
ಹಾವೇರಿ ಜಿಲ್ಲೆಯಲ್ಲಿ ಎಲ್‌ಪಿಜಿ ಸಮಸ್ಯೆ ಇಲ್ಲ-ಸಾರ್ವಜನಿಕರು ಆತಂಕಕ್ಕೆ ಒಳಪಡಬಾರದು
-ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ
ಹಾವೇರಿ: ಎಲ್‌ಪಿಜಿ ಸರಬರಾಜಿನ ಬಗ್ಗೆ ಜಿಲ್ಲೆಯ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ. ಜಿಲ್ಲೆಯಲ್ಲಿ ಎಲ್.ಪಿ.ಜಿ ಸಮಸ್ಯೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಗೃಹಬಳಕೆ ಸಿಲೆಂಡರ್‌ಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲೆಯ ಗ್ಯಾಸ್ ಏಜೆನ್ಸಿ ಮಾಲೀಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾಡಳಿತವು ತೈಲ ಕಂಪನಿಯ ಅಧಿಕಾರಿಗಳೊಂದಿಗೆ (IOC BPC HPC) ಸಭೆ ನಡೆಸಿ ಗೃಹ ಬಳಕೆಯ ಎಲ್‌ಪಿಜಿ ಸಿಲೆಂಡರ್‌ಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದ್ದು, ಸಮಸ್ಯೆ ಇಲ್ಲದಿರುವ ಬಗ್ಗೆ, ತೈಲ ಕಂಪನಿಯ ಅಧಿಕಾರಿಗಳಿಂದ ಖಾತ್ರಿ ಪಡೆಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅನಗತ್ಯ ಬುಕಿಂಗ್ ಬೇಡ: ಜಿಲ್ಲೆಯಲ್ಲಿ ೪,೫೬,೭೨೫ ಗ್ರಾಹಕರಿದ್ದು, ಈ ಪೈಕಿ ಐಒಸಿ-೬೭,೮೩೭, ಬಿಪಿಸಿ-೩೭೯೩೬ ಎಚ್‌ಪಿಸಿ- ೩,೫೦,೯೫೨ ಗ್ರಾಹಕರಿದ್ದು, ದೇಶದಲ್ಲಿ ಪ್ರಸ್ತುತ ಲಭ್ಯವಿರುವ ದೇಶೀಯ ಎಲ್‌ಪಿಜಿ ದಾಸ್ತಾನು ಗೃಹ ಬಳಕೆ ಗ್ರಾಹಕರಿಗೆ ಅಗತ್ಯವಿರುವ ಬಗ್ಗೆ ಮಾಹಿತಿ ನೀಡಿದ್ದು, ಜಿಲ್ಲೆಯ ಗ್ರಾಹಕರು ಎಲ್‌ಪಿಜಿ ಸರಬರಾಜಿನ ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಗ್ರಾಹಕರು ಆತಂಕದಲ್ಲಿ ತುರ್ತು ಅನಗತ್ಯ ಬುಕ್ಕಿಂಗ್ ಮಾಡದೇ, ಕೃತಕ ಬೇಡಿಕೆ ಸೃಷ್ಟಿಯಾಗದಂತೆ ಸಮರ್ಪಕವಾಗಿ ಬಳಕೆ ಮಾಡಲು ಹಾಗೂ ಸಮತೋಲನ ಕಾಪಾಡಲು ಕೋರಲಾಗಿದೆ.
ಗ್ರಾಹಕರು ಪ್ರತಿ ಗೃಹ ಬಳಕೆಯ ಸಿಲೆಂಡರ್‌ನ್ನು ಬುಕ್ಕ ಮಾಡಿ ಪಡೆದುಕೊಂಡ ನಂತರ ಮತ್ತೊಂದು ಗೃಹಬಳಕೆಯ ಸಿಲೆಂಡರಗಾಗಿ ನಗರ ಪ್ರದೇಶದಲ್ಲಿ ೨೫ ದಿನಗಳವರೆಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ೪೫ ದಿನಗಳವರೆಗೆ ಕಂಪನಿ ಅವಕಾಶ ನೀಡಿರುತ್ತದೆ.
ಪ್ರಸ್ತುತ ಕೊಲ್ಲಿ ರಾ? ಯುದ್ಧದ ವರಿಣಾಮವಾಗಿ ಉದ್ಭವಿಸಿರುವ ಎಲ್‌ಪಿಜಿ ಸರಬರಾಜು ಬಗ್ಗೆ ಸಮರ್ಪಕವಾಗಿ ಪರಿಹಾರ ಕಂಡುಕೊಳ್ಳುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ಕ್ರಮಗಳನ್ನು ಕೈಗೊಂಡಿರುತ್ತದೆ. ಗ್ರಾಹಕರಿಗೆ ಏಜೆನ್ಸಿಯಲ್ಲಿ ನೇರವಾಗಿ ಬುಕ್ಕಿಂಗ್ ಮಾಡಲು ಅವಕಾಶವಿರುವುದಿಲ್ಲ. ಪರ್ಯಾಯವಾಗಿ IOC, BPC HPC LPG ಮತ್ತು ಊPಅ ಐPಉ ಕಂಪನಿಗಳಲ್ಲಿ ಗ್ರಾಹಕರು ಈ ಕೆಳಗಿನಂತೆ ಬುಕ್ಕಿಂಗ್ ಮಾಡಬಹುದಾಗಿದೆ.
ಸಾಮಾನ್ಯವಾಗಿ Miss call (Registered Mobil Number) ಮೂಲಕ ಬುಕಿಂಗ್ ಮಾಡುತ್ತಿದ್ದು ಪರ್ಯಾಯವಾಗಿ Company app(HP Pay, Indian Oil One App. Hello BPC), Company portal, Whats app. IVRS, BBPS, SMS ಪ್ಯಾಟ್ ಫಾರಂಗಳನ್ನು ಬಳಸಬಹುದಾಗಿದೆ.
ಕಂಟ್ರೋಲ್ ರೂಮ್: ತಾಲೂಕುಗಳಲ್ಲಿ ಎಲ್.ಪಿ.ಜಿ ಸಿಲೆಂಡರ್‌ಗಳ ಬಗ್ಗೆ ಸಮಸ್ಯೆ ಕಂಡು ಬಂದಲ್ಲಿ ತಹಶೀಲ್ದಾರ ಕಚೇರಿಗಳಲ್ಲಿ ಕಂಟ್ರೋಲ್ ರೂಮ್‌ಗಳನ್ನು ತೆರೆಯಲಾಗಿದ್ದು, ಈ ಕಂಟ್ರೋಲ್ ರೂಮ್ ದೂರವಾಣಿಗೆ ಕರೆ ಮಾಡಬಹುದಾಗಿದೆ ಎಂದರು.
ಬ್ಯಾಡಗಿ ತಹಶೀಲ್ದಾರ ಕಚೇರಿ- ೦೮೩೭೫-೨೨೮೪೨೮, ಹಾನಗಲ್ ತಹಶೀಲ್ದಾರ ಕಚೇರಿ-೦೮೩೭೯-೨೬೨೨೪೧, ಹಾವೇರಿ ತಹಶೀಲ್ದಾರ ಕಚೇರಿ– ೦೮೩೭೫-೨೩೨೪೪೭, ರಾಣೇಬೆನ್ನೂರು ತಹಶೀಲ್ದಾರ ಕಚೇರಿ-೦೮೩೭೩- ೨೬೦೪೪೯, ಹಿರೇಕೆರೂರು ತಹಶೀಲ್ದಾರ ಕಚೇರಿ-೦೮೩೭೬-೨೮೨೨೩೧, ಸವಣೂರು ತಹಶೀಲ್ದಾರ ಕಚೇರಿ- ೦೮೩೭೮-೨೪೧೪೨೭, ಶಿಗ್ಗಾಂವ ತಹಶೀಲ್ದಾರ ಕಚೇರಿ-೦೮೩೭೮-೨೨೫೦೪೪ ಹಾಗೂ ರಟ್ಟಿಹಳ್ಳಿ ತಹಶೀಲ್ದಾರ ಕಚೇರಿ-೦೮೩೭೬-೨೦೦೧೪೭ ಸಂಪರ್ಕಿಸಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಆಹಾರ ನೀರಿಕ್ಷಕರನ್ನು ಸಂಪರ್ಕಿಸಬಹುದು.
ಮಾಲತೇಶ ಚನ್ನಬಸಪ್ಪ ಮೇಗಳಮನಿ , ಆಹಾರ ನಿರೀಕ್ಷಕರು ಬ್ಯಾಡಗಿ ೮೩೧೦೭೦೯೩೪೬, ಶ್ರೀಮತಿ ರಾಧಾ ರಾವಳ, ಆಹಾರ ನಿರೀಕ್ಷಕರು ಬ್ಯಾಡಗಿ -೯೭೩೯೫೦೭೪೯೬, ಮಾರುತಿ ಚೋಟಣ್ಣನವರ-ಆಹಾರ ನಿರೀಕ್ಷಕರು ಹಾನಗಲ್ಲ-೯೪೪೮೬೩೭೫೫೮, ಎಮ್ ಎಫ್ ಬಿಂಗಿ, ಆಹಾರ ನಿರೀಕ್ಷಕರು ಹಾನಗಲ್- ೯೭೪೧೮೨೦೭೬೩, ಎಮ್ ಎಸ್ ಪಾಟಿಲ್, ಆಹಾರ ಶಿರಸ್ತೇದಾರರು ಹಾವೇರಿ ೯೯೦೦೩೩೧೬೮೫, ಶಿವರಾಜ ಕಟಗಿ- ಆಹಾರ ನಿರೀಕ್ಷಕರು ಹಾವೇರಿ ೯೮೪೪೨೧೮೭೧೭, ಎಸ್ ಆರ್ ಅಪ್ಪಿನಕೊಪ್ಪ, ಆಹಾರ ಶಿರಸ್ತೇದಾರರು ಹಿರೇಕೆರೂರ-೭೯೭೫೭೭೫೪೬೭, ಚನಬಸವ ಕಾಯಕದ, ಆಹಾರ ನಿರೀಕ್ಷಕರು ಹಿರೇಕೆರೂರ-೭೭೯೫೪೩೫೬೯೩, ಯು ಎನ್ ಸೂರಣಗಿ, ಆಹಾರ ಶಿರಸ್ತೇದಾರರು, ರಾಣೇಬೆನ್ನೂರು -೯೯೧೬೦೭೧೮೩೫,
ಎಮ್ ಸಿ ಮೋಟಗಿ ಆಹಾರ ನಿರೀಕ್ಷಕರು ರಾಣೇಬೆನ್ನೂರು- ೯೭೩೧೭೬೭೪೬೮, ನಟರಾಜ ನಂದಿಹಳ್ಳಿ, ಆಹಾರ ನಿರೀಕ್ಷಕರು ರಾಣೇಬೆನ್ನೂರು -೮೧೯೭೩೮೮೯೯೭, ಸ್ವಿವನ್ ಅಂಗಡಿ, ಆಹಾರ ನಿರೀಕ್ಷಕರು ರಾಣೆಬೆನ್ನೂರು-೯೬೨೦೦೧೯೧೩೨, ಡಿ.ಎಮ್.ಪಾಟೀಲ, ಆಹಾರ ನಿರೀಕ್ಷಕರು ಸವಣೂರು-೯೯೮೬೭೮೬೪೬೬, ಶಾಂತಕುಮಾರ ಯತ್ನಳ್ಳಿ, ಆಹಾರ ನಿರೀಕ್ಷಕರು ಶಿಗಾಂವ್-೯೪೪೮೨೬೭೬೯೩, ಚಂದ್ರಶೇಖರ ಹೆದ್ದಳ್ಳಿ, ಆಹಾರ ನಿರೀಕ್ಷಕರು ರಟ್ಟಿಹಳ್ಳಿ-೯೯೦೧೭೯೧೪೪೪, ಹಾಗೂ ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರ ದೂರವಾಣಿ ಸಂಖ್ಯೆ ೦೮೩೭೫-೨೪೯೦೭೭ ಸಂಪರ್ಕಿಸಬಹುದು.
ಸಿಲೆಂಡರ್ ವರ್ಗಾಯಿಸುವಂತಿಲ್ಲ: ಗೃಹಬಳಕ ಸಿಲೆಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸಬಾರದು. ಅಲ್ಲದೇ ಸಿಲೆಂಡರ್‌ಗಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಂದು ಸಿಲೆಂಡರ್‌ನಿಂದ ಮತ್ತೊಂದು ಸಿಲೆಂಡರ್‌ಗೆ ವರ್ಗಾಯಿಸುವುದು Liquefied Petroleum Gas (REGULATION OF SUPPLY AND DISTRUBUTION) Order 2000 ರನ್ವಯ ಅವರಾಧವಾಗಿರುತ್ತದೆ. ಸಿಲೆಂಡರ್‌ಗಳನ್ನು ಸಾಗಾಣಿಕೆ ಮಾಡುವ ವಾಹನಗಳು ಮತ್ತು ಸಿಬ್ಬಂಧಿಗಳು ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುವಂತಹ ಪ್ರಕರಣಗಳು ಕಂಡುಬಂದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಆಹಾರ ನಾಗಾರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಮಂಜುನಾಥ ಡಿ.ಜೆ., ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಕ್ಷರ ದಾಸೋಹ ಅಧಿಕಾರಿಗಳು, ಜಿಲ್ಲೆಯ ಗ್ಯಾಸ್ ಏಜೆನ್ಸಿ ಮಾಲೀಕರು, ಎಚ್‌ಪಿಸಿ, ಡಿಪಿಸಿ, ಐಡಿಸಿ ಸೇಲ್ಸ್ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು ಹಾಗೂ ಜಿಲ್ಲೆಯ ತಹಶೀಲ್ದಾರರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.

