
ಹಾವೇರಿ : ಗ್ರಾಮ ಪಂಚಾಯತಿಗಳ ಚುನಾಯಿತ ಸದಸ್ಯರ ಸ್ಥಾನಗಳ ನಿಗದಿ
ಜಿಲ್ಲಾಧಿಕಾರಿ, ತಹಶೀಲ್ದಾರ, ತಾ. ಪಂ. ಮತ್ತು ಗ್ರಾ.ಪಂ.ಕಚೇರಿಗಳಲ್ಲಿ ಮಾಹಿತಿ ಪ್ರಕಟ
-ಜಿಲ್ಲಾಧಿಕಾರಿ ಡಾ. ವಿಜಯಮಾಹಾಂತೇಶ್ ದಾನಮ್ಮನವರ
ಹಾವೇರಿ :ಬೆಂಗಳೂರ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ವು ದಿನಾಂಕ 18-04-2026ರ ಕೆಳಗೆ ಹಾವೇರಿ ಜಿಲ್ಲೆಯ ಗ್ರಾಮ ಪಂಚಾಯತಿಗಳ ಚುನಾಯಿತ ಸದಸ್ಯರ ಸ್ಥಾನಗಳನ್ನು ಪ್ರಕರಣ 5(1) ರಂತೆ ನಿಗಧಿಪಡಿಸಿದ್ದು ಮತ್ತು ಅದಾಲತ್ ವೇಳಾಪಟ್ಟಿಯನ್ನು ಹೊರಡಿಸಿದ್ದು, ಈ ವಿವರಗಳನ್ನು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ವೆಬ್ ಸೈಟ್ https://rdpr.karnataka.gov.in/rdc/public ಮತ್ತು ದಿನಾಂಕ 18-04-2026ರ ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ (ರಾಜ್ಯ ಪತ್ರದ ವಿಳಾಸ https://erajyapatra.karnataka.gov.in) ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಡಾ. ವಿಜಯಮಾಹಾಂತೇಶ್ ದಾನಮ್ಮನವರ ತಿಳಿಸಿದ್ದಾರೆ.
ಪ್ರಕಟಣೆಯಲ್ಲಿ ತಿಳಿಸಿರುವಂತೆ ಸಾರ್ವಜನಿಕ ಅಭಿಪ್ರಾಯ/ಆಕ್ಷೇಪಣೆಗಳನ್ನು ಆನ್ ಲೈನ್ ಮುಖಾಂತರ ಆಯೋಗದ ವೆಬ್ ಸೈಟ್ ನಲ್ಲಿ ಮತ್ತು ಖುದ್ದಾಗಿ ಅಂಚೆ ಮೂಲಕ ಬೆಂಗಳೂರಿನ ಆಯೋಗದ ಕಛೇರಿಯಲ್ಲಿ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ.
ಈ ಪ್ರಕಟಣೆಯನ್ನು ಹಾವೇರಿ ಜಿಲ್ಲೆಯಾದ್ಯಂತ ಸಾರ್ವಜನಿಕರ ಮಾಹಿತಿಗಾಗಿ ಎಲ್ಲ ತಾಲ್ಲೂಕಿನ ತಹಶೀಲ್ದಾರರ, ತಾಲ್ಲೂಕು ಪಂಚಾಯತಿ, ಮತ್ತು ಗ್ರಾಮ ಪಂಚಾಯತ ಗ್ರಾಮ ಆಡಳಿತ ಕಚೇರಿಗಳಲ್ಲಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ದಿನಾಂಕ:18-04-2026 ರಂದು ಪ್ರಕಟಿಸಿರುವ ಪ್ರಕಟಣೆಯ ಕುರಿತಂತೆ ದಿನಾಂಕ:24-04-2026 ರೊಳಗಾಗಿ ಆಕ್ಷೇಪಣೆ ಮತ್ತು ಅಹವಾಲುಗಳನ್ನು ಸಲ್ಲಿಸಿರುವವರಿಗೆ ದಿನಾಂಕ:27-04-2026 ರಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಗೇಟ್ನಂ2, 2ನೇ ಮಹಡಿ. ಕೊಠಡಿ ಸಂಖ್ಯೆ:229 ಮತ್ತು 230 ಬಹುಮಹಡಿಗಳ ಕಟ್ಟಡ ಬೆಂಗಳೂರ ಇಲ್ಲಿ ನಡೆಯುವ ಅದಾಲತ್ ನಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

