ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ಅದ್ದೂರಿ ಮೆರವಣಿಗೆ, ಹರಿದು ಬಂದ ಜನಸಾಗರ

Date:

ಹಾವೇರಿ: ಇಲ್ಲಿನ ಪ್ರಸಿದ್ಧ ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಲಿಂ. ಶಿವಬಸವ ಮತ್ತು ಲಿಂ. ಶಿವಲಿಂಗ ಶ್ರೀಗಳ ಭಾವಚಿತ್ರ ವು ಸಿಂಗರಿಸಿದ ಮಂಟಪದಲ್ಲಿ ಮೆರವಣಿಗೆ ಶುಕ್ರವಾರ ನಗರದಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಐರಣಿ ಮಠದ ಆನೆ, ಗೊಂಬೆ ಕುಣಿತ, ರಾಣೇಬೆನ್ನೂರನ ಹನುಮಾನ್ ಬ್ಯಾಂಡ, ಹರಪನಹಳ್ಳಿಯ ನಂದಿಕೋಲು ಕುಣಿತ, ಅಗಡಿಯ ಸಮ್ಮಾಳ, ಸ್ತಬ್ದಚಿತ್ರಗಳು, ವೀರಗಾಸಿ ಕುಣಿತ, ಲಂಬಾಣಿ ಮೆಳಾವ, ಡೊಳ್ಳು ಕುಣಿತ ಮತ್ತಿತರ ಕಲಾ ತಂಡಗಳು ಭಾಗವಹಿಸಿದ್ದವು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಮಾದನಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಅಕ್ಕಿ ಆಲೂರಿನ ಶಿವಬಸವ ಸ್ವಾಮೀಜಿ, ದುಂಡಸಿಯ ಕುಮಾರ ಸ್ವಾಮೀಜಿ, ನಗರಸಭೆ ಅಧ್ಯಕ್ಷ ಶಶಿಕಲಾ ಮಾಳಗಿ, ಅಶೋಕ ಮಾಗನೂರ, ಗಣೇಶ ಮುಷ್ಠಿ, ಮಾಂತಣ್ಣ ಸುರಳಿಹಳ್ಳಿ, ಸಿ. ಜಿ. ತೋಟಣ್ಣನವರ, ಮತ್ತಿತರರು ಉಪಸ್ಥಿತರಿದ್ದರು. ಮೆರವಣಿಗೆಯು ಎಂ. ಜಿ. ರೋಡ್, ಸುಭಾಸ್ ಸರ್ಕಲ್, ಹಳೇ ಅಂಚೆ ರಸ್ತೆ, ದೇಸಾಯಿ ಗಲ್ಲಿ, ರೈತರ ಓಣಿ, ದ್ಯಾಮವ್ವನ ಪಾದಗಟ್ಟಿ, ಬಸ್ತಿ ಓಣಿ, ತರಕಾರಿ ಮಾರುಕಟ್ಟೆ, ಅಕ್ಕಿ ಪೇಟೆ, ಯಾಲಕ್ಕಿ ಓಣಿ, ಪುರಸಿದ್ಧೇಶ್ವರ ಓಣಿ, ಸ್ಟೇಷನ್ ರಸ್ತೆ ಮೂಲಕ ತಡ ರಾತ್ರಿ ಶ್ರೀ ಮಠಕ್ಕೆ ಬಂದು ಸೇರಿತು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ...

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...