
ಹಾವೇರಿ ಪೊಲೀಸ್ ಡಿಸಿಆರ್‌ಬಿ ತಂಡದ ಕಾರ್ಯಾಚರಣೆ, ಗಾಂಜಾ ಸಮೇತ 7 ಮಾರಾಟಗಾರರ ವಶ
ಹಾವೇರಿ: ಹಾವೇರಿ ಶಹರದ ಹಾವೇರಿ-ಗುತ್ತಲ ರಸ್ತೆ ಎಪಿಎಂಸಿ ಮುಖ್ಯ ದ್ವಾರದ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವದರ ಬಗ್ಗೆ ಖಚಿತ ಮಾಹಿತಿಯ
ಮೇರೆಗೆ, ಜಿಲ್ಲಾ ಪೊಲೀಸ್ ಕಛೇರಿಯ ಡಿಸಿಆರ್‌ಬಿ ತಂಡವು ಶನಿವಾರದಂದು
ಕಾರ್ಯಾಚರಣೆ ನಡೆಸಿ 7 ಆರೋಪಿತರನ್ನು ಗಾಂಜಾ ಸಮೇತ ವಶಕ್ಕೆ ಪಡೆದಿದೆ.
ಆರೋಪಿತರಾದ ಸಾಜೀದಅಲಿ
ಮೆಹಬೂಬಸಾಬ ಬಂಕಾಪುರ, ಸಾ. ಅಕ್ಕಿ ಆಲೂರ, ಅಬ್ಬಾಸ ಅಲಿ ಖಾದರ ಬೇಪಾರಿ ಸಾ. ಬ್ಯಾಡಗಿ ,ನವಾಬ ಇಸ್ಮಾಯಿಲ್‌ಸಾಬ ಸೈಯದ, ಸಾ. ಸಿಂಧನೂರ ಜಿ. ರಾಯಚೂರ, ದಾವಲ ಮಲ್ಲಿಕ ರಫಿಕಅಹ್ಮದ ಧಾರವಾಡ, ಸಾ. ಹಾವೇರಿ, ಶಂಶುದ್ದೀನ ನಜೀರಅಹ್ಮದ ಸವಣೂರ, ಸಾ. ಹಾವೇರಿ, ಫಾರೂಕಅಹ್ಮದ ನೂರಅಹ್ಮದ ಮಾಡಳ್ಳಿಕರ, ಸಾ. ಹಾವೇರಿ, ಶಿವಪ್ರಸಾದ ಶರಣಯ್ಯ ಸ್ಥಾವರಮಠ, ಸಾ. ಸಿಂಧನೂರ ಜಿ. ರಾಯಚೂರ ಅವರ ಮೇಲೆ ದಾಳಿ ಮಾಡಿ ಸದರಿ ಆರೋಪಿತರಿಂದ ೧೨೪೦ ಗ್ರಾಂ ತೂಕದ ೪೫,೦೦೦ /- ರೂ ಕಿಮ್ಮತ್ತಿನ ಅಕ್ರಮ ನಿಷೇಧಿತ ಗಾಂಜಾವನ್ನು ಮತು ೦೫ ಮೊಬೈಲ್‌ಗಳನ್ನು ವಶಪಡಿಸಿಕೊಂಡಿರುತ್ತದೆ.
ಈ ಬಗ್ಗೆ ಹಾವೇರಿ ಶಹರ ಪೊಲೀಸ್ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆಯನ್ನು ಕೈಗೊಂಡಿರುತ್ತದೆ. ಎಲ್ಲ ಆರೋಪಿತರು
ಪೊಲೀಸ್ ವಶದಲ್ಲಿದ್ದು, ದಸ್ತಗಿರಿ ನಿಯಮವನ್ನು ಕೈಗೊಂಡಿರುತ್ತದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

