
ಏರ್ಕ್ರಾಫ್ಟ್ ಹಾರಾಟ-ಭಯ ಬೇಡ:ಎಸ್ಪಿ ಯಶೋಧಾ ವಂಟಗೋಡಿ
ಹಾವೇರಿ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜೀಯೋಲಜಿಕಲ್ ಸರ್ವೇ ಆಫ್ ಇಂಡಿಯಾ ವತಿಯಿಂದ ದಿನಾಂಕ: ೩೧.೦೭.೨೦೨೬ ರವರೆಗೆ ಏರ್ಕ್ರಾಫ್ಟ್ ಮೂಲಕ ಏರ್ಬಾರ್ನ್ ಜಿಯೋಫಿಸಿಕಲ್ ಸರ್ವೆ ಕಾರ್ಯ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಕೆಲವು ದಿನಗಳಿಂದ ಹಾವೇರಿ ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು ಹಾಗೂ ಹಾವೇರಿ ತಾಲೂಕಿನಲ್ಲಿ ಭೂಮೇಲ್ಮೈ ಇಂದ ಕಡಿಮೆ ಅಂತರದಲ್ಲಿ ಏರ್ಕ್ರಾಫ್ಟ್ ಹಾರಾಟ ಕಂಡು ಬರುತ್ತಿದ್ದು, ಇದು ಕೇವಲ ಜಿಯೋಫಿಸಿಕಲ್ ಸರ್ವೆ ಕಾರ್ಯಕ್ಕೆ ಸೀಮಿತವಾಗಿರುವುದರಿಂದ ಸಾರ್ವಜನಿಕರು ಭಯ/ಆತಂಕ ಪಡಬಾರದೆಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.

