ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

Date:

ಹಾವೇರಿ : ಕಳೆದ ನಾಲ್ಕು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಕೊರೋನಾ ಜಿಲ್ಲೆಯ ಜನರನ್ನು ಹಿಂಡಿ ಹಿಪ್ಪಿಮಾಡಿತ್ತು. ಕೊರೋನಾದಲ್ಲಿ ನೂರಾರು ಜನರು ತಮ್ಮ  ಜೀವ ಕಳೆದುಕೊಂಡಿದ್ದರು. ಕೋವಿಡ್‌ನಿಂದ ಹೆಚ್ಚು ಸಾವು ಕಂಡ ಜಿಲ್ಲೆಗಳಲ್ಲಿ ಹಾವೇರಿ ಜಿಲ್ಲೆಯೂ ಸಹ ಒಂದಾಗಿತ್ತು. ನಂತರ ಎರಡನೇ ಅಲೆ, ಮೂರನೇ ಅಲೆ ಕಾಣಿಸಿಕೊಂಡರೂ ಸಹ ಹೇಳಿಕೊಳ್ಳುವಂತಹ ಅನಾಹುತಗಳು ಸಂಭವಿಸಿರಲಿಲ್ಲ. ಮತ್ತೆ ಇದೀಗ ಕೊರೊನಾ ಕಾಣಿಸಿಕೊಂಡಿರುವುದರಿಂದ ಜಿಲ್ಲೆಯ ಜನರಲ್ಲಿ ಆತಂಕ ಮನೆಮಾಡಿದೆ.
ಹಾವೇರಿ ತಾಲೂಕಿನ ೭೩ ವರ್ಷದ ವೃದ್ಧನೊಬ್ಬನಿಗೆ ಕೊರೋನಾ ಕಾಣಿಸಿಕೊಂಡಿದ್ದು, ಅವರು ಬೇರೆ ಆರೋಗ್ಯ ಸಮಸ್ಯೆಗಳಿಗಾಗಿ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕೊರೋನಾ ಪತ್ತೆಯಾಗಿದೆ. ಅವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್?ಆಗಿದ್ದಾರೆ. ಜೊತೆಗೆ ಅವರ ಜೊತೆಯಲ್ಲಿ ಮನೆಯಲ್ಲಿ ವಾಸಿಸುತ್ತಿದ್ದ ಇತರರ  ಆರೋಗ್ಯ ತಪಾಸಣೆ ನಡೆಸಿದ್ದು, ಅವರ ವರದಿ ಕೊರೊನಾ ನೆಗೆಟಿವ್ ಬಂದಿದೆ. ಈ ಮಧ್ಯೆ ಹಾವೇರಿ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಕೊರೊನಾ ಭೀಕರತೆಗೆ ಜಿಲ್ಲೆಯ ಜನ ನಲುಗಿ ಹೋಗಿದ್ದರು. ಮತ್ತೆ ಕೊರೊನಾ ಕಾಣಿಸಿಕೊಳ್ಳುತ್ತಿದ್ದಂತೆ ಮತ್ತೆ ಭಯಬೀತರಾಗಿದ್ದಾರೆ.
ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಂದ್ರ ಸುರಗಿಹಳ್ಳಿ ಮಾಹಿತಿ ನೀಡಿದ್ದು, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಕೊರೋನಾ ತಡೆಗೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಒಂದು ವೇಳೆ ಕೊರೋನಾ ಕಾಣಿಸಿಕೊಂಡರೂ ಸಹ ಅದಕ್ಕೆ ಬೇಕಾದ ಸಿದ್ದತೆ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.
ಹಾವೇರಿಜಿಲ್ಲಾ ಆಸ್ಪತ್ರೆಯಲ್ಲಿ ಪ್ರತೇಕ ಕೋವಿಡ್ ವಾರ್ಡ ತೆರೆಯಲಾಗಿದೆ. ಹಾವೇರಿ ಜಿಲ್ಲೆಯ ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಮೊದಲಿನಂತೆ ಶೀತ, ನೆಗಡಿ, ಕೆಮ್ಮು ಇದ್ದವರಿಗೆಲ್ಲಾ ಟೆಸ್ಟ್ ಮಾಡುವುದಿಲ್ಲ. ಬದಲಿಗೆ ಆರೋಗ್ಯ ಇಲಾಖೆ ಮಾರ್ಗದರ್ಶನದ ಪ್ರಕಾರ ಕೋವಿಡ್ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಪ್ರತಿ ಸರ್ಕಾರಿ ಆಸ್ಪತ್ರೆಗೆ ಈಗಾಗಲೇ ಕೋವಿಡ್ ಟೆಸ್ಟ್ ಕಿಟ್‌ಗಳನ್ನು ಕಳುಹಿಸಿಕೊಡಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗಾಗಿ ೧೦೮೦ ಆಮ್ಲಜನಕ ಇರುವ ಬೆಡ್‌ಗಳಿವೆ. ಖಾಸಗಿ ಆಸ್ಪತ್ರೆಗಳಲ್ಲಿ ೩೪೦ ಬೆಡ್‌ಗಳನ್ನು ಕೊರೊನಾ ರೋಗಿಗಳಿಗೆ ಮೀಸಲಿಡಲಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯು ಇರುವ ೧೪೫ ಬೆಡ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ೨೮ ಬೆಡ್‌ಗಳನ್ನ ಮೀಸಲಿಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ೫೮ ವೆಂಟಿಲೇಟರ್, ಖಾಸಗಿ ಆಸ್ಪತ್ರೆಯಲ್ಲಿ ಎರಡು ವೆಂಟಿಲೇಟರ್ ಕೊರೊನಾ ರೋಗಿಗಳಿಗೆ ನಿಗಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಗತ್ಯ ವೆಂಟಿಲೇಟರ್? ಸಂಗ್ರಹ: ಜಿಲ್ಲೆಯ ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಂಡು ವೆಂಟಿಲೇಟರ್ ಅಗತ್ಯತೆ ಬಿದ್ದರೆ ಮಕ್ಕಳಿಗಾಗಿ ಎರಡು ವೆಂಟಿಲೇಟರ್ ಮೀಸಲಿಡಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ೫೪೦ ಕಾನ್ಸಲೆಂಟರ್‌ಗಳಿವೆ, ಜಿಲ್ಲಾಸ್ಪತ್ರೆ ಸೇರಿದಂತೆ ಪ್ರತಿಯೊಂದು ಸರ್ಕಾರಿ ಆಸ್ಪತ್ರೆಗೆ ಎಂಟು ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್‌ಗಳಿವೆ ಎಂದು ಹೇಳಿದ್ದಾರೆ.
ಜಿಲ್ಲೆಯ ವಿವಿಧೆಡೆ ಸುಮಾರು ೯೦೯ ಆಕ್ಸಿಜನ್ ಸಿಲಿಂಡರ್‌ಗಳಿವೆ. ಜಿಲ್ಲೆಯಲ್ಲಿ ೧೩ ಆಕ್ಸಿಜನ್ ಜನರೇಶನ್ ಪ್ಲಾಂಟ್‌ಗಳಿವೆ. ಪ್ರತಿಯೊಂದು ತಾಲೂಕಾ ಆಸ್ಪತ್ರೆಗೆ ಮತ್ತು ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಟೆಕ್ನಿಷಿಯನ್ ನೀಡಲಾಗಿದೆ. ಪ್ರತಿಯೊಂದು ಆಕ್ಸಿಜನ್ ಪ್ಲಾಂಟ್ ಸಿಲಿಂಡರ್‌ಗಳು ಪೈಪ್‌ಲೈನ್‌ಗಳನ್ನು ಪ್ರತಿ ಗಂಟೆಗೊಮ್ಮೆ ಪರೀಕ್ಷೆ ಮಾಡಲಾಗುತ್ತಿದೆ. ಎಲ್ಲಿಯಾದರೂ ಸೋರಿಕೆ ಕಂಡುಬಂದರೆ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರಗಳ ನಿರ್ದೇಶನದ ಮೇರೆಗೆ ಭಾನುವಾರ ಆಕ್ಸಿಜನ್ ಪ್ಲಾಂಟ್‌ಗಳ ಮಾಕ್ ಡ್ರಿಲ್ ಮಾಡಲು ಸೂಚನೆ ನೀಡಲಾಗಿದೆ. ಜನರು ಆತಂಕಪಡಬೇಕಾಗಿಲ್ಲ, ಸಾಮಾನ್ಯ ಜನರಿಗಿಂತ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಸಂಬಂಧಿ ಕಾಯಿಲೆಗಳಿರುವವರು, ಗರ್ಭಿಣಿಯರು, ಬಾಣಂತಿಯರು, ಚಿಕ್ಕಮಕ್ಕಳು ಮತ್ತು ವೃದ್ದರು ಹೆಚ್ಚು ಜಾಗರೂಕತೆಯಿಂದ ಇರುವಂತೆ ತಿಳಿಸಿದ್ದಾರೆ.
ಈ ರೀತಿಯ ಆರೋಗ್ಯ ಸಮಸ್ಯೆ ಇರುವವರು ದಯವಿಟ್ಟು ಮಾಸ್ಕ್ ಧರಿಸಬೇಕು. ಜೊತೆಗೆ ರಾಜ್ಯ ಆರೋಗ್ಯ ಇಲಾಖೆ ಕಾಲ ಕಾಲಕ್ಕೆ ನೀಡುವ ಸಲಹೆಗಳನ್ನ ಸ್ವೀಕರಿಸಲಾಗುತ್ತದೆ. ಕೊರೋನಾ ಸಮಯದಲ್ಲಿ ಯಾವುದೇ ಅಧಿಕೃತವಲ್ಲದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತಿಲ್ಲ. ಹಾವೇರಿ ಆರೋಗ್ಯ ಇಲಾಖೆ ಕೆಎಂಪಿಯಲ್ಲಿ ನೋಂದಾಯಿತ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕು. ಅನಧಿಕೃತವಾಗಿ ಆಲೋಪತಿ ಔಷಧಿ ನೀಡುವ ವೈದ್ಯರ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಕಾಣಿಸಿಕೊಂಡರೆ ಚಿಕಿತ್ಸೆ ನೀಡಲು ಎಲ್ಲ ರೀತಿಯ ಔಷಧಿ ಸಂಗ್ರಹವಿದೆ. ಪಾಸಿಟಿವ್ ಕಾಣಿಸಿಕೊಂಡರೆ ಬ್ಲಡ್ ಟೆಸ್ಟ್ ಮಾಡಲು ಸಹ ಜಿಲ್ಲಾಸ್ಪತ್ರೆಯಲ್ಲಿ ಲ್ಯಾಬ್ ಇದೆ. ಕೊರೊನಾ ಟೆಸ್ಟ್ ಮಾಡಲು ೭೮೦೦ ಕಿಟ್ ಇವೆ. ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಈಗಾಗಲೇ ಎರಡು ಬಾರಿ ಜನರಿಗೆ ಕೊರೋನಾ ಲಸಿಕೆ ನೀಡಲಾಗಿದೆ. ೬೦ ವಯಸ್ಸು ಮೀರಿದವರಿಗೆ ಮೂರು ಬಾರಿ ಲಸಿಕೆ ಹಾಕಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಸದ್ಯ ಕೊರೊನಾ ಲಸಿಕೆಗೆ ಯಾವುದೇ ಬೇಡಿಕೆ ಇಲ್ಲ ಎಂದು ಡಾ. ರಾಜೇಂದ್ರ ಸುರಗಿಹಳ್ಳಿ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...

ರೈತ ಆತ್ಮಹತ್ಯೆಯಲ್ಲಿ ಹಾವೇರಿಜಿಲ್ಲೆಗಿದೆ ರಾಜ್ಯದಲ್ಲಿ  ಪ್ರಥಮ ಸ್ಥಾನ

ಕಳೆದ ವರ್ಷಅತಿ ವ್ಯಷ್ಟಿ ಯಿಂದ ಬೆಳೆದ ಬೆಳೆ ನೀರು ಪಾಲಾಗಿರುವುದು. -ಸರ್ಕಾರಕ್ಕೆ ಎರಡು...