ ಹಾನಗಲ್ಲ-ಹಾವೇರಿ ರಾಜ್ಯ ಹೆದ್ದಾರಿಯ ಹಾವಣಗಿ ಕ್ರಾಸ್ ಬಳಿ ರಸ್ತೆಯ ಶುಕ್ರವಾರ ನಡೆದಿದೆ.
ಘಟನೆಯ ವಿವರ: ಶಿರಶಿಯ ಅಡಕೆ ವ್ಯಾಪಾರಿ ಅಬ್ದುಲರಹೀಮ್ ಅಬ್ದುಲಮಜೀದ ಸಿಕ್ಕಲಗಾರ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲಿ ಗ್ರಾಮದ ಅಡಿಕೆ ವ್ಯಾಪಾರಸ್ಥರ ಬಳಿ ಅಡಿಕೆ ಖರೀದಿ ಮಾಡಿ ಸದರಿ ವ್ಯಾಪಾರಸ್ಥರಿಗೆ ೦೮ ದಿನಗಳಿಗೆ ಒಮ್ಮೆ ೧೫ ದಿನಗಳಿಗೆ ಒಮ್ಮೆ ಅವರಿಗೆ ಹಣ ತಂದು ಮುಟ್ಟಿಸುತ್ತಾ ಬಂದಿದ್ದು. ೧೧ ರಂದು ಸಾಯಂಕಾಲ ೦೫-೩೦ ಗಂಟೆ ಸುಮಾರಿಗೆ ಕಾಗಿನೆಲ್ಲಿ ಗ್ರಾಮದ ಅಡಿಕೆ ವ್ಯಾಪಾರಸ್ಥರಿಗೆ ಅಡಿಕೆ ಖರೀದಿ ದುಡ್ಡನ್ನು ಕೊಡಲು ಪ್ಲಾಸ್ಟೀಕ್ ಚೀಲದಲ್ಲಿ ೩೦,೦೦,೦೦೦/- ರೂ (ಮೂವತ್ತು ಲಕ್ಷ) ನಗದು ಹಣವನ್ನು ತನ್ನ ಕಾರಿನಲ್ಲಿ ತಗೆದುಕೊಂಡು ಶಿರಸಿಯಿಂದ ಕಾಗಿನೆಲ್ಲಿ ಗ್ರಾಮಕ್ಕೆ ಬರುತ್ತಿದ್ದ.
ರಾತ್ರಿ ೦೮-೩೦ ಘಂಟೆ ಸುಮಾರಿಗೆ ಹಾನಗಲ್ಲ-ಹಾವೇರಿ ರಸ್ತೆಯ ಹಾವಣಗಿ ಕಾಸ್ ಹತ್ತಿರ ಇರುವ ಗ್ಯಾರೇಜ್ ಮುಂದೆ ರಸ್ತೆಯ ಎಡಭಾಗದಲ್ಲಿ ತನ್ನ ಕಾರನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ದುಷಕರ್ಮಿಗಳು ಕಾರಿನ ಬಲಗಡೆ ಗ್ಲಾಸಿಗೆ ಹಾಗೂ ಮುಂದಿನ ಗ್ಲಾಸಿಗೆ ಹೊಡೆದು ಒಡೆದಿದ್ದು, ತಡೆಯಲು ಬಂದ ಅಬ್ದುಲರಹೀಮ್‌ನಿಗೆ ರಾಡನಿಂದ ಹೊಡೆದಿದ್ದಾರೆ. ಈ ವೇಳೆ ತೀವೃಗಾಯಗೊಂಡ ನೆಲಕ್ಕೆ ಬಿದ್ದಿದ್ದಾನೆ. ದುಷ್ಕರ್ಮಿಗಳು ಕಾರಿನಲ್ಲಿದ್ದ ೩೦ಲಕ್ಷರೂಗಳನ್ನು ದರೋಡೆಮಾಡಿಕೊಂಡು ಹಾವೇರಿಯ ರಸ್ತೆಯಲ್ಲಿ ಪರಾರಿಯಾಗಿದ್ದಾರೆ. ಈ ಬಗ್ಗೆ ಆಡೂರು ಪೊಲೀಸ್‌ಠಾಣೆಯಲ್ಲಿ ಶನಿವಾರಪ್ರಕರಣ ದಾಖಲಾಗಿದೆ. ಪೊಲೀಸರು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ. ಗಾಯಾಳು ಅಬ್ದುಲರಹೀಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾವೇರಿಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳು: ಉತ ರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ಜಿಲೆ ಯಲ್ಲಿ ಇತ್ತೀಚಿನ ದಿನಗಳಲ್ಲಿ, ಅಪರಾಧ ಚಟುವಟಿಕೆಗಳು
ಹೆಚ್ಚುತ್ತಿದೆ. ಬ್ಯಾಡಗಿ ಪೊಲೀಸ್‌ಠಾಣಾ ವ್ಯಪ್ತಿಯಲ್ಲಿ ಕಲೆದ ತಿಂಗಳು ೪೦ಲಕ್ಷ ದರೋಡೆ ಘಟನೆಡ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ೩೦ಲಕ್ಷರಗಳನ್ನು ದರೋಡೆಮಾಡಲಾಗಿದೆ.
ಪದೇ ಪದೆ ಅಪರಾಧ ಕೃತ್ಯಗಳು ನಡೆಯುತ್ತಿವೆ, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಜಿಲ್ಲೆಯಲ್ಲಿ ೨೦೨೩ರಿಂದ ೨೦೨೫ರವರೆಗೆ ೧೭೫ ಮಂದಿಯನ್ನು ರೌಡಿ ಪಟ್ಟಿಗೆ ಸೇರಿಸಲಾಗಿದೆ. ೨೦೨೬ರ ಮಾರ್ಚ್ ಅಂತ್ಯದವರೆಗೆ ೩ ಮಂದಿಯನ್ನು ರೌಡಿ ಪಟ್ಟಿಗೆ ಪೊಲೀಸರು ಸೇರಿಸಿದ್ದಾರೆ. ಕೊಲೆ, ಕೊಲೆ ಯತ್ನ, ಹಲೆ , ದರೋಡೆ, ಕಳ ತನ, ಜೂಜು, ಕ್ರಿಕೆಟ್ ಬೆಟ್ಟಿಂಗ್, ಮಟ್ಕಾ ದಂಧೆ, ಡ್ರಗ್ಸ್ ಮಾರಾಟ-ಸಾಗಣೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಜೀವ ಬೆದರಿಕೆ ಸೇರಿದಂತೆ ಹಲವು ಅಪರಾಧ ಚಟುವಟಿಕೆಗಳಲ್ಲಿ ರೌಡಿಗಳು
ಭಾಗಿಯಾಗುತ್ತಿದ್ದಾರೆ. ನಿವೇಶನ ಅಭಿವೃದ್ಧಿ ಹಾಗೂ ಭೂ ವ್ಯಾಜ್ಯಗಳಲ್ಲಿಯೂ ಮಧ್ಯಪ್ರವೇಶಿಸಿ ಜನರನ್ನು ಹೆದರಿಸುತ್ತಿರುವ ದೂರುಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಮೊದಲ ಬಾರಿಗೆ ಅಪರಾzs ಕೃತ್ಯ
ಎಸಗಿ ಪೊಲೀಸರ ಕೈಗೆ ಸಿಕ್ಕಿಬೀಳುವ ಆರೋಪಿಗಳು, ಜೆ ಲಿಗೂ ಹೋಗಿ ಹೊರಗೆ ಬರುತ್ತಿದ್ದಾರೆ. ಆದರೆ ಅಪರಾಧ ಚಟುವಟಿಕೆಗಳು ಮಾತ್ರ ನಿಂತಿಲ್ಲ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಮಹಾಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್

ಮಹಾಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ನನಗೊಂದು ತಾಯಿ ನಾಡಿಲ್ಲ ಎಂದು ಹೇಳಲು ನಾನು ಹಿಂಜರಿಯುವುದಿಲ್ಲ. ನಮ್ಮನ್ನು...

“ಹಾವೇರಿ ಜಿಲ್ಲೆಯ ಜನ ಚಿಕ್ಕ ಕೆಲಸ ಮಾಡಿದರೂ ಒಳ್ಳೆಯ ಮಾತುಗಳನ್ನು ಆಡುತ್ತಾರೆ”

"ಹಾವೇರಿ ಜಿಲ್ಲೆಯ ಜನ ಚಿಕ್ಕ ಕೆಲಸ ಮಾಡಿದರೂ ಒಳ್ಳೆಯ ಮಾತುಗಳನ್ನು ಆಡುತ್ತಾರೆ" ಹಾವೇರಿ:...

ಹಾವೇರಿ: ಕೃಷಿ ಪಂಪ್ ಸೆಟ್‌ಗಳಿಗೆ ೭ ತಾಸು ವಿದ್ಯುತ್ ಪೂರೈಕೆಗೆ ರೈತರ ಆಗ್ರಹ

ಕೃಷಿ ಪಂಪ್ ಸೆಟ್‌ಗಳಿಗೆ ೭ ತಾಸು ವಿದ್ಯುತ್ ಪೂರೈಕೆಗೆ ರೈತರ ಆಗ್ರಹ ಹಾವೇರಿ:...