ಹಾವೇರಿಜಿಲ್ಲಾ ಕ್ರೀಡಾಂಗಣದಲ್ಲಿನ “ನೀರು ಶುದ್ಧೀಕರಣ ಯಂತ್ರ ರಿಪೇರಿ” ಮಾಡ್ಸೋರು ಯಾರು?

Date:

ಹಾವೇರಿ: ಇಲ್ಲಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿರುವ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಮೈದಾನಕ್ಕೆ ಕಸರತ್ತಿಗೆ ಬರುವ ಕ್ರೀಡಾ ಪಟಗಳಿಗೆ, ಮಕ್ಕಳಿಗೆ, ವಾಯು ವಿಹಾರಿಗಳಿಗೆ, ಸಾರ್ವಜನಿಕರಿಗೆ ಕುಡಿಯವ ನೀರಿಗಾಗಿ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಲಕ್ಷಾಂತರೂಗಳನ್ನು ಖರ್ಚುಮಾಡಿ ಅಳವಡಿಸಿದ್ದು, ಆದರೆ ಈ ಯಂತ್ರವು ಪದೇ ಪದೆ ಕೆಟ್ಟು ನಿಲ್ಲುವ ಮೂಲಕ ಶುದ್ಧ ನೀರಿನ ಯಂತ್ರ ಇದ್ದು ಇಲ್ಲದಂತಾಗಿದೆ.
ಕಳೆದ ಒಂದು ವರ್ಷದ ಹಿಂದೆ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಲಕ್ಷಾಂತರ ರೂಗಳನ್ನು ಖರ್ಚುಮಾಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ಸ್ಥಾಪಿಸಲಾಗಿತ್ತು. ದಣಿದು ಬಂದ ಕ್ರೀಡಾಪಟುಗಳು, ವಾಯುವಿಹಾರಿಗಳು, ಮಕ್ಕಳು ಈ ನೀರು ಶುದ್ಧಿಕರಣದ ಯಂತ್ರದ ನೀರನ್ನು ಕುಡಿದು ವಿರಮಿಸುತ್ತಿದ್ದರು.
ಆದರೆ ಒಂದು ವರ್ಷದಲ್ಲಿ ನಾಲ್ಕಾರು ಬಾರಿ ಈ ಯಂತ್ರವು ದುರಸ್ತಿಗೆ ಬಂದು ಕೆಟ್ಟ ನಿಂತಿದೆ. ಇದರಿಂದ ಕ್ರೀಡಾಪಟುಗಳಿಗೆ ಶುದ್ಧ ನೀರು ಕ್ರೀಡಾಂಗಣದಲ್ಲಿ ಸಿಗುತ್ತಿಲ್ಲ.
ಕೆಟ್ಟಿರುವ ಈ ಯಂತ್ರವನ್ನು ರಿಪೇರಿ ಮಾಡಿಸಲು ಹಲವಾರು ಬಾರಿ ಕ್ರೀಡಾಪಟುಗಳು, ಸಾರ್ವಜನಿಕರು ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಅವರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ನೀರು ಶುದ್ದೀಕರಣದ ಯಂತ್ರವನ್ನು ಲಕ್ಷಾಂತರ ರೂಗಳನ್ನು ಖರ್ಚುಮಾಡಿ ಅಳವಡಿಸಲಾಗಿದ್ದು, ದೂರದ ಮಂಗಳೂರಿನ ಗುತ್ತಿಗೆದಾರರು ಈ ಯಂತ್ರವನ್ನುಅಳವಡಿಸಿದ್ದಾರೆನ್ನಲಾಗಿದ್ದು, ಈ ಯಂತ್ರದ ದುರಸ್ತಿಯ ಹೊಣೆಯುವ ಅವರದ್ದೆ ಆಗಿದೆ. ಆದರೆ ಅವರು ಸರಿಯಾಗಿ ನಿರ್ವಹಣೆ ಮಾಡದ ಕಾರಣಕ್ಕೆ ಶುದ್ಧ ನೀರಿನ ಯಂತ್ರವು ಅಶುದ್ಧವಾಗಿ ನಿಲ್ಲುವದಕ್ಕೆ
ಕಾರಣ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಈಗಾಗಲೇ ಸಾಕಷ್ಟು ಹಣವನ್ನು ಈ ಯಂತ್ರದ ದುರಸ್ತಿಗೆ ಖರ್ಚು ಮಾಡಲಾಗಿದೆ ಎನ್ನಲಾಗಿದ್ದು, ಆದರೂ ಏಕೆ ಯಂತ್ರವು ಪದೇ ಪದೇ ಕೆಟ್ಟು ನಿಲ್ಲಲು ಕಾರಣವೇನು?’ ಎನ್ನುವುದಕ್ಕೆ ಇಲಾಖೆಯ ಅಧಿಕಾರಿಗಳು ಉತ್ತರಿಸಬೇಕು. ಏನೇ ಆದರು ನಿತ್ಯ ನೂರಾರು ಭೇಟಿ ನೀಡುವ ಜಿಲ್ಲಾ ಕ್ರೀಡಾಂಗಣದಲ್ಲಿನ ಕೆಟ್ಟಿರುವ ನೀರು ಶುದ್ಧೀಕರಣದ ಯಂತ್ರವನ್ನು ದುರಸ್ತಿ ಪಡಿಸಿ ಕುಡಿಯವ ನೀರ ಲಭ್ಯವಾಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...