
ಒಳ ಮೀಸಲು ಜಾರಿಗೆ ಅಲೆಮಾರಿಗಳ ಆಗ್ರಹ
ಹಾವೇರಿ: ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಅಲೆಮಾರಿಗಳ ಪಾಲಿಗೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯು ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಬಲೀಕರಣವಾಗಲು ವರವಾಗುತ್ತದೆ. ರಾಜ್ಯ ಸರ್ಕಾರ ಕೂಡಲೆ ಸದಾಶಿ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರಸರ್ಕಾರಕ್ಕೆ ಶಿಪಾರಸು ಮಾಡುವಂತೆ ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾದ ಹಾವೇರಿ ಜಿಲ್ಲಾ ಅಧ್ಯಕ್ಷ ಶೆಟ್ಟಿ ವಿಭೂತಿ ಜಿಲ್ಲಾಧಿಕಾರಿ ರಘುನಂ<ದನ ಮೂರ್ತಿಅವರ ಮೂಲಕ ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಅವರಿಗೆ ಮನವಿ ಅರ್ಪಿಸಿ ಒತ್ತಾಯಿಸಿದ್ದಾರೆ.
ಸದಾಶಿವ ಆಯೋಗದ ವರದಿಯಲ್ಲಿ ಅಸ್ಪೃಶ್ಯ ಅಲೆಮಾರಿ ಸಮುದಾಯವನ್ನು ನಾಲ್ಕನೇ ವರ್ಗದಲ್ಲಿ ಗುರುತಿಸಲ್ಪಟ್ಟಿದೆ. ನಮಗೆ ಒಂದು ಪರ್ಸೆಂಟ್ ಒಳ ಮೀಸಲಾತಿಯನ್ನು ಪಡೆಯಲು ಸಹಾಯವಾಗುವಂತೆ ಆಯೋಗ ಶಿಫಾರಸ್ಸು ಮಾಡಿದ್ದಲ್ಲದೇ ಈವರದಿ ಜಾರಿ ಆದರೆ ನಮ್ಮ ಅಲೆಮಾರಿಗಳ ಬದುಕಿಗೆ ಒಂದು ಅರ್ಥ ಸಿಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರವು ಕೂಡಲೇ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.ಈಸಂದರ್ಭದಲ್ಲಿ ಸುಭಾಸ್ ಚವ್ಹಾಣ, ಸಣ್ಣಹುಸೇನಿ ಒಂಟೆತ್ತಿನವರ ಇದ್ದರು.

