
ದಾವಣಗೆರೆ ದಕ್ಷಿಣ, ಭಾಗಲಕೋಟೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು-ವೀರಣ್ಣ ಪಾಟೀಲ ವಿಶ್ವಾಸ
ಹಾವೇರಿ: ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ನಿರಂತರವಾಗಿ ಮೇಲುಗೈ ಸಾಧಿಸುತ್ತ ಬಂದಿದ್ದು, ಜನಪರ ಆಡಳಿತಕ್ಕೆ ಮತದಾರರು ಮರು ಬೆಂಬಲ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಮರ್ಥ್ ಶಾಮನೂರು ಹಾಗೂ ಬಾಗಲಕೋಟೆ ಕ್ಷೇತ್ರಕ್ಕೆ ಉಮೇಶ ಮೇಟಿ ಅವರ ಗೆಲುವು ಖಚಿತ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಯೋಜಕ ವೀರಣ್ಣ ಪಾಟೀಲ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ೨೦೨೬ರ ಎಪ್ರಿಲ್ ೯ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದು,
ಈ ಹಿಂದೆ ನಡೆದ ಉಪಚುನಾವಣೆಗಳಲ್ಲಿ ಪಕ್ಷವು ಹೆಚ್ಚಿನ ಪ್ರಮಾಣದಲ್ಲಿ ಜಯ ಸಾಧಿಸಿರುವುದನ್ನು ಉಲ್ಲೇಖಿಸಿರುವ ಅವರು ೨೦೨೪ರಲ್ಲಿ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದು ಹೇಳಿದ್ದಾರೆ.
೨೦೧೩ರಿಂದ ೨೦೧೮ರ ಅವಧಿಯಲ್ಲಿ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಶೇ.೮೦ಕ್ಕೂ ಹೆಚ್ಚು ಯಶಸ್ಸು ಗಳಿಸಿದ್ದು, ೨೦೧೪ರಿಂದ ೨೦೨೪ರವರೆಗೆ ನಡೆದ ಉಪಚುನಾವಣೆಗಳಲ್ಲಿ ಶೇ.೬೫ರಷ್ಟು ಸ್ಥಾನಗಳನ್ನು ಗೆದ್ದಿದೆ. ಕಳೆದ ೧೦ ವರ್ಷಗಳಲ್ಲಿ ನಡೆದ ೨೫ ಪ್ರಮುಖ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸುಮಾರು ೧೮ ಸ್ಥಾನಗಳನ್ನು (ಶೇ.೭೨) ಗೆದ್ದಿದೆ ಎಂದು ಮಾಹಿತಿ ನೀಡಿದ್ದಾರೆ.
ಮಹಿಳಾ ಮತದಾರರ ಪಾತ್ರದ ಕುರಿತು, ಪಂಚ ಗ್ಯಾರಂಟಿ ಯೋಜನೆಗಳ ಪರಿಣಾಮವಾಗಿ ಮಹಿಳಾ ಮತದಾನ ಪ್ರಮಾಣವು ಪುರುಷರಿಗಿಂತ ೨.೫ರಿಂದ ೪ ಶೇಕಡಾ ಹೆಚ್ಚಾಗಿದೆ. ೨೦೨೪ರ ಚನ್ನಪಟ್ಟಣ ಮತ್ತು ಶಿಗ್ಗಾಂವಿ ಉಪಚುನಾವಣೆಗಳಲ್ಲಿ ಮಹಿಳಾ ಮತದಾರರ ಒಲವು ಕಾಂಗ್ರೆಸ್ ಪರ ಶೇ.೧೨ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು. ಹಾನಗಲ್ ಉಪಚುನಾವಣೆಯ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ೨೦೨೧ರ ೨೦೨೧ರಲ್ಲಿ ಬಿಜೆಪಿ ಆಡಳಿತದಲ್ಲಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರು ೭,೩೭೩ ಮತಗಳ ಅಂತರದಿಂದ ಜಯಗಳಿಸಿದ್ದು ಆಡಳಿತ ಪಕ್ಷಕ್ಕೆ ದೊಡ್ಡ ಆಘಾತ ನೀಡಿತ್ತು ಎಂದರು.
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳು, ದಲಿತರು ಹಾಗೂ ಅಲ್ಪಸಂಖ್ಯಾತರ ಮತಗಳು ಶೇ.೬೫ಕ್ಕಿಂತ ಹೆಚ್ಚಿದ್ದು, ಇದು ಕಾಂಗ್ರೆಸ್ಗೆ ಬಲವಾದ ಆಧಾರವಾಗಿದೆ ಎಂದು ಹೇಳಿದ್ದಾರೆ. ಕಳೆದ ೩೦ ವರ್ಷಗಳಲ್ಲಿ ಕಾಂಗ್ರೆಸ್ ಕನಿಷ್ಠ ಮೂರು ಬಾರಿ ೧೨೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ಬಿಜೆಪಿ ಪಕ್ಷವು ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಸಂದರ್ಭದಲ್ಲೂ ಬಹುಮತದ ಗಡಿ ದಾಟಲು ವಿಫಲವಾಗಿತ್ತು ಎಂದು -ವೀರಣ್ಣ ಪಾಟೀಲ ಟೀಕಿಸಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಮಾಹಿತಿ
೨೦೦೮ರ ಕ್ಷೇತ್ರ ಮರುವಿಂಗಡಣೆಯ ನಂತರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ರಚನೆಯಾಯಿತು. ಸುಮಾರು ೨.೧೦-೨.೧೫ ಲಕ್ಷ ಮತದಾರರಿದ್ದು, ಪುರುಷರು ೧.೦೮ ಲಕ್ಷ, ಮಹಿಳೆಯರು ೧.೦೨ ಲಕ್ಷ ಇದ್ದಾರೆ. ೨೦೨೩ರಲ್ಲಿ ಕಾಂಗ್ರೆಸ್ ೨೭,೮೮೮ ಮತಗಳ ಅಂತರದಿಂದ ಜಯಗಳಿಸಿದ್ದು, ಶೇ.೫೮ರಷ್ಟು ಮತಗಳನ್ನು ಪಡೆದಿತ್ತು. ೨೦೧೮ರಲ್ಲಿ ೧೫.೮೮೪ ೫ ೫ ೨ ೨೦೧೩೦೦ ೪೦.೧೫೮ ಮತಗಳ ಭರ್ಜರಿ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಿತ್ತು.
ಬಾಗಲಕೋಟೆ ಕ್ಷೇತ್ರದ ಮಾಹಿತಿ
ಬಾಗಲಕೋಟೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ೨.೨೫-೨.೩೦ ಲಕ್ಷ ಮತದಾರರಿದ್ದಾರೆ. ಪುರುಷರು ಸುಮಾರು ೧.೧೫ ಲಕ್ಷ ಮತ್ತು ಮಹಿಳೆಯರು ೧.೧೦ ಲಕ್ಷ, ೨೦೨೩ರಲ್ಲಿ ಕಾಂಗ್ರೆಸ್ ಸುಮಾರು ೧೫,೦೦೦-೧೮,೦೦೦ ಮತಗಳ ಅಂತರದಿಂದ ಜಯಗಳಿಸಿದ್ದು, ಶೇ.೫೦-೫೨ರಷ್ಟು ಮತಗಳನ್ನು ಪಡೆದಿತ್ತು. ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಬೆಂಬಲ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ.

