ಹಾವೇರಿ: ಆಸಿಡ್ ಎರಚಿ ಮಹಿಳೆಯ ಕೊಲೆಗೆ ಯತ್ನ- ಅಪರಾಧಿಗೆ ೧೦ ವರ್ಷ ಕಾರಾವಾಸ ಶಿಕ್ಷೆ

Date:

ಹಾವೇರಿ:ನಗರದ ಜೈ ಕರ್ನಾಟಕ ಇಂಜನೀಯರಿಂಗ್ ವರ್ಕ್ಸ್ ಅಂಗಡಿಯ ಮುಂದೆ ಮಹಿಳೆ ಮೇಲೆ ಆಸಿಡ್ ಎರಚಿ ಕೊಲೆ ಮಾಡಲು ಪ್ರಯತ್ನಿಸಿ ತೀವ್ರ ಗಾಯಪಡಿಸಿದ ಅಪರಾಧಿ ಪ್ರಸಾದ ಉರ್ಪ್ ಪ್ರಶಾಂತ ತಂದೆ ಶಿವಾನಂದಪ್ಪ ಚಿಕ್ಕಳ್ಳಿ ಎಂಬವರಿಗೆ ೧೦ ವರ್ಷಗಳ ಕಾರಾವಾಸ ಶಿಕ್ಷೆ ಹಾಗೂ ದಂಡ ವಿಧಿಸಿ ಹಾವೇರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶರಾದ ನಿಂಗೌಡ ಪಾಟೀಲ್ ಅವರು ಮಂಗಳವಾರ ತೀರ್ಪು ನೀಡಿದ್ದಾರೆ.
ನೊಂದ ಮಹಿಳೆಯ ಮೇಲೆ ದಿನಾಂಕ ೨೮-೦೧-೨೦೨೦ ರಂದು ಸಾಯಂಕಾಲ ೬.೪೫ ರ ಸುಮಾರಿಗೆ ನಗರದ ಜೈ ಕರ್ನಾಟಕ ಇಂಜಿನಿಯರಿಂಗ್ ವರ್ಕ್ಸ್ ಅಂಗಡಿಯ ಮುಂದೆ ಆಸಿಡ್ ಎರಚಿ ಕೊಲೆ ಮಾಡಲು ಪ್ರಯತ್ನಿಸಿ ತೀವ್ರ ಗಾಯಪಡಿಸಿರುವಾದಾಗಿ ದೂರ ದಾಖಲಾಗಿತ್ತು ಈ ಪ್ರಕರಣದ ಕುರಿತು ತನಿಖಾಧಿಕಾರಿಗಳಾದ ಹಾವೇರಿ ಮಹಿಳಾ ಪೊಲೀಸ್ ಠಾಣೆ ಸಿ ಪಿ ಐ ಶ್ರೀ ಮಂಜಣ್ಣ ಟಿ ಅವರು ತನಿಖೆಕೈಗೊಂಡು ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಆರೋಪಿತನ ಮೇಲೆ ಕಲಂ:ಬಾದಂಸಂಕಲಂ: ೩೨೬-ಎ. ೩೦೭, ೫೦೬ ಐಪಿಸಿ ರಡಿಯಲ್ಲಿ ಆಪಾದನೆಗಳು ರುಜುವಾತದ ಹಿನ್ನಲೆಯಲ್ಲಿ ಆರೋಪಿತನಿಗೆ ೧೦ ವರ್ಷಗಳ ಕಾರಾವಾಸ ಶಿಕ್ಷೆ ಮತ್ತು ರೂ ೧,೭೦,೦೦೦-೦೦ ಗಳ ದಂಡ ವಿಧಿಸಿ ನ್ಯಾಯದೀಶರು ತೀರ್ಪು ನೀಡಿರುತ್ತಾರೆ.
ಅಭಿಯೋಜನೆ ಪರವಾಗಿ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ವಿಜಯ ಕುಮಾರ ಎಸ್ ಪಾಟೀಲ್ ಅವರು ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಯಲ್ಲಿ  ಶ್ರದ್ಧಾ-ಭಕ್ತಿಯಿಂದ ರಾಮನವಮಿ  ಆಚರಣೆ

ಹಾವೇರಿಯಲ್ಲಿ  ಶ್ರದ್ಧಾ-ಭಕ್ತಿಯಿಂದ ರಾಮನವಮಿ  ಆಚರಣೆ ಹಾವೇರಿ: ಶ್ರೀರಾಮಚಂದ್ರನ ಜನ್ಮ ದಿನವನ್ನು ಶುಕ್ರವಾರ  ಶ್ರದ್ಧಾ-ಭಕ್ತಿಯಿಂದ...

ಹಾವೇರಿ: ಬೆಂಬಲಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

ಹಾವೇರಿ: ಬೆಂಬಲಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ...

ಹಾವೇರಿ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ ಮಾಡಿದವರಿಗೆ ೨ ವರ್ಷ ಜೈಲು ಶಿಕ್ಷೆ ಹಾಗೂ ರೂ.೧೮ ಸಾವಿರ ದಂಡ

ಹಾವೇರಿ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ ಮಾಡಿದವರಿಗೆ ೨ ವರ್ಷ...

ರಾಣೆಬೆನ್ನೂರ ಅರಣ್ಯದಲ್ಲಿ “೩೫೦೦ ವರ್ಷಗಳ ಹಿಂದಿನ ಶಿಲಾಗೋರಿ” ಪತ್ತೆ.!!

  ರಾಣೆಬೆನ್ನೂರ ಅರಣ್ಯದಲ್ಲಿ "೩೫೦೦ ವರ್ಷಗಳ ಹಿಂದಿನ ಶಿಲಾಗೋರಿ" ಪತ್ತೆ.!! ರಾಣೆಬೆನ್ನೂರ: ಪುರಾತತ್ವ...