
“ಆತ್ಮ ಸಂತೋಷದಿಂದ ಸರ್ಕಾರಿ ಕೆಲಸ ನಿರ್ವಹಿಸಿರುವೆ”
ಸೇವಾ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಮುನಿಶ್ವರ ಚೂರಿ ಹೇಳಿಕೆ
ಹಾವೇರಿ:ತಮ್ಮ ವೃತ್ತಿ ಹಾಗೂ ಪ್ರವೃತ್ತಿಯಲ್ಲಿ ಪ್ರಮಾಣಿಕತೆಯನ್ನು ರೂಡಿಸಿಕೊಂಡು ಯಶಸ್ವಿಯಾಗಿ ನಿವೃತ್ತಿಯಾದ ಮುನಿಶ್ವರ ಚೂರಿ ಅವರ ನಿವೃತ್ತಿಯ ಬದುಕು ಹಸನಾಗಲಿ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಹೇಳಿದರು.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ವತಿಯಿಂದ ಮುನಿಶ್ವರ ಚೂರಿ ಅವರಿಗೆ ಗೌರವಿಸಿ ಸನ್ಮಾನಿಸಿ ಅವರು ಮಾತನಾಡಿದರು.
ಮುನಿಶ್ವರ ಚೂರಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಪರಾಧಿಗಳ ಪರವೀಕ್ಷಣಾ ಅಧಿನಿಯಮ ಇಲ್ಲಿ ಪರವೀಕ್ಷಣಾಧಿಕಾರಿಗಳಾಗಿ ಕಾರ್ಯನಿರ್ವಹಣೆ ಮಾಡಿದ್ದು, ತಮ್ಮಲ್ಲಿ ಬಂದತಹ ಜನರಿಗೆ ಉತ್ತಮವಾಗಿ ಸ್ಪಂದಿಸಿ,ಉತ್ತಮ ಸೇವೆ ಮಾಡಿದ್ದಾರೆ.ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ನಿರಂತರವಾಗಿ ನೌಕರರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ.ಯಾವಾಗಲೂ ಕ್ರಿಯಾತ್ಮಕವಾಗಿ ಚಿಂತನೆ ಮಾಡುತ್ತಾ ಎಲ್ಲರೊಂದಿಗೆ ಸಹಕಾರ ಮನೋಭಾವನೆ ಹೊಂದಿದ್ದಾರೆ. ಮುನಿಶ್ವರ ಚೂರಿ ಅವರಿಗೆ ದೇವರು ಆರೋಗ್ಯ ಆಯುಷ್ಯ ನೀಡಿ ನಿವೃತ್ತಿಯ ಬದುಕು ಹಸನಾಗಲಿ ಎಂದು ಉಡಚಪ್ಪ ಮಾಳಗಿ ಶುಭ ಕೋರಿದರು.
ನಿವೃತ್ತಿಯಾದ ಮುನಿಶ್ವರ ಚೂರಿ ಮಾತನಾಡಿ , ನಮಗೆ ಅನ್ನ ನೀಡಿದ ಸರ್ಕಾರಿ ನೌಕರಿಯನ್ನು ಗೌರವ ಪೂರ್ವಕವಾಗಿ ಮಾಡಿದ್ದೇನೆ ಎಂಬ ಆತ್ಮ ಸಂತೋಷವಿದೆ.ಸಹಕಾರ ನೀಡಿದ ಸರ್ವರಿಗೂ ಧನ್ಯವಾದಗಳು.ಈ ದಿನ ನನ್ನನ್ನು ಹಾಗೂ ಧರ್ಮಪತ್ನಿಯನ್ನು ಗೌರವಿಸಿ ಸನ್ಮಾನಿಸಿದ್ದು,ನಿಮಗೆ ಅಬಾರಿಯಾಗಿದ್ದೇವೆ ಎಂದರು.
ನಿವೃತ್ತಿಯಾದ ಮುನಿಶ್ವರ ಚೂರಿ ಅವರ ಧರ್ಮಪತ್ನಿ ಶ್ರೀಮತಿ ಮಂಜುಳಾ ಚೂರಿ ಅವರನ್ನು ವಿವಿಧ ಸಂಘ ಸಂಸ್ಥೆ,ಗಣ್ಯರು,ಅಭಿಮಾನಿಗಳು ಗೌರವಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಮಲ್ಲೇಶ ಕರಿಗಾರ, ಕಾರ್ಯದರ್ಶಿ ಜಿ.ಎಸ್. ಪಾಟೀಲ, ಖಜಾಂಚಿ ದಾವಲಸಾಬ ಕಮಗಾರ, ಉದಯ ಕುರಡೇಕರ, ಶೇಖಪ್ಪ ಕಲ್ಲಮ್ಮನವರ, ಪಿ.ಎಸ್ಪ್.ಪಾಟೀಲ, ಸಿ.ಜಿ.ಬ್ಯಾಡಗಿ, ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷ ಮಂಜಪ್ಪ ಮರೋಳ, ಮುಖಂಡರಾದ ನಾಗರಾಜ ಮಳಗಿ, ಮಾಲತೇಶ ಯಲ್ಲಾಪುರ, ಅಶೋಕ ಮರೆಣ್ಣನವರ, ಗುರುನಾಥ ದಾವಣ್ಣಕೇರ, ದುರಗೇಶ ಮೇಗಲಮನಿ, ಎಸ್.ಎಚ್.ಕಳ್ಳಿಮನಿ, ಡಿ,ಹೆಚ್ ವಾಲ್ಮೀಕಿ,ಕೃಷ್ಣ ಕರ್ಜಗಿ, ಬಸವಣ್ಣೆಪ್ಪ ಅಳ್ಳಳ್ಳಿ, ಶ್ರೀಮತಿ ಅಂಜನಾದೇವಿ ಉಡಚಪ್ಪ ಮಾಳಗಿ, ಶ್ರೀಮತಿ ಮಂಜುಳಾ ಅಶೋಕ ಮರೆಣ್ಣನವರ,ಶ್ರೀಮತಿ ಲತಾ ಶೇಖರ ಕಳ್ಳಿಮನಿ, ಶಿವಕುಮಾರ ತಳವಾರ,ಪೃಥ್ವಿ ಹಾಗೂ ಗಗನಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

