
ಸಮರ್ಪಕ ಜನಗಣತಿ ಕಾರ್ಯ ಯಶಸ್ವಿಗೆ ಸಹಕರಿಸಿ: ಡಾ. ವಿಜಯಮಹಾಂತೇಶ್ ದಾನಮ್ಮನವರ
ಹಾವೇರಿ ವಾರ್ತೆ : ಭಾರತ ಸರ್ಕಾರ ಕೈಗೊಂಡಿರುವ ೨೦೨೬ ಜನಗಣತಿ ಕಾರ್ಯಕ್ರಮ ನಿಮಿತ್ತ ನಗರದ ಹುಕ್ಕೇರಿ ಮಠದ ಪ್ರೌಢಶಾಲೆಯಲ್ಲಿ ಶುಕ್ರವಾರ ತರಬೇತಿ ಕಾರ್ಯಾಗಾರ ಉದ್ದೇಸಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಜನಗಣತಿ ೨೦೨೧ ರಲ್ಲಿ ನಡೆಯಬೇಕಾಗಿತ್ತು, ಆ ಸಂದರ್ಭದಲ್ಲಿ ಕೋವಿಡ್ ಸಂಭವಿಸಿದ್ದರಿಂದ ಜನಗಣತಿ ಮಾಡಲು ಸಾಧ್ಯವಾಗಲಿಲ್ಲ. ೨೦೨೬-೨೭ ನೇ ಸಾಲಿನಲ್ಲಿ ಜನಗಣತಿ ಮಾಡಲು ಎಲ್ಲ ಅಗತ್ಯ ಕ್ರಮ ಕೈಗೊಂಡಿದ್ದು, ಅದರಂತೆ ಈಗಾಗಲೇ ತರಬೇತಿಗೆ ಕಾರ್ಯಕ್ರಮ ಆಯೋಜಿಸಿದ್ದು ಈ ತರಬೇತಿ ಪಡೆದು ಆದಷ್ಟು ಬೇಗ ಜನಗಣತಿ ಕಾರ್ಯಕ್ರಮವನ್ನು ಮಾಡಿ. ಮನೆಗಳ ಗಣತಿ, ಹಾಗೂ ಸ್ವಯಂ ಗಣತಿ ಮಾಡಲು ಸಾರ್ವಜನಿಕರಿಗೆ ಸೂಚಿಸಿದ್ದು,ಅದರಂತೆ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ದೊರೆತಿದ್ದು,ನೀವು ಸಹ ಏಪ್ರಿಲ್ ೧೫ ನಂತರ ಆದಷ್ಟು ಬೇಗ ಗಣತಿ ಕಾರ್ಯಕ್ರಮವನ್ನು ಮಾಡಿ ಯಶಸ್ವಿಗೊಳಿಸಲು ಸೂಚಿಸಿದರು.
ಈ ಹಿಂದೆ ಸಾಮಾಜಿಕ ಆರ್ಥಿಕ ಗಣತಿ ಸಂದರ್ಭದಲ್ಲಿ ರಾಜ್ಯದಲ್ಲಿಯೇ ಹಾವೇರಿ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದು,ಅದೇ ರೀತಿ ಈಗಲೂ ಸಹ ಪ್ರಥಮ ಸ್ಥಾನ ಪಡೆಯಲು ತಾವು ಸಹಕರಿಸಿ ಈ ಗಣತಿಯನ್ನು ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಲು ಸಹಕರಿಸಿ ಎಂದರು.
ಈ ಸಂದರ್ಭದಲ್ಲಿ ತಾಲೂಕ್ ದಂಡಾಧಿಕಾರಿಗಳಾದ ಶರಣಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಹೆಚ್ ಪಾಟೀಲ್, ಪೌರಾಯುಕ್ತ ಎಚ್ ಕಾಂತರಾಜ್, ಗುತ್ತಲ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ದೇವಾನಂದ ನಾಯಕ, ಇತರರು ಉಪಸ್ಥಿತರಿದ್ದರು.

