ಹಾವೇರಿ ಜಿಲ್ಲೆಯ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಯಶೋದಾ ರೆಡ್ಡಿ ವಂಟಗೋಡಿ ಅಧಿಕಾರ ಸ್ವೀಕಾರ
ಹಾವೇರಿ;ಹಾವೇರಿ ಜಿಲ್ಲೆಗೆ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಯಾಗಿರುವ ಶ್ರೀಮತಿ ಯಶೋದಾ ರೆಡ್ಡಿ ವಂಟಗೋಡಿಯವರು ಮಂಗಳವಾರದಂದು ನಿರ್ಗಮಿತ ಎಸ್ಪಿ ಅಂಶುಕುಮಾರ ಅವರಿಂದ ಅಧಿಕಾರ ಸ್ವೀಕರಿಸಿದರು.
ಕೊಪ್ಪಳ ಜಿಲ್ಲೆಯ ಎಸ್. ಪಿ. ಯಾಗಿದ್ದ ಶ್ರೀಮತಿ ಯಶೋದಾ ರೆಡ್ಡಿ ವಂಟಗೋಡಿ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದಿದ್ದಾರೆ.ಇದೀಗ ಹಾವೇರಿ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯವನ್ನು ವಹಿಸಿಕೊಂಡಿದ್ದಾರೆ.