“ಅಂಗೂರತ್ವದ ಅಕ್ಷರಗಳಾಟ ಮತ್ತು ಕ್ಯಾಮೆರಾದ ನಂಟು”

Date:

“ಅಂಗೂರತ್ವದ ಅಕ್ಷರಗಳಾಟ ಮತ್ತು ಕ್ಯಾಮೆರಾದ ನಂಟು”
ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾದ ಮಾಲತೇಶರ “ಅಂಗೂರತ್ವದ ಅಕ್ಷರಗಳಾಟ ಮತ್ತು ಕ್ಯಾಮೆರಾದ ನಂಟು” ಕುರಿತು ನಮದೇವ ಕಾಗದಗಾರ ಕಂಡಂತೆ
ಒಂದು ಕಾಲದಲ್ಲಿ ಹವಾಯಿ ಚಪ್ಪಲಿ ಹಾಕೊಂಡು ಬಾಡಿಗೆ ಸೈಕಲ್‌ನ ಪೆಡೆಲ್ ತುಳಿಯುತ್ತಾ ಹಾವೇರಿ ನಗರದ ಮನೆಮನೆಗೆ ಪತ್ರಿಕೆ ಹಂಚುತ್ತಿದ್ದ ಹುಡುಗ ಈಗ ಹೆಸರಾಂತ ಪತ್ರಕರ್ತ, ವನ್ಯಜೀವಿ ಛಾಯಾಗ್ರಾಹಕ. ಬಾಲ್ಯದಿಂದಲೇ ತನ್ನ ಸುತ್ತಲಿನ ದಾರಿದ್ರ್ಯ, ಬಡತನ, ಸಂಕಟ, ಹಸಿವು, ಜಾತಿ ನಿಂದನೆ, ಅನಾಥ ಪ್ರಜ್ಞೆಯ ವೇದನೆಗಳ ನಡುವೆ ಬೆಳೆದು ಬಂದಿರುವ ಇವರು ಮೂರುವರೆದಶಕಕ್ಕೂ ಹೆಚ್ಚು ಕಾಲದಿಂದ ಪತ್ರಿಕೋಧ್ಯಮದ ನಂಟಿನಲ್ಲಿ ಹಗಲಿರುಳು ದುಡಿಯುತ್ತಿದ್ದಾರೆ. ಜೊತೆಗೆ ವನ್ಯಜೀವಿ ಛಾಯಾಗ್ರಣ, ಕವಿ ಹಾಗೂ ವೈಚಾರಿಕ ಚಿಂತಕರು. ಈ ವಿಶಿಷ್ಟ ಬಹುಮುಖಿಯಾಗಿರುವರು ಹಾವೇರಿ ನೆಲದ ಪತ್ರಕರ್ತ ಮಾಲತೇಶ ಅಂಗೂರ ಅವರ ಸಾಧನೆಗೆ ರಾಜ್ಯ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ ನೀಡಲಾಗುವ ೨೦೨೦ನೇ ಸಾಲಿನ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಯು ಹುಡುಕಿಕೊಂಡು ಬಂದಿದೆ.
ಅಂಗೂರುರವರು ಹುಟ್ಟಿನಿಂದಲೇ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡವರು. ತೀರಾ ಬಡತನದ ಅನಕ್ಷರಸ್ಥ ಕುಟುಂಬದ, ಗ್ರಾಮೀಣ ಪರಿಸರದಿಂದ ಬೆಳೆದು ಬಂದಿರುವದರಿಂದಲೋ ಏನೋ, ಬಡತನದ ಬೇಗೆಯಲ್ಲಿ ನೊಂದ ಜನರ ಹಾಗೂ ಮಹಿಳೆಯರ ದುಃಖ ದುಮ್ಮಾನ, ಕ್ರೌರ್ಯ, ಹಿಂಸೆಯ ಸೂಕ್ಮ ಸಂವೇದನೆಗಳನ್ನು, ಪರಿಸರ ಜಾಗೃತಿ, ಜೀವಸಂಕುಲ, ಪಕ್ಷಿಗಳ ಬದುಕು ಹೀಗೆ ತಮ್ಮ ಬರಹಗಳಲ್ಲಿ ಯಥಾವತ್ತಾಗಿ ಹಿಡಿದಿಟ್ಟಿದ್ದಾರೆ. ಬದುಕಿನ ಮಗ್ಗಲುಗಳ ಎಲ್ಲ ಮಜಲುಗಳು ಇವರ ಬರಹಗಳಲ್ಲಿ ಸಾಕಾರಗೊಂಡಿವೆ. ಗ್ರಾಮೀಣ ಜನರ ಬದುಕು, ಜನರ ವಿಷಾದ, ಅಸಹಾಯಕತೆ, ಗ್ರಾಮೀಣ ಮನೋರಂಜನೆ, ಇವನ್ನೆಲ್ಲಾ ಬರಹ, ಕವಿತೆ ಹಾಗೂ ಛಾಯಾಚಿತ್ರಗಳಂತಹ ವಿವಿಧ ಮಾಧ್ಯಮಗಳಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪತ್ರಕರ್ತರು ಆಧುನಿಕ ಸಮಾಜದ ಕನ್ನಡಿಯೆಂದೇ ಹೇಳಬಹುದು. ಪತ್ರಕರ್ತನು ಸ್ಥಳಿಯ ಮತ್ತು ಹೊರನಾಡಿನ ಪ್ರಸ್ತುತ ಸುದ್ದಿ-ಸನ್ನಿವೇಶಗಳನ್ನು ಸಮಾಜದ ಮುಂದೆ ಪತ್ರಿಕೋದ್ಯಮದ ಮೂಲಕ ವಿವರಿಸುತ್ತ ಹೋಗುತ್ತಾನೆ. ಅದೇ ರೀತಿ ರಾಜಕೀಯ ವ್ಯವಸ್ಥೆ, ಭೂಗತ ಜಗತ್ತಿನ ಷಡ್ಯಂತ್ರಗಳು ಇವೇ ಮೊದಲಾದ ವಿಷಯಗಳ ಬಗ್ಗೆ ಕಾಲಕಾಲಕ್ಕೆ ಜನತೆಗೆ ವರದಿ ಮಾಡುವದರ ಜೊತೆಗೇ ಒಂದು ರೀತಿಯ ಜನಾಭಿಪ್ರಾಯ ಮೂಡಿಸುವಲ್ಲಿಯೂ ತನ್ನ ಪಾತ್ರ ವಿಸ್ತರಿಸುತ್ತಾ ಹೋಗುತ್ತಾನೆ. ಈ ರೀತಿಯ ಜನಾಭಿಪ್ರಾಯದಿಂದಲೇ ಸರ್ಕಾರ ಬದಲಾಗಿದ್ದೂ ಉಂಟು. ಹಾಗಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತನನ್ನು ಸಮಾಜದ ನಾಲ್ಕನೇ ಅಂಗ ಎಂದು ಕರೆದಿದ್ದಾರೆ. ಜಾಗತೀಕರಣದ ಕಾಲವಿದು. ಸೋತವನು ಮತ್ತು ದಣಿದವನು ಬೆರಗಾಗಿ ಬದಲಾವಣೆಯತ್ತ ನೊಡುತ್ತ ನಿಲ್ಲುವ ದಿನಮಾನಗಳಲ್ಲಿ ಪತ್ರಕರ್ತನೊಬ್ಬನ ಮನಸ್ಥಿತಿ ಹೇಗಿರಬಹುದೆಂಬುದು ಉಹಿಸಲು ಅಸಾಧ್ಯ. ಹೆಚ್ಚು ರೋಚಕವೂ, ಹೆಚ್ಚು ಜನಪ್ರೀಯ, ಹೆಚ್ಚೆಚ್ಚು ಓದುಗರನ್ಬು ಹಿಡಿಯಲೇಬೇಕೆಂಬ ವ್ಯವಸ್ಥೆಯಲ್ಲಿ ಮಾಲತೇಶ ಅಂಗೂರು ತಮ್ಮ ಶಕ್ತಿ ಇತಿ ಮಿತಿಗಳನ್ನು ತಮ್ಮ ಬರಹಗಳಲ್ಲಿ ವ್ಯಕ್ತಪಡಿಸುವ ಶಕ್ತಿಯನ್ನು ದಕ್ಕಿಸಿಕೊಂಡಿದ್ದಾರೆ.
ಮಾಲತೇಶ ಅಂಗೂರು ಹುಟ್ಟಿದ್ದು ಹಾವೇರಿಯಲ್ಲಿ ೧೯೬೯ ಜುಲೈ ೩ರಂದು. ತಾಯಿ ಸೋಮವ್ವ, ತಂದೆ ಗದಿಗೆಪ್ಪ, ನಾಲ್ಕು ಮಕ್ಕಳಲ್ಲಿ ಮಾಲತೇಶ ಅಂಗೂರು ಮೂರನೇ ಮಗನಾಗಿ ಜನಿಸಿದವರು. ೬ ನೇ ವಯಸ್ಸಿನಲ್ಲಿಯೇ ಹೆತ್ತವ್ವನನ್ನು ಕಳೆದುಕೊಂಡರು. ನಂತರದ ವರ್ಷಗಳಲ್ಲಿ ತಂದೆಯನ್ನು ಕಳೆದುಕೊಂಡು ಅನಾಥನಾದರು. ಅನಾಥ ಪ್ರಜ್ಞೆಯ ನಡುವೆ ಅವ್ವ, ಅಪ್ಪನ ಪ್ರೀತಿಗೆ ಹಂಬಲಿಸುತ್ತಾ , ಬೇರೆಯವರ ಲಾಲನೆ, ಪಾಲನೆಯ ಪೋಷಣೆಯಲ್ಲಿ ಬೆಳೆದವರು ಮಾಲತೇಶರವರು. ಅನಾಥರಾದ ನಾಲ್ಕು ಮಕ್ಕಳು ಒಂದೊಂದು ಕಡೆಯ ಬಂಧುಗಳ ಮನೆ ಸೇರಿ ಒಬ್ಬರಿಗೊಬ್ಬರು ಅಗಲಿದರು. ಮಾಲತೇಶ ರವರ ಬಾಯಿಂದ ಈ ಕಥೆ ಕೇಳುತ್ತಿದ್ದರೆ ಒಂದು ಸಿನಿಮಾ ಕಥೆ ಕಣ್ಣು ಮುಂದೆ ಹಾದು ಹೋದಂತೆ ಕಾಣುತ್ತದೆ.
ನೆರೆಹೊರೆಯವರ, ಲೋಕದ ನಿಂದನೆಗಳಿಗೆ, ಜಾತಿ ವ್ಯವಸ್ಥೆಗೆ ನನ್ನ ಮಗ ದೊಡ್ಡವನಾದ ಮೇಲೆ ಉತ್ತರ ನೀಡುವನು ಎಂದಿದ್ದರಂತೆ ಮಾಲತೇಶರ ತಾಯಿ ಸೋಮವ್ವ. ಆ ಅವ್ವನ ಬೆಟ್ಟದಷ್ಟಿದ್ದ ನಿರೀಕ್ಷೆಗಳಿಗೆ ಈಗ ಉತ್ತರ ನೀಡುತ್ತಿದ್ದಾರೆ ಮಾಲತೇಶ ಅಂಗೂರವರು . “ಅವ್ವನ ಮಮತೆಯ ಮಡಿಲ್ಲಿ ಆಟವಾಡುತ್ತಾ ಬೆಳೆದ ನನಗೆ ಅವ್ವನ ಸುಟ್ಟ ರೊಟ್ಟಿಯ ಜೊತೆ ಕುದಿಸಿದ ಬೇಳೆ ಕಟ್ಟು, ಮೇಲೊಂದಿಷ್ಟು ಗುರುಳ್ಳು ಪುಡಿ, ಖಾರ ಬೆರೆಸಿ ಮೊಸರು ಸೇರಿಸಿ ಕೈತುತ್ತು ತಿನ್ನಿಸುತ್ತಿದ್ದ ಅವ್ವ ಟೈಫ್‌ರ್ಡ್ ಜ್ವರಕ್ಕೆ ಬಿದ್ದು ಹಾಸಿಗೆ ಹಿಡಿದಾಗಲೇ ಗೊತ್ತಾಗಿದ್ದು ಅವ್ವನ ಕೈ ತುತ್ತು ಮುಗಿಯಿತು” ಎಂದು ಹೇಳುವಾಗ ಮಾಲತೇಶರ ಕಣ್ಣಂಚಿನಿಂದ ಕಣ್ಣೀರು ಇಣುಕಿ ಹಾಕುತ್ತಿದ್ದವು. ಅವ್ವ, ಅಪ್ಪನನ್ನು ಕಳೆದುಕೊಂಡು ಅನಾಥರಾದಾಗ ಅವರ ಬದುಕಿನ ಮೈಲುಗಲ್ಲುಗಳಿಗೆ ನೆರವಾದವರು ಅವರ ದೊಡ್ಡವ್ವ ನೀಲಮ್ಮ ಮತ್ತು ದೊಡ್ಡಪ್ಪ ಕರಿಎಲ್ಲಪ್ಪ ಮತ್ತು ಅವರ ಮಕ್ಕಳು. ದೊಡ್ಡವರಾಗುವವರೆಗೂ ಮಾಲತೇಶರವರ ಬೇಕು ಬೇಡಗಳಿಗೆ ಸ್ಪಂದಸಿದವರು. ಅಂಗೂರರವರು ಹುಟ್ಟಿನಿಂದಲೇ ಜಾತಿಯ ಪೆಡಂಭೂತವನ್ನು ಎದುರಿಸಿದವರು. “ಪ್ರತಿಭೆಯನ್ನು ಎಂದೂ ಜಾತಿಯಿಂದ ಅಳೆಯಯಬಾರದು. ಹುಟ್ಟುವಾಗ ಇಂತದೇ ಜಾತಿಯಲ್ಲಿ ಹುಟ್ಟಬಕೆಂದು ಯಾರು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಅದೊಂದು ಲೋಕದ ನಿಯಮ. ಜನಿಸಿದ ಮೇಲೆ ಜಾತಿ ಮಾಮೂಲು. ಆದರೆ ಮಾಲತೇಶ ಅಂಗೂರ ಅವುಗಳನ್ನೆಲ್ಲ ಮೆಟ್ಟಿ ನಿಂತು ತಮ್ಮ ಪ್ರತಿಭೆಯಿಂದ ಮೇಲ್ಜಾತಿ ಎಂದು ಬೀಗುವವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ನಿಂದಕರ ಮಾತುಗಳನ್ನು ಸವಾಲಾಗಿ ಸ್ವೀಕರಿಸಿ ತಮ್ಮ ಬರವಣೆಗೆಯ ಮೂಲಕವೇ ಬಹಳಷ್ಟು ಉತ್ತರ ನೀಡುತ್ತಿದ್ದಾರೆ.
“ನಮಗೆ ನಮ್ಮ ಯಶಸ್ಸಿನ ಶಬ್ಧ ಕೇಳಬೇಕೆಂದರೆ, ಸುತ್ತಲಿನವರ ನಕಾರಾತ್ಮಕ ಧೋರಣೆಗಳಿಗೆ ಕಿವಿಕೊಡದೆ ಕುರುಡಾಗಿರುವುದು ಒಳಿತು” ಎಂದು ಎದೆ ತಟ್ಟಿಕೊಂಡು ಹೇಳುತ್ತಾರೆ ಮಾಲತೇಶರ. ಬೆಳೆದಂತೆಲ್ಲಾ ಮಾಲತೇಶರ ಒಳಗೊಬ್ಬ ಉತ್ತಮ ಬರಹಗಾರ, ಚತುರ, ಸೂಕ್ಮಮತಿ ಪತ್ರಕರ್ತ ಅವಿತಿದ್ದ. ಒಬ್ಬ ಒಳ್ಳೆಯ ನುಡಿಚಿತ್ರಗಾರನಡಗಿದ್ದ. ಎಂಥಹ ಪ್ರದೇಶದಲ್ಲೂ ವಿಷಯ ಸಂಗ್ರಹದ ಮುಲಭೂತ ಅರ್ಹತೆಯನ್ನು ಅವರಿಗೆ ದಕ್ಕಿಸಿ ಕೊಟ್ಟಿದೆ. ಅವರ ಸ್ನೇಹಪರತೆಯೂ ಬರಹಗಾರನ ಅರ್ಹತೆಯಾಗಿ ನಿಂತಿದೆ. ಹೊಸ ವಿಷಯ ಹೊಸ ರೂಪದ ಬರಹಗಳು ಅವರಿಗೆ ಇನ್ನೂ ಹೆಚ್ಚಿನ ಓದುಗ ಬಳಗವನ್ನು ಕಟ್ಟಿಕೊಟ್ಟಿದ್ದರಿಂದ ತಮ್ಮದೇ ಸಂಪಾದನೆಯಲ್ಲಿ ‘ಹಾವೇರಿ ಟೈಮ್ಸ್’ ಎನ್ನುವ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ನಂತರದಲ್ಲಿ ‘ಹಾವೇರಿ ವಾಣಿ’ ಪತ್ರಿಕೆ ಯನ್ನು ತಂದು ಯಶಸ್ವಿಯೂ ಆಗಿದ್ದರು. ಅದೇ ಸಮಯದಲ್ಲಿ ಇವರ ಬರವಣೆಗೆಯನ್ನು ಗಮನಿಸಿದ್ದ ನಟ, ರಾಜಕಾರಣಿ ಬಿ.ಸಿ ಪಾಟೀಲ್ ಅವರು ತಮ್ಮ ಮಾಲಿಕತ್ವದ “ಕೌರವ” ಪತ್ರಿಕೆಯನ್ನು ಗಂಗಾಧರ ಹಿರೇಗುತ್ತಿಯವರ ಸಂಪಾದಕತ್ವದ ಮೂಲಕ ಇವರ ಹೇಗಲಿಗಿಟ್ಟರು… ಹಲವು ವರ್ಷಗಳ ನಂತರ ಈ ಪತ್ರಿಕೆ ಬೇರೆ ಬೇರೆ ಮಾಲಿಕತ್ವದಡಿಯಲ್ಲಿ ಮುನ್ನೆಡೆಯುತ್ತಾ ಬಂದಿರುತ್ತದೆ. ಈಗ ಸಧ್ಯ ರಾಣೆಬೆನ್ನೂರಿನ ಹಿರಿಯ ಪತ್ರಕರ್ತರಾದ ಮಹಾನುಭಾವಿಮಠ ಸಹೋದದರರ ಮಾಲಿಕತ್ವದಲ್ಲಿ ಹಾವೇರಿ ಜಿಲ್ಲೆಯ ಹೆಸರಾಂತ ಪತ್ರಿಕೆಯಾಗಿ ಮುನ್ನೆಡೆಯುತ್ತಿದೆ. ಪತ್ರಿಕೊಧ್ಯಮದ ಮೌಲ್ಯಗಳನ್ನು ತಮ್ಮ ಇತಿ ಮಿತಿ ಗಳಲ್ಲಿ ಕಾಪಾಡಿಕೊಂಡು ಬಂದಿರುವ ಮಾಲತೇಶ ಅಂಗೂರ ಉಸಿರು ಪತ್ರಿಕೋಧ್ಯಮವಾಗಿದೆ. ಕೆಲವು ಸಲ ಮಾಡಿದ ಕೆಲಸಕ್ಕೆ ಪ್ರತಿಫಲ ಸಿಗದೇ ಇದ್ದರೂ ನ್ಯಾಯಯುತವಾಗಿ ಕೆಲಸ ನಿರ್ವಹಿಸಿದ್ದಾರೆ. ಆರ್ಥಿಕ ಸಂಕಷ್ಟವನ್ನು ಬಹಳಷ್ಟು ಅನುಭವಿಸಿದರು ಸ್ವಾಭಿಮಾನ ಬದುಕನ್ನು ನಡೆಸಿ ಮಾದರಿಯಾಗಿದ್ದಾರೆ. ಇದರ ನಡುವೆಯೂ ಸ್ವಂತ ಸಂಪಾದಕತ್ವದಲ್ಲಿ ಪತ್ರಿಕೆ ತರುವ ಯೋಜನೆಯಲ್ಲಿ ಮುಂದುವರೆಯುತ್ತಿದ್ದಾರೆ. ಇವರ ಗರಡಿಯಲ್ಲಿ ಬೆಳೆದ ಹಲವು ಬರಹಗಾರರು ಬದುಕಿನ ನೆಲೆ ಕಂಡುಕೊಂಡಿದ್ದಾರೆ. ಹಲವರ ಕಷ್ಟಗಳಿಗೆ ನೆರವಾಗಿದ್ದಾರೆ.
ಸಾಮಾಜಿಕ, ರಾಜಕೀಯ ಬರಹಗಳ ಜೀವಂತಿಕೆಯಾಗಲಿ, ಪ್ರಸ್ತುತೆಯಾಗಲಿ ಏನೇ ಇದ್ದರೂ ಅಂಗೂರತ್ವವನ್ನು ಬಿಡದ ಬರಹಗಳಲ್ಲಿ ಒಂದು ರೀತಿಯ ಲವಲವಿಕೆ ಇರುತ್ತದೆ. ಇಂತಹ ಪ್ರಸ್ತುತೆ ಬರವಣಿಗೆ ಇದ್ದಾಗ ಮಾತ್ರ ಓದುಗನ ಪರೀಕ್ಷೆಯಲ್ಲಿ ಲೇಖಕ ಪಾಸಾಗಲು ಸಾಧ್ಯ. ಹಾಗಾಗಿ ಇವರನ್ನು ಹತ್ತು ಹಲವು ಪ್ರಶಸ್ತಿ, ಪುರಸ್ಕಾರಗಳು ಹುಡುಕಿಕೊಂಡು ಇವರ ಮುಡಿಗೇರಿವೆ. ೨೦೧೧ ರಲ್ಲಿ ಇಂಟರ್ ನ್ಯಾಷನಲ್ ವೀರಶೈವ ಫೌಂಡೇಶನ್ ರವರು ‘ವೃತ್ತಿಶ್ಚೈತನ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದರು ನಂತರ ೨೦೧೨ ರಲ್ಲಿ ಪತ್ರಕರ್ತ ವಿ.ಎಸ್.ಕಾಶೆಟ್ಟಿ ಸ್ಮರಣಾರ್ಥ ‘ಮೂಡಣ ಪತ್ರಿಕಾ ಪುರಸ್ಕಾರ” ಕ್ಕೆ ಆಯ್ಕೆ ಮಾಡಿದಾಗ ಕೆಲವರು ವಿರೋದಿಸಿದ್ದರು. ಆದರೆ ಪ್ರಶಸ್ತಿ ನೀಡುವಲ್ಲಿ ಆಯ್ಕೆದಾರರು ತಮ್ಮ ನಿರ್ದಾರಕ್ಕೆ ಬದ್ಧರಾಗಿ ಪತ್ರಿಕಾ ಮೌಲ್ಯವನ್ನು ಎತ್ತಿ ಹಿಡಿದು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ೨೦೧೪ ರಲ್ಲಿ ನಡೆದ ಅಖಿಲ ಭಾರತ ಕನ್ನಡ ಪತ್ರಿಕಾ ಸಂಪಾದಕರ ‘ವಿಶ್ವೇಶ್ವರಯ್ಯ ಸಾಹಿತ್ಯ ರಾಜ್ಯ ಪ್ರಶಸ್ತಿ’, ೨೦೧೬-೧೭ ಸಾಲಿನ ಕರ್ನಾಟಕ ‘ಮಾಧ್ಯಮ ಅಕಾಡೆಮಿ ಪ್ರಶಸ್ತಿ’, ೨೦೧೭ ರಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಬರಗೂರು ರಾಮಚಂದ್ರಪ್ಪನರು ಗೌರವ ಸನ್ಮಾನ ಮಾಡಿದ್ದಾರೆ.. ಬೆಂಗಳೂರಿನ ಪ್ರೆಸ್‌ಕ್ಲಬ್ ಕೌನ್ಸಿಲ್‌ನ ಮಾಧ್ಯಮ ಸೇವಾರತ್ನ ಪ್ರಶಸ್ತಿ, ಇವರ “ಬಣ್ಣದ ಗರಿ” ಕೃತಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೂಡು ಇವರಿಂದ ಅತ್ಯುತ್ತಮ ಅಂಕಣ ಬರಹ ಮಾಧ್ಯಮ ಪ್ರಶಸ್ತಿ, ಸರ್. ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನದ ಹಾಗೂ ಸಂಪಾದಕರ ಸಂಘದ ಅತ್ಯುತ್ತಮ ಅಂಕಣ ಬರಹ ರಾಜ್ಯ ಪ್ರಶಸ್ತಿ, ಹಾವೇರಿ ಜಿಲ್ಲೆಯಲ್ಲಿ ಯುವತಿಯರ ಮಾರಾಟ ಎನ್ನುವ ತನಿಖಾ ವರದಿಗೆ ಕನ್ನಡ ಸಾಹಿತ್ಯ ಪರಿಷತ್ ಬಿ.ಜಿ.ಬಣಕಾರ ದತ್ತಿನಿಧಿ ಪುರಸ್ಕಾರ, ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ ರಾಜ್ಯಮಟ್ಟದ ವೈಚಾರಿಕ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಅಕ್ಕಿಆಲೂರಿನ ಜೈ ಭೀಮ ಜನಪದ ಕಲಾ ಸಂಘದ ಭೀಮ ಪುರಸ್ಕಾರ ಸಂದಿವೆ.ಇದೀಗ ೨೦೨೦ನೇ ಸಾಲಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
೨೦೧೨ ರಲ್ಲಿ ‘ಬಣ್ಣದ ಗರಿ’ ಸಂಕಲನ, ೨೦೨೦ ರಲ್ಲಿ ‘ಹಾವೇರಿಯಾವ’ ಅಂಕಣ ಬರಹಗಳ ಸಂಕಲನ, ೨೦೨೩ ರಲ್ಲಿ “ಕಾಡು-ಮೇಡು” “೨೦೨೪ರಲ್ಲಿ ರಂಗಕೋಗಿಲೆ ಜುಬೇದಾಬಾಯಿ ಸವಣೂರು” ಕೃತಿಗಳನ್ನು ಹೊರತಂದು ಓದುಗರಿಗೆ ಓದುವಿನ ಸವಿ ಉಣಬಡಿಸಿದ್ದಾರೆ . ಇವರು ತಮ್ಮ ಶ್ರಮಿಕ ಪ್ರಕಾಶನದ ಮೂಲಕ ಲೇಖಕಿ ಲತಾ ಹಳಕೊಪ್ಪ ಅವರ ಆತ್ಮಕತೆ “ಅಂತರಾಳ”, ಬಿ.ಶ್ರೀನಿವಾಸ ಅವರ “ಸಾಮಾಜಿಲ ನ್ಯಾಯದ ಸಾಕ್ಷಿಪ್ರಜ್ಞೆ ಎಲ್.ಜಿ.ಹಾವನೂರ” ಎನ್ನುವ ಪುಸ್ತಕ ಪ್ರಕಟಿಸಿದ್ದಾರೆ. ಇವರು ವನ್ಯಜೀವಿಗಳ ಬಗ್ಗೆ ದಾಖಲಿಸಿರುವ ಬರಹ ಹಾಗೂ ಛಾಯಾಚಿತ್ರಗಳು ಸಾವಿರಾರು. ಇವರ “ಕಾಡು-ಮೇಡು” ಕೃತಿಯಲ್ಲಿ ಇವರ ಅನನ್ಯ ಪರಿಸರ ಕಾಳಜಿ ಅನಾವರಣಗೊಂಡಿದೆ. “ಕಾಡು-ಮೇಡು” ಕೃತಿ ಕನ್ನಡನಾಡಿನ ಪರಿಸರ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಯಾಗಿದೆ. ಮಾಲತೇಶ ಅಂಗೂರ ಅವರು ಕಳೆದ ೧೮ ವರ್ಷಗಳಿಂದ ಕೌರವ ದಿನ ಪತ್ರಿಕೆಯಲ್ಲಿ ಮುಖ್ಯವರದಿಗಾರನಾಗಿ ಕಾರ್ಯನಿರ್ವಹಣೆ, ಪ್ರವೃತ್ತಿಯಿಂದ ಅಂಕಣ ಬರಹ, ಕವಿತೆ, ಕಥೆಗಳ ರಚನೆ, ವನ್ಯಜೀವಿಗಳ ಛಾಯಾ ಗ್ರಹಣ, ಯೋಗಾಸನ, ಪ್ರವಾಸದಲ್ಲಿ ಆಸಕ್ತಿ ಹೊಂದಿದ್ದಾರೆ. ಪತ್ರಿಕಾಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾಲತೇಶ ಅಂಗೂರ ಅವರು ಹೆಸರು ಈ ಭಾಗದಲ್ಲಿ ಚಿರಪರಿಚಿತ. ವನ್ಯಜೀವಿ ಸಂರಕ್ಷಣೆ ಹಾಗೂ ಅವುಗಳ ಬಗ್ಗೆ ಅಧ್ಯಯನ ಮಾಡಿರುವ ಅವರಿಗೆ ವನ್ಯಜೀವಿಗಳ ಬಗ್ಗೆ ಇರುವ ತಿಳುವಳಿಕೆ ಅಪಾರವಾದುದು. ಹಿತ ಭಾಷಿ. ಮಿತ ಭಾಷಿ. ಅರ್ಥಪೂರ್ಣ ಮಾತು. ಮೌನ ಅವರ ಗುಣ. ಅವರ ಪರಿಸರ ಪ್ರೀತಿ-ಕಾಳಜಿ ಅನನ್ಯವಾದುದು.
ಬರೆಯುವ ಕಷ್ಟ ಏನೆಂಬುದು ಬರಹಗಾರನಿಗೆ? ಗೊತ್ತಿದೆ. ಅದನ್ನು ಯಾವುದೇ ಕಾರಣಕ್ಕೆ ಓದುಗನಿಗೆ ದಾಟಿಸಬಾರದು. ಯಾಕೆಂದರೆ ಅವನಿಗೆ ಓದುವ ಸುಖವಷ್ಟೇ ಮುಖ್ಯ. ಅಂಥ ಸುಖವನ್ನು ಇವರ ಬರಹಗಳಲ್ಲಿ ಕಾಣಬಹುದು. ಸಮಸ್ಯೆಗಳಿರುವ ಸ್ಥಳಕ್ಕೆ ಹೋಗಿ ವರದಿ ಮಾಡುವುದೆಂದರೆ ಸುಲಭವಲ್ಲ. ಅಲ್ಲಿ ಎಲ್ಲವೂ ಹೊಸದಾಗಿ ಕಾಣುತ್ತಿರುತ್ತವೆ. ಎಲ್ಲವೂ ಸೋಜಿಗ ಹಾಗೂ ವಿಚಿತ್ರವಾಗಿರುತ್ತವೆ. ಅವುಗಳನ್ನು ಬರವಣಿಗೆಗೆ ಇಳಿಸುವಾಗ ಉದ್ಗಾರಗಳಷ್ಟೇ ಸಾಕಾಗುವುದಿಲ್ಲ. ವಸ್ತುವಿನ ಆಳಕ್ಕೆ ಇಳಿಯಬೇಕಾಗುತ್ತದೆ. ಕಾರಣಗಳನ್ನು ಹುಡುಕಬೇಕಾಗುತ್ತದೆ. ಆಯಾ ಪ್ರದೇಶದ ಇತಿಹಾಸ, ಸಾಮಾಜಿಕ ಸ್ಥಿತಿಗತಿ, ಜನರ ಮನೋಸ್ಥಿತಿ, ಅಲ್ಲಿಯ ಸಮಸ್ಯೆಗಳು, ಆಚಾರ ವಿಚಾರ ಇವೆಲ್ಲವನ್ನೂ ಗಮನಿಸಬೇಕಾಗುತ್ತದೆ. ಈ ಕೆಲಸವನ್ನು ಮಾಲತೇಶ ಅಂಗೂರರವರು ನೀಟಾಗಿ ಮಾಡುತ್ತಿದ್ದಾರೆ. ಸದ್ಯ ಮಾಲತೇಶ ಅಂಗೂರ ಸ್ಥಳಿಯ ಕೌರವ ದಿನ ಪತ್ರಿಕೆ ಹಾಗೂ ಕರಾವಳಿ ಮುಂಜಾವು ದಿನಪತ್ರಿಕೆಗಳಿಗೆ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾವೇರಿ ನಗರದಲ್ಲಿ ಪತ್ನಿ ಲಕ್ಷಿ?ಮ, ಪುತ್ರಿ ರೇಣುಕಾ ಮತ್ತು ಪುತ್ರ ಬಸವರಾಜ ಜೊತೆ ನೆಮ್ಮದಿಯ ಬದುಕಿನೊಂದಿಗೆ, ವನ್ಯ ಛಾಯಾಗ್ರಹಣ ಮತ್ತು ಪತ್ರಿಕೋಧ್ಯಮದ ನಂಟಿನೊಂದಿಗೆ ಜೀವನ ಸಾಗಿಸುತ್ತಿದ್ದಾರೆ.

– ನಾಮದೇವ ಕಾಗದಗಾರ
ಕಲಾವಿದ, ಬರಹಗಾರ, ವನ್ಯಜೀವಿ ಛಾಯಾಗ್ರಾಹಕ
ಅಶೋಕ ನಗರ, ೩ನ# ಕ್ರಾಸ್, ರಾಣೇಬೆನ್ನೂರು-೫೮೧೧೧೫.
೯೯೮೦೪೩೦೦೦೬

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಗೆ 2 “ಮಕ್ಕಳ ಚಂದಿರ ಪ್ರಶಸ್ತಿ”

ಕಾಡುಮೇಡು ಹಾಗೂ ಬೆರಗು ಕೃತಿಗಳಿಗೆ 2023ನೇ ಸಾಲಿನ ಪ್ರಶಸ್ತಿ ಪ್ರಕಟ ಹಾವೇರಿಗೆ 2...

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಸದೃಢವಾದ ದೇಹಕ್ಕೆ ಸದೃಢವಾದ...