ವಿಶ್ವದಾಖಲೆಯ ಯೋಗಾಥಾನ್ ಸಿದ್ದತೆಯ ವೇಳೆ ಸೌಂಡ್ ಬಾಕ್ಸ್ ಬಿದ್ದು ವಿದ್ಯಾರ್ಥಿಗೆ ಗಂಭೀರಗಾಯ

Date:

ಕೇವಲ ೩೯ ನಿಮಿಷದಲ್ಲಿ ಕಿಮ್ಸ್‌ಗೆ ವಿದ್ಯಾರ್ಥಿಯನ್ನು ದಾಖಲಿಸಿದ ೧೦೮ ವಾಹನ ಡ್ರೈವರ್ ತೌಫಿಕ್ ಪಠಾಣ
ಹಾವೇರಿ: ವಿಶ್ವದಾಖಲೆಯ ಯೋಗಾಥಾನ್ ಕಾರ್ಯಕ್ರಮವನ್ನು ಜ.೧೫ರಂದು ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದ ಸಿದ್ದತೆಯನ್ನು ಶನಿವಾರ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಕೈಗೊಂಡ ವೇಳೆ ಸೌಂಡ್ ಬಾಕ್ಸ್ ಬಿದ್ದು ಆರನೆ ತರಗತಿ ವಿದ್ಯಾರ್ಥಿಯ ಮೇಲೆ ಬಿದ್ದಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಗೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು.
ಸೌಂಡ್ ಬಾಕ್ಸ್ ಬಿದ್ದ ಪರಿಣಾಮ ಲೈಯನ್ಸ್ ಇಂಗ್ಲಿಷ್ ಮಿಡಿಯಂ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿರುವ ಹನ್ನೆರಡು ವರ್ಷದ ವಿದ್ಯಾರ್ಥಿ ನಾಗೇಂದ್ರನಮಟ್ಟಿಯ ಸಮೀರ ಅಲ್ಲಭಕ್ಷ ಬಿಜ್ಜೂರ ಎಂಬಾತನಿಗೆ ಪಕ್ಕೆ ಹಾಗೂ ಹೊಟ್ಟೆಯ ಭಾಗದಲ್ಲಿ ಗಂಭೀರ ಸ್ವರೂಪದ ಗಾಯಳಾಗಿದ್ದರಿಂದ ವಿದ್ಯಾರ್ಥಿಗೆ ಹೆಚ್ಚಿನ ಚಿಕತ್ಸೆ ಅಗತ್ಯ ಇದ್ದ ಕಾರಣಕ್ಕೆ ಇತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ತುರ್ತಾಗಿ ದಾಖಲಿಸಬೇಕಾಗಿತ್ತು. ಆಗ ನೆರವಿಗೆ ಬಂದವರು ೧೦೮ ವಾಹನದ ಡ್ರೈವರ್ ತೌಫಿಕ್ ಪಠಾಣ
ಕೇವಲ ೩೯ ನಿಮಿಷದಲ್ಲಿ ಕಿಮ್ಸ್ ಗೆ ದಾಖಲು :

ಸೌಂಡ್ ಬಾಕ್ಸ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಸಮೀರ ಅಲ್ಲಭಕ್ಷ ಬಿಜ್ಜೂರ ನನ್ನು ೧೦೮ ಅಂಬ್ಯುಲೆನ್ಸ್ ಮೂಲಕ ಕಿಮ್ಸ್ ಆಸ್ಪತ್ರೆಗ ದಾಖಲಿಸಲಾಯಿತು. ವಿದ್ಯಾರ್ಥಿಗೆ ತುರ್ತು ಚಿಕಿತ್ಸೆ ಅಗತ್ಯವಿದ್ದುದರಿಂದ ಕೇವಲ ೩೯ ನಿಮಿಷದಲ್ಲಿ ೭೬ ಕಿ.ಮೀ ದೂರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲು ೧೦೮ ಅಂಬ್ಯುಲೆನ್ಸ್ ಚಾಲಕ ತೌಫಿಕ್ ಪಠಾಣ ನೆರವಾಗಿದ್ದಾರೆ, ಹಾವೇರಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲು ಕನಿಷ್ಠ ಕನಿಷ್ಠ ಅಂದರೂ ಒಂದು ಗಂಟೆ ಸಮಯ ಬೇಕಾಗುತ್ತದೆ. ಅದರ ೧೦೮ ವಾಹನ ಚಾಲಕ ತೌಫಿಕ್ ಕೇವಲ ೩೯ ನಿಮಿಷಗಳಲ್ಲಿ ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ.
೧೦೮ ವಾಹನ ಡ್ರೈವರ್ ತೌಫಿಕ್ ಪಠಾಣ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿರುವ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಂಬ್ಯುಲೆನ್ಸ್‌ನಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಅರಿವಳಿಕೆ ತಜ್ಞರಾದ ಡಾ.ಸಂತೋಷ ಹಾಗೂ ಶುಶ್ರೂಷಾಧಿಕಾರಿ ಗೀತಾ ಲಮಾಣಿ ಕೂಡ ಗಾಯಾಳು ವಿದ್ಯಾರ್ಥಿ ಜೊತೆಗಿದ್ದರು. ಗಾಯಾಳುವಿಗೆ ತುರ್ತು ಚಿಕಿತ್ಸೆ ಕೂಡಿಸುವ ಸಲುವಾಗಿ ಅಂಬ್ಯುಲೆನ್ಸ್ ಹಿಂದುಗಡ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರು ಸಹ ಕಿಮ್ಸ್‌ಗೆ ತರಳಿ ಗಾಯಾಳುವಿಗೆ ಚಿಕಿತ್ಸೆ ಕೂಡಿಸಲು ನೆರವಾಗಿದ್ದಾರೆ.
ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಅರಿವಳಿಕೆ ತಜ್ಞರಾದ ಡಾ.ಸಂತೋಷ ಹಾಗೂ ಶುಶ್ರೂಷಾಧಿಕಾರಿ ಗೀತಾ ಲಮಾಣಿ ಗಾಯಾಳು ವಿದ್ಯಾರ್ಥಿಗೆ ಹುಬ್ಬಳ್ಳಿಯ ಕಿಮ್ಸ್ ತಲುಪವವರೆಗೂ ಚಿಕಿತ್ಸೆ ನೀಡುತ್ತಾ ಹುಬ್ಬಳ್ಳಿ ಕಿಮ್ಸನಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ.
ಎಸ್ಕಾರ್ಟ ವ್ಯವಸ್ಥೆ: ಹಾವೇರಿಯಿಂದ ಹುಬ್ಬಳ್ಳಿ ವಿದ್ಯಾರ್ಥಿಯನ್ನು ಅಂಬುಲನ್ಸ್‌ನಲ್ಲಿ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪೊಲೀಸರು ಬಾಲಕನ ಚಿಕಿತ್ಸೆಗಾಗಿ ದಾರಿಯುದ್ದಕ್ಕೂ ಎಸ್ಕಾರ್ಟ ವ್ಯವಸ್ಥೆ ಮಾಡಿದ್ದರು. ಹೀಗಾಗಿ ತುರ್ತಾಗಿ ಗಾಯಾಳು ವಿದ್ಯಾರ್ಥಿಯನ್ನು ಕೇವಲ ೩೯ ನಿಮಿಷದಲ್ಲಿ ಕಿಮ್ಸ್‌ಗೆ ದಾಖಲಿಸಲು ಸಾಧ್ಯವಾಯಿತು ಎಂದು ೧೦೮ ವಾಹನ ಡ್ರೈವರ್ ತೌಫಿಕ್ ಪಠಾಣ ಕೌರವ ಪ್ರತಿನಿಧಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ...

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...