ಹಾವೇರಿ ಜಿಲ್ಲೆಯಲ್ಲಿ ಶನಿವಾರದಿಂದಲೇ ನೀತಿ ಸಂಹಿತೆ ಜಾರಿ: ಏ.೧೨ ರಿಂದ ನಾಮಪತ್ರ ಸಲ್ಲಿಕೆ ಆರಂಭ

Date:

ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ- ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ
ಹಾವೇರಿ: ಹದಿನೆಂಟನೆಯ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದು, ಇಂದಿನಿಂದಲೇ (ಮಾರ್ಚ್ ೧೬ರ ಸಂಜೆಯಿಂದ) ಮಾದರಿ ನೀತಿ ಸಂಹಿತೆ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ. ಹಾವೇರಿಯ ಐದು ವಿಧಾನಸಭಾ ಕ್ಷೇತ್ರ ಹಾಗೂ ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರ ಒಳಗೊಂಡ ಹಾವೇರಿ ಲೋಕಸಭಾ ಚುನಾವಣೆಯನ್ನು ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಏಪ್ರಿಲ್ ೧೨ ರಿಂದ ಹಾವೇರಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಮಾಧ್ಯಮಗೋಷ್ಠಿ ನಡೆಸಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಾವೇರಿ ಕ್ಷೇತ್ರದ ಚುನಾವಣಾ ಸಿದ್ಧತೆ ಕುರಿತಂತೆ ಮಾಹಿತಿ ನೀಡಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ ಕರ್ನಾಟಕ ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆಯಲಿದೆ. ಹಾವೇರಿ ಲೋಕಸಭಾ (ಹಾವೇರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ಹಾಗೂ ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರ) ಚುನಾವಣೆ ಮೂರನೆಯ ಹಂತದಲ್ಲಿ ನಡೆಯಲಿದೆ. ದಿನಾಂಕ ೧೨-೦೪-೨೦೨೪ ರಂದು ಅಧಿಸೂಚನೆ ಹೊರಡಿಸಲಾಗುವುದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.
ವೇಳಾಪಟ್ಟಿ: ಚುನಾವಣಾ ವೇಳಾಪಟ್ಟಿಯನ್ನು ವಿವರಿಸಿದ ಜಿಲ್ಲಾಧಿಕಾರಿಗಳು ದಿನಾಂಕ ೧೨-೦೪-೨೦೨೪ ರಂದು ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ದಿನಾಂಕ ೧೯-೦೪-೨೦೨೪ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ದಿನಾಂಕ ೨೦-೦೪-೨೦೨೪ ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ದಿನಾಂಕ ೨೨-೦೪-೨೦೨೪ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ದಿನಾಂಕ ೦೭-೦೫-೨೦೨೪ ರಂದು ಮತದಾನ ನಡೆಯಲಿದೆ. ದಿನಾಂಕ ೦೪-೦೬-೨೦೨೪ ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ದಿನಾಂಕ ೦೬-೦೬-೨೦೨೪ ರೊಳಗಾಗಿ ಚುನಾವಣೆಯ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.
ಕ್ಷೇತ್ರ ವ್ಯಾಪ್ತಿ: ಹಾವೇರಿ ಲೋಕಸಭಾ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಹಾವೇರಿ ಜಿಲ್ಲೆಯ ಹಾವೇರಿ, ರಾಣೇಬೆನ್ನೂರು, ಬ್ಯಾಡಗಿ, ಹಿರೇಕೆರೂರು, ಹಾನಗಲ್ ಹಾಗೂ ಗದಗ ಜಿಲ್ಲೆಯ ಶಿರಹಟ್ಟಿ, ಗದಗ ಹಾಗೂ ರೋಣ ವಿಧಾನಸಭಾ ಕ್ಷೇತ್ರಗಳು ಒಳಗೊಂಡಿದೆ. ಹಾವೇರಿ ಜಿಲ್ಲಾಧಿಕಾರಿಗಳು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿದ್ದು, ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಬೇಕು ಎಂದು ತಿಳಿಸಿದರು.
ಮತದಾರರ ವಿವರ: ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೮,೯೫,೩೬೬ ಪುರುಷರು, ೮,೮೨,೪೩೦ ಮಹಿಳೆಯರು ಹಾಗೂ ೮೧ ಇತರರು ಸೇರಿದಂತೆ ೧೭,೭೭,೮೭೭ ಮತದಾರಿದ್ದಾರೆ(೧೬-೦೩-೨೦೨೪ರಂತೆ). ಈ ಪೈಕಿ ೮೫ ವರ್ಷ ಮೇಲ್ಪಟ್ಟ ೧೫,೫೨೧ ಮತದಾರರು, ೨೭,೪೩೪ ವಿಕಲಚೇತನ ಮತದಾರರು, ೧,೬೦೭ ಸೇವಾ ಮತದಾರರು ಹಾಗೂ ೧೮ ರಿಂದ ೧೯ ವರ್ಷದ ೫೦,೬೫೮ ಮತದಾರರಿದ್ದಾರೆ. ಈ ಪೈಕಿ ೮೫ ವರ್ಷ ಮೇಲ್ಪಟ್ಟ ೧೫,೫೨೧ ಮತದಾರರು ಹಾಗೂ ವಿಕಲಚೇತನ ೨೭,೪೩೪ ಮತದಾರರು ಒಳಗೊಂಡಂತೆ ೪೨,೯೫೫ ಮತದಾರರಿಗೆ ಅವರು ಬಯಸಿದರೆ ಮನೆಯಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು. ಮೊದಲೇ ಅವರಿಗೆ ಮತದಾನದ ಕೋರಿಕೆ ಪತ್ರ ನೀಡಲಾಗುವುದು. ಮನೆಯಲ್ಲೇ ಮತದಾನ ಮಾಡಲು ಬಯಸಿ ನಮೂನೆಯನ್ನು ಭರ್ತಿಮಾಡಿ ಸಹಿಮಾಡಿಕೊಟ್ಟರೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಮತಯಂತ್ರ ವಿವರ: ೩,೭೪೬ ಬ್ಯಾಲೆಟ್ ಯುನಿಟ್, ೨೪೯೭ ಕಂಟ್ರೋಲ್ ಯುನಿಟ್ ಹಾಗೂ ೨,೬೩೦ ವಿವಿಪ್ಯಾಟ್ ಯಂತ್ರಗಳ ಲಭ್ಯವಿದೆ. ಮೊದಲ ಹಂತದ ತಪಾಸಣೆ ಕಾರ್ಯ ನಡೆಸಲಾಗಿದೆ. ಕ್ಷೇತ್ರವಾರು ಮೊದಲ ಹಂತದ ರ್‍ಯಾಂಡಮೈಜೇಷನ್ ಮಾಡಲಾಗಿದೆ.
ಮತಗಟ್ಟೆ ವಿವರ: ಹಾವೇರಿ ಲೋಕಸಭಾ ವ್ಯಾಪ್ತಿಯಲ್ಲಿ ( ಹಾವೇರಿ-ಗದಗ ಜಿಲ್ಲೆ) ೧೩೭೧, ಸ್ಥಳಗಳಲ್ಲಿ ೧೯೮೨ ಮತಗಟ್ಟೆಗಳನ್ನು ತೆರೆಯಲಾಗುವುದು. ೩೯ ದುರ್ಬಲ ಹಾಗೂ ೩೭೦ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ.
ಶಿರಹಟ್ಟಿ ಕ್ಷೇತ್ರದಲ್ಲಿ ೨೫೧, ಗದಗ ಕ್ಷೇತ್ರದಲ್ಲಿ ೨೨೩, ರೋಣ ಕ್ಷೇತ್ರದಲ್ಲಿ ೨೬೭, ಹಾನಗಲ್ ಕ್ಷೇತ್ರದಲ್ಲಿ೨೪೩, ಹಾವೇರಿ ಕ್ಷೇತ್ರದಲ್ಲಿ ೨೬೧, ಬ್ಯಾಡಗಿ ಕ್ಷೇತ್ರದಲ್ಲಿ ೨೪೨, ಹಿರೇಕೆರೂರು ಕ್ಷೇತ್ರದಲ್ಲಿ ೨೨೯ ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ೨೬೬ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದ. ಪ್ರತಿ ಮತಗಟ್ಟೆಯಲ್ಲೂ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಲೈಟಿಂಗ್, ಶೌಚಾಲಯ, ಪಿಠೋಪಕರಣ, ರ್‍ಯಾಂಪ್, ಶೆಲ್ಟರ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
ಗದಗ ಮೂರು ಕ್ಷೇತ್ರಗಳಲ್ಲಿ ತಲಾ ಮೂರರಂತೆ ಹಾಗೂ ಹಾವೇರಿ ಕ್ಷೇತ್ರದ ಐದು ಕ್ಷೇತ್ರಗಳಿಗೆ ತಲಾ ಎರಡರಂತೆ ೧೯ ವಿಡಿಯೋ ಸರ್ವಲೆನ್ಸ್ ತಂಡ(ವಿಎಸ್‌ಟಿ) ತಲಾ ಒಂದರಂತೆ ೮ ವಿಡಿಯೋ ವಿವಿಂಗ್ ತಂಡ(ವಿವಿಟಿ), ೧೧ ಅಕೌಂಟ್ ತಂಡ(ಎಟಿ), ೩-೩ ಅನುಪಾತದಲ್ಲಿ ೨೪ ಫ್ಲೈಯಿಂಗ್ ಸ್ಕ್ವಾಡ್(ಎಫ್‌ಎಸ್‌ಟಿ), ೮ ಅಸಿಸ್ಟೆಂಟ್ ಎಕ್ಸಪೆಂಡೇಚರ್, ಹಾಗೂ ೧೯೧ ಸೆಕ್ಟರ್ ಆಫೀಸರ್(ಎಸ್‌ಒ)ಗಳನ್ನು ನೇಮಕ ಮಾಡಲಾಗಿದೆ.
ಹಾವೇರಿ ಜಿಲ್ಲೆಯಲ್ಲಿ ೧೮ ಹಾಗೂ ಗದಗ ಜಿಲ್ಲೆಯಲ್ಲಿ ೧೦ ಸೇರಿ ಒಟ್ಟು ೨೮ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಅಕ್ರಮಗಳ ಬಗ್ಗೆ ತೀವ್ರ ನಿಗಾವಹಿಸಲಿದೆ. ಪ್ರತಿ ಚೆಕ್ ಪೋಸ್ಟ್‌ನಲ್ಲಿ ವೆಬ್‌ಕ್ಯಾಮರಾ ಅಳವಡಿಸಿದ್ದು ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾವಹಿಸಲಾಗುವುದು ಎಂದು ಹೇಳಿದರು.
ಸಹಾಯವಾಣಿ-ದೂರು ನಿರ್ವಹಣೆ: ಚುನಾವಣಾ ದೂರು ನಿರ್ವಹಣೆಗೆ ಟೋಲ್ ಫ್ರೀ ಸಹಾಯವಾಣಿ ೧೯೫೦ ಸ್ಥಾಪಿಸಲಾಗಿದೆ. ಗದಗ ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ೦೮೩೭೨-೨೩೯೧೭೭ ಹಾಗೂ ೦೮೩೭೫-೨೦೦೯೬೫ ಮತ್ತು ವಿಧಾನಸಭೆ ಕ್ಷೇತ್ರವಾರು ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ.
ಶಿರಹಟ್ಟಿ ಕ್ಷೇತ್ರ-೦೮೪೮೭-೨೪೨೧೦೦, ಗದಗ – ೦೮೩೭೨-೨೭೮೫೩೨ ಹಾಗೂ ರೋಣ ಕ್ಷೇತ್ರ-೦೮೩೮೧-೨೬೭೨೩೯ ಸ್ಥಾಪಿಸಲಾಗಿದೆ. ಹಾವೇರಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಹಾನಗಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ೦೮೩೭೫-೨೦೦೯೮೨(೦೮೩೭೯-೨೬೨೨೪೧), ಶಿಗ್ಗಾಂವ ಕ್ಷೇತ್ರಕ್ಕೆ ಸಂಬಂಧಿಸಿದಂತೆ ೦೮೩೭೫-೨೦೦೯೮೩(೦೮೩೭೮-೨೨೨೪೬೮), ಹಾವೇರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ೦೮೩೭೫-೨೦೦೯೮೪(೦೮೩೭೫-೨೩೨೪೪೫), ಬ್ಯಾಡಗಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ೦೮೩೭೫-೨೦೦೯೮೫ (೦೮೩೭೫-೨೨೮೪೨೮) ಹಿರೇಕೆರೂರು ಕ್ಷೇತ್ರಕ್ಕೆ ಸಂಬಂಧಿಸಿದತೆ ೦೮೩೭೫-೨೦೦೯೮೬( ೦೮೩೭೬-೨೮೨೨೩೧) ಹಾಗೂ ರಾಣೇಬೆನ್ನೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ೦೮೩೭೫-೨೦೦೯೮೭(೦೮೩೭೩-೨೬೦೪೪೯) ವಿಧಾನಸಭಾ ಕ್ಷೇತ್ರವಾರು ಸಹಾಯವಾಣಿ ಸ್ಥಾಪಿಸಲಾಗಿದೆ ಎಂದರು.
ಅಧಿಕಾರಿಗಳ ವಿವರ: ಹಾವೇರಿ ಜಿಲ್ಲಾ ಚುನಾವಣಾಧಿಕಾಯಾಗಿ ಹಾವೇರಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ(೯೪೪೮೪೮೪೪೧೩) ಹಾಗೂ ಗದಗ ಚುನಾವಣಾಧಿಕಾರಿಯಾಗಿ ಗದಗ ಜಿಲ್ಲಾಧಿಕಾರಿ ಶ್ರೀಮತಿ ವೈಶಾಲಿ ಎಂ.ಎಲ್(೬೩೬೧೧೮೬೩೫೬) ಅವರು ಕಾರ್ಯನಿರ್ವಹಿಸುತ್ತಾರೆ. ಹಾವೇರಿ ಜಿಲ್ಲಾ ಚುನಾವಣಾಧಿಕಾರಿಗಳು ನಾಮಪತ್ರ ಸ್ವೀಕರಿಸಲಿದ್ದಾರೆ.
ಹಾವೇರಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ (೮೬೧೮೭೪೨೨೮೮) ಹಾಗೂ ಗದಗ ಜಿಲ್ಲಾ ಅಪರ ಜಿಲ್ಲಾಧಿಕಾರಿ ಶ್ರೀಮತಿ ಸುರೇಖಾ(೯೯೬೪೩೨೩೮೯೯) ಸಹಾಯಕ ಜಿಲ್ಲಾ ಚುನಾವಣಾಧಿಕಾರಿಗಳಿದ್ದಾರೆ.
ಶಿರಹಟ್ಟಿ ಕ್ಷೇತ್ರಕ್ಕೆ ಅಮಿತ ಬಿದರಿ ಆರ್(೯೭೪೨೬೪೯೦೧೮) ಗದಗ ಕ್ಷೇತ್ರಕ್ಕೆ ವೆಂಕಟೇಶ ನಾಯಕ್(೯೯೮೦೧೯೩೯೪೧),ರೋಣ ಕ್ಷೇತ್ರಕ್ಕೆ ಮೂರ್ತಿ ಬ್ಯಾಕೋಡ(೯೯೪೫೫೫೧೪೬೮), ಹಾನಗಲ್ ಕ್ಷೇತ್ರಕ್ಕೆ ರಮೇಶ ಎಂ.ಎಸ್(೭೭೬೦೯೮೯೯೦೪), ಹಾವೇರಿ ಕ್ಷೇತ್ರಕ್ಕೆ ಎಚ್.ಬಿ.ಚನ್ನಪ್ಪ(೯೪೪೮೨೦೭೫೪೯, ಬ್ಯಾಡಗಿ ಕ್ಷೇತ್ರಕ್ಕೆ ಶ್ರೀಮತಿ ಮಮತಾ ಹೊಸಗೌಡ್ರ(೯೯೮೦೫೩೫೧೦೫), ಹಿರೇಕೆರೂರು ಕ್ಷೇತ್ರಕ್ಕೆ ನಾಗರಾಜ ಎಲ್(೯೯೪೫೦೬೦೨೯೫) ಹಾಗೂ ರಾಣೇಬೆನ್ನೂರು ಕ್ಷೇತ್ರಕ್ಕೆ ಶ್ರೀಮತಿ ಕೌಸರ್ ರೇಷ್ಮಾ ಜಿ(೯೪೪೯೯೯೦೭೮) ಅವರನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ೮,೭೧,೨೫೦ ಪುರುಷರು, ೮,೩೫,೫೮೬ ಮಹಿಳೆಯರು ಹಾಗೂ ೭೩ ಇತರರು ಸೇರಿದಂತೆ ೧೭,೦೬,೯೧೭ ಮತದಾರರ ಪೈಕಿ ೬,೬೧,೩೮೨ ಪುರುಷ ಹಾಗೂ ೬,೦೧,೮೨೪ ಮಹಿಳಾ ಮತದಾರರು ಸೇರಿ ೧೩,೬೩,೨೦೬ (ಶೇ.೭೪.೦೧)ಮತದಾರರು ಮತದಾನ ಮಾಡಿದ್ದರು.
ಮಾಧ್ಯಮಗೋಷ್ಠಿಯಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ್ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...