

ನಾಗರಪಂಚಮಿ ಹಬ್ಬದಲ್ಲಿ ನಾಗರಹಾವಿನ ರಕ್ಷಣೆ !
ಹಾವೇರಿ: ‘ಕಲ್ಲ ನಾಗರ ಕಂಡರೆ ಹಾಲನ್ನೆರಿವವರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ’ ಎನ್ನುವ ಶರಣರ ವಚನ ಎಲ್ಲರಿಗೂ ಗೊತ್ತಿರುವುದೇ, ಆದರೆ ಜನವಸತಿ ಪ್ರದೇಶದಲ್ಲಿ
ಅದು ನಾಗರಹಾವಿರಲಿ, ಕೆರೆಹಾವಿರಲಿ ಒಟ್ಟಿನಲ್ಲಿ ಹಾವು ಕಂಡರೆ ಎಲ್ಲರೂ ಹೆದರಿ ಹಾವನ್ನು ಕೊಲ್ಲೆಂಬರಸAಖ್ಯೆಯೇ ಹೆಚ್ಚಿರುವಾU,À ನಾಗರಪಂಚಮಿ ಹಬ್ಬದ ಸಂಭ್ರಮದಲ್ಲಿ
ನಿಜದನಾಗರಹಾವೊಂದು ಆಸ್ಪತ್ರೆಯ ಪರಿಸರದಲ್ಲಿ ಕಾಣಿಸಿಕೊಂಡು ವೈದ್ಯರ, ರೋಗಿಗಳ ಹಾಗೂ ಸಾರ್ವಜನಕರಲ್ಲಿ ಗಲಿ -ಬಿಲಿಗೆ ಕಾರಣವಾಗಿತ್ತು, ಕೊನೆಗೆ ಗ್ರಹರಕ್ಷಕ ಸ್ನೇಕ್
ಶ್ರೀಕಾಂತ್ ನಾ ಗರಹಾವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಮೂಲಕ ಪಂಚಮಿ ಹಬ್ಬಕ್ಕೊಂದು ಅರ್ಥನೀಡಿದರು.ಈ ನಾಗರಹಾವು ಕಾಣಿಸಿಕೊಂಡಿದ್ದು ಜಿಲ್ಲೆಯ
ಹಾನಗಲ್ಲ ತಾಲೂಕಿನ ತಿಳವಳ್ಳಿ ಸರ್ಕಾರ ಆಸ್ಪತ್ರೆಯಲ್ಲಿ, ಮಂಗಳವಾರ ನಾಗರಪಂಚಮಿ ಹಬ್ಬದ ಸಂಭ್ರಮದಲ್ಲಿದ್ದ ಜನತೆ ಒಂದು ಕಡೆಗೆ ಕಲ್ಲನಾಗರಕ್ಕೆ ಹಾಲೆರೆಯುತ್ತಿದ್ದರೇ, ಇತ್ತ ವೈದ್ಯರು, ರೋಗಿಗಳು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದ ವೇಳೆ ಆಸ್ಪತ್ರೆಯ ಆವರಣಕ್ಕೆ ನಾಗರಹಾವೊಂದು ನುಗ್ಗಿದೆ. ಹಾವು ಕಂಡ ವೈದ್ಯರು, ರೋಗಿಗಳು, ಸಿಬ್ಬಂದಿ ಹೆದರಿಓಡಾಡಿದ್ದಾರೆ. ಈ ವೇಳೆ ಹಾವೇರಿಯ ಗೃಹ ರಕ್ಷಕ ಶ್ರೀಕಾಂತ್ ಮರೆಮ್ಮನವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಗ್ರಹರಕ್ಷಕ ಸ್ನೇಕ್ ಪ್ರಶಾಂತ ನೆಲಹಾಸಿನಕೆಳಗೆ ಬಚ್ಚಿಟ್ಟುಕೊಂಡಿದ್ದ ನಾಗರಹಾವನ್ನು ಚಾಕ ಚಕ್ಯತೆಇಂದ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಯಾವುದೇ ಹಾವಿರಲಿ ಹಾವುಕಂಡರೆ ಅದನ್ನು ಹೊಡೆಯಬೇಡಿ, ಪರಿಸರ
ಸಮತೋಲನಕ್ಕೆ ಹಾವುಗಳ ರಕ್ಷಣೆ ಅಗತ್ಯವಾಗಿದೆ. ಹಾವು ಕಂಡರೆ ನನಗೆ ಕರೆಮಾಡಿ, ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವುದಾಗಿ ಶ್ರೀಕಾಂತ್ ಮರೆಮ್ಮನವರು ತಿಳಿಸಿದರು.

