
ಯಲಗಚ್ಚನಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ರ ೫೧ನೇ ಹುಟ್ಟುಹಬ್ಬ
ಹಾವೇರಿ : ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ೫೧ನೇ ಹುಟ್ಟುಹಬ್ಬವನ್ನು ಮಂಗಳವಾರ ತಾಲೂಕಿನ ಯಲಗಚ್ಚಗ್ರಾಮದಲ್ಲಿ ನಿರ್ಮಿಸಿರುವ ಪುನೀತ್ ರಾಜಕುಮಾರ್ ದೇವಾಲಯದಲ್ಲಿ ಹುಟ್ಟು ಹಬ್ಬವನ್ನು ಯಲಗಚ್ಚಗ್ರಾಮದ ಪ್ರತಿಭಾವಂತ ನೃತ್ಯ ಪಟು, ಯಲಗಚ್ಚಗ್ರಾಮದಲ್ಲಿ ಪುನಿತ್ರಾಜ್ಕುಮಾರ ದೇವಸ್ಥಾನ ನಿರ್ಮಿಸಿ ದೊಡ್ಮನೆ ಅಪ್ಪಟ ಅಭಿಮಾನಿಯಾಗಿರುವ ಪ್ರಕಾಶ ಮೊರಬದ ಹಾಗೂ ಅವರ ಸಂಗಡಿಗರು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿದರು. .
ಡಾ. ಪುನೀತ್ ರಾಜಕುಮಾರ್ ಅವರ ೫೧ನೇ ಹುಟ್ಟುಹಬ್ಬವನ್ನು ಅಪ್ಪು ಅವರ ಪುತ್ಥಳಿಗೆ ಕ್ಷೀರಾಭಿಷೇಕ ಮಾಡುವ ಮೂಲಕ ಹಾಲನ್ನು ಮಕ್ಕಳಿಗೆ ವಿತರಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಸಂಜಯಗಾಂಧಿ ಸಂಜೀವಣ್ಣನವರ, ಬಸವರಾಜ ಗೋವಿ, ಪುಟ್ಟಪ್ಪ ಸಂಕಮ್ಮನವರ, ಲೋಕೇಶ್ ಬಾರ್ಕಿ ಮತ್ತಿತರರು ಭಾಗವಹಿಸಿ ಪುನೀತ್ ರಾಜಕುಮಾರ್ ಅವರು ತಮ್ಮ ಜೀವನಕಾಲದಲ್ಲಿಯೇ ಅನಾಥಾಶ್ರಮಗಳು, ವೃದ್ಧಾಶ್ರಮಗಳು ಹಾಗೂ ಗೋಶಾಲೆಗಳಿಗೆ ಸಹಾಯ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಆಶಯದಂತೆ ಎಲ್ಲರು ನಡೆಯೋಣ ಎಂದು ಪ್ರಕಾಶ ಮೊರಬದ ಮಾತನಾಡಿದರು.

