
ಬಂಕಾಪುರ ಬಯಲು ಶೌಚಮುಕ್ತ ಪಟ್ಟಣ ಘೋಷಣೆ
ಹಾವೇರಿ : ಕೇಂದ್ರ ಮತ್ತು ಸಾಜ್ಯ ಸರ್ಕಾರದ ಪೌರಾಡಳಿತ ನಿರ್ದೇಶನಾಲಯ ಸ್ವಚ್ಛ ಭಾರತ ಮಿಷನ್ ಯೋಜನೆಯ ಮಾರ್ಗಸೂಚಿನಿಗಳನ್ವಯ ಬಂಕಾಪುರ ಪುರಸಭೆ ವ್ಯಾಪ್ತಿಯ ೨೩ ವಾರ್ಡುಗಳನ್ನು ಓ.ಡಿ.ಎಫ್+(ಬಯಲು ಶೌಚಮುಕ್ತ) ನಗರವೆಂದು ಘೋಷಿಸಿ ಪ್ರಮಾಣಪತ್ರ ನೀಡಿದೆ.
ಬಯಲು ಶೌಚಮುಕ್ತ ನಗರ+ (ಓ.ಡಿ.ಎಫ್+) ರೀ ಸರ್ಟಿಫಿಕೇಶಮ್ ಎಂದು ೨೩ ವಾರ್ಡುಗಳನ್ನು ಘೋಷಿಸಲು ಬಂಕಾಪುರ ಪಟ್ಟಣದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಮಲ,ಮೂತ್ರವಿಸರ್ಜನೆ ಮಾಡುವುದನ್ನು ನಿಷೇಧಿಸಿದೆ. ತಪ್ಪಿದಲ್ಲಿ ಮೂತ್ರ ವಿಸರ್ಜನೆಗೆ ರೂ.೫೦ ಮತ್ತು ಮಲ ವಿಸರ್ಜನೆಗೆ ರೂ.೧೦೦ ದಂಡ ವಿಧಿಸಲಾಗುವುದು.
ಸಾರ್ವಜನಿಕರು, ಸಾರ್ವಜನಿಕ ಶೌಚಾಲಯ, ಹೋಟೆಲ್ ಮತ್ತು ಪೆಟ್ರೋಲ್ ಬಂಕ್‌ಗಳ ಶೌಚಾಲಯಗಳನ್ನು ಉಚಿತವಾಗಿ ಬಳಸಬಹುದಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಲಹೆ, ಸೂಚನೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಈ ಪ್ರಕಟಣೆಯ ೭ ದಿನದೊಳಗಾಗಿ ಸೂಕ್ತ ದಾಖಲೆಗಳೊಂದಿಗೆ ಲಿಖಿತವಾಗಿ ಆಕ್ಷೇಪಣೆ, ಸಲಹೆ, ಸೂಚನೆಗಳನ್ನು ಬಂಕಾಪುರ ಪುರಸಭೆ ಮುಖ್ಯಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

