ಹಾವೇರಿ ವಿಶ್ವವಿದ್ಯಾಲಯಕ್ಕೆ ಯುಜಿಸಿ ಮಾನ್ಯತೆ
ಹಾವೇರಿ: ಧಾರವಾಡದ ವಿಶ್ವವಿದ್ಯಾಲಯದಿಂದ ಪ್ರತ್ಯೇಕಗೊಂಡು ನೂತನವಾಗಿ ಸ್ಥಾಪಿತವಾಗಿರುವ ಹಾವೇರಿ ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ(ಯುಜಿಸಿ) ಜುಲೈ ೨೫ ರಂದು ಅಧಿಕೃತ ಮಾನ್ಯತೆ ನೀಡಿದೆ. ಯುಜಿಸಿ ಪಟ್ಟಿ ಮಾಡಿರುವ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡಲು ಹಾವೇರಿ ವಿಶ್ವವಿದ್ಯಾಲಯ ಸ್ವಾಯತ್ತತೆ ಪಡೆದುಕೊಂಡಿದೆ ಎಂದು ಕುಲಸಚಿವರು ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಹಾವೇರಿ ವಿಶ್ವವಿದ್ಯಾಲಯದ ಸ್ಥಾಪನೆ ಸರ್ಕಾರ ೨೦೨೨ರಲ್ಲಿ ಹಸಿರು ನಿಶಾನೆ ನೀಡಿತ್ತು. ೨೦೨೩ರ ಶೈಕ್ಷಣಿಕ ಸಾಲಿನಲ್ಲಿ ೪೨ ಪದವಿ ಮಹಾವಿದ್ಯಾಲಯಗಳು ಹಾವೇರಿ ವಿಶ್ವವಿದ್ಯಾಲಯದ ಅಡಿಯಲ್ಲಿ ಸಂಯೋಜನೆ ಪಡೆದುಕೊಂಡಿದ್ದು, ಪ್ರಥಮ ಸೆಮಿಸ್ಟರ್ನ ಪದವಿ ತರಗತಿಗಳಿಗೆ ಪ್ರವೇಶ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ. ಶೀಘ್ರವೇ ಸ್ನಾತಕೋತ್ತರ ವರ್ಗಗಳಿಗಾಗಿ ಪ್ರವೇಶ ಪ್ರಕ್ರಿಯೆಯು ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾವೇರಿ ವಿಶ್ವವಿದ್ಯಾಲಯಕ್ಕೆ ಯುಜಿಸಿ ಮಾನ್ಯತೆ
Date: