“ನೇಹಾ ಹಿರೇಮಠ ಹತ್ಯೆ ಖಂಡಿಸಿ ಹಾವೇರಿಯಲ್ಲಿ ಎಬಿವಿಪಿ ಬೃಹತ್ ಪ್ರತಿಭಟನೆ”ಕೊಲೆಗಡುಕನನ್ನು ಗಲ್ಲಿಗೇರಿಸುವವರೆಗೂ ಹೋರಾಟ ನಿಲ್ಲುವುದಿಲ್ಲ: ಬಸವರಾಜ ಬೊಮ್ಮಾಯಿ

Date:

ಹಾವೇರಿ: ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯ ಹಿಂದೆ ದೊಡ್ಡ ಷಡ್ಯಂತ್ರ ಇದ್ದು, ಇದು ವಯಕ್ತಿಕ ವಿಚಾರವಲ್ಲ. ಇದರ ಹಿಂದೆ ದೇಶದ ಸಾಮಾಜಿಕ ವಿಚಾರ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸೋಮವಾರ ಹಾವೇರಿಯಲ್ಲಿ ನೇಹಾ ಹತ್ಯೆ ಖಂಡಿಸಿ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ನಾವು ಅತ್ಯಂತ ದುಖ ಆಘಾತದ ಸಂದರ್ಭದಲ್ಲಿ ಸೇರಿದ್ದೇವೆ. ಹೆಣ್ಸು ಮಕ್ಕಳು ಮಾತನಾಡಿದ್ದು ಕರಳು ಕಿತ್ತು ಬರುವಂತಿದೆ. ಅವನು ಹಾಡಹಗಲೆ ಭಯಂಕರ ಕೊಲೆ ಮಾಡಿದ್ದಾನೆ ಎಂದರೆ ಅವನು ಒಬ್ಬನೇ ಇಲ್ಲ. ಇದು ಕೇವಲ ವಯಕ್ತಿಕ ವಿಚಾರ ಅಲ್ಲ. ಇದರ ಹಿಂದೆ ದೇಶದ ಸಾಮಾಜಿಕ ವಿಚಾರ ಇದೆ ಎಂದು ಹೇಳಿದರು.
ನಾವು ಅಧಿಕಾರದಲ್ಲಿ ಇದ್ದಾಗ ಚಿಕ್ಕಮಗಳೂರಿನಲ್ಲಿ ಅಮಾಯಕ ಮಹಿಳೆಯ ಮೇಲೆ ಅತ್ಯಾಚಾರ ನಡೆದಾಗ ಅವನನ್ನು ಗಲ್ಲಿಗೇರಿಸುವಂತೆ ಕ್ರಮ ಕೈಗೊಂಡಿದ್ದೇವು. ನೇಹಾ ತಂದೆ ರಾಜ್ಯದ ಪೊಲಿಸರ ಮೇಲೆ ನಂಬಿಕೆ ಇಲ್ಲ ಅಂತ ಹೇಳಿದ್ದಾರೆ. ರಾಜ್ಗ ಸರ್ಕಾರದ ನಡವಳಿಕೆ ಅವರಿಗೆ ಬೇಸರ ತರಿಸಿದೆ. ಈ ಪ್ರಕರಣವನ್ಬು ಸಿಬಿಐಗೆ ಕೊಡಬೇಕು ಎಂದು ಹೆಳಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಿ ನೇಹಾಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದೊಂದೆ ಪ್ರಕರ ಅಲ್ಲ. ಹಾವೇರಿಯಲ್ಲಿ ಅಲ್ಪ ಸಂಖ್ಯಾತರ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದಾಗ ರಾಜ್ಯ ಸರ್ಕಾರ ಅವರನ್ನು ರಕ್ಷಿಸುವ ಕೆಲಸ ಮಾಡಿದ್ದರು. ಆ ಮಹಿಳೆ ಬಹಿರಂಗವಾಗಿ ಹೇಳಿಕೆ ಕೊಟ್ಟ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದರು. ರಾಜ್ಯದಲ್ಲಿ ಒಂದೇ ಕೊಮಿನ ಹೆಣ್ಣು ಮಕ್ಕಳು ಯಾಕೆ ಸಾಯುತ್ತಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದರು.
ಪ್ರತಿ ಮನೆಯ ಹೆಣ್ಣು ಮಗಳು ನಮ್ಮ ಮಕ್ಕಳು, ಎಲ್ಲ ಕಡೆ ಹೆಣ್ಣು ಮಕ್ಕಳು ಅವನನ್ನು ಗಲ್ಲಿಗೇರಿಸುವಂತೆ ಆಗ್ರಹಿಸುತ್ತಿದ್ದಾರೆ. ಇದೊಂದು ಅಗ್ನಿಕುಂಡವಾಗಿದೆ. ರಾಜ್ಯ ಸರ್ಕಾರ ಎಚ್ಷೆತ್ತುಕೊಳ್ಳಬೇಕು. ರಾಜ್ಯ ಜಂಗಲ್ ರಾಜ್ ಆಗಿದೆ. ಸಿಎಂ ಒಂದು ಟ್ವೀಟ್ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಅವಳ ಬಗ್ಗೆ ಅನಗತ್ಯ ಆರೋಪ ಮಾಡುವ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಈ ಬಗ್ಗೆಯೂ ತನಿಖೆ ಆಗಬೇಕು‌. ನಾವು ವಿದ್ಯಾರ್ಥಿಗಳ ಹೋರಾಟದ ಜೊತೆಗಿದ್ದೇವೆ. ಈಗ ನಡೆಯುತ್ತಿರುವುದು ಜನ ಶಕ್ತಿ ಮತ್ತು ಅಧಿಕಾರ ಶಕ್ತಿ ನಡುವೆ ನಡೆಯುವ ಹೋರಾಟ. ಜನಶಕ್ತಿಯ ಹೋರಾಟಕ್ಕೆ ಯಾವಾಗಲೂ ಜಯ ಸಿಗುತ್ತದೆ. ಆರೋಪಿಗೆ ತಕ್ಕ ಶಿಕ್ಷೆಯಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.

ಆರೋಪಿಗೆ ತಕ್ಷಣವೇ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ಯಲ್ಲಿ ನಗರದ ವಿವಿಧ ಕಾಲೇಜು ನೂರಾರು ವಿದ್ಯಾರ್ಥಿಗಳು ಹಾಗೂ ಬಿಜೆಪಿಯ ಕೆಲವು ಮುಖಂಡರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು!

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು! ಹಾವೇರಿ: ದಾಸರು,...

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...