
ಹಾವೇರಿ: ನಗರದ ಪ್ರತಿಯೊಂದು ಆಗು-ಹೋಗುಗಳಿಗೆ ಸ್ಪಂದಿಸಬೇಕಾದ ಇಲ್ಲಿನ ನಗರಸಭೆಯ ಆಡಳಿತ ಯಂತ್ರ ಸಂಪೂರ್ಣ ಕುಸಿದುಹೋಗಿದ್ದು, ಯಾವಬ್ಬ ಅಧಿಕಾರಿಯಾಗಲಿ, ಸಿಬ್ಬಂದಿಯಾಗಲಿ ಸಾರ್ವಜನಿಕರಿಗೆ ನಗರಸಭೆಯಲ್ಲಿ ಲಭ್ಯವಾಗದೇ ಕಳೆದ ೬-೭ತಿಂಗಳಿಂದ ಇ-ಸ್ವತ್ತು ಸೇರಿದಂತೆ ಮನೆ ಪರವಾನಿಗೆ ಸೇರಿದಂತೆ ಅನೇಕ ಕಡತಗಳು ದೂಳುತಿನ್ನುತ್ತವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಆರಂಭವಾದಾಗಿನಿಂದ ಸಿಬ್ಬಂದಿ ಹಾಗೂ ಅಧಿಕಾರಿಗಳು ಗಣತಿ ನೆಪ ಹೇಳಿ ನಗರಸಭೆಯ ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ಹೋದವರು ಮರಳಿ ನಗರಸಭೆಗೆ ಬರದೇ ಸಾರ್ವಜನಿಕರಿಗೆ ತೀವೃ ತೊಂದರೆಗಳಾಗಿದ್ದು, ಸಮೀಕ್ಷೆ ಮುಗಿದರೂ ಸಹ ಸಿಬ್ಬಂದಿಯಾಗಲಿ, ಅಧಿಕಾರಿಗಳಾಗಲಿ ಕಚೇರಿಯಲ್ಲಿ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿರುವ ಸಾರ್ವಜನಕರು ಶುಕ್ರವಾರ ಮಧ್ಯಾಹ್ನ ೧೨.೩೦ ಗಂm ಆದರೂ ನಗರಸಭೆಯಲ್ಲಿ ಯಾವ ಅಧಿಕಾರಿಗಳು ಬಂದಿಲ್ಲ, ಇದು ನಗರಸಭೆ ವ್ಯವಸ್ಥೆ, ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎನ್ನುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯಲ್ಲಿ ಬಿಲ್ಡಿಂಗ್ ಪರವಾನಿಗೆ ಹಾಗೂ ಕಟ್ಟಡದ ಪ್ರಮಾಣ ಪತ್ರಗಳಿಗೆ ಅಲ್ಲ ದಾಖಲೆಗಳೊಂದಿಗೆ ಅರ್ಜಿಸಲ್ಲಿಸಿ ಐದಾರು ತಿಂಗಳು ಕಳೆದರೂ ಸಹ ಈ ಕಡತಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ತಿಂಗಳುಗಟ್ಟಲೆ ನಗರಸಭೆಗೆ ಓಡಾಡಿ ಓಡಾಡಿ ಸುಸ್ತಾಗಿದ್ದು, ನಗರಸಭೆಗೆ ಬರುವುದು ಹೋಗುವುದೇ ಆಗಿದೆ. ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿ ಕಚೇರಿಯಲ್ಲಿ ಇರುವುದಿಲ್ಲ. ಕೆಲಸಕ್ಕೆ ಚಕ್ಕರ್ ಹಾಕಿ, ಸಂಬಳಕ್ಕೆ ಹಾಜರಾಗುವು ಇವರು ಹೋಗುವದಾದರು ಎಲ್ಲಿಗೆ? ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳಬೇಕು? ಪ್ರತಿಯೊಂದು ಕಡತಗಳಿಗೂ ಕಡ್ಡಾಯವಾಗಿ ಜಣ ನೀಡಲೇಬೇಕು. ಹಣ ಕೊಡದೇ ಯಾವುದೇ ಕೆಲಸಗಳು ನಗರಸಭೆಯಲ್ಲಿ ಆಗುವುದಿಲ್ಲ. ಹಣ ಕೊಟ್ಟರೂ ಸಹ ನಮ್ಮ ಕೆಲಸಗಳು ಆಗುತ್ತಿಲ್ಲ. ಪ್ರತಿಯೊಂದಕ್ಕೂ ಎಜೆಂಟರುಗಳು ಇದ್ದು, ಇವರ ಮುಖಾಂತರ ಹೋಗಬೇಕು. ಹಾಲಿ ಆಡಳಿತ ಮಂಡಳಿಯ ಅವಧಿ ಅ.೩೦ಕ್ಕೆ ಅಂತ್ಯವಾಗುತ್ತಿದ್ದು, ಆಡಳಿತ ಮಂಡಳಿಯವರು ಸಹ ಅಧಿಕಾರಿಗಳಿಗೆ, ಸಿಬ್ಬಂದಿ ಕರ್ತವ್ಯ ಲೋಪದ ಬಗ್ಗೆ ಮೌನವಹಿಸಿದ್ದಾರೆಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ನಗರಸಭೆಯ ಮಾಜಿ ಸದಸ್ಯರುಗಳಾದ ಬಾಬುಸಾಬ್ ಮೊಮಿನಗಾರ, ಶಿವರಾಜ ಮತ್ತಿಹಳ್ಳಿ ಕೊಟ್ಟ ಮಾತನಾಡಿ, ನಗರಸಭೆಯಲ್ಲಿ ಸಾರ್ವಜನಿಕರ ಅರ್ಜಿಗಳ ಕಡತಗಳು ಅಧಿಕಾರಿಗಳ, ಸಿಬ್ಬಂದಿಗಳ ಟೇಬಲಗಳ ಮೇಲೆ ದೂಳು ತಿನ್ನುತ್ತಿವೆ. ಕೆಲವೊಂದು ಫೈಲಗಳು ಹರಿದು ಹೋಗುತ್ತಿದ್ದು, ಈ ಕೆಲಸಗಳಿಗೆ ಯಾವಾಗ ಮುಕ್ತಿ ಎಂದು ಸಾರ್ವಜನಿಕರು ಪೌರಾಯುಕ್ತರನ್ನು ಪ್ರಶ್ನಿಸುತ್ತಿದ್ದಾರೆ. ನಾವು ಹಲವಾರು ಬಾರಿ ಕಡತಗಳ ಇತ್ಯರ್ಥಕ್ಕೆ ಮನವಿ ಮಾಡಿದರೂ ಸಹ ಅಧಿಕಾರಿಗಳು ಎನ್ನುತ್ತಿಲ್ಲ. ಸಾರ್ವಜನಿಕರು ಯಾವುದೇ ಅಧಿಕಾರಿಗಳಿಗೆ ಹೇಳಿದರೂ ಸ್ಪಂದನೆ ಇಲ್ಲ, ಈ ಬಗ್ಗೆ ಜಿಲ್ಲಾಡಳಿತಕ್ಕೆ, ಜನಪ್ರತಿನಿದಿನಗಳಿಗೆ ಹೇಳಿದರು ಸ್ಪಂದನೆ ಸಿಗುತ್ತಿಲ್ಲ. ಜಿಲ್ಲಾಡಳಿತ, ಜನಪ್ರತಿನಿದಿನಗಳು ಹಾಗೂ ಉಸ್ತುವಾರಿ ಸಚಿವರುಗಳು ನಗರಸಭೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಬಗೆಹರಿಸಿ ಓ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಮನವಿ ಮಾಡಿಕೊಂಡಿದ್ದಾರೆ.

