
ರೈತರ ಆತ್ಮಹತ್ಯೆಗಳ ಬಗ್ಗೆ ಸರ್ಕಾರ ಅಧ್ಯಯನ ನಡೆಸಲಿ:ರಾಖೇಶ ಟಿಕಾಯತ್
ಹಾವೇರಿ: ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತ, ಸಾಲಬಾಧೆ, ಕೃಷಿಯಮೇಲೆ ಬಿದ್ದಿರುವ ಬಂಡವಾಳ ಶಾಹಿಗಳ ಕಪಿಮುಷ್ಠಿ ಹೀಗೆ ಅನೇಕ ಕಾರಣಗಳಿಂದ ರೈತ ಆತ್ಮಹತ್ಯೆಗಳು ನಡೆಯುತ್ತಿವೆ. ಕರ್ನಾಟಕದ ಹಾಗೂ ಹಾವೇರಿಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಮಾಡಿಕೊಂಡಿದ್ದಾರೆ. ಈ ಬಗ್ಗೆ ಕರ್ನಾಟಕ ಸರ್ಕಾರ ರೈತರ ಆತ್ಮಹತ್ಯೆಗಳ ಬಗ್ಗೆ ಗಂಭೀರವಾದ ಅಧ್ಯಯನ ನಡೆಸಿ, ಅದರ ಹಿಂದಿರುವ ಕಾರಣಗಳೇನು ಎಂದು ಹುಡುಕುವ ಪ್ರಯತ್ನ ಪ್ರಾಮಾಣಿಕವಾಗಿ ಮಾಡಬೇಕು, ಜೊತೆಗೆ ರೈತ ಸಂಘಟನೆಗಳ ಮುಖಂಡರುಗಳನ್ನು ಒಳಗೊಂಡಂತಹ ಅಧ್ಯಯನ ಸಮಿತಿಯನ್ನು ರಚಿಸಬೇಕು ಎಂದು ದೆಹಲಿಯಲ್ಲಿ ರೈತ ಹೋರಾಟ ಸಂಘಟಿಸಿದ್ದ ರೈತ ನಾಯಕ ರಾಖೇಶ ಟಿಕಾಯತ್ ಆಗ್ರಹಿಸಿದರು.
ಭಾನುವಾರ ಇಲ್ಲಿನ ಪತ್ರಿಕಾಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾವೇರಿ ಜಿಲ್ಲಾ ಘಟಕದವತಿಯಿಂದ ಕರೆಯಲಾಗಿದ್ದ ಸುದ್ದಗೋಷ್ಠಿಯ ಅವರು ಮಾತನಾಡಿದರು. ರೈತರ ಆತ್ಮಹತ್ಯೆಗಳನ್ನು ನಿಲ್ಲಿಸುವಂತಹ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಕರ್ನಾಟಕ ಸರ್ಕಾರ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಈಗ ಮುಂಗಾರು ಚುರುಕಾಗಿದ್ದು ಎಲ್ಲಾ ಕಡೆ ಬಿತ್ತನೆ ಬೀಜಗಳ ಬೆಲೆ ಹೆಚ್ಚಾಗುತ್ತಿದ್ದು, ರಸಗೊಬ್ಬರದ ಲಭ್ಯತೆಯ ಕೊರತೆ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು ಯಾವುದೇ ಸರ್ಕಾರ ಬಂದರೂ ಕೃಷಿ ಸರಿಯಾದ ದಾರಿಯಲ್ಲಿ ಮುಂದುವರಿಯಬಾರದೆಂಬ ಧೋರಣೆ ಸರ್ಕಾರಿಗಳಿಗಿದ್ದು, ಬಿಜ, ರಸಗೊಬ್ಬರ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ರೀತಿ ವ್ಯವಸ್ಥಿತವಾಗಿ ನೋಡಿಕೊಳ್ಳುವ ಜಾಲವನ್ನು ಬಂಡವಾಳಶಾಹಿಗಳು ಆಳುತ್ತಿರುವ ಸರ್ಕಾರಗಳ ಮೂಲಕ ಸೃಷ್ಟಿಸಿ ಕೃಷಿಯನ್ನು ನಷ್ಟದಲ್ಲಿಟ್ಟು ರೈತರಿಗುಳಿಯುವ ಭೂಮಿಯನ್ನು ಬಂಡವಾಳಶಾಹಿಗಳಿಗೆ ಹಸ್ತಾಂತರ ಮಾಡುವ ಕುತಂತ್ರದ ಧೋರಣೆಯನ್ನು ಸರ್ಕಾರಗಳು ಹೊಂದಿವೆ.
ರೈತರ ಆತ್ಮಹತ್ಯೆಗಳ ಬಗ್ಗೆ ಕೇಂದ್ರ ಸರಕಾರ ಅಧ್ಯಯನ ಮಾಡಿಲ್ಲ. ರೈತರು, ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ದೆಹಲಿಯಲ್ಲಿ ಸುದೀರ್ಘ ಹೋರಾಟ ಮಾಡಿದರು ಸಹ ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸಿಲ್ಲ. ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನಮಾಡಿಲ್ಲ. ರೈತರ ಬೆಳೆಗಳಿಗೆ ಎಂ.ಎಸ್.ಪಿ ದರ ನಿಗದಿ ಮಾಡಲಿಲ್ಲ, ರೈತರ ಸಮಸ್ಯೆ ಬಗೆಹರಿಸುವಲ್ಲಿ ಭಾರತ ಸರಕಾರದ ವಿಫಲವಾಯಿತು. ಯಾವುದೇ ಸರಕಾರ ಬರಲಿ ಅವರು ಕೃಷಿಕರ ಸಮಸ್ಯೆಗಳನ್ನು ಅರಿಯುವುದು ಸಾಧ್ಯವಾಗಿಲ್ಲ. ಜೂನ್ ೪ರ ನಂತರ ಮುಂದಿನ ಸರ್ಕಾರ ಯಾವುದೇ ಬರಲಿ ರೈತ ವಿರೋಧಿ ನೀತಿಗಳನ್ನು ತಂದಲ್ಲಿ ಅದರ ವಿರುದ್ಧ ನಮ್ಮ ಹೋರಾಟ ಆಂದೋಲನದ ಮಾದರಿಯಲ್ಲಿ ಮುಂದುವರಿಯುತ್ತದೆ ರಾಖೇಶ ಟಿಕಾಯತ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತರ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ರಾಮಣ್ಣ ಕೆಂಚಳ್ಳೆರ, ಮಲ್ಲಿಕಾರ್ಜುನ ಬಳ್ಳಾರಿ, ಸುರೇಶ ಚಲವಾದಿ, ಶಿವಯೋಗಿ ಹೊಸಗೌಡ್ರ, ಚಿತ್ರನಿರ್ದೇಶಕ ಕೆಸರಿ ಹರವು ಮುಂತಾದವರು ಉಪಸ್ಥಿತರಿದ್ದರು.
ಶಿರಾಕೊಪ್ಪದಲ್ಲಿ ಮೇ.೩೧ರಿಂದ ಮೂರುದಿನ ರೈತರಿಗೆ ತರಬೇತಿ ಶಿಬಿರ
ಹಾವೇರಿ: ಕೃಷಿ ಕ್ಷೇತ್ರದ ಎದುರಿಸುತ್ತಿರುವ ಅನೇಕ ಬಿಕ್ಕಟ್ಟುಗಳಿಂದ ಅನೇಕ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹೊಸತಲೆಮಾರಿನ ರೈತರಿಗೆ ರೈತ ಹೋರಾಟ, ಸಿದ್ದಾಂತದ ಬಗ್ಗೆ, ಕೃಷಿ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಿಳಿಸುವ ಉದ್ದೇಶದಿಂದ ಶಿವಮೊಗ್ಗಜಿಲ್ಲೆಯ ಶಿಆಳಕೊಪ್ಪದಲ್ಲಿ ಮೇ.೩೧, ಜೂನ್-೧-೨ ಮೂರುದಿನ ತರಬೇತಿ ಶಿಬಿರ ಆಯೋಜಿಸಲಾಗಿದೆ. ರೈತರು ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿತಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರು ಇಂದು ಅನಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಮಾಡಿಕೊಂಡಿದ್ದಾರೆ. ಅವರ ಮಕ್ಕಳು ಶಿಬಿರಲ್ಲಿ ಮುಖ್ಯವಾಗಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಗೊಬ್ಬರ ಸಂಗ್ರಹಿಸಿ, ಇಲ್ಲವಾದಲ್ಲಿ ೨೦೦೮ ಸ್ಥಿತಿ ಮರುಕಳಿಸುತ್ತದೆ
ಹಾವೇರಿ: ಹಾವೇರಿಜಿಲ್ಲೆಯಲ್ಲಿ ಇದೀಗ ಮುಂಗಾರು ಆರಂಭವಾಗಿದೆ. ಅಲ್ಲಲ್ಲಿ ಮಳೆಯಗುತ್ತಿದ್ದು, ಮಳೆಮುಂದುವರೆದರೆ ರೈತರು ಬಿತ್ತನೆ ಬೀಜ ಹಾಗೂ ಗೊಬ್ಬರ ಖರೀದಿಗೆ ಏಕಕಾಲಕ್ಕೆ ಮುಂದಾಗುವ ಸಾಧ್ಯತೆಗಳಿವೆ. ಹಾವೇರಿಜಿಲ್ಲೆಂiiಲ್ಲಿ ಒಣ ಬೇಸಾಯ ಹೆಚ್ಚಿನಪ್ರಮಾಣದಲ್ಲಿದ್ದು, ರಸ ಗೊಬ್ಬರ ಹಾಗೂ ಬಿತ್ತನೆ ಬೀಜ ರೈತರ ಬೇಡಿಕೆಗೆ ಅನುಗುಣವಾಗಿಲ್ಲ. ರೈತರ ಬೇಡಿಕೆಗೆ ಅನುಗುಣವಾಗಿ ಜಿಲ್ಲಾಡಳಿತ ಬಿತ್ತನೆ ಬೀಜ ಹಾಗೂ ಗೊಬ್ಬರದ ಸಂಗ್ರವನ್ನು ಮಾಡಬೇಕೆಂದು ರೈತ ಸಮಘ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಫರ್ಜೂನ್ ನಲ್ಲಿ ಗೊಬ್ಬರದ ಸಂಗ್ರಹಿರುವುದಿಲ್ಲ. ಅಧಿಕಾರಿಗಳು ಮೇಲ್ನೋಟಕ್ಕೆ ಗೊಬ್ಬರ ಸಂಗ್ರಹ ಇದೆ ಎನ್ನುತ್ತಿದ್ದಾರೆ. ಮಳೆ ಆರಂಬವಾದರೇ ಏಕಕಾಲಕ್ಕೆ ರೈತರು ಬಿತ್ತನೆಗೆ ಮುಂದಾಗುತ್ತಾರೆ. ಆಗ ಸಹಜವಾಗಿ ಗೊಬ್ಬರದ ಅಭಾವ ಉಂಟಾಗುತ್ತದೆ. ಗೊಬ್ಬರಕ್ಕಾಗಿ ಹಾವೇರಿಯಲ್ಲಿ ೨೦೦೮ಲ್ಲಿ ನಡೆದ ಗಲಭೆ ಮರುಕಳಿಸುವ ಸಾಧ್ಯತೆಗಳಿವೆ. ಸರ್ಕಾರ ಜಿಲ್ಲಾಡಳಿತ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಗೊಬ್ಬರವನ್ನು ಸಂಗ್ರಹಿಸುವಂತೆ ಅವರು ಆಗ್ರಹಿಸಿದ್ದಾರೆ.

