
ಹಾವೇರಿ: ಡಿವೈಡರ್ ಗೆ ಕಾರು ಡಿಕ್ಕಿ ,ಆಟೋದಲ್ಲಿದ್ದ ಇಬ್ಬರ ಮರಣ
ಹಾವೇರಿ:ಡಿವೈಡರ್ ಕಾರು ಡಿಕ್ಕಿ
ಹೊಡೆದು ಆಟೋ ಮೇಲೆ ಬಿದ್ದು
ಆಟೋದಲ್ಲಿದ್ದ
ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ ನಗರದ ಹೊರವಲಯದಲ್ಲಿರುವ ತೋಟದ ಯಲ್ಲಾಪುರದಬಳಿಯ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಕಾರೊಂದು ಡಿವೈಡರ್ ಗೆ
ಡಿಕ್ಕಿ ಹೊಡೆದು ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಮೃತರ ಹೆಸರು ಪತ್ತೆಯಾಗಿಲ್ಲ.
ಮೃತರು ದಾವಣಗೆರೆ ಮೂಲದವರು ಎನ್ನಲಾಗಿದೆ. ಕಾರು ಚಾಲಕನಿಗೆ ಗಂಭೀರಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರೋಡ್ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದ ಆಟೋ ಮೇಲೆ ಬಿದ್ದ ರಭಸಕ್ಕೆ ಆಟೋದಲ್ಲಿದ್ದ ಪೇರಲ ಮತ್ತು ಚಿಕ್ಕು ಹಣ್ಣುಗಳು ಚೆಲ್ಲಾಪಿಲ್ಲಿಯಾಗಿವೆ.
ಆಟೋ ಹುಬ್ಬಳ್ಳಿಯಿಂದ ರಾಣೇಬೆನ್ನೂರು ಕಡೆಗೆ ತೆರಳುತ್ತಿತ್ತು. ಕಾರು ದಾವಣಗೆರೆ ಕಡೆಯಿಂದ ಹುಬ್ಬಳ್ಳಿಯತ್ತ ತೆರಳುತ್ತಿತ್ತು ಎನ್ನಲಾಗಿದೆ. ಸ್ಥಳಕ್ಕೆ ಹಾವೇರಿ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
