ಹಾವೇರಿ: ಹೆದ್ದಾರಿಯಲ್ಲಿ ೪೦.ಲಕ್ಷ ರೂ ದರೋಡೆ ಮಾಡಿದ್ದ ೯ ಜನರ ಬಂಧನ
ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಬಳಿ ಎನ್ ಎಚ್-೪೮ ಹೆದ್ದಾರಿಯಲ್ಲಿ ಮಾರ್ಚ ೨೭ ರ ರಾತ್ರಿ ೪೦.ಲಕ್ಷ ರೂ ದರೋಡೆ ಪ್ರಕಣಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಪೊಲೀಸ್ ಅಧಿಕಾರಿಗಳ ತಂಡವು ೯ ಜನರ ಬಂಧಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದರು. ಶುಕ್ರವಾರ ತಮ್ಮ ಕಚೇರಿಯಲ್ಲಿ ಕರೆಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರುನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಮಾರ್ಚ ೨೭ ರ ರಾತ್ರಿ ಮೋಟೆಬೆನ್ನೂರು ಗ್ರಾಮದ ಬಳಿ ಎನ್ ಎಚ್-೪೮ ಹೆದ್ದಾರಿಯಲ್ಲಿ ಹುಬ್ಬಳ್ಳಿ ಮೂಲದ ವ್ಯಾಪಾರಿ ವಿನೋಧ ರಾಠೋಡ ಅವರಿಗೆ ಸೇರಿದ್ದ ೪೦.ಲಕ್ಷ ಹಣವನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ (ಕೆಎ ೨೫ ಎಬಿ ೩೫೩೬ ಐಶರ್) ಗಾಡಿಯಲ್ಲಿ ಸಾಗಿಸುತ್ತಿದ್ದ ಲಾರಿ ಚಾಲಕ ಶರಣಪ್ಪನ ಲಾರಿಯನ್ನು ಅಡ್ಡಗಟ್ಟಿದ ಕೆಂಪು ಕಾರಿನಲ್ಲಿ ಬಂದಿದ್ದ ೩-೪ಜನತಿದ್ದ ತಂಡವು ಲಾರಿಯನ್ನು ಓವರ್ ಟೇಕ್ ಮಾಡಿಕೊಂಡ ಬಂದು ಅಡ್ಡಗಟ್ಟಿ ಲಾರಿ ಗ್ಲಾಸ್ ಒಡೆದು ಚಾಲಕ ಶರಣಪ್ಪನಿಗೆ ಬಡಿಗೆ ತೋರಿಸಿ, ಲಾರಿಯ ಗ್ಲಾಸ್ ಒಡೆದು ಬೆದರಿಕೆ ಹಾಕಿ ೪೦.ಲಕ್ಷ ರೂ ದರೋಡೆ ಮಾಡಿತ್ತು.
ಸ್ನೇಹಿತರ ಜೊತೆ ಸೇರಿ ಮಾಲೀಕನ ಹಣ ದರೋಡೆ: ಲಾರಿಯಲ್ಲಿ ಕ್ಲಿನರ್ಆಗಿದ್ದ ಅನ್ವರ್ ಮತ್ತೇಸಾಬನವರಗೆ ಲಾರಿಯಲ್ಲಿ ೪೦.ಲಕ್ಷ ರೂಗಳನ್ನು ಸಾಗಿಸುತ್ತಿದ್ದ ವಿಷಯಗೊತ್ತಿತ್ತು. ಇವನು ಲಾರಿಯಲ್ಲಿದ್ದುಕೊಂಡೆ ಈ ಹಣದ ದರೋಡೆಗೆ ಸಂಚು ರೂಪಿಸಿದ್ದ, ತನ್ನ ಸ್ನೇಹಿತರ ಮೂಲಕ ಈ ಹಣದ ದರೋಡೆಗೆ ಪ್ಲಾನ್ಮಾಡಿದ್ದ ಇವನು ತನ್ನ ಸ್ನೇಹಿತರ ಗ್ಯಾಂಗ್ಗೆ ಲಾರಿಯ ಯಾವ ಮಾರ್ಗದಲ್ಲಿ, ಯಾವ ಸ್ಥಳದಲ್ಲಿದೆ ಎನ್ನುವುದರ ಬಗ್ಗೆ ಮಾಹಿತಿ ರವಾನಿಸುತ್ತಿದ್ದ, ಈ ಮಾಹಿತಿ ಆಧರಿಸಿ ಕೆಂಪು ಬಣ್ಣದ ಕಾರಿನಲ್ಲಿ ಲಾರಿಯನ್ನು ಬೆನ್ನಟ್ಟಿಬಂದ ಇತನ ಸ್ನೇಹಿತರ ತಂಡವು ೪೦.ಲಕ್ಷ ರೂ ದರೋಡೆ ಮಾಡಿ ಪರಾರಿಯಾಗಿತ್ತು.
ದರೋಡೆ ಪ್ರಕರಣದ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗಿಳಿದ ಪೊಲೀಸ್ ತಂಡವು ೯ ಜನರ ವಶಕ್ಕೆ ಪಡೆದಿದೆ. ಬಂಧಿತ ಆರೋಪಿಗಳಲ್ಲಿ ಎ೧ ಆರೋಪಿ ಅನ್ವರ್ ಮತ್ತೇಸಾಬನವರ ತನ್ನ ಸ್ನೇಹಿತರ ಮೂಲಕ ದರೋಡೆ ಮಾಡಿಸಿದಾತ, ಬಂಧಿತರಲ್ಲಿ ಹಜರತ್ತಲಿ ಲಗಳಿ, ಅಮೀರ್ ಖಾನ್ ಪಠಾಣ, ಇಬ್ರಾಹಿಂ ಬಿಡಿ, ಆಸ್ಪಕ್ ಚನ್ನಾಪುರ, ಸದ್ದಾಮ್ ಮಹ್ಮದರಫೀಕ್ ಹಕೀಂ, ರಫೀಕ್ ಎಲಿಗಾರ, ಆಸ್ಪಕ್ ಮಕಾಂದಾರ, ಜಿಷಾನ್ ಕಂಚಗಾರ ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಥಾರ್, ಒಂದು ಮಾರುತಿ ಸ್ವೀಪ್ಟ್ ಕಾರ್ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಹಣಕ್ಕೆ ಸೂಕ್ತ ದಾಖಲೆಗಾಗಿ ತನಿಖೆ ನಡೆದಿದೆ ಎಂದು ಎಸ್ಪಿ ಯಶೋಧಾ ವಂಟಗೋಡಿ ಹೇಳಿದರು.

—