ಕೀಚುಗನ ಭರ್ಜರಿ ಬೇಟೆ…………..

Date:

 ಕೀಚುಗನ ಭರ್ಜರಿ ಬೇಟೆ……………….
ಮಳೆಯ ಅಬ್ಬರ ಕೊಂಚ ಕಡಿಮೆಯಾಗಿ ಒಂದು ತಿಂಗಳು ನಂತರ ಸೂರ್ಯನ (ಪೂರ್ಣ ಪ್ರಮಾಣದಲ್ಲಿ) ದರ್ಶನದಿಂದ (ಸೆ.೧೦-೨೦೨೫) ಮೈ-ಮನ ಉಲ್ಲಾಸ ಗೊಂಡು ನಿಸರ್ಗದ ವತಾವರಣ ಬದಲಾದಂತೆ ಕಂಡಿತು. ಬಿಸಿಲಿಗೆ ಮೈ ಒಡ್ಡಿದ ಗಿಡ-ಮರಗಳಲ್ಲಿ ಒಂದು ರೀತಿಯ ಹೊಸತನ ಕಾಣತೊಡಗಿತ್ತು. ಮಳೆಯ ಕಾರಣಕ್ಕೆ ಮೂರು ತಿಂಗಳು ಮೂಲೆ ಸೇರಿದ್ದ ಕ್ಯಾಮರಾ ಸ್ಥಿತಿ ಏನಾಗಿದಿಯೋ?(ಮಳೆಗಾಲದಲ್ಲಿ ಕ್ಯಾಮರಾಗಳನ್ನು ಉಪಯೋಗಿಸಿದ್ದರೆ ಲೈನ್ಸ್‌ಗಳಿಗೆ ಫಂಗಸ್ ಬರುವುದು ಸಾಮಾನ್ಯ!) ಎಂದು ಆಲೋಚನೆಯಲ್ಲಿ ಕ್ಯಾಮರಾ ನೋಡಿದೆ, ನನ್ನ ಅನುಮಾನ ನಿಜವಾಯಿತು. ಕ್ಯಾಮರಾ ಲೈನ್ಸ್‌ಗೆ ನಿಧಾನವಾಗಿ ಫಂಗಸ್ ಆವರಿಸುತ್ತಿರುವುದು ಕಂಡಿತು.
ಬ್ಯಾಟರಿ ಚಾರ್ಜಮಾಡಿಕೊಂಡು ಕ್ಯಾಮರಾ ಬ್ಯಾಗನ್ನು ಹೇಗಲಿಗೇರಿಸಿಕೊಂಡು ಕೊಟ…. ಕೊಟ… ಎನ್ನುವ ಸದ್ದಿನೊಂದಿಗೆ ನನ್ನ ಬೈಕ್  ಹಾವೇರಿಯ ಹೆಗ್ಗೆರೆಕೆರೆ ಪರಿಸರ ಪ್ರವೇಶಿಸಿತು. ಎಂದಿನಂತೆ ಈಜುಪಟುಗಳು ಜೋರಾಗಿ ಕಿರುಚಾಡುತ್ತಾ ಈಜುತ್ತಿರುವುದು ಕಂಡಿತು. ಕೆಲವರೋ ಹೋ ಎಂದು ನನ್ನ ಕಡೆಗೆ ಕೈಬಿಸಿದರು. ಹಾಗೇ ಕೆರೆಯ ಪರಿಸರದಲ್ಲಿ ಕಣ್ಣಾಡಿಸಿದಾಗ ಯಾವುದೇ ಪಕ್ಷಿಗಳು ಗೋಚರಿಸಲಿಲ್ಲ!. ದೂರ ದೃಷ್ಟಿ ಕಡಿಮೆಯಾಗಿರುವ ಕಾರಣಕ್ಕೋ ಏನೋ ನನ್ನ ಕಣ್ಣಿಗೆ ಪಕ್ಷಿಗಳ ಕಾಣಲಿಲ್ಲವೋ ಗೊತ್ತಿಲ್ಲ!. ಹಾಗೇ ಕೆರೆಯ ಇನ್ನೊಂದು ಬದಿ ತೆರಳಿದಾಗ ಕೆಲವು ಪಕ್ಷಿಗಳ ಕಂಡುವು.
ಮೈನಾ ಗಾತ್ರದ ಬಿಳಿ ಮತ್ತು ಬೂದು ಬಣ್ಣದ ಹಕ್ಕಿ ಮಿಡತೆಯನ್ನು ಬೇಟೆಯಾಡಿ ಭಕ್ಸಿಸುವುದು ಕಂಡಿತು. ಕೆಲವು ದೃಶ್ಯಗಳನ್ನು ಚಕಚಕನೆ ಸೆರೆ ಹಿಡಿದೆ. ನನ್ನ ಇರುವ ಆ ಪಕ್ಷಿಗೆ ಬೇಸರತಂದಿತೆಂದು ಕಾಣುತ್ತದೆ. ನನ್ನನ್ನು ನೋಡಿದ್ದೇ ತಡ ದೂರಕ್ಕೆ ಹಾರಿತು. ಅಂದಹಾಗೆ ಈಪಕ್ಷಿಯ ಹೆಸರು “ಚಿಟ್ಟುಕೀಚುಗ” ಎಂದು, ಬಾಲದಲ್ಲಿ ಕಪ್ಪು ಬಿಳಿ ಪಟ್ಟಿಗಳಿವೆ. ಹಣೆ ಮತ್ತು ಹುಬ್ಬು ಎದ್ದು ಕಾಣುವ ಕಪ್ಪು, ರೆಕ್ಕೆಗಳಲ್ಲೂ ಕಪ್ಪು ಬಿಳಿ ಪಟ್ಟಿಗಳಿವೆ. ಹಕ್ಕಿ. ಹಾರುವಾಗ ಇದು ಬಹಳ ಸ್ಪಷ್ಟವಾಗಿ ಕಾಣುತ್ತದೆ. ಗಿಡುಗಗಳಿಗಿರುವಂಥ ಬಲವಾದ ಕೊಕ್ಕೆ ಕೊಕ್ಕು. ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸವಿಲ್ಲ. ಒಂಟಿಯಾಗಿ ಪೊದೆಗಳ ಅಥವಾ ಗಿಡಗಳ ನೆತ್ತಿಯ ಬೋಳು ಕೊಂಬೆಗಳಲ್ಲಿ ಕುಳಿತಿರುತ್ತವೆ.
ಸಾಮಾನ್ಯವಾಗಿ ಬಂಜರು ಜಾಗಗಳಲ್ಲಿ, ಕುರುಚಲು ಕಾಡುಗಳಲ್ಲಿ ಎತ್ತರದಲ್ಲಿ ಕುಳಿತು ಮಿಡತೆ, ಹಲ್ಲಿ, ಚಿಕ್ಕ ಇಲಿ ಮೊದಲಾದವು ಕಾಣುತ್ತಲೇ ಬೇಟೆಯನ್ನು ಬೆನ್ನತ್ತಿ ಎರಗುತ್ತವೆ.  ಶಿಕಾರಿಯನ್ನು ಕಾಲಿನಲ್ಲಿ ಹಿಡಿದು ಚೂಪು ಕೊಕ್ಕಿನಿಂದ ಹರಿದು ತಿನ್ನುತ್ತವೆ. ಹೆಚ್ಚುವರಿ ಶಿಕಾರಿಯನ್ನು ಮುಳ್ಳಿಗೆ ಚುಚ್ಚಿ ಸಂಗ್ರಹಿಸುತ್ತದೆ. ಪ್ಲೇಟಿನ ಮೇಲೆ ಬಳಪ ಗೀರಿದಂತೆ ಕರ್ಕಶವಾಗಿ ಕ್ರೀಚ್ ಕ್ರೀಚ್ ಎಂದು ಕೂಗುವುದರಿಂದ ಇದಕ್ಕೆ ಕೀಚುಗ ಎಂದು ಹೆಸರು. ಮಾರ್ಚ್  ನಿಂದ ಅಕ್ಟೋಬರ್‌ವರೆಗೆ ಮುಳ್ಳಿನ ಗಿಡಗಳ ಕವೆಗಳಲ್ಲಿ ಹುಲ್ಲು, ನಾರು, ಕಡ್ಡಿಗಳನ್ನು ಉಪಯೋಗಿಸಿ ಗೂಡು ಮಾಡುತ್ತದೆ. ನಾಚಿಕೆ ಸ್ವಭಾವದ, ಬಹಳ ಅಪರೂಪವಾದ ಈಪಕ್ಷಿಗಳನ್ನು ನಮ್ಮ ಸುತ್ತ-ಮುತ್ತಲಿನ ಪರಿಸರದಲ್ಲಿ ಕಾಣಬಹುದಾಗಿದೆ.
ಚಿತ್ರ/ಮಾಹಿತಿ: ಮಾಲತೇಶ ಅಂಗೂರ, ಹಾವೇರಿ.

malatesh angur
sub-editor
kourava daily,
haveri

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಗೆ 2 “ಮಕ್ಕಳ ಚಂದಿರ ಪ್ರಶಸ್ತಿ”

ಕಾಡುಮೇಡು ಹಾಗೂ ಬೆರಗು ಕೃತಿಗಳಿಗೆ 2023ನೇ ಸಾಲಿನ ಪ್ರಶಸ್ತಿ ಪ್ರಕಟ ಹಾವೇರಿಗೆ 2...

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಸದೃಢವಾದ ದೇಹಕ್ಕೆ ಸದೃಢವಾದ...