ನನಗೆ ಬಿಜೆಪಿ ಟಿಕೆಟ್ ತಪ್ಪಿಸಿದ್ದೇ ಸಿಎಂ ಬೊಮ್ಮಾಯಿ, ಜಿಲ್ಲಾಅಧ್ಯಕ್ಷ ಕಲಕೋಟಿ: ನೆಹರು ಓಲೇಕಾರ

Date:

ಹಾವೇರಿ: ಹಾವೇರಿಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಹಾಳುಮಾಡುವ ದುರುದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ಬಿಜೆಪಿ ಟಿಕೆಟ್ ತಪ್ಪಿಸಿದ್ದಾರೆ. ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಕಲಕೋಟಿ ಅವರು ಸಹಸ್ರ, ಸಹಸ್ರ ಸಂಖ್ಯೆಯಲ್ಲಿರುವ ನನ್ನ ಬೆಂಬಲಿಗ ಅಭಿಮಾನಿ ಬಿಜೆಪಿ ಕಾರ್ಯಕರ್ತರಿಗೆ ದ್ರೋಹ ಬಗೆದಿದ್ದಾರೆ. ಸಿಎಂ ಬೊಮ್ಮಾಯಿ ಅವರಿಗೆ ತಮ್ಮ ಸರಿಸಮನಾಗಿ ಯಾರು ಬೆಳೆಯಬಾರದು ಎನ್ನುವ ದುರುದ್ದೇಶದಿಂದ ನನಗೆ ಟಿಕೆಟ್ ನೀಡದೇ ಮೋಸಮಾಡಿದ್ದಾರೆ ಎಂದು ಶಾಸಕ ನೆಹರು ಓಲೇಕಾರ ಆರೋಪಿಸಿದರು.
ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು ಇಲ್ಲಿಯವರೆಗೆ ಬಸವರಾಜ್ ಬೊಮ್ಮಾಯಿ ರಾಜಕಾರಣ ಇತ್ತು, ಇಂದಿನಿಂದ ನಮ್ಮ ರಾಜಕಾರಣ ಶುರುವಾಗಲಿದೆ. ಬೊಮ್ಮಾಯಿಗೆ ಯಾವ ರೀತಿ ಟಕ್ಕರ್ ಕೊಡ್ತೀವಿ ನೋಡಿ, ಸಿಎಂ ಬೊಮ್ಮಾಯಿಯನ್ನು ಚುನಾವಣೆಯಲ್ಲಿ ಗೆಲ್ಲೋಕೆ ಬಿಡಲ್ಲ, ಸಿಎಂ ಧಮ್ ತಾಕತ್ತು ತೋರಿಸಲಿ, ನಮ್ಮ ಜಿಲ್ಲೆ ಹಾಳು ಮಾಡುವ ದುರುದ್ದೇಶ ಸಿಎಂ ಹೊಂದಿದ್ದಾರೆ. ಎಲ್ಲಾ ಸೀಟು ನಾಶ ಆಗುತ್ತವೆ, ಪಕ್ಷ ಹಾಳು ಮಾಡುತ್ತಿದ್ದಾರೆ ಎನ್ನುವುದು ರಾಷ್ಟ್ರೀಯ ನಾಯಕರಿಗೆ ಸ್ವಲ್ಪ ದಿನದಲ್ಲಿ ಗೊತ್ತಾಗುತ್ತದೆ.
ನನಗೆ ಟಿಕೇಟ್ ಮಿಸ್ ಆಗಲು ಬಸವರಾಜ್ ಬೊಮ್ಮಾಯಿ ಕಾರಣ. ಇವರ ನಾಟಕಕ್ಕೆ ತೆರೆ ಎಳೆಯುವೆ ಬೊಮ್ಮಾಯಿ ಹಗರಣ ಬಯಲಿಗೆಳೆಯುವೆ, ತುಂತುರು ನೀರಾವರಿಗೆ ೧೫೦೦ ಕೋಟಿ ಖರ್ಚು ಹಾಕಿದ್ದಾರೆ. ಅವರಿಗೆ ಬೇಕಾದವರಿಗೆ ಕಾಂಟ್ರಾಕ್ಟ್ ಕೊಟ್ಟಿದ್ದಾರೆ. ಒಂದು ಪೈಪು ಇಲ್ಲ, ಅಲ್ಲಿನ ರೈತರು ಒಂದು ಜೋಳ, ಅಕ್ಕಿ ಗೋದಿ ಏನೂ ಬೆಳೆಯೋದಕ್ಕೆ ಆಗಿಲ್ಲ, ೧೫೦೦ ಕೋಟಿ ಗುಳುಂ ಮಾಡಿದ ಭಂಡ ಸಿಎಂ ಬಸವರಾಜ ಬೊಮ್ಮಾಯಿ ಎಂದು ಶಾಸಕ ಓಲೆಕಾರ್ ಆರೋಪಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ...

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...