ಹಾವೇರಿ ಗಾಂಧಿ ರಸ್ತೆಯ ಅವ್ಯವಸ್ಥೆ, ಅಖಾಡಕ್ಕಿಳಿದ ಹೆಚ್ಚುವರಿ ಎಸ್ಪಿ ಶಿರಕೋಳ, ನಗರಸಭೆ ಅಧ್ಯಕ್ಷೆ ಶಶಿಕಲಾ 

Date:

ಹಾವೇರಿ ಗಾಂಧಿ ರಸ್ತೆಯ ಅವ್ಯವಸ್ಥೆ, ಅಖಾಡಕ್ಕಿಳಿದ ಹೆಚ್ಚುವರಿ ಎಸ್ಪಿ ಶಿರಕೋಳ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ

ಹಾವೇರಿ: ನಗರದ ಮುಖ್ಯ ರಸ್ತೆ ಯಾಗಿರುವ ಮಹಾತ್ಮ ಗಾಂಧಿ ರಸ್ತೆ ಯಲ್ಲಿ ಅಂಗಡಿಗಳನ್ನು ವಿಸ್ತಾರಿಸಿಕೊಂಡು, ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ವಹಿವಾಟು ಮಾಡುವ ಮೂಲಕ ಸಂಚಾರ ದಟ್ಟಣೆ ಉಂಟು ಮಾಡುವ ಮೂಲಕ ಸಾರ್ವಜನಿಕರ ಸುಗಮ ಓಡಾಟಕ್ಕೆ, ವಾಹನಗಳ ಓಡಾಟಕ್ಕೆ ಅಡ್ಡಿಯಾಗಿದ್ದು, ಇವರನ್ನು ‌ನಿಯಂತ್ರಿಸಲು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಎಲ್.ವಾಯ್.ಶಿರಕೋಳ, ನಗರಸಭೆ ಅಧ್ಯಕ್ಷೆ ಶಶಿ ಕಲಾ ಮಾಳಗಿ ಮತ್ತಿತರ ಅಧಿಕಾರಿಗಳು ಸೋಮವಾರ ‌ರಸ್ತೆಯಲ್ಲಿ‌ ಸಂಚಾರ ನಡೆಸಿ ಅಂಗಡಿ, ಮುಂಗಟ್ಟುಗಳನ್ನು ದಾಟಿ ನಾಲ್ಕಾರು ಅಡಿ‌‌ ರಸ್ತೆ ಅತಿಕ್ರಮಣ ಮಾಡಿಕೊಂಡ ವ್ಯಾಪಾರಿಗಳಿಗೆ, ಬೀದಿಬದಿಯ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು.
ಇಲ್ಲಿನ ಬಸ್ ನಿಲ್ದಾಣದ ಮುಂಭಾಗದಲ್ಲಿ ನ ಜೆಪಿ ರಸ್ತೆ ಯ ಮೂಲಕ ಸಂಚಾರ ನಡೆಸಿದ ಅಧಿಕಾರಿಗಳು, ಅಧ್ಯಕ್ಷರು ಮಹಾತ್ಮಾ ಗಾಂಧಿ ‌ವ್ರತ್ತ, ದ್ಯಾಮವ್ವನ ಪಾದಗಟ್ಟಿ, ಚಾವಡಿ, ಹೇರೂರ‌ಕೂಟ, ಗಣೇಶ ದೇವಸ್ಥಾನ ದ ಮುಂಭಾಗದಲ್ಲಿ ರಸ್ತೆಯ ಅವ್ಯವಸ್ಥೆ ‌ವೀಕ್ಷಿಸಿದರು.
ರಸ್ತೆಯಲ್ಲಿ ಐದಾರು‌ಅಡಿ ಚಾಚಿಕೊಂಡು ವ್ಯಾಪಾರ ಮಾಡುತ್ತಿದ್ದ ವರಿಗೆ ಸಾರ್ವಜನಿಕರ ಓಡಾಡುವ ಸ್ಥಳದಲ್ಲಿ ‌ಅಂಗಡಿಗಳನ್ನು ಹಚ್ಚದಂತೆ ಸೂಚಿಸಿದರು. ರಸ್ತೆಯ ಮಧ್ಯ ಭಾಗದಲ್ಲಿ ತಳ್ಳುಗಾಡಿವ್ಯಾಪಾರಿಗಳಿಗೆ, ಇತರೇ ಬಿದಿರು, ಮಡಕೆ, ಹೂವಿನ, ಹಣ್ಣಿನ ವ್ಯಾಪಾರ ಮಾಡುತ್ತಿದ್ದವರಿಗೆ ಸಾರ್ವಜನಿಕ ರಿಗೆ ತೊಂದರೆ ಯಾಗದಂತೆ ರಸ್ತೆ ಬಿಟ್ಟು ಸರಿಯುವಂತೆ ಎಚ್ಚರಿಕೆ ‌ನೀಡಿದರು.
ಅಧಿಕಾರಿಗಳು ನಗರಸಂಚಾರ ನಡೆಸಿರುವುದನ್ನು ಕಂಡ ಕೆಲವರು ರಸ್ತೆ ‌ತೆರವುಗೊಳಿಸಿದರು.
ಸಂಚಾರ ದಟ್ಟಣೆ ‌ನಿಯಂತ್ರಿಸಲು ಪೊಲೀಸ್ ಇಲಾಖೆ, ನಗರಸಭೆ, ಟ್ರಾಫಿಕ್ ಪೊಲೀಸರು ನಡೆಸಿದ ಕಾರ್ಯಾಚರಣೆಗೆ, ವಾಹನ ಸವಾರರು, ಸಾರ್ವಜನಿಕ ರು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೇನೆ ದ್ವಿಚಕ್ರ ವಾಹನ ನಿಲುಗಡೆಗೆ ಎಡ- ಬಲ ನಿಯಮಗಳನ್ನು ಪರಿಣಾಕಾರಿಯಾಗಿ ಅನುಷ್ಠಾನಕ್ಕೆ ತರಬೇಕು, ಲಾರಿ ಹಾಗೂ ಸರಕು ಸಾಕಾಣಿಕೆ ಯ ವಾಹನಗಳನ್ನು ಬೆಳಿಗ್ಗೆ ೯ರನಂತರ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಪ್ರವೇಶವನ್ನು ನಿಷೇಧಿಸಬೇಕೆನ್ನು ಆಗ್ರಹಗಳು‌ ಕೇಳಿ ಬಂದವು.
ಸೋಮವಾರ ದ ನಗರ ವೀಕ್ಷಣೆ ಸಂದರ್ಭದಲ್ಲಿ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಪ್ರಕಾಶ ಕಾಟೆ, ನಗರಸಭೆ ಇಂಜಿನಿಯರ್ ರಾಯಕರ ಸೇರಿದಂತೆ ನಗರಸಭೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ‌ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಡಾ.ಬಾಬು ಜಗಜೀವನರಾಮ್ ಅವರ ಆದರ್ಶ ಪಾಲಿಸೋಣ : ಉಡಚಪ್ಪ ಮಾಳಗಿ

ಡಾ.ಬಾಬು ಜಗಜೀವನರಾಮ್ ಅವರ ಆದರ್ಶ ಪಾಲಿಸೋಣ : ಉಡಚಪ್ಪ ಮಾಳಗಿ ಹಾವೇರಿ: ದೇಶದ...

ಗಟ್ಟಿತನದ ದಿಟ್ಟಕವಿತೆ ರಚನೆಕಾರ ಸತೀಶ ಕುಲಕರ್ಣಿ: ಮಾರ್ತಾಂಡಪ್ಪ ಕತ್ತಿ

ಗಟ್ಟಿತನದ ದಿಟ್ಟಕವಿತೆ ರಚನೆಕಾರ ಸತೀಶ ಕುಲಕರ್ಣಿ: ಮಾರ್ತಾಂಡಪ್ಪ ಕತ್ತಿ ಹಾವೇರಿ ವಿಶ್ವವಿದ್ಯಾಲಯವು ಹಾವೇರಿ...

ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ : ಸಂಸದ ಬಸವರಾಜ್ ಬೊಮ್ಮಾಯಿ ಹೇಳಿಕೆ

ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ : ಸಂಸದ ಬಸವರಾಜ್ ಬೊಮ್ಮಾಯಿ ಹೇಳಿಕೆ ಹಾವೇರಿ: ಹಾವೇರಿ...

ಹಾವೇರಿ ವಿವಿಯಿಂದ ಸದಾಶಿವಶ್ರೀ, ಸಂಸದ ಬೊಮ್ಮಾಯಿ, ಸಾಹಿತಿ ಕುಲಕರ್ಣಿ ಅವರಿಗೆ ಗೌರವ ಡಾಕ್ಟರೇಟ್

-ಹಾವೇರಿ ವಿವಿಯಿಂದ ಸದಾಶಿವಶ್ರೀ, ಸಂಸದ ಬೊಮ್ಮಾಯಿ, ಸಾಹಿತಿ ಕುಲಕರ್ಣಿ...