ಅಣಬೆಯಲ್ಲರಳಿದ ಕಲಾಕೃತಿ……

Date:

ಅಣಬೆಯಲ್ಲರಳಿದ ಕಲಾಕೃತಿ
ಕಾರ್ಯನಿಮಿತ್ಯ ಅ.೧ರಂದು ಕರ್ಜಗಿಗ್ರಾಮಕ್ಕೆ ಹೋಗಿ ಮರಳುತ್ತಿದ್ದ ವೇಳೆ ಸಾಲುಮರದ ತಿಮ್ಮಕ್ಕ ಉದ್ಯಾನವನದ ಮುಂಭಾಗದ ಮರದಡಿ ಅಣಬೆ ಗಮನ ಸೆಳೆಯಿತು. ಬೈಕ್ ನಿಲ್ಲಿಸಿ ಹತ್ತಿರ ಹೋಗಿ ನೋಡಿದಾಗ “ಮರದಡಿ ಮೊರಗಾತ್ರದ ಅಣಬೆ ಕಾಣಿಸಿತು. ಬೀಸಿಲಿಗೆ ಒಣಗಿದಂತೆ ಕಂಡು ಬಂದ ಅಣಬೆ ಕಲಾಕೃತಿಯಂತೆ ಕಂಡು ಬಂದಿತು.
ಅಣಬೆ, ನಾಯಿಕೊಡೆ ಎಂದು ಕರೆಯಲಾಗುವು ನೂರಾರು ವಿಧಗಳಿವೆ. ಹುತ್ತದ ಅಣಬೆ, ಪಟ್ಟ ಅಣಬೆ, ಮರದ ಅಣಬೆ, ಮರಳು ಅಣಬೆ ಹೀಗೆ ನಾನಾ ನಮೂನಿಯ ಅಣಬೆಗಳನ್ನು ಗುರುತಿಸಬಹುದಾಗಿದೆ. ನೋಡಲು ಒಂದಕ್ಕಿಂತ ಒಂದು ಸುಂದರ ಮತ್ತು ಆಕರ್ಷಕವಾಗಿರುತ್ತದೆ. ಕಾಡು ಅಣಬೆಗಳು ಮಳೆಗಾಲದಲ್ಲಿ ಜನ್ಮ ತಾಳುತ್ತವೆ. ಬಗೆಬಗೆಯ ರೂಪದಲ್ಲಿ ಹುಟ್ಟಿಕೊಳ್ಳುವ ವಿವಿಧ ಜಾತಿಯ ಅಣಬೆಗಳನ್ನು ನೋಡೋದೇ ಚೆಂದ.
ತೇವದಿಂದ ಕೂಡಿದ ತೋಟಗಳ ನಡುವೆ, ಗುಡ್ಡಗಾಡುಗಳಲ್ಲಿ, ಹಳೆಯ ಮರದ ದಿಮ್ಮಿಗಳ ಮೇಲೆ ಭಿನ್ನ ವಿಭಿನ್ನ ರೂಪದಲ್ಲಿ ನಾಯಿಕೊಡೆಗಳು ತಲೆಯೆತ್ತುತ್ತವೆ.   ಕೆಲವೊಂದು ಅಣಬೆಗಳು ಮಾತ್ರ ತಿನ್ನಲು ಯೋಗ್ಯ. ಇದನ್ನು ಗುರುತಿಸಲು ಹಿರಿಯರ ಮಾಹಿತಿ ಬೇಕೇಬೇಕು. ಯಾವುದಕ್ಕೂ ಪ್ರಕೃತಿದತ್ತ ಅಣಬೆಯನ್ನು ಆಹಾರಕ್ಕೆ ಬಳಸುವ ಮೊದಲು ತಿಳಿದವರಲ್ಲಿ ಕೇಳಿಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ವಿಷಕಾರಿ ಅಣಬೆಗಳು ಹೊಟ್ಟೆ ಸೇರಿದರೆ  ಅಪಾಯ ಕಟ್ಟಿಟ್ಟ ಬುತ್ತಿ.
ಚಿತ್ರ/ಮಾಹಿತಿ: ಮಾಲತೇಶ ಅಂಗೂರ, ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...