

ಹಾವೇರಿ : ಏಪ್ರಿಲ್ ೧ರಿಂದ ೧೫ರವರೆಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ: ಡಿಸಿ ಡಾ. ವಿಜಯಮಾಹಾಂತೇಶ್
ಹಾವೇರಿ : ಇದೇ ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ ನಡೆಯಲಿದೆ. ಕೇಂದ್ರ ಗೃಹ ಸಚಿವಾಲಯ 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರಧಾನ ಜನಗಣತಿ ಅಧಿಕಾರಿ ಡಾ. ವಿಜಯಮಾಹಾಂತೇಶ್ ದಾನಮ್ಮನವರ ತಿಳಿಸಿದ್ದಾರೆ.
ಕರ್ನಾಟಕದಲ್ಲಿ 2027ರ ಜನಗಣತಿಯ (Self-Enumeration) ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿಯ ಸ್ವಯಂ ಗಣತಿಯನ್ನು ಏಪ್ರಿಲ್ 1ರಿಂದ 15ರವರೆಗೆ ಅಂದರೆ 15 ದಿನ ನಡೆಸಲು ಸರ್ಕಾರ ಆದೇಶ ಹೊರಡಿಸಿದೆ.
ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿ (HLO) (Phase-I, Houselisting and Housing Census (HLO)) ಯಲ್ಲಿ ಮೊದಲ 15 ದಿನಗಳಕಾಲ ವೆಬ್ ಸೈಟ್ ಪೋರ್ಟಲ್ (https://se.census.gov.in) ಮೂಲಕ ಸ್ವಯಂ ಗಣತಿ (Self-Enumeration) ಗೆ ಅವಕಾಶವಿರುತ್ತದೆ.
ಮನೆಯ ಯಾವುದೇ ಒಬ್ಬ ಸದಸ್ಯರು ಸುಮಾರು 15 ರಿಂದ 20 ನಿಮಿಷಗಳ ಅವಧಿಯಲ್ಲಿ ಸ್ವಯಂ-ಗಣತಿ ಮಾಡಿ ಮನೆಯ ವಿವರಗಳನ್ನು ಭರ್ತಿಮಾಡಬಹುದಾಗಿದೆ ಮತ್ತು ಮೊಬೈಲ್/ ಇಮೇಲ್ ನಲ್ಲಿ ಸ್ವಯಂ-ಗಣತಿ ಐಡಿ (SE-ID) ಪಡೆಯಬಹುದಾಗಿದೆ. ಗಣತಿದಾರರು ಮನೆಗೆ ಭೇಟಿ ನೀಡಿದಾಗ, ದೃಢೀಕರಿಸಲು ಮತ್ತು ಸ್ವಯಂ-ಗಣತಿ ದತ್ತಾಂಶ ಅಂತಿಮ ಸಲ್ಲಿಕೆಗಾಗಿ SE-ID ಯನ್ನು ಅವರೊಂದಿಗೆ ಹಂಚಿ ಕೊಳ್ಳಬೇಕಾಗಿರುತ್ತದೆ.
ಈ ಸ್ವಯಂ-ಗಣತಿ (Self-Enumeration) ಯಲ್ಲಿ ಭಾಗವಹಿಸುವಿಕೆಯನ್ನು ಸುಗಮಗೊಳಿಸಲು, ಸ್ವಯಂ-ಗಣತಿಯ ಹಂತ ಹಂತದ ಪ್ರಕ್ರಿಯೆಯನ್ನುಕೈಗೊಳ್ಳಲು ಅನುಕೂಲವಾಗುತ್ತದೆ.
ಜಿಲ್ಲೆಯ ಸಾರ್ವಜನಿಕ ರು ದಿ. 01-04-2026 ರಿಂದ 15-04-2026ರೊಳಗಾಗಿ ಸ್ವಯಂ-ಗಣತಿ (Self Enumeration) ಮಾಡಿಕೊಳ್ಳಲು ಕೋರಲಾಗಿದೆ.
ಏ.16 ರಿಂದ ಮೇ 15 ಈ ಅವಧಿಯಲ್ಲಿ ಗಣತಿದಾರರು ಮನೆಗೆ ಭೇಟಿ ನೀಡಿ ವಿವರಗಳನ್ನು ಪರಿಶೀಲಿಸುತ್ತಾ ರೆ.
ಗೌಪ್ಯತೆಯ ಖಾತರಿ: 1948 ರ ಜನಗಣತಿ ಕಾಯ್ದೆಯ ಅಡಿಯಲ್ಲಿ ಸಂಪೂರ್ಣ ಗೌಪ್ಯತೆ ಹಾಗೂ ಮಾಹಿತಿಯು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ವರದಿಗಳಲ್ಲಿ ಒಟ್ಟು ಅಂಕಿಅಂಶಗಳನ್ನು ಮಾತ್ರ ಪ್ರಕಟಿಸಲಾಗುತ್ತದೆ. ತೆರಿಗೆ, ಪೊಲೀಸ್ ಅಥವಾ ತನಿಖೆಯಲ್ಲಿ ಉಪಯೋಗಿಸುವುದಿಲ್ಲ. ಹಾಗಾಗಿ ನಿಖರವಾದ ಮಾಹಿತಿಯನ್ನು ಒದಗಿಸಲು ಕೋರಲಾಗಿದೆ.

