ಹಾವೇರಿ ಶಹರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹಮ್ಮದ್ ಯಾಸಿನ್ ಮೋಮಿನಗಾರ ಆಯ್ಕೆ
ಹಾವೇರಿ: ಹಾವೇರಿ ಶಹರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸಿವಿಲ್ ಇಂಜಿನಿಯರ್ ಮೊಹಮ್ಮದ್ ಯಾಸಿನ್ ಬಾಬು ಸಾಬ್
ಮೋಮಿನಗಾರ ಆಯ್ಕೆಯಾಗಿದ್ದಾರೆ.
ಯುವ ಕಾಂಗ್ರೆಸ್ ಚುನಾವಣಾ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು ಮೊಹಮ್ಮದ್ ಯಾಸಿನ್ ಮೋಮಿನಗಾರ 1471 ಮತ ಪಡೆದು ಹಾವೇರಿ ಶಹರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತಮ್ಮ ಮೇಲೆ ವಿಶ್ವಾಸ ಇಟ್ಟು ಎಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಮತಗಳನ್ನು ನೀಡುವ ಮೂಲಕ ಹಾವೇರಿ ಶಹರ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಅವರಿಗೆ, ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರಿಗೂ ಹಾಗೂ ಪಕ್ಷದ ಯುವ ಮಿತ್ರರಿಗೂ ಅಭಿಮಾನಿಗಳಿಗೂ ಪರೋಕ್ಷ ಆ ಪರೋಕ್ಷವಾಗಿ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಗಳನ್ನು ಮೊಹಮ್ಮದ್ ಯಾಸಿನ್ ಮೋಮಿನಗಾರ ಸಲ್ಲಿಸಿದ್ದಾರೆ.