ಹಾವೇರಿ: ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪಠ್ಯವಿತರಣೆ

Date:

.

ಹಾವೇರಿ: ಪಿಯುಸಿ ಕಾಲೇಜ್ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಈ ಸಾಲಿನಿಂದ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡುವ ಯೋಜನೆ ಜಾರಿಗೆ ಬಂದ ಪರಿಣಾಮ ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಪ್ರತಿ ವರ್ಷ ಅವರು ಪಠ್ಯಪುಸ್ತಕಗಳ ಖರೀದಿ ಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದರು. ಇದನ್ನು ಅರಿತ ಸರ್ಕಾರ ಈ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಪಠ್ಯ ಪುಸ್ತಕಗಳನ್ನ ನೀಡಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಾಯ ಮಾಡಿದೆ. ಇದರಿಂದ ಪಾಲಕರ ಮೇಲಿದ್ದ ಹೊರೆಯನ್ನು ಸ್ವಲ್ಪ ತಗ್ಗಿಸಿದಂತಾಗಿದೆ. ವಿದ್ಯಾರ್ಥಿಗಳು ಇಂತಹ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಸಂಜೀವಕು ಮಾರ ನೀರಲಗಿ ಕರೆ ನೀಡಿದರು.
ಬಸವೇಶ್ವರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಿ.ಯು. ಕಾಲೇಜ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಂಕೇತಿಕವಾಗಿ ವಿದ್ಯಾರ್ಥಿನಿ ಯರಿಗೆ ಪಠ್ಯಪುಸ್ತಕಗಳನ್ನು ವಿತರಿಸಿ ಮಾತನಾಡುತ್ತಾ, ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯನ್ನು ಉತ್ತಮಪಡಿಸಲು ಉಚಿತ ಸಾರಿಗೆ ಸೇರಿದಂತೆ ಅನೇಕ ಯೋಜನೆ ಗಳನ್ನು ಜಾರಿಗೊಳಿಸುತ್ತಿದೆ. ಬಡವರಿಗೆ ಶಿಕ್ಷಣ ದುಬಾರಿ ಯಾಗುತ್ತಿರುವ ಕಾಲಘಟ್ಟದಲ್ಲಿ ಈ ರೀತಿ ಪಠ್ಯ ಪುಸ್ತಕಗಳನ್ನ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚುತ್ತಿರುವುದು ಉತ್ತಮ ಕಾರ್ಯವಾಗಿದೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಬಲರಾದರೆ ಮಾತ್ರ ಶಕ್ತಿಶಾಲಿ ರಾಷ್ಟ್ರ ನಿರ್ಮಿಸಲು ಸಾಧ್ಯವಾ ಗುತ್ತದೆ.ಆದ್ದರಿಂದ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಿದೆ. ಇದಕ್ಕೆ ಪಾಲಕರು, ಪೋಷಕರು, ಅಧಿಕಾರಿಗಳು ಮತ್ತು ಶಿಕ್ಷಕರು ಕೈಜೋಡಿಸ ಬೇಕು. ವಿದ್ಯಾರ್ಥಿಗಳು ಸಹ ಉತ್ತಮ ಫಲಿತಾಂಶ ಪಡೆಯುವ ಮೂಲಕ ಸರ್ಕಾರದ ಮಹತ್ವಾಕಾ ಂಕ್ಷೆ ಯೋಜನೆಯನ್ನು ಯಶಸ್ವಿ ಗೊಳಿಸಬೇಕೆಂದು ಕಿವಿಮಾತು ಹೇಳಿದರು.
ನಂತರ ಕಾಲೇಜಿನ ಪ್ರಾಚಾರ್ಯರಾದ ರವಿಕುಮಾರ ಅಂಬೋರೆ ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ನಾಳಿನ ಪ್ರಜೆಗಳು. ಅವರ ಬದುಕನ್ನು ಉತ್ತಮವಾಗಿ ಕಟ್ಟುವುದು ಸರ್ಕಾರ ಮತ್ತು ಸಮಾಜದ ಕರ್ತವ್ಯ.ಗುಣಮಟ್ಟದ ಶಿಕ್ಷಣ ನೀಡಿದರೆ ಬುದ್ಧಿವಂತ ಪ್ರಜೆಗಳು ತಯಾರಾಗುತ್ತಾರೆ. ಅಮೂಲಕ ದೇಶದ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಿ ವಿದ್ಯಾರ್ಥಿ ಸ್ನೇಹಿ ಯೋಜನೆಗಳನ್ನು ತರುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡೆದು ಉತ್ತಮ ಶಿಕ್ಷಣವಂತರಾಗಿ ಮೌಲ್ಯಗಳನ್ನು ಅಪ್ಪಿಕೊಂಡು ಸಮಾಜದ ಋಣ ತೀರಿಸಬೇಕು ಎಂದರು.
ಹಾವೇರಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಶಿಕ್ಷಣ ಪ್ರೇಮಿಗಳಾದ ಶಿವಬಸಪ್ಪ ಹಲಗಣ್ಣನವರ, ಕ.ರಾ.ಕಾ.ನಿ ಪತ್ರಕರ್ತ ಸಂಘದ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಕ್ರಿಯಾಶೀಲ ಸದಸ್ಯರಾದ ರಾಜಶೇಖರ ಡೊಳ್ಳಿನ ಹಿರಿಯ ಉಪನ್ಯಾಸಕರುಗಳಾದ ಐ.ಡಿ.ಕೊ ರಗರ, ಎಸ್.ಬಿ. ದೊಡ್ಡಮನಿ, ಕೆ.ಎನ್.ಗುದಗಿ, ಶ್ರೀಮತಿ ಲಲಿತಾಬಾಯಿ ನರಗುಂದ, ಶ್ರೀಮತಿ ಕವಿತಾ ದೇಶಪಾಂಡೆ, ಶ್ರೀಮತಿ ಸರಸ್ವತಿ ತಗಡನಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಜಿಲ್ಲೆಯ ಮೊದಲ ಕ್ಯಾತ್‌ಲ್ಯಾಬ್ ಹಾವೇರಿಯ ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯಲ್ಲಿ ಜು.೧೨ಕ್ಕೆ ಲೋಕಾರ್ಪಣೆ

-ಜಿಲ್ಲೆಯ ಮೊದಲ ಕ್ಯಾತ್‌ಲ್ಯಾಬ್ ಹಾವೇರಿಯ ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯಲ್ಲಿ ಜು.೧೨ಕ್ಕೆ...

ಹಾವೇರಿ: ಕಾರ್ಮಿಕರ ಅಪಘಾತ ಪ್ರಕರಣ ನಿರ್ಲಕ್ಷ್ಯ- ಅಧಿಕಾರಿಗಳ ಅಮಾನತಿಗೆ ಆಗ್ರಹ

ಹಾವೇರಿ: ಕಾರ್ಮಿಕರ ಅಪಘಾತ ಪ್ರಕರಣ ನಿರ್ಲಕ್ಷ್ಯ- ಅಧಿಕಾರಿಗಳ ಅಮಾನತಿಗೆ ಆಗ್ರಹ ಹಾವೇರಿ: ನಗರದ...

ರಾಜ್ಯದ ಎಲ್ಲಾ ಜಿಲ್ಲೆ-ತಾಲ್ಲೂಕುಗಳಲ್ಲಿ ಪ್ರವಾಸ ನಂತರ ಹೊಸ ಪಕ್ಷ ಕಟ್ಟಲು ತೀರ್ಮಾನ: ನಟ ಚೇತನ್

ರಾಜ್ಯದ ಎಲ್ಲಾ ಜಿಲ್ಲೆ-ತಾಲ್ಲೂಕುಗಳಲ್ಲಿ ಪ್ರವಾಸ ನಂತರ ಹೊಸ ಪಕ್ಷ ಕಟ್ಟಲು ತೀರ್ಮಾನ:...

“ಬೆಳಗಾವಿ ಕರ್ನಾಟಕದ ಅವಿಭಾಜ್ಯ” ಘೋಷಿಸಲು ಆಗ್ರಹಿಸಿ ಕರವೇ ಸ್ವಾಭಿಮಾನಿ ಸೇನೆಯ ಪ್ರತಿಭಟನೆ

"ಬೆಳಗಾವಿ ಕರ್ನಾಟಕದ ಅವಿಭಾಜ್ಯ" ಘೋಷಿಸಲು ಆಗ್ರಹಿಸಿ ಕರವೇ ಸ್ವಾಭಿಮಾನಿ ಸೇನೆಯ ಪ್ರತಿಭಟನೆ ಹಾವೇರಿ:...