ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

Date:

ಹಾವೇರಿ: ಡೆಡ್ಲಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾದ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರವು ಏಪ್ರಿಲ್ ೧೦ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಜಿಲ್ಲೆಯಲ್ಲಿರುವ ಸಿನಿಮಾ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾಂಗ್ ಆಫ್ ಯುಕೆ(ಉತ್ತರ ಕರ್ನಾಟಕ) ಚಿತ್ರವು ಭೀಮೆಯ ಮಡಿಲಲ್ಲಿ ಎಂಬ ಸಬ್ ಟೈಟಲ್‌ನ್ನು ಒಳಗೊಂಡಿದ್ದು, ನೈಜ ಘಟನಾಧಾರಿತ ಕಥೆಯಾಗಿದೆ. ಉತ್ತರ ಕರ್ನಾಟಕದ ಕಪ್ಪು ಮಣ್ಣಿನಲ್ಲಿ ಈ ಚಿತ್ರದ ಚಿತ್ರೀಕರಣವನ್ನು ಮಾಡಲಾಗಿದೆ. ಬಾಗಲಕೋಟೆ, ಹೆರಕಲ್, ಶಿರೂರು, ಹುನಗುಂದ, ಇಳಕಲ್, ಅಮಿನಗಢ, ಬೆಂಗಳೂರು ಸೇರಿದಂತೆ ವಿವಿಧೆಡೆ ಚಿತ್ರೀಕರಿಸಲಾಗಿದೆ. ಉತ್ತರ ಕರ್ನಾಟಕದ ೫೦ಕ್ಕೂ ಹೆಚ್ಚು ಹೊಸ ಕಲಾವಿದರು, ರಂಗಭೂಮಿ ಕಲಾವಿದರು ನಟನೆ ಮಾಡಿರುವುದು ವಿಶೇಷವಾಗಿದೆ. ಸಂತ ಶಿಶುನಾಳ ಶರೀಫರ ನಾಲ್ಕು ಗೀತೆಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ರಕ್ತಕ್ಕೆ ರಕ್ತವೇ ಮಜ್ಜನ, ಜಿದ್ದು, ಒಬ್ಬರಿಂದ ಒಬ್ಬರಿಗೆ ಹೇಗೆ ವರ್ಗಾಯಿಸಿಕೊಂಡು ಹೊಗುತ್ತದೆ ಎಂಬುದೇ ಈ ಚಿತ್ರದ ಆಸಕ್ತಿದಾಯಕ ವಿಷಯವಾಗಿದೆ. ಚಿತ್ರ ಹೊಸ ಅಧ್ಯಾಯವನ್ನು ಸೃಷ್ಟಿ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದರು.
ತಾರಾಗಣದಲ್ಲಿ ಒರಟ ಪ್ರಶಾಂತ್, ಕಿಂಗ್ ಮುನಿ, ಸೋನು ಉಪಾಧ್ಯ, ಪೃಥ್ವಿ ಸುಬ್ಬಯ್ಯ, ಕೆ.ಆರ್ ಅಮೋಘ, ಸತ್ಯ, ಕೋಟೆ ಪ್ರಭಾಕರ, ಬಿ.ನವೀನ ಕೃಷ್ಣ. ಜೋತಿಷ್ ಶೆಟ್ಟಿ, ಪದ್ಮವಾಸಂತಿ, ಉಗ್ರಂ ರೆಡ್ಡಿ, ವಿಕಾಸ ಮದಕರಿ, ಕಿರಣ, ದಿಲ್ಲನ್ ಚೆಂಗಪ್ಪ ಗಜೇಂದ್ರಗಡ, ಮಹಾಂತೇಶ ಹಳ್ಳೂರ, ಅಮೃತ್ ಹಿರಣ್ಯ, ಗುರುರಾಜ ಗೌಡ, ನಂಜು ಸಿದ್ದಪ್ಪ, ರಮೇಶ ಮದಗುಂದ, ಸಕ್ಕರೆನಾಡು ಉಮೇಶ್ ಠಂಕಸಾಲಿ ಅಲ್ಲದೆ ಉತ್ತರ ಕರ್ನಾಟಕದ ಸ್ಥಳೀಯ ಕಲಾವಿದರನ್ನೂ ಇದರಲ್ಲಿ ಬಳಸಿಕೊಳ್ಳಲಾಗಿದೆ ಎಂದರು.
ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಆರ್.ಗಿರಿ, ಸಂಭಾಷಣೆ ಎಂ.ಎಸ್.ರಮೇಶ, ಸಂಗೀತ ಸುಕುಮಾರ, ಸಂಕಲನ ಎಲ್.ಎನ್.ರೆಡ್ಡಿ, ಸಾಹಸ ಥ್ರಿಲ್ಲರ್ ಮಂಜು, ಪ್ರಸಾಧನ ರಾಜೇಶ್, ವಸ್ತ್ರವಿನ್ಯಾಸ ಪುಟ್ಟರಾಜು, ಡಬ್ಬಿಂಗ್ ಆನಂದ, ಎಫೆಕ್ಟ್ ಸೇತು, ಪಿಆರ್‌ಓ ನಾಗೇಂದ್ರ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ, ಸಹಾಯಕ ನಿರ್ದೇಶನ ರಾವಣ ಅವರದ್ದು ಇದೆ. ಚಿತ್ರದ ಕಥೆ ಬಹಳ ಆಸಕ್ತಿದಾಯಕವಾಗಿದ್ದು, ಕಲಾ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹ ಸಂಯೋಜಕ ಎಂ.ಎಸ್ ರಮೇಶ, ನಟ ಒರಟ ಪ್ರಶಾಂತ ಮಾತನಾಡಿದರು. ಸಂಕಲನಕಾರ ಲಕ್ಷ್ಮೀನಾರಾಯಣ ರೆಡ್ಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಹಾವೇರಿ :  ಏಪ್ರಿಲ್ ೧ರಿಂದ ೧೫ರವರೆಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ: ಡಿಸಿ ಡಾ. ವಿಜಯಮಾಹಾಂತೇಶ್ 

ಹಾವೇರಿ :  ಏಪ್ರಿಲ್ ೧ರಿಂದ ೧೫ರವರೆಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ...

ಹಾವೇರಿಯ ಶಿವಜ್ಯೋತಿ ಆಸ್ಪತ್ರೆಯ ಒಳಗಡೆ ನುಗ್ಗಿದ ಕಾರು -ಅಪಾಯದಿಂದ ಪಾರು!

ಹಾವೇರಿಯ ಶಿವಜ್ಯೋತಿ ಆಸ್ಪತ್ರೆಯ ಒಳಗಡೆ ನುಗ್ಗಿದ ಕಾರು -ಅಪಾಯದಿಂದ ಪಾರು!  ಹಾವೇರಿ :...