
“ನವಿಲಿ”ಗೂ “ಅಂತ್ಯ ಸಂಸ್ಕಾರ”
ಮಾನವೀಯತೆ ಮೆರೆದ “ಪವರ ಮ್ಯಾನ”ಗಳು
ರಾಣೆಬೆನ್ನೂರ- ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ
ರಾಷ್ಟೀಯ ಪಕ್ಷಿಯಾಗಿ ಗುರುತಿಸಿಕೊಂಡಿರುವ ಆಕಸ್ಮಿಕವಾಗಿ ಸಾವನ್ನಪ್ಪಿರುವ ನವಿಲೊಂದು ಭಾರತೀಯ ಸಂಪ್ರದಾಯದಂತೆ ಮನುಜನಂತೆಯೇ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಘಟನೆ ತಾಲೂಕಿನ ನೂಕಾಪುರ ಸಮೀಪದ ಹೊನ್ನನಾಗದೇವತೆ ದೇವಸ್ಥಾನದ ಬಳಿ ನಡೆದಿದೆ.
ದೇವಸ್ಥಾನದ ಎದುರಿಗೆ ಜಮೀನೊಂದರ ಜೋಡು ವಿದ್ಯುತ್ ಕಂಬಕ್ಕೆ ತಗುಲಿ ಕಂಬದ ಮೇಲೆಯೆ ರಾಷ್ಟ್ರೀಯ ಪಕ್ಷಿ ನವಿಲು ಸಾವನ್ನಪ್ಪಿದೆ. ಇದರಿಂದಾಗಿ ಲೈನ್ ಟ್ರಿಪ್ ಆಗುವ ವಿಚಾರವಾಗಿ ಲೈನ್ ತೊಂದರೆ ಬಗ್ಗೆ ಪವರ ಮ್ಯಾನಗಳಾದ ಸಂಗಮೇಶ ಕೋಟಿಕಲ್ ಹಾಗೂ ಚೇತನ್ ಬಳ್ಳಾರಿ ಲೈನ್ ಫಾಲ್ಟ್ ನೋಡುವಾಗ ನವೀಲು ವಿದ್ಯುತ್ ಗೆ ತಗುಲಿ ಮೃತಪಟ್ಟಿರುವುದು ಕಂಡುಬಂದಿದೆ.
ತಕ್ಷಣವೆ ಪವರ್ ಮ್ಯಾನಗಳು ನವಿಲನ್ನು ವಿದ್ಯುತ್ ಕಂಬದಿಂದ ಕಳೆಗಿಳಿಸಿ ಪಕ್ಕದಲ್ಲಿರುವ ಜಮೀನೊಂದರಲ್ಲಿ ತಾವೇ ಸ್ವತಹ ಗುದ್ದಲಿ ಹಾಗೂ ಸಲಾಕಿಯ ಮುಖಾಂತರ ತೆಗ್ಗು ತೋಡಿ ಗ್ರಾಮಸ್ಥರ ಸಹಕಾರದಿಂದ ರಾಷ್ಟ್ರೀಯ ಪಕ್ಷಿಗೆ ಪೂಜೆ ಪುನಸ್ಕಾರ ಸಲ್ಲಿಸಿ ಅಂತ್ಯಕ್ರಿಯೆ ಮಾಡಿದ್ದು ವಿಶೇಷವಾಗಿತ್ತು
ಈ ಪವರ್ ಮ್ಯಾನ್ಗಳಿಬ್ಬರೂ ನವಿಲಿಗೆ ಪೂಜೆ ಪುನಸ್ಕಾರ ಮಾಡಿ ಅಂತ್ಯಕ್ರಿಯೆ ಮಾಡಿದ್ದು ನಿಜಕ್ಕೂ ರಾಷ್ಟ್ರೀಯ ಪಕ್ಷಿಗೆ ಅಂತಿಮ ನಮನ ಸಲ್ಲಿಸಿದಂತಾಗಿದೆ. ಇವರ ಕಾರ್ಯಕ್ಕೆ ಇಡೀ ಗ್ರಾಮವೇ ಶ್ಲ್ಯಾಘನೀಯ ಜೊತೆಗೆ ಇವರ ಪ್ರಾಮಾಣಿಕ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಶಂಕರ್ ಚೌವ್ಹಾಣ, ಅರುಣ ರಾಠೋಡ, ಚೇತನ್ ರಾಠೋಡ, ವಾಲಪ್ಪ ಕೇತಾವತ್, ಗುಡ್ಡಪ್ಪ ಮರಡೇರ ಸೇರಿದಂತೆ ಮತ್ತಿತರರು ನಾಗರೀಕರು ಇದ್ದಮಾಡ

