ಹಾವೇರಿ ಬ್ಲಡ್ ಬ್ಯಾಂಕಿಗೆ ಪೀಠೋಪಕರಣ, ಆರ್ಥಿಕ ಸಹಕಾರ : ರಾಜೀವಶೆಟ್ಟಿ

Date:

ಹಾವೇರಿ: ರೆಡ್ ಕ್ರಾಸ್ ಸಂಸ್ಥೆಯ ಸೇವಾ ಕಾರ್ಯಗಳು ಪ್ರತಿ ಹಳ್ಳಿ ಹಳ್ಳಿಗೂ ತಲುಪಲು ಎಲ್ಲಾ ಪದಾಧಿಕಾರಿಗಳು ಬದ್ಧರಾಗಬೇಕಿದೆ ಹಾಗೂ ರಾಜ್ಯ ಘಟಕದಿಂದ ಜಿಲ್ಲಾ ಶಾಖೆಗೆ ಎಲ್ಲ ರೀತಿ ಸಹಕಾರ ನೀಡಲಾಗುವುದು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷರಾದ ರಾಜೀವಶೆಟ್ಟಿ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾಲ್ಕು ಬಾರಿ ನೊಬೆಲ್ ಪ್ರಶಸ್ತಿ ಪಡೆದ ಏಕೈಕ ಸೇವಾ ಸಂಸ್ಥೆಯಾಗಿರುವ ರೆಡ್ ಕ್ರಾಸ್ ಸಂಸ್ಥೆಯು ನಿರಂತರವಾಗಿ ಉತ್ತಮ ಸೇವಾ ಕಾರ್ಯ ಮಾಡುತ್ತಾ ಬರುತ್ತಿದೆ. ರಾಜ್ಯದ ಎಲ್ಲಾ ಜಿಲ್ಲಾ -ತಾಲ್ಲೂಕ ರೆಡ್ ಕ್ರಾಸ್ ಘಟಕ ಬಲಪಡಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಜಿಲ್ಲೆ- ತಾಲ್ಲೂಕ ಘಟಕಗಳ ಪದಾಧಿಕಾರಿಗಳನ್ನು ಭೇಟಿ ಮಾಡಿ ಸೇವೆ ಕಾರ್ಯ ಮಾಡಲು ಉತ್ತೇಜನ ನೀಡಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಕ್ರಿಯಾಶೀಲ ಪದಾಧಿಕಾರಿಗಳು ಇದ್ದು, ಉತ್ತಮ ಚಟುವಟಿಕೆಗಳನ್ನು ಮಾಡಲಾಗುತ್ತಿದೆ. ಆರು ತಿಂಗಳ ಒಳಗಾಗಿ ಬ್ಲಡ್ ಬ್ಯಾಂಕ್ ಕಟ್ಟಡ ಪೂರ್ಣಗೊಳಿಸಿರಿ. ಬ್ಲಡ್ ಬ್ಯಾಂಕಿಗೆ ಪೀಠೋಪಕರಣ ಹಾಗೂ ಆರ್ಥಿಕ ಸಹಕಾರ ನೀಡಲಾಗುವುದು.
ಎಲ್ಲಾ ತಾಲ್ಲೂಕ ಘಟಕ ರಚನೆ ಮಾಡಿರಿ. ತಮ್ಮ ಬೇಡಿಕೆಯಂತೆ ಸೌಲಭ್ಯಗಳನ್ನು ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಗೌರವ ಕಾರ್ಯಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ ಎಲ್ಲಾ ಪದಾಧಿಕಾರಿಗಳು ಅನುಭವ ಹೊಂದಿದವರಾಗಿದ್ದು, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತೇವೆ. ಬ್ಲಡ್ ಬ್ಯಾಂಕ್ ಗೆ ಆರ್ಥಿಕ ನೆರವು ನೀಡಿದರೆ ರೆಡ್ ಕ್ರಾಸ್ ಹೆಚ್ಚು ಕೆಲಸ ಮಾಡಲು ಸಾಧ್ಯ ಎಂದರು.
ರಾಜ್ಯಾಧ್ಯಕ್ಷ ರಾಜೀವಶೆಟ್ಟಿ, ರಾಜ್ಯ ಸಮಿತಿ ಸದಸ್ಯರಾದ ಮಹಾಂತೇಶ ವೀರಾಪುರ, ಬಾಲಕೃ? ವ್ಹಿ, ರವಿ ಮೆಣಸಿನಕಾಯಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ರಾಜ್ಯಾಧ್ಯಕ್ಷ ರಾಜೀವಶೆಟ್ಟಿ ಡಿಡಿಆರ್ ಸಿ.ರೆಡ್ ಕ್ರಾಸ್ ಕಚೇರಿಗೆ ಭೇಟಿ ನೀಡಿ, ಬ್ಲಡ್ ಬ್ಯಾಂಕ್ ಕಟ್ಟಡ ವೀಕ್ಷಣೆ ಮಾಡಿ ಪರಿಶೀಲಿಸಿ ಜಿಲ್ಲಾ ಘಟಕಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ನಿಂಗಪ್ಪ ಆರೇರ, ಜಿಲ್ಲಾ ಖಜಾಂಚಿ ಪ್ರಭು ಹಿಟ್ನಳ್ಳಿ, ಸಹಕಾರ್ಯದರ್ಶಿ ಡಾ.ಪದೀಪ ದೊಡ್ಡಗೌಡ್ರ, ಜಿಲ್ಲಾ ಸಮಿತಿ ಸದಸ್ಯರುಗಳಾದ ಹನುಮಂತಗೌಡ ಗೊಲ್ಲರ, ರವಿ ಹಿಂಚಿಗೇರಿ, ಸಿದ್ದರಾಜ ಕಲಕೋಟಿ, ಉಡಚಪ್ಪ ಮಾಳಗಿ, ಎಸ್.ಸಿ. ಹಿರೇಮಠ, ಮಲ್ಲಿಕಾರ್ಜುನ ಕೊಟೂರ, ನಾಗರಾಜ ಇಚ್ಚಂಗಿ, ವಿಜಯಕುಮಾರ ಚಿನ್ನಿಕಟ್ಟಿ, ಪ್ರಕಾಶ ಶೆಟ್ಟಿ, ಉಜ್ವಲ ಹಿರೇಗೌಡ್ರ, ಡಿಡಿಆರ್ ಸಿ ನೋಡಲ್ ಅಧಿಕಾರಿ ಪೂರ್ಣಿಮಾ ಮಠದ, ಡಾ.ಅಂಕಿತ ಆನಂದ, ಇರ್ಶಾದಲಿ ದುಂಡಸಿ, ನವೀನ ಮುಗದೂರ, ಜಗದೀಶ ಬೇಟಗೇರಿ ಇದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಗೋವಿನ ಜೋಳ ಬಿತ್ತನೆ ಬೀಜದ ಗರಿಷ್ಟ ಮಾರಾಟ ದರ ನಿಗದಿಗೆ ಒತ್ತಾಯ

ಗೋವಿನ ಜೋಳ ಬಿತ್ತನೆ ಬೀಜದ ಗರಿಷ್ಟ ಮಾರಾಟ ದರ ನಿಗದಿಗೆ ಒತ್ತಾಯ ಹಾವೇರಿ:ಪ್ರಸ್ತುತ...

-“ಹಾವೇರಿ-ಧಾರವಾಡ ಜಿಲ್ಲಾ ಪೊಲೀಸ್ ಜಂಟಿ ಕಾರ್ಯಾಚರಣೆ; ಅಂತರ್ ರಾಜ್ಯ ಕಳ್ಳರಿಂದ ೧.೧೫ ಕೋಟಿ ಮೌಲ್ಯದ ಚಿನ್ನಾಭರಣ ಆಭರಣಗಳ ವಶ”

“ಹಾವೇರಿ-ಧಾರವಾಡ ಜಿಲ್ಲಾ ಪೊಲೀಸ್ ಜಂಟಿ ಕಾರ್ಯಾಚರಣೆ; ಅಂತರ್ ರಾಜ್ಯ ಕಳ್ಳರಿಂದ...

ಕೂಲಿ ಕಾರ್ಮಿಕರಿಗೆ ನರೇಗಾ ಆಸರೆ: ಡಾ. ಪರಮೇಶ ಹುಬ್ಬಳ್ಳಿ

ಕೂಲಿ ಕಾರ್ಮಿಕರಿಗೆ ನರೇಗಾ ಆಸರೆ: ಡಾ. ಪರಮೇಶ ಹುಬ್ಬಳ್ಳಿ ಹಾವೇರಿ: ತಾಲೂಕಿನ ಮಹಾತ್ಮ...