‘ಸಮೀಕ್ಷೆಯ ಸುತ್ತು, ಶಿಕ್ಷಕರು ಸುಸ್ತು”

Date:

ಸಮೀಕ್ಷೆಯ ಸುತ್ತು, ಶಿಕ್ಷಕರು ಸುಸ್ತು”

ಯಾವುದೇ ಸರ್ಕಾರಗಳು ಜನಪರ ನಿರ್ಣಯಗಳನ್ನು ತೆಗೆದುಕೊಳ್ಳಲು ಯೋಜನೆಗಳನ್ನು ರೂಪಿಸಲು ಸರ್ಕಾರದ ಹತ್ತಿರ ನಿಖರವಾದ ಅಂಕಿಅಂಶಗಳು ಇರಬೇಕಾಗುತ್ತದೆ. ಆ ವಾಸ್ತವ ಅಂಕಿಸಂಖ್ಯೆಗಳ ಆಧಾರದ ಮೇಲೆ ನಾಡನ್ನು ಸುಬೀಕ್ಷೆಯನ್ನಾಗಿಸಲು ಆಳುವ ವರ್ಗ ಮಾಡಬೇಕಾಗುತ್ತದೆ. ಆ ಹಿನ್ನೆಲೆಯನ್ನಿಟ್ಟುಕೊಂಡು ಸರ್ಕಾರಗಳು ಹಲವಾರು ಆಯೋಗಗಳ ಮೂಲಕ ವರದಿಗಳನ್ನು ತೆಗೆದುಕೊಂಡಿದೆ. 1931 ರಲ್ಲಿ ದೇಶದಲ್ಲಿ ಜಾತಿ ಗಣತಿ ನಡೆದಿತ್ತು. ಅದು ಬಿಟ್ಟರೆ ಈವರೆಗೂ ದೇಶದಲ್ಲಿ ಜಾತಿ ಗಣತಿ ನಡೆದಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ರಾಜ್ಯದಲ್ಲಿ ಮಿಲರ್ ಆಯೋಗದ ಮೂಲಕ ಮೀಸಲಾತಿಯನ್ನು ಜಾರಿಗೊಳಿಸಲಾಯಿತು. ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿಯಲ್ಲಿ ಜನರ ಗಣತಿ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಗಣತಿ ಮಾಡಲಾಗಿತ್ತು. ಇತ್ತೀಚೆಗೆ ಬಿಹಾರ ರಾಜ್ಯದಲ್ಲಿ ಜಾತಿ ಗಣತಿ ಮಾಡಲು ಅಲ್ಲಿಯ ಸರ್ಕಾರ ಮುಂದಾಗಿದೆ.ಕರ್ನಾಟಕ ರಾಜ್ಯದಲ್ಲಿ 2015 ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯನ್ನು ಕಾಂತರಾಜು ಆಯೋಗದ ಮೂಲಕ ನಡೆಸಲಾಗಿತ್ತು.ಕಾಂತರಾಜು ಆಯೋಗದ ವರದಿಯನ್ನು ಕ್ಯಾಬಿನೆಟ್ ನಲ್ಲಿ ನಿರ್ಣಯ ತೆಗೆದುಕೊಂಡು ಅನುಷ್ಠಾನ ಮಾಡುವ ಹಂತದಲ್ಲಿರುವಾಗ ಆಯೋಗದ ಅಂಕಿಅಂಶಗಳು ಹತ್ತು ವರ್ಷಗಳು ಮೀರಿವೆ. ಹಾಗಾಗಿ ಆ ವರದಿಯನ್ನು ಅನುಷ್ಠಾನಕ್ಕೆ ತರುವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಬಂದು ಆ ವರದಿಯನ್ನು ಸರಕಾರ ಹಾಗೆ ತೆಗೆದಿಟ್ವಿತು. ರಾಜ್ಯದ ಏಳುಕೋಟಿ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬೇಕು ಆ ಮೂಲಕ ಅವಕಾಶ ವಂಚಿತ ರಗೆ, ಅವಕಾಶ ಸಿಗುವಂತೆ ಮಾಡಬೇಕೆಂಬ ಸದುದ್ದೇಶದಿಂದ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ರವರ ಮುಂದಾಳತ್ವದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯನ್ನು ಮಾಡಲು ಪ್ರಾರಂಭಿಸಿದೆ. ಈವರೆಗೆ ರಾಜ್ಯದಲ್ಲಿ ನಾಗನಗೌಡ ವರದಿ( 1961),ಹಾವನೂರ ವರದಿ (1975),ವೆಂಕಟಸ್ವಾಮಿ( 1983) , ಚೆನ್ನಪ್ಪ ರೆಡ್ಡಿ
( 1990)ವರದಿ ಹೀಗೆ ಅನೇಕ ಆಯೋಗಗಳು ಕಾಲಕಾಲಕ್ಕೆ ಸರ್ಕಾರಕ್ಕೆ ವರದಿ ನೀಡಿವೆ. ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಬಹಳ ವಿಶಿಷ್ಟತೆಯಿಂದ ಕೂಡಿದೆ. ಕರ್ನಾಟಕ ರಾಜ್ಯದ ಏಳುಕೋಟಿ ಕನ್ನಡಿಗರ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯವನ್ನು ಆಧುನಿಕ ತಂತ್ರಾಂಶವನ್ನು ಬಳಸಿಕೊಂಡು ಮೊಬೈಲ್ ಮೂಲಕ ಮಾಡಲಾಗುತ್ತಿದೆ. ಇದು ರಾಜ್ಯದ ಅವಕಾಶ ವಂಚಿತರಿಗೆ, ಈಗಾಗಲೇ ಹೊಟ್ಟೆತುಂಬ ಊಟ ಮಾಡಿದವರ ಕುರಿತು, ಈಗಲೂ ಅದೇ ಬರಿ ತಟ್ಟೆಯಲ್ಲಿ ಕೈ ಯನ್ನು ಆಡಿಸುತ್ತ ಉಪವಾಸ ಇರುವ ವರ್ಗದವರ ನಡುವಿನ ಕಂದಕಗಳನ್ನು ತಿಳಿಯಲು ಈ ಸಮೀಕ್ಷೆಯು ನಿಖರವಾದ ಮಾಹಿತಿಯನ್ನು ಒದಗಿಸುತ್ತದೆಂಬುದು ಸಮಾಜಶಾಸ್ತ್ರಜ್ಞರು, ಚಿಂತಕರ ಅಭಿಪ್ರಾಯವಾಗಿದೆ.
ಕಾಂತರಾಜು ವರದಿಯು ಕಾಲಾವಧಿ ಮುಗಿದಿದೆ ಎಂಬ ಕಾರಣದಿಂದ ಸರ್ಕಾರ ಆ ವರದಿಯನ್ನು ಜಾರಿಗೊಳಿಸಲು ಹಿಂದೇಟು ಹಾಕಿತು. ತದನಂತರ ಕರ್ನಾಟಕ ರಾಜ್ಯದ ಘನ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮಾಡಲೇಬೇಕೆಂದು ದೃಢಸಂಕಲ್ಪದೊಂದಿಗೆ ಸೆಪ್ಟೆಂಬರ್ 22 ರಿಂದ ಪ್ರಾರಂಭಿಸಿದೆ. ಈ ಸಮೀಕ್ಷೆಯು ಬೆಂಗಳೂರು ಮಹಾನಗರ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮುಕ್ತಾಯದ ಹಂತಕ್ಕೆ ಬಂದಿರೋದು ಉತ್ತಮ ಸಂಗತಿಯಾಗಿದೆ. ಈ ಕಾರ್ಯದಲ್ಲಿ ರಾಜ್ಯದ ಪ್ರಾಥಮಿಕ ಶಿಕ್ಷಕರು ಹಗಲು ರಾತ್ರಿಯೆನ್ನದೇ ಸರ್ಕಾರದ ಕೆಲಸವನ್ನು ತುಂಬಾ ಜತನದಿಂದ ಮಾಡಿದ್ದಾರೆ. ಇವರೊಂದಿಗೆ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಶಿಕ್ಷಕರು ಶ್ರಮಿಸುತ್ತಿದ್ದಾರೆ. ಈ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಗಣತಿದಾರರು ಹಲವು ಬಗೆಯ ಅನುಭವಗಳನ್ನು ಪಡೆದುಕೊಂಡಿದ್ದಾರೆ. ಅವುಗಳಲ್ಲಿ ಹಲವು ಸ್ವಾರಸ್ಯಕರವಾಗಿವೆ. ಕೆಲವು ಭಾವನಾತ್ಮಕವಾಗಿವೆ. ಇನ್ನು ಕೆಲವು ಕರಳನ್ನು ಹಿಂಡುವಂತಿವೆ. ಗಣತಿದಾರರಿಗಾದ ಕೆಲವು ಅನುಭವಗಳು ಇಂತಿವೆ.
ಸೆಪ್ಟೆಂಬರ್ ೨೨ ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯವು ಪ್ರಾರಂಭವಾಗಿದೆ. ಮನೆಗಳ ಮೀಟರಗಳ ಆಧಾರದ ಮೇಲೆ ಅಂಟಿಸಿರುವ ಮೀಟರ್ ಗಳ ಆಧಾರದ ಮೇಲೆ ಯು ಎಚ್ ಐ ಡಿ ನಂಬರ್ ಗಳನ್ನು ನೀಡಲಾಗಿತ್ತು. ಸಮೀಕ್ಷೆದಾರರಿಗೆ ಬ್ಲಾಕ್ವೈಶ್ ಮನೆಗಳನ್ನು ನಿಗದಿ ಮಾಡಲಾಗಿತ್ತು. ಆ ಸಮೀಕ್ಷೆದಾರರು ಪ್ರಾರಂಭದ ಹಂತದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಕೆಲವರು ನೆಟ್‌ವರ್ಕ್ ಹುಡುಕಿಕೊಂಡು ಅಲೆದಾಡಿದರು. ಇನ್ನು ಕೆಲವರು ವಾಟರ್ ಟ್ಯಾಂಕ್, ಮರವನ್ನೇರಿ ತಮ್ಮ ಕೆಲಸದ ಪ್ರಯತ್ನವನ್ನು ತೋರಿಸುವ ಪ್ರಯತ್ನ ಮಾಡಿದರು. ಕೆಲವರ ಅತಿರೇಕದ ವರ್ತನೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಟ್ರೋಲ್ ಆಯ್ತು. ಇನ್ನು ಕೆಲ ಮಾಧ್ಯಮಗಳು ಅರಚುತ್ತಾ “ಜಾತಿ ಗಣತಿ”ಅಂತಾ ಆಲಾಪವನ್ನಿಟ್ಟುಕೊಂಡು ದಿನಗಟ್ಟಲೇ ಸುದ್ಧಿ ಮಾಡತೊಡಗಿದವು.ಇದರ ನಡುವೆಯೂ ರಾಜ್ಯದ ಶಿಕ್ಷಕ – ಶಿಕ್ಷಕಿಯರು ತಮ್ಮ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತ ಸಮೀಕ್ಷೆಯಲ್ಲಿ ತೊಡಗಿಸಿಕೊಂಡರು. ಆರಂಭದಲ್ಲಿ ದಿನಕ್ಕೊಂದರಂತೆ ಕೆಲ ಮನೆಗಳನ್ನು ಸಮೀಕ್ಷೆ ಮಾಡಲು ಯಶಸ್ವಿಯಾದರು. 3.1 ನಿಂದ 3.8 ಸರ್ವರ್ ಬರೋ ಹಂತಕ್ಕೆ ಬಂದಿತು. ತದನಂತರ ಗಣತಿಯು ತನ್ನ ವೇಗವನ್ನು ಪಡೆದುಕೊಂಡಿತು. ಈ ಸಂದರ್ಭದಲ್ಲಿ ಊರವರು ಕುತೂಹಲದ ಕಣ್ಣುಗಳಿಂದ ಸಮೀಕ್ಷೆದಾರರನ್ನು ನೋಡತೊಡಗಿದರು. “ಏನ್ರೀ ಸರ್ ರಜೆಯಲ್ಲಿ ಒಳ್ಳೆಯ ಕೆಲಸ ಹಚ್ಯಾರ ಬಿಡ್ರಿ, ನಾಲ್ಕು ದಿನ ರಜೆ ಕೊಟ್ಟಿದ್ರು ಅದರಾಗ ನಿಮ್ಮನ್ನು ದುಡ್ಯಾಕ ಹಚ್ಯಾರ ನೋಡ್ರಿ “ಅನ್ನುತ್ತಾ ಶಿಕ್ಷಕರ ಬಗ್ಗೆ ಇರೋ ಪ್ರೀತಿಯ ನೆಪದಲ್ಲಿ ನಮ್ಮನ್ನು ಹಲ್ಲಿಡಿದು ಹಂಗಿಸುವಂತಿತ್ತು. ಇನ್ನು ಕೆಲವರು ಸರ್ಕಾರದ ಕೆಲಸ ಮಾಡಬೇಕಲ್ರೀ ಅನ್ನುತ್ತಾ ಸಾಗುತ್ತಿದ್ದರು. ಗಣತಿ ಕಾರ್ಯ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದರೆ ತಡರಾತ್ರಿವರೆಗೂ ಸಾಗುತ್ತಿತ್ತು. ಇದರ ನಡುವೆ ಮನೆಗಳ ಮೇಲೆ ಅಂಟಿಸಿರುವ ಯು ಎಚ್ ಐ ಡಿ ನಂಬರ್ ಗಳನ್ನು ಹುಡುಕುತ್ತಾ ಹೋಗುವುದು ನಡೆದೆ ಇತ್ತು. ಮನೆಗಳ ಸಮೀಕ್ಷೆಯ ಸಂದರ್ಭದಲ್ಲಿ ಕೇಳುತ್ತಿದ್ದ ಪ್ರಶ್ನೆಗಳಿಗೆ ಮನೆಯ ಯಜಮಾನ ಅಥವಾ ಮನೆಯಲ್ಲಿನ ಹಿರಿಯರು ಉತ್ತರ ನೀಡುತ್ತಿದ್ದರು. ಮನೆಯ ಯಜಮಾನ ಪೋನ್ ನಂಬರ್ ಸೇರಿದಂತೆ ವಿದ್ಯಾಭ್ಯಾಸ,ವಿವಾಹವಾದಾಗ ವಯಸ್ಸು, ವಿದ್ಯಾರ್ಹತೆ,ಧರ್ಮ, ಜಾತಿ, ಉಪಜಾತಿ, ಶೈಕ್ಷಣಿಕ ಸೌಲಭ್ಯಗಳು, ಉದ್ಯೋಗ, ವಾರ್ಷಿಕ ಆದಾಯ, ಪಡೆದ ಶೈಕ್ಷಣಿಕ ಸೌಲಭ್ಯಗಳು ಸೇರಿದಂತೆ ಪ್ರತಿ ಸದಸ್ಯರಿಗೆ ನಲವತ್ತು ಪ್ರಶ್ನೆಗಳಿಗೆ ನಿಖರವಾದ ಮಾಹಿತಿಯನ್ನು ನೀಡುತ್ತಿದ್ದರು. ಕೆಲವರು “ಯಾಕ್ರಿ ಗಣತಿ ಮಾಡ್ತಾ ಇದ್ದಾರೆ. ನಮ್ಮ ರೇಶನ್ ಕಾರ್ಡ್ ರದ್ದು ಮಾಡಾಕ ಗಣತಿ ಮಾಡ್ತಾ ಇದ್ದಿರಿ ಏನ್ರಿ” ಎಂಬ ಪ್ರಶ್ನೆ ಗಳಿಂದ ಹಿಡಿದು ಸರಕಾರದ ಮುಖ್ಯಸ್ಥರನ್ನು ಬಾಯಿಗೆ ಬಂದಂತೆ ಬಯ್ಯೋವರೆಗೂ ನಡೆಯುತ್ತಿದ್ದವು. ಹೀಗೆ ತೂರಿ ಬರುತ್ತಿದ್ದ ಪ್ರಶ್ನೆಗಳಿಗೆ ಸಮಾಧಾನದಿಂದ ನಿಮ್ಮ ಯಾವ ರೇಶನ್ ಕಾರ್ಡ್ ರದ್ದು ಮಾಡಲು ಘನ ಸರ್ಕಾರ ನಮ್ಮನ್ನು ಈ ಕೆಲಸಕ್ಕೆ ಹಚ್ಚಲ್ಲ.ಅನ್ನೋದನ್ನು ಜನಸಾಮಾನ್ಯರಿಗೆ ತಿಳಿಸುವಾಗಿನ ಪ್ರಯತ್ನ ಸಾಕು ಬೇಕಾಗುತಿತ್ತು. ಇನ್ನು ಕೆಲವರು “ಜಾತಿ ಒಡೆಯುತ್ತಿದ್ದಾರೆ, ಧರ್ಮ ಒಡೆಯುತ್ತಿದ್ದಾರೆ, ಯಾಕ್ರೀ ಬೇಕು” ಜಾತಿ ಗಣತಿ ವರಸೆ ಎಬ್ಬಿಸಿ ಬಿಡುತ್ತಿದ್ದರು. ಇದು ಜಾತಿ ಗಣತಿ ಅಲ್ಲ. “ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ” ಸಮಾಜದಲ್ಲಿನ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಯನ್ನು ಸರ್ಕಾರ ಮಾಡಿಸುತ್ತಿದೆ ಎಂಬುದನ್ನು ತಿಳಿಸುವುದರೊಳಗೆ ಸಾಕು ಬೇಕಾಗುತಿತ್ತು. ಇದರಲ್ಲಿ ಕೆಲವರು ಪೂರ್ವಾಗ್ರಹ ಪೀಡಿತರಾಗಿ ಬಾಯಿಗೆ ಬಂದಂಗೆ ಬೈಯ್ಯುತ್ತಿದ್ದರು. ಅವರ ಮಾತಿನ ದಾಟಿ, ಬರುವ ಪದಗಳು ನೇರಾನೇರವಾಗಿ ಒಂದು ಗುಂಪಿಗೆ ಸೇರಿಸುವಂತೆ ಇರುತ್ತಿದ್ದವು. ಬಹುತೇಕರು ಪ್ರಜ್ಞಾ ಪೂರ್ವಕವಾಗಿ ತಮ್ಮ ಕುಟುಂಬದ ಮಾಹಿತಿಗಳನ್ನು ನಿಖರವಾಗಿ ಒದಗಿಸುತ್ತಿದ್ದಾಗ ಕೆಲವರ ಅತಿರೇಖದ ಮಾತುಗಳು ನಮ್ಮ ಸ್ಮೃತಿ ಪಟಲದಿಂದ ದೂರ ಹೋಗಿ ಬಿಡುತ್ತಿದ್ದವು.
ಇದರ ನಡುವೆಯೇ ಊರವರ ಪ್ರೀತಿ, ಉಪಚಾರ ಮರೆಯಲಾಗದ್ದು. ಪ್ರತಿ ಹಂತದಲ್ಲಿಯೂ ಚಹಾ, ಟಿಪಿನ್, ಶರಬತ್ತು, ಎಲೆ ಅಡಿಕೆ ಸೇರಿದಂತೆ ಎಲ್ಲವನ್ನೂ ಪೂರೈಕೆ ಮಾಡಿ ಸಾಧ್ಯವಾದಷ್ಟು ನಮ್ಮ ಹಸಿವು ನೀಗಿಸುವ ಪ್ರಯತ್ನವನ್ನು ಮಾಡಿದರು. ಕೆಲವರು ಪ್ರತಿ ದಿನವೂ ಊಟ ಉಪಚಾರಕ್ಕಾಗಿ ಆತ್ಮೀಯತೆಯಿಂದ ಕರೆಯುತ್ತಿದ್ದು ಊರವರು ಶಿಕ್ಷಕರ ಮೇಲಿರುವ ಪ್ರೀತಿಯನ್ನು ತೋರಿಸುತ್ತಿತ್ತು. ಇದೇ ಪ್ರೀತಿ, ವಿನಯತೆ, ಗೌರವ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ಪಟ್ಟಣಗಳಿಗೆ ವಿರಳವಾಗಿತ್ತು. ಪಟ್ಟಣ, ನಗರ ಪ್ರದೇಶದ ಜನರು ಓದು ಅವಕಾಶಗಳಿಂದ ನಮಸ್ಕಾರ ಗ್ರಾಮೀಣ ಭಾಗದ ಜನರಿಗಿಂತ ಸಾಕಷ್ಟು ಮುಂದಿದ್ದರು ಕೆಲ ನಗರ ವಾಸಿಗಳ ವರ್ತನೆ ಕಂಡಾಗ ಅವರ ಸಾಮಾಜಿಕ ನಡತೆ, ನಡವಳಿಕೆ ರೇಜಿಗೆ ಹುಟ್ಟಿಸುವಂತಿತ್ತು. ಮನೆಬಾಗಿಲಗೆ ಬಂದಂತಹ ಶಿಕ್ಷಕರನ್ನು ಸಂಶಯದ ಕಣ್ಣುಗಳಿಂದ ನೋಡುತ್ತಿದ್ದರು.ಮಾಹಿತಿ ಇವತ್ತು ನೀಡಲು ಸಾಧ್ಯವಿಲ್ಲ. “ನಾಳೆ ಬನ್ನಿ, ನಾಡಿದ್ದು ಬನ್ನಿ” ಎಂಬ ಹಾರಿಕೆಯ ಉತ್ತರಗಳು ಬರುತ್ತಿದ್ದವು. ಕೆಲವರು ತೀರ ಕೆಳಮಟ್ಟದಲ್ಲಿ ಸರ್ಕಾರವನ್ನು ಬೈಯ್ಯುತ್ತಿದ್ದರು. ಸರಕಾರದ ಎಲ್ಲ ಯೋಜನೆಗಳು, ಸೌಲಭ್ಯಗಳನ್ನು ಬಳಸಿಕೊಂಡು ಸರ್ಕಾರವನ್ನು ಬಾಯಿಗೆ ಬಂದಂತೆ ಬೈಯ್ಯುವರ ಮನಸ್ಥಿತಿಯನ್ನು ತೋರಿಸುತ್ತಿತ್ತು. ಸರ್ಕಾರದ ಕೆಲ ಸೌಲಭ್ಯಗಳನ್ನೆ ಬಳಸಿಕೊಂಡರು ಸಹ ಸರ್ಕಾರದ ನೇತಾರರನ್ನು ಬೈದಿದ್ದನ್ನು ನೋಡಲಿಲ್ಲ.
ಗ್ರಾಮೀಣ ಭಾಗದ ಕೆಲ ಕುಟುಂಬಗಳ ಸ್ಥಿತಿ ನಮಗರಿವಿಲ್ಲದೇ ಕಣ್ಣೀರನ್ನು ತರಿಸುವಂತಿತ್ತು. ವಯಸ್ಸಾದ ಅಜ್ಜ- ಅಜ್ಜಿಯರ ಸ್ಥಿತಿ ತುಂಬಾ ತೊಂದರೆಯಲ್ಲಿತ್ತು. ಯಾಕೆ ಆಳುವ ಸರ್ಕಾರಗಳು ಕಲ್ಯಾಣ ರಾಜ್ಯದ ಗುರಿಯಾಗಿಟ್ಟುಕೊಂಡು ಉಚಿತವಾಗಿ ನೀಡುವ ಅಕ್ಕಿ, ಮನೆಯೊಡತಿ ಅಕೌಂಟ್ ಗೆ 2000 ರೂ ಹಣ, ವೃದ್ಧಾಪ್ಯ ವೇತನದ 1400 ರೂ ಹಣ ಎಷ್ಟೊಂದು ಅವಶ್ಯಕತೆಯಿಂದ ಕೂಡಿದೆ ಎಂಬುದನ್ನು ಈ ಕುಟುಂಬಗಳನ್ನು ನೋಡಿದಾಗ ತಿಳಿಯುತ್ತಿತ್ತು.ವಯಸ್ಸಾದ ವೃದ್ಧ ದಂಪತಿಗಳನ್ನು ಗಣತಿಯ ಸಂದರ್ಭದಲ್ಲಿ ಮಾತನಾಡಿಸಿದಾಗ “ಸರ್ಕಾರದಿಂದ ಬರುವ ಉಚಿತ ಅಕ್ಕಿ ಮತ್ತು ಗೃಹಲಕ್ಷ್ಮೀ ಮತ್ತು ವೃದ್ದಾಪ್ಯ ವೇತನದಿಂದ ನಮ್ಮ ಬದುಕು ಸಾಗಿದೆ. ಇಲ್ಲದಿದ್ದರೆ ನಾವು ಉಪವಾಸ ಮಲಗಬೇಕಾಗಿತ್ತು. ಇರೋ ಆಸ್ತಿಯನ್ನು ಸಂಬಂಧಿಕರು ಕಸಿದುಕೊಂಡಾರ ಈಗ ನಮಗೆ ಆಸ್ತಿಯೂ ಇಲ್ಲ. ಈ ಮನೆಯೊಂದೆ ಗತಿ” ಇದನ್ನು ಯಾವಾಗ ಕಸಿದುಕೊಳ್ತಾರೋ ಗೊತ್ತಿಲ್ಲ ಎನ್ನುವಾಗ ಅವರ ದುಃಖದ ಕಟ್ಟೆ ಒಡೆದು ಗದ್ಗದಿತರಾಗುತ್ತಿದ್ದರು. ಇನ್ನು ಕೆಲವರು ಮಕ್ಕಳ ನಿರ್ಲಕ್ಷ್ಯತನದ ಕಾಟದಿಂದ ಬೇಸತ್ತು ಜೋಪಡಿಯಂತಹ ಮನೆಯಲ್ಲಿ ವಾಸವಾಗಿದ್ದರು. ಇನ್ನು ಕೆಲವರು ಸುತ್ತಲೂ ನಾಲ್ಕು ತಗಡುಗಳ ಮಧ್ಯೆ ಮನೆಯನ್ನು ಮಾಡಿಕೊಂಡಿದ್ದರು. ಬಾತ್ ರೂಮಿಗೆ ಬದಲಾಗಿ ಮನೆಯ ಪಕ್ಕದಲ್ಲಿಯೇ ಸೀರೆಯನ್ನು ಸುತ್ತಿಕೊಂಡು ಬಾತ್ ರೂಮಾಗಿಸಿಕೊಂಡಿದ್ದರು. ಕೆಲ ಮನೆಗಳಲ್ಲಿ ವಯಸ್ಸಾದ ವೃದ್ದೆಯರು ಬದುಕಿನ ನೊಗವನ್ನು ಸಾಗಿಸುತ್ತಿದ್ದನ್ನು ನೋಡಿದಾಗ ಕಣ್ಣಂಚಿನಲ್ಲಿ ನೀರು ಇಳಿಯುತಿತ್ತು.
ಇದರ ನಡುವೆಯೇ ತುಂಡು ಭೂಮಿಯನ್ನು ಹೊಂದಿರುವ, ಭೂಮಿಯ ಇಲ್ಲದ ಅನೇಕ ಕುಟುಂಬಗಳು ನಮಗೆ ಎದುರಾದವು. ಬಹುತೇಕರು ತಮ್ಮ ಜಮೀನನ್ನು ಗುಂಟೆಗಳಲ್ಲಿ ಹೇಳುತ್ತಿದ್ದರು. ಇನ್ನು ಕೆಲವರು ತಮಗೆ ಜಮೀನು ಇಲ್ಲ. ರಟ್ಟೆಯ ಮೇಲೆ ನಮ್ಮ ಜೀವನ ಎಂದು ಹೇಳುತ್ತಿದ್ದರು. ಸರಕಾರವು ಪ್ರತಿ ವರ್ಷವೂ ನೀಡುವ ಯೋಜನೆಗಳು ಇಂತಹ ಬಡವರನ್ನು ತಲುಪದೇ ಯಾರ ಹೊಲಗಳಿಗೆ ಸೇರುತ್ತಿವೆಯೋ ಎಂಬುದು ಗೊತ್ತಾಗಲಿಲ್ಲ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಿಗೆ ನೀಡುವ ಗಂಗಾಕಲ್ಯಾಣ, ಉಚಿತ ಕಾರು ವಿತರಣೆ, ಟ್ರೈ ಸೈಕಲ್ ವಿತರಣೆ ಇಂತಹ ಬಹುತೇಕ ಯೋಜನೆಗಳು ತಲುಪಬೇಕಾದವರಿಗೆ ತಲುಪಬೇಕಿತ್ತೆಂದು ಗಣತಿದಾರರಿಗೆ ಅನಿಸಿದ್ದು ಸುಳ್ಳಲ್ಲ.
ಇನ್ನು ಕೆಲವರು ಬೆಳ ಬೆಳಿಗ್ಗೆಯೇ ಮದಿರೆಯನ್ನು ಸೇವಿಸಿ ಹಳ್ಳಿಯಿಂದ ದಿಲ್ಲಿ ವರಗೂ
ತಮಗಿರುವ ರಾಜಕೀಯ ವಸೂಲಿ ಯನ್ನು ಹೇಳುತ್ತಿದ್ದರು. ನಾಡನಾಯಕನವರೆಗೆ ತನಗಿರುವ ಪ್ರಭಾವ ಮತ್ತು ವಿಧಾನಸೌಧದಲ್ಲಿ ತನಗಾಗಿ ಮೀಸಲಾಗಿರುವ ಸೀಟಿನ ಬಗ್ಗೆ ಎದೆಯುಬ್ಬಿಸಿ ಹೇಳುತ್ತಿದ್ದರು. ರಾತ್ರಿವರೆಗೂ ಸಮೀಕ್ಷೆಯನ್ನು ಮಾಡುವ ಗಣತಿದಾರರಿಗೆ “ರಾತ್ರಿ ಸಮಯದಲ್ಲಿ ನಿಮಗೆ ಗಣತಿ ಅಧಿಕಾರ ನೀಡಿದವರು ಯಾರು? ಎಸ್ ಪಿ ಜೊತೆಗೆ ಮಾತನಾಡುತ್ತೇನೆ” ಎಂದು ಖಡಕ್ ಆಗಿ ಹೇಳುವಾಗಿನ ಅವರ ಗತ್ತು ನೋಡುವಂತಿರುತಿತ್ತು. ಕೆಲ ವಯಸ್ಸಾದ ಅಜ್ಜ ಅಜ್ಜಿಯರ ಕರೆನ್ಸಿ ಖಾಲಿಯಾದ ಸಿಮ್ ಗಳಿಗೆ ರೀ ಚಾರ್ಜ್ ಮಾಡಿಸಿ ಒಟಿಪಿ ತೆಗೆದುಕೊಳ್ಳುವುದು ಆಗಾಗ ನಡೆಯುತ್ತಲಿರುತಿತ್ತು. ಇದರ ನಡುವೆ ಮದಿರೆ ಪ್ರಿಯರ ಮಾತುಗಳು ನಮ್ಮೊಂದಿಗೆ ಸಾಗುತ್ತಿದ್ದವು.
ಸರಕಾರವು ತುಂಬಾ ಇಚ್ಛಾಶಕ್ತಿಯಿಂದ ಈ ಸಮೀಕ್ಷೆಯನ್ನು ಮಾಡಿಸುತ್ತಿದೆ. ಈ ಮೂಲಕ ನೈಜ ದತ್ತಾಂಶಗಳ ಮೂಲಕ ಎಲ್ಲ ವರ್ಗಗಳನ್ನು ತಲುಪುವ ಯೋಜನೆ ಮತ್ತು ಅವಕಾಶಗಳನ್ನು ನೀಡುವ ಜವಾಬ್ದಾರಿ ಸರ್ಕಾರಕ್ಕಿದೆ. ಎಲ್ಲ ಸಮುದಾಯಗಳು ತಮ್ಮ ಜನಸಂಖ್ಯೆ ಲಕ್ಷ, ದಶಲಕ್ಷ, ಕೋಟಿ ಲೆಕ್ಕಾಚಾರದಲ್ಲಿ ಮಂಡಿಸಿ ಸಿಗಬೇಕಾದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅವಕಾಶಗಳನ್ನು ಪಡೆಯುತ್ತಿವೆ.ಕೆಲ ಸಮುದಾಯಗಳು ಹೊಟ್ಟೆ ಬೀರಿಯುವಂತೆ ಊಟ ಮಾಡಿವೆ. ಇನ್ನು ಕೆಲ ಸಮುದಾಯಗಳಿಗೆ ಊಟದ ತಟ್ಟೆಯಲ್ಲಿ ಅನ್ನವನ್ನೇ ನೀಡಿಲ್ಲ. ಹೀಗಾಗಿ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಸಾಮಾಜಿಕ ಸಮೀಕ್ಷೆ ಅವಶ್ಯಕತೆಯಿಂದ ಕೂಡಿದೆ. ಇನ್ನು ಕೆಲ ಸಮುದಾಯಗಳು ಶೈಕ್ಷಣಿಕ ಅವಕಾಶಗಳನ್ನು ಬಳಸಿಕೊಂಡು ಸಾಕಷ್ಟು ಅಭಿವೃದ್ಧಿಯನ್ನು ಕಂಡಿವೆ. ಕೆಲ ಸಮುದಾಯಗಳು ತಮ್ಮ ಮೂಲ ಕಸಬು ದಾಟದೇ ಅದೇ ಕಸುಬಿನಲ್ಲಿ ಕೊಳೆಯುತ್ತಿವೆ. ಕೆಲ ಸಮುದಾಯಗಳು ಯಾವುದೇ ಕುಲಶಾಸ್ತ್ರೀಯ ಅಧ್ಯಯನವಿಲ್ಲದೇ ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಸೇರಿಕೊಂಡಿವೆ. ಅವಕಾಶಗಳು ಸಮಾನವಾಗಿ ದೊರೆಯಬೇಕಾದ ಕಾರಣದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ತೀರ ಅವಶ್ಯಕತೆಯಿಂದ ಕೂಡಿದೆ. ಸರಕಾರವು ನೂರಾರು ಕೋಟಿಗಳನ್ನು ಖರ್ಚು ಮಾಡಿ ರಾಜ್ಯದ ಜನರ ವಾಸ್ತವ ಬದುಕು ತಿಳಿಯುವಂತೆ ಪ್ರಯತ್ನವನ್ನು ಕೆಲವರು ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತ ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕಾಗಿತ್ತು.ಜೊತೆಗೆ ಎಲ್ಲ ವರ್ಗದವರ ಬಡ ಜನರ ಬಗ್ಗೆ ಚಿಂತಿಸಬೇಕಾದುದ್ದು ತುಂಬಾ ಅವಶ್ಯಕತೆಯಿಂದ ಕೂಡಿದೆ.

ಮಲ್ಲಪ್ಪ ಫ ಕರೇಣ್ಣನವರ

ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು ಹನುಮಾಪುರ ರಾಣೇಬೆನ್ನೂರ 

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಗೆ 2 “ಮಕ್ಕಳ ಚಂದಿರ ಪ್ರಶಸ್ತಿ”

ಕಾಡುಮೇಡು ಹಾಗೂ ಬೆರಗು ಕೃತಿಗಳಿಗೆ 2023ನೇ ಸಾಲಿನ ಪ್ರಶಸ್ತಿ ಪ್ರಕಟ ಹಾವೇರಿಗೆ 2...

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಸದೃಢವಾದ ದೇಹಕ್ಕೆ ಸದೃಢವಾದ...