
ಅಡುಗೆ ಅನಿಲದ ಬಿಕ್ಕಟ್ಟಿಗೆ ಸೌರ ಉಷ್ಣಶಕ್ತಿಯೇ ಪರಿಹಾರ:
ಡಾ. ಸುರೇಶ ಜಂಗಮಶೆಟ್ಟಿ
ಹಾವೇರಿ : ಪ್ರಸ್ತುತ ಎದುರಾಗಿರುವ ಇಂಧನ ಬಿಕ್ಕಟ್ಟಿನ ಸಂದರ್ಭದಲ್ಲಿ ಸೌರ ಒಲೆಗಳು ಅತ್ಯಂತ ಉಪಯುಕ್ತವೂ ಬದಲಾವಣೆಯನ್ನು ತರಬಲ್ಲ ಸಾಧನಗಳಾಗಿವೆ ಎಂದು ಹಾವೇರಿ ವಿಶ್ವ ವಿದ್ಯಾಲಯದ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಅಭಿಪ್ರಾಯ ಪಡುತ್ತಾರೆ.
ಇಲ್ಲಿಯ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ಜರುಗಿದ ದಿ. ಜಿ.ಎಸ್. ಜಾಬೀನ ಅವರ ಶತಮಾನೋತ್ಸವ ಸಂದರ್ಭದಲ್ಲಿ ಆಯ್ದ ಕೆಲವು ಸಾಮಾಜಿಕ ಚಿಂತಕರ ನಡುವೆ ಸಮಾಲೋಚನೆ ಮಾಡುತ್ತ ತಮ್ಮ ಹಲವು ವಿಚಾರಗಳನ್ನು ಹಂಚಿಕೊಂಡರು.
ಐಐಟಿ ಕರಗಪೂರ ಮತ್ತು ಫುಲ್ ಬ್ರೈಟ ಹಳೆಯ ಸಂಶೋದನೆಯ ವಿದ್ಯಾರ್ಥಿಯಾಗಿರುವ ಜಂಗಮಶೆಟ್ಟಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ತೈಲ ಮಾರುಕಟ್ಟೆಯನ್ನು ಅಸ್ಥವ್ಯಸ್ಥಗೊಳಿಸುತ್ತಿವೆ. ಇಂದಿನ ಸಂಕಷ್ಟದ ಕಾಲದಲ್ಲಿ ಭಾರತವು ತನ್ನ ಶೇಕಡಾ ೯೦ ರಷ್ಟು ಎಲ.ಪಿ.ಜಿ ಅಡುಗೆ ಅನಿಲವನ್ನು ತನ್ನ ಅಗತ್ಯಕ್ಕಾಗಿ ಆಮದಿನ ಮೇಲೆ ಅವಲಂಬಿತವಾಗಿದೆ.
ಬೆಲೆ ಏರಿಕೆ ಮತ್ತು ಇಂಧನ ಕೊರೆತಯ ಬಿಸಿ ಮೊದಲು ತಟ್ಟುತ್ತಿರುವುದು ಗ್ರಾಮೀಣ ಭಾರತದ ಕುಟುಂಬಗಳಿಗೆ. ಈ ಸಂದರ್ಭದಲ್ಲ ನಾವು ಆಕಾಶದತ್ತ ನೋಡಬೇಕಾಗಿದೆ. ಸುಮಾರು ಮೂರು ಸಾವಿರ ಗಂಟೆಗಳ ಕಾಲ ಸುರಿಯುವ ಸೂರ್ಯನ ಬೆಳಕು ಮಾತ್ರ ಇಂಧನ ಸ್ವಾತಂತ್ರ್ಯ ನೀಡಬಲ್ಲದು. ಗ್ರಾಮೀಣ ಭಾರತಕ್ಕೆ ಸೌರಉಷ್ಣ ಸಾಧನಗಳು ಕೇವಲ ಪರ್ಯಾಯತ ಮಾತ್ರವಲ್ಲ, ಆರ್ಥಿಕ ಅನಿವಾರ್ಯತೆಯೂ ಆಗಿದೆ ಎಂದು ಡಾ. ಜಂಗಮಶೆಟ್ಟಿ ಅಭಿಪ್ರಾಯ ಪಡುತ್ತಾರೆ.
ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಸೌರ ಒಲೆಗಳು ಸಾಧನಗಳಾಗಿವೆ. ಪರಿಸರ ಸ್ನೇಹಿ ಮತ್ತು ಆರ್ಥಿಕ ಲಾಭದಾಯಕವಾಗಿದ್ದು, ಸೂರ್ಯ ಶಾಖವನ್ನು ಬಳಸಿಕೊಳ್ಳುವ ಕಲೆ ನಾವೆಲ್ಲ ಬೆಳಸಿಕೊಳ್ಳಬೇಕು. ಪಳೆಯುಳಿಕೆ ಇಂಧನಗಳ ( ಈಔSSIಐ ಈUಇಐS ) ಮೂಲವಾಗಿ ಬಳಸಿಕೊಳ್ಳಬೇಕು. ಇಂಗಾಲದ ಹೊರಸೂಸುವಿಕೆಯನ್ನೂ ಕಡಿಮೆ ಮಾಡಬಹುದು.
ಇದಕ್ಕಾಗಿ ಬಾಕ್ಸ್ ಮಾದರಿಯ ಸೌರ ಒಲೆ ಅತ್ಯಂತ ಸರಳ ಮತ್ತು ನಂಬಿಗಸ್ಥ ಸಾಧನ. ಇದು ಅಕ್ಕಿ, ಬೇಳೆ ಮತ್ತು ತರಕಾರಿಗಳನ್ನು ನಿಧಾನವಾಗಿ ಬೇಯಿಸಲು ಸೂಕ್ತವಾಗಿದೆ. ಈ ವಿಧಾನದಲ್ಲಿ ಆಹಾರದ ಪೌಷ್ಠಿಕಾಂಶಗಳು ಶೇ ೧೦೦ ರಷ್ಟು ಸಂರಕ್ಷಿಸಲ್ಪಡುತ್ತವೆ. ಪ್ಯಾರಾ ಬೋಲಿಕ್ ಡಿಶ್ಕುಕ್ಕರ್, ಮನೆಯೊಳಗಿನ ಸೌರ ಅಡುಗೆ ವ್ಯವಸ್ಥೆ ಬಳಸಿಕೊಳ್ಳಬಹುದಾಗಿದೆ ಎಂದೂ ಜಂಗಮಶೆಟ್ಟಿ ಹೇಳುತ್ತಾರೆ.
ಪಿ.ಎಮ್ ಸೂಘರ್ ಯೋಜನೆ ಮತ್ತು ರಾಷ್ಟ್ರೀಯ ಜೈವಿಕ ಇಂದನ ಕಾರ್ಯಕ್ರಮದಲ್ಲಿ ಸರಕಾರವು ಸೌರ ಅಡಟವಳಿಕೆಗೆ ಹೆಚ್ಚಿನ ಸಬ್ಸಿಡಿ ನೀಡುತ್ತಿದ್ದು, ಶಾಲೆಗಳಲ್ಲಿ ಬಿಸಿ ಊಟ ಮತ್ತು ಮಠ ಮಂದಿರಗಳ ಸಮುದಾಯ ಅಡುಗೆ ಮಂದಿರಗಳಲ್ಲಿ ಈ ಸೌರ ಉಷ್ಣ ವ್ಯವಸ್ಥೆ ಯಶಸ್ವಿಯಾಗಿದೆ ಎಂದು ಡಾ. ಸುರೇಶ ಜಂಗಮಶೆಟ್ಟಿ ಹೇಳಿದರು.

