ಡಾಂಗೆ ಎಜ್ಯುಕೇಶನ್ ಸೊಸೈಟಿಯ ಸೇವೆ ವಿಸ್ತಾರಗೊಳ್ಳಲಿ-ರುದ್ರಪ್ಪ ಲಮಣಿ
ಹಾವೇರಿ: ಡಾ.ಸಂಜಯ ಡಾಂಗೆ ತಮ್ಮ ಸತತ ಪ್ರಯತ್ನದಿಂದ ಆರೋಗ್ಯ ಸೇವೆಗೆ ಶ್ರಮಿಸುತ್ತಿದ್ದು, ಈಗಾಗಲೇ ಡಾ. ಸಂಜಯ ಡಾಂಗೆ ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್, ಡಾ.ಸಂಜಯ ಡಾಂಗೆ ಇನ್ಸಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್, ಡಾ. ಸಂಜಯ ಡಾಂಗೆ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಗಣನೀಯ ಸೇವೆ ಸಲ್ಲಿಸುತ್ತಿದ್ದು, ವ್ಯೆದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಡಾಂಗೆ ಎಜ್ಯುಕೇಶನ್ ಸೊಸೈಟಿಯ ಸೇವೆ ವಿಸ್ತಾರಗೊಳ್ಳಲಿ ಎಂದು ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಆಶಯ ವ್ಯಕ್ತಪಡಿಸಿದರು.
ನಗರದ ಶ್ರೀ ಸಿದ್ಧರಾಮೇಶ್ವರ ಸಭಾ ಭವನದಲ್ಲಿ ಡಾಂಗೆ ಎಜ್ಯುಕೇಶನ್ ಸೊಸೈಟಿಯ ಐದನೇ ವಾರ್ಷಿಕೋತ್ಸವ, ೨೦೨೫-೨೬ನೇ ಸಾಲಿನ ದೀಪಧಾರಣೆ ಹಾಗೂ ಸಾಂಸ್ಕೃತಿಕ ಕಲಾ ವೈಭವ ಮತ್ತು ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಡಾಂಗೆ ಅವರು ನಾಲ್ಕು ಸಂಸ್ಥೆ ತೆರೆದಿದ್ದಾರೆ. ಬಡವರ ಮಕ್ಕಳಿಗೆ ಕಡಿಮೆವೆಚ್ಚದಲ್ಲಿ ಶಿಕ್ಷಣ ನೀಡುವ ಮೂಲಕ ಈಗಾಗಲೇ ಜನಾನುರಾಗಿಯಾಗಿದ್ದಾರೆ. ಬಡವರ ಅನುಕೂಲಕ್ಕಾಗಿ ಸಂಸ್ಥೆ ನಿರಂತರವಾಗಿ ಬೆಳೆಯಲಿ ಎಂದರು.
ಮುಖ್ಯಅತಿಥಿಯಾಗಿ ರಾಜ್ಯ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ರೋಗಿಗಳ ಮನೋಧೈರ್ಯ ಹೆಚ್ಚಿಸುವ ಶುಶ್ರೋಷಕರ ಬಗ್ಗೆ ಕೀಳರಿಮೆ ಸಲ್ಲದು. ಈ ಹಿನ್ನೆಲೆಯಲ್ಲಿ ತಾವು ಪ್ರಮಾಣ ವಚನ ಸ್ವೀಕರಿಸಿದಂತೆ ವೃತ್ತಿಗೆ ಯಾವುದೇ ಧಕ್ಕೆ ಬಾರದಂತೆ ನಡೆದುಕೊಳ್ಳಿರಿ. ರೋಗಿಗಳನ್ನು ದೇವರೆಂದು ಭಾವಿಸಿರಿ. ನಿಮ್ಮ ಜೀವನವನ್ನು ಆದರ್ಶವಾಗಿಟ್ಟುಕೊಳ್ಳಿ ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಸಂಜಯಕುಮಾರ ಡಾಂಗೆ, ಕಳೆದ ಮೂರು ದಶಕಗಳಿಂದ ಚರ್ಮ ರೋಗ ತಜ್ಞನಾಗಿ ಸೇವೆ ಸಲ್ಲಿಸುತ್ತಿರುವೆ. ಈ ಭಾಗದ ಆಸ್ಪತ್ರೆಗಳಲ್ಲಿ ನುರಿತ ಶುಶ್ರೋಷಕರ ಕೊರತೆ ಇತ್ತು. ಈ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಡಾಂಗೆ ಎಜ್ಯುಕೇಶನ್ ಸೊಸೈಟಿಯ ನರ್ಸಿಂಗ್ ಕಾಲೇಜು ಮೂಲಕ ಶುಶ್ರೋಷಕರಿಗೆ ತರಬೇತಿ ನೀಡಲಾಗುತ್ತಿದೆ. ವೈದ್ಯರು ಮತ್ತು ಶುಶ್ರೋಷಕರ ಮೇಲೆ ಜನರ ವಿಶ್ವಾಸ ಇರಬೇಕು. ಅಂದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಿಸಲು ಸಾಧ್ಯ. ಎಂದರು.
ಹಾವೇರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಎಂ.ಎಂ.ಹಿರೇಮಠ ಮಾತನಾಡಿ, ಡಾ.ಸಂಜಯಕುಮಾರ ಡಾಂಗೆ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಪ್ರಯತ್ನ ಮಾಡಿ ಯಶಸ್ವಿಯಾಗಿರುವರು. ಅವರ ಶೈಕ್ಷಣಿಕ ಕ್ಷೇತ್ರದಲ್ಲಿನ ಪ್ರಗತಿ ಇನ್ನಷ್ಟು ಹೆಚ್ಚಲಿ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್ ಗಾಜಿಗೌಡ್ರ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವೈದ್ಯರು ಸೇವೆ ಸಲ್ಲಿಸಲು ಹಿಂದೇಟು ಹಾಕುವ ಸಂದರ್ಭದಲ್ಲಿ ಡಾ.ಡಾಂಗೆ ಅವರ ಗ್ರಾಮೀಣ ಜನತೆಯ ಆರೋಗ್ಯಕ್ಕೆ ಶ್ರಮಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಸಾನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮೀಜಿ ಮಾತನಾಡಿ ಮನುಷ್ಯನಿಗೆ ಆರೋಗ್ಯ ಚೆನ್ನಾಗಿದ್ದರೆ ಏನೆಲ್ಲ ಸಾಧನೆ ಮಾಡಬಹುದು. ಅನಾರೋಗ್ಯದ ಸಂದರ್ಭದಲ್ಲಿ ತಾಯಿ ನಂತರ ಅತಿ ಕಾಳಜಿ ಮಾಡುವವರು ಶುಶ್ರೋಷಕರು. ಧಾರ್ಮಿಕ ತಳಹದಿಯ ಮೇಲೆ ವಿಶ್ವಾಸವಿಟ್ಟ ಡಾ.ಡಾಂಗೆಯವರು ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಸಾರ್ಥಕ ಸೇವೆ ಅನನ್ಯ. ಜೊತೆಗೆ ಶೋಷಿತರ ಪರ ನಿಲ್ಲುವ ಮತ್ತು ಬಡವರ ಬಗೆಗಿನ ಅವರ ಕಾಳಜಿ ಅಭಿನಂದನೀಯ ಎಂದರು.
ಬೌದ್ಧ ಬಿಕ್ಕು ಕಮಲನಾಥ್ ಬಂಥೇಜಿ ಸಾನ್ನಿಧ್ಯ ವಹಿಸಿದ್ದರು. ಡಾ.ಸಂಜಯಕುಮಾರ ಡಾಂಗೆ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಂ.ಮೈದೂರ ಹಾಗೂ ಪ್ರಭುಗೌಡ ಬಿಷ್ಟನಗೌಡ್ರ, ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮ ಅಡಕಿ, ಮುಖಂಡರಾದ ಸಿ.ಬಿ.ಕುರವತ್ತಿಗೌಡ್ರ, ಮಲ್ಲೇಶಪ್ಪ ಪಟ್ಟಣಶೆಟ್ಟಿ, ಬಸಣ್ಣ ಹೆಡಿಗೊಂಡ, ಶಂಕ್ರಣ್ಣ ಮಕರಬ್ಬಿ, ಶ್ರೀಧರ ದೊಡ್ಡಮನಿ, ಸಾಹಿತಿ ಹನುಮಂತಗೌಡ ಗೊಲ್ಲರ, ಪ್ರಾಂಶುಪಾಲೆ ಸರಸ್ವತಿ ವೈ.ಎಚ್, ರಮೇಶ ಆನವಟ್ಟಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೃಷ್ಣ ಸಂಜಯ ಡಾಂಗೆ, ರವಿಕುಮಾರ ಟಿ, ರಬ್ಬಾನಿ ಹುಲಗೇರಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಇದಕ್ಕೂ ಮುನ್ನ ವಿದ್ಯಾರ್ಥಿಗಳಿಂದ ದೀಪಧಾರಣೆ ಹಾಗೂ ಬಳಿಕ ಸಾಂಸ್ಕೃತಿಕ ಕಲಾ ವೈಭವ ಜರುಗಿತು.

ಉಮೇಶ್ ತಳವಾರ ಸ್ವಾಗತಿಸಿದರು.
ನಾಗರಾಜ ನಡುವಿನಮಠ ಕಾರ್ಯಕ್ರಮ ನಿರ್ವಹಿಸಿದರು.