ಹಾನಗಲ್ ಬಳಿ ಕೂಸನೂರಲ್ಲಿ ಶಿರಸಿಯ ತಾಯಿ,ಮಗನ ಭೀಕರ ಕಗ್ಗೊಲೆ

Date:

ಹಾವೇರಿ: ಮನೆ ಆಸ್ತಿ ವಿಚಾರವಾಗಿ ಶಿರಸಿಯ ತಾಯಿ,ಮಗನನ್ನು  ಕಲ್ಲು, ಮಾರಕಾಸ್ತ್ರಗಳಿಂದ ಜಜ್ಜಿ
ಭೀಕರವಾಗಿ ಕಗ್ಗೊಲೆ ಮಾಡಿರುವ ಘಟನೆ ಶುಕ್ರವಾರ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೂಸನೂರುಗ್ರಾಮದಲ್ಲಿ ನಡೆದಿದೆ.
ಕೊಲೆಯಾದವರನ್ನು
 ಪ್ರೇಮಕ್ಕ  ಬಡಿಗೇರ (55) ಹಾಗೂ ಅವಿನಾಶ  ಬಡಿಗೇರ (38)ಎಂದು ಗುರುತಿಸಲಾಗಿದೆ.
ಕೊಲೆ ಮಾಡಿದ ಆರೋಪಿಗಳನ್ನು
 ತಿರಕಯ್ಯ ಹೊಸಮಠ ಹಾಗೂ ಆತನ ಮಗ ಬಸವರಾಜ ಹೊಸಮಠ ಎಂದು ಗುರುತಿಸಲಾಗಿದೆ.
ಆಸ್ತಿ ವಿವಾದ ಕೊಲೆಗೆ ಕಾರಣವಾಯಿತೇ?: 
ಪ್ರೇಮಕ್ಕ  ಬಡಿಗೇರ,  ಹಾಗೂ ಅವಿನಾಶ  ಬಡಿಗೇರ ಕೂಸನೂರುಗ್ರಾಮದಲ್ಲಿನ ತಮ್ಮ ಮನೆಯನ್ನು 20 ವರ್ಷಗಳ ಹಿಂದೆ ತಿರಕಯ್ಯ ಹೊಸಮಠ ಹಾಗೂ ಮಗ ಬಸವರಾಜ ಹೊಸಮಠ ಎನ್ನುವವರಿಗೆ ಮಾರಾಟ ಮಾಡಿದ್ದರೆಂದು, ನಂತರದಲ್ಲಿ ಅವರು ಶಿರಸಿಯಲ್ಲಿ ನೆಲಸಿದ್ದರೆಂದು, ಆಸ್ತಿ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು ಎನ್ನಲಾಗಿದೆ.
ನ್ಯಾಯಾಲಯದ ತೀರ್ಪು ಶುಕ್ರವಾರ ಹೊರಬಂದಿದ್ದು, ಎರಡು‌ ಕುಟುಂಬಗಳ ನಡಯವೆ ಹಾನಗಲ್ ತಾಲೂಕಿನ ಅಕ್ಕಿ ಆಲೂರಲ್ಲಿ ಜಗಳ ನಡೆದಿತ್ತೆಂದು, ಕೂಸನೂರಲ್ಲಿ ಮಾತನಾಡೋಣ ಎಂದು ಹೇಳಿ ತಾಯಿ,ಮಗನನ್ನು ಗ್ರಾಮಕ್ಕೆ ಬರಲು ಹೇಳಲಾಗಿತ್ತೆಂದು ಮೂಲಗಳು ತಿಳಿಸಿವೆ.
ತಮ್ಮ ಪರವಾಗಿ ತೀರ್ಪು ಬಂದ ಹಿನ್ನೆಲೆಯಲ್ಲಿ ಪ್ರೇಮಕ್ಕ  ಬಡಿಗೇರ  ಹಾಗೂ ಅವಿನಾಶ  ಬಡಿಗೇರ ಕೂಸನೂರಿಗೆ ಬಂದು ಗ್ರಾಮದೇವತೆಗೆ ಪೂಜೆ ಸಲ್ಲಿಸಿ ‌ಮನೆಯ ಕಡೆಗೆ ಶುಕ್ರವಾರ ಹೋದ ವೇಳೆ ಮಧ್ಯಾಹ್ನ ೩ ಗಂಟೆಯ ಸುಮಾರಿಗೆ ತಿರಕಯ್ಯ ಹೊಸಮಠ ಹಾಗೂ ಮಗ ಬಸವರಾಜ ಹೊಸಮಠ ತಾಯಿ, ಮಗನನ್ನು
ಕಲ್ಲು ಹಾಗೂ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತದೇಹಗಳ‌‌ ಮುಂದೆ ಊಟ ಮಾಡಿದ ಆರೋಪಿಳು: ಕೂಸನೂರಲ್ಲಿ ತಾಯಿ,ಮಗನನ್ನು ಭೀಕರವಾಗಿ ಕೊಲೆಮಾಡಿದ್ದ ಆರೋಪಿಗಳು‌ ರಕ್ತದ ಮಡುವಿನಲ್ಲಿ ಬಿದ್ದಿದ್ದ
ಮೃತದೇಹಗಳ‌‌ ಮುಂದೆ ಕುಳಿತು ಊಟ ಮಾಡಿದ ಆರೋಪಿಗಳು ನಂತರದಲ್ಲಿ ಅಕ್ಕಿ ಆಲೂರು ಪೊಲೀಸ್ ಠಾಣೆಗೆ ಶರಣಾಗಿದ್ದಾರೆಂದು ತಿಳಿದು ಬಂದಿದೆ.
20 ವರ್ಷಗಳ ಹಿಂದೆ ಮನೆ ಮಾರಿದ್ದರು: ಕಳೆದ 20 ವರ್ಷಗಳ ಹಿಂದೆ ಮನೆಯನ್ನು ಪ್ರೇಮಕ್ಕ ಹಾಗೂ ಮಗ ಅವಿನಾಶ್ ತಿರಕಯ್ಯ ಎಂಬುವವರಿಂದ ಮುಂಗಡ ಹಣೆ ಪಡೆದ ಪ್ರಾಥಮಿಕವಾಗಿ ನೊಂದು ಮಾಡಿಕೊಟ್ಟಿದ್ದರೆಂದು,
ಆದರೆ ಕಾರಣಾಂತರಗಳಿಂದ ತಿರಕಯ್ಯ ಹಾಗೂ ಪ್ರೇಮಕ್ಕ ನಡುವೆ ಜಗಳ ಬಂದು ಮಾರಿದ್ದ ಮನೆ ಕೊಡುವುದಿಲ್ಲವೆಂದು ಎರಡು ಕುಟುಂಬಸ್ಥರು ಹಾನಗಲ್
ಕೋರ್ಟ್‌ ನಲ್ಲಿ ದಾವೆ ಹೂಡಿದ್ದರು.
ಶುಕ್ರವಾರ ಮೃತರ ಪರವಾಗಿ ಕೋರ್ಟ್ ತೀರ್ಪು ಬಂದ ಹಿನ್ನಲೆ.
ರೊಚ್ಚಿಗೆದ್ದು ಬಂದು ತಿರಕಯ್ಯ ಹಾಗೂ ಬಸವರಾಜ್ ಎಂಬುವವರು ಹೊಡೆದು ಕೊಲೆಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕೊಟ್ಟ ಮಾತು ತಪ್ಪಿ,ಇಷ್ಟು ದಿನ ಕೋರ್ಟ್ ಅಲೆಯಿಸಿದ್ದಕ್ಕೆ ದ್ವೇಷ.
ಇತ್ತ ಮನೆಯೂ ಇಲ್ಲ,ಅತ್ತ ಮುಂಗಡ ಕೊಟ್ಟ ಹಣವೂ ಇಲ್ಲ ಎಂದು ಜೋಡಿ ಕೊಲೆ ನಡೆದಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಸ್ಥಳಕ್ಕೆ ಎಸ್ಪಿ ಯಶೋಧಾ ವಂಟಗೋಡಿ ಭೇಟಿ ನೀಡಿ
ಪರಿಶೀಲನೆ‌  ನಡೆಸಿದರು.
ಆಡೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಯ ಸೇವಾ ದುರಂಧರರಿಗೆ ಗಜಾನನ ಮಿತ್ರ ಮಂಡಳಿ – ವೀರೇಶ್ ಹ್ಯಾಡ್ಲ ಬಳಗದಿಂದ ಗೌರವ ಸನ್ಮಾನ

ಹಾವೇರಿಯ ಸೇವಾ ದುರಂಧರರಿಗೆ ಗಜಾನನ ಮಿತ್ರ ಮಂಡಳಿ - ವೀರೇಶ್ ಹ್ಯಾಡ್ಲ ಬಳಗದಿಂದ ಗೌರವ ಸನ್ಮಾನ ಹಾವೇರಿ:ಸಮಾಜದಲ್ಲಿ...

“ಕರುಣ ಬಂದರ ಕಾಯೋ”………

“ಕರುಣ ಬಂದರ ಕಾಯೋ"……… ಆವ ಕಾಯಕವಾದರೂ ಸ್ವಕಾಯಕವ ಮಾಡಿಗುರು ಲಿಂಗ...

“ಕರುಣ ಬಂದರ ಕಾಯೋ………

  "ಕರುಣ ಬಂದರ ಕಾಯೋ......... ಆವ ಕಾಯಕವಾದರೂ ಸ್ವಕಾಯಕವ ಮಾಡಿಗುರು ಲಿಂಗ ಜಂಗಮದ ಮುಂದಿಟ್ಟು,...

ಹಾವೇರಿಜಿಲ್ಲೆಯಲ್ಲಿ  ೨೩೧೫ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ-ಸೂಕ್ತ ಬಂದೋಬಸ್ತ-ಎಸ್ ಪಿ ಯಶೋಧಾ

ಹಾವೇರಿಜಿಲ್ಲೆಯಲ್ಲಿ  ೨೩೧೫ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ-ಸೂಕ್ತ ಬಂದೋಬಸ್ತ-ಎಸ್ ಪಿ...